* ಯಾದಗಿರಿ ಸಮೀಪದ ವರ್ಕನಳ್ಳಿಯಲ್ಲಿರುವ ಕಿತ್ತೂರು ಚೆನ್ನಮ್ಮ ವಸತಿ ಶಾಲೆ
* ಜಿಲ್ಲಾಧಿಕಾರಿಯೆದುರು ಕಷ್ಟ ಹೇಳೋಕೆ 12 ಕಿ.ಮೀ. ನಡೆದ ವಿದ್ಯಾರ್ಥಿಗಳು
* ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ಹಾಗೂ ವಾರ್ಡನುಗಳಿಂದ ಹೆಚ್ಚಾದ ಕಿರುಕುಳ
ಯಾದಗಿರಿ(ನ.02): ಸರ್ಕಾರವೇನೋ(Government) ವಸತಿ ಶಾಲೆಯ ಮಕ್ಕಳಿಗಾಗಿ ಕೋಟ್ಯಂತರ ರು.ಹಣ ಖರ್ಚು ಮಾಡುತ್ತದೆ. ಇನ್ನು, ಸೌಲಭ್ಯಗಳು ಇರುತ್ತವೆ ಅಂತ ಪೋಷಕರು ಮಕ್ಕಳನ್ನ ಕಳುಹಿಸಿ ಮನೆಯಲ್ಲಿ ನೆಮ್ಮದಿ ಯಾಗಿರುತ್ತಾರೆ. ಆದರೆ, ಈ ವಸತಿ ಶಾಲೆಯಲ್ಲಿರುವ ಬಾಲಕಿಯರು ಊಟ ಸಿಗದೆ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರಲ್ಲದೆ, ಇಲ್ಲಿನ ಇನ್ನೂ ಕೆಲವು ಮಕ್ಕಳು ತಮ್ಮ ಕಷ್ಟ ಹೇಳೋಕೆ 12 ಕಿ.ಮೀ. ದೂರ ನಡೆದುಕೊಂಡು ಬಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.
ಯಾದಗಿರಿ ಸಮೀಪದ ವರ್ಕನಳ್ಳಿ ಹೊರವಲಯದ ಕಿತ್ತೂರು ಚೆನ್ನಮ್ಮ ವಸತಿ ಶಾಲೆಯ(Kitturu Chennamma Residential School) ಮಕ್ಕಳು(Children) ಸೋಮವಾರ ದಿಢೀರನೇ ದಂಗೆ ಎದ್ದಂತಿತ್ತು. ಕಳೆದೊಂದು ವಾರದಿಂದ ಇವರೆಲ್ಲ ಅಲ್ಲಿನ ಊಟವನ್ನೇ(Meal) ಮಾಡಿಲ್ಲವಂತೆ. ಕಾರಣ, ಇಲ್ಲಿನ ವಾರ್ಡನ್(warden) ಸರಿಯಾದ ಊಟ ನೀಡುತ್ತಿಲ್ಲ ಅನ್ನೋ ಆರೋಪ ಈ ಮಕ್ಕಳದ್ದು. ಹುಳು ಹತ್ತಿದ್ದ ಅವಲಕ್ಕಿ ಉಪ್ಪಿಟ್ಟು, ಹಸಿಬಿಸಿ ಅನ್ನ, ಉಪ್ಪು ಖಾರವಿಲ್ಲದ ಸಾಂಬಾರು.. ಹೀಗೆಯೇ ತಮಗೆ ನೀಡುವ ಊಟ ಕಳಪೆ ಮಟ್ಟದಲ್ಲಿದೆ ಎಂದು ಆಕ್ರೋಶಗೊಂಡ ಈ ಮಕ್ಕಳು ಊಟವನ್ನೇ ಬಿಟ್ಟಿದ್ದಾರಂತೆ. ಹೀಗಾಗಿ, ಊಟವಿಲ್ಲದ ಈ ಮಕ್ಕಳಲ್ಲಿ ಅಸ್ವಸ್ಥಗೊಂಡ(Ill) ಆರು ಬಾಲಕಿಯರನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ(District Hospital) ದಾಖಲಿಸಲಾಗಿದೆ.
undefined
ಸರ್ಕಾರಿ ಕಾಲೇಜುಗಳಿಗೆ ಇನ್ಫೋಸಿಸ್‌ನಿಂದ 15,000 ಕಂಪ್ಯೂಟರ್ ದೇಣಿಗೆ
ವಾರ್ಡನ್ ಬಸಲಿಂಗಪ್ಪ ಇಂತಹ ಸ್ಥಿತಿಗೆ ಕಾರಣ ಎಂಬುದು ಮಕ್ಕಳ ಆರೋಪ(Allegation). ಸಹಪಾಠಿಗಳಿಗೆ ಈ ದುಸ್ಥಿತಿ ಬಂದಿರುವುದನ್ನು ಕಂಡ ಉಳಿದ ಬಾಲಕಿಯರು(Girls) ಅವ್ಯವಸ್ಥೆ ವಿರುದ್ಧ ಸಿಡಿದೆದ್ದು ತಮ್ಮೂರಿಂದ 12 ಕಿ.ಮೀ. ದೂರದಲ್ಲಿರುವ ಜಿಲ್ಲಾಧಿಕಾರಿ(District Collector) ಕಚೇರಿಗೆ ನಡೆದುಕೊಂಡು ಬಂದೇ ಪ್ರತಿಭಟನೆ ನಡೆಸಿದರು. ಆರು ಜನ ವಿದ್ಯಾರ್ಥಿನಿಯರು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಮೇಲೆ, ಇತ್ತ ಇನ್ನುಳಿದ ಮಕ್ಕಳು ಹಾಸ್ಟೆಲ್ ವಾರ್ಡನ್ ಹಾಗೂ ಪ್ರಿನ್ಸಿಪಾಲ್ ವಿರುದ್ಧ ರೊಚ್ಚಿಗೆದ್ದು ಸುಡು ಬಿಸಿಲಲ್ಲಿ, ವರ್ಕನಹಳ್ಳಿಯಿಂದ ಯಾದಗಿರಿ ಜಿಲ್ಲಾಕಾರಿ ಕಚೇರಿಯ ವರೆಗೂ ನಡೆದುಕೊಂಡೆ ಬಂದು, ತಮಗಾದ ನೋವನ್ನ ಮಹಿಳಾ ಅಧಿಕಾರಿಗಳ ಎದುರು ನೋವು ತೋಡಿಕೊಂಡಿದ್ದಾರೆ. ವಾರ್ಡನ್ ಹಾಗೂ ಪ್ರಿನ್ಸಿಪಾಲ್ ಬಗ್ಗೆ ದೂರುಗಳ ಲಿಸ್ಟ್ ಬರೆದು ಜಿಲ್ಲಾಡಳಿತಕ್ಕೆ(District Administration) ಕೊಟ್ಟಿದ್ದಾರೆ ಎನ್ನಲಾಗಿದೆ.
ಜಿಲ್ಲಾಧಿಕಾರಿಗಳೇ ಖುದ್ದು ನಮ್ಮ ಸಮಸ್ಯೆ ಕೇಳಬೇಕು ಎಂದು ಬಾಲಕಿಯರು ಪಟ್ಟು ಹಿಡಿದಿದ್ದರು. ಆದರೆ, ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ(Dr Ragapriya) ಅವರು ಲಭ್ಯವಿಲ್ಲದ ಕಾರಣ, ತಮ್ಮ ನೋವನ್ನು ಮಹಿಳಾ ಅಧಿಕಾರಿಗಳ ಮುಂದೆ ಹೇಳಿಕೊಂಡು, ಅಪರ ಜಿಲ್ಲಾಧಿಕಾರಿಗಳಿಗೆ ದೂರು(Complaint) ಕೊಟ್ಟಿದ್ದಾರೆ. ನಂತರ ಮಾಧ್ಯಮಗಳೊಂದಿಗೆ(Media) ಮಾತನಾಡಿದ ವಿದ್ಯಾರ್ಥಿಗಳು(Students), ತಮಗೆ ಪ್ರಾಂಶುಪಾಲರು(Principal) ಹಾಗೂ ವಾರ್ಡನುಗಳ ಕಿರುಕುಳ(Harassment) ಹೆಚ್ಚಾಗಿದೆ. ಹೀಗಾಗಿ, ಕೂಡಲೇ ಅವರನ್ನು ಬದಲಾವಣೆ ಮಾಡಿ ಎಂದು ಆಗ್ರಹಿಸಿದ್ದಾರೆ.
ಪ್ರಾಂಶುಪಾಲರು ಹಾಗೂ ವಾರ್ಡನುಗಳ ಕಿರುಕುಳ ಹೆಚ್ಚಾಗಿದೆ. ಹೀಗಾಗಿ, ಕೂಡಲೇ ಅವರನ್ನು ಬದಲಾವಣೆ ಮಾಡಿ ಅಂತ ಸರೋಜಾ (ಹೆಸರು ಬದಲಾಯಿಸಲಾಗಿದೆ) ಹಾಸ್ಟೆಲ್ ವಿದ್ಯಾರ್ಥಿನಿ ತಿಳಿಸಿದ್ದಾರೆ..
ಸರಿಯಾಗಿ ಊಟ ಮಾಡದ ಕಾರಣ ಆರೋಗ್ಯದಲ್ಲಿ ಏರುಪೇರಾಗಿತ್ತು. ಚಕಿತ್ಸೆ ನೀಡಲಾಗಿದೆ, ಈಗ ಯಾವುದೆ ಸಮಸ್ಯೆ ಇಲ್ಲ ಎಂದು ಜಿಲ್ಲಾಸ್ಪತ್ರೆಯ ಶಸ್ತ್ರಚಿಕಿತ್ಸಕರು ಡಾ. ಸಂಜೀವಕುಮಾರ್ ರಾಯಚೂರಕರ್ ಹೇಳಿದ್ದಾರೆ.