2024-25ರ ಸಾಲಿನ 1ನೇ ತರಗತಿ ಪ್ರವೇಶಕ್ಕೆ ಕನಿಷ್ಠ ವಯೋಮಿತಿ 6ಕ್ಕಿಂತ ಹೆಚ್ಚು: ಶಿಕ್ಷಣ ಇಲಾಖೆ ಆದೇಶ

By Suvarna NewsFirst Published Feb 26, 2024, 11:31 AM IST
Highlights

2024-25ರ ಸಾಲಿನ ಒಂದನೇ ತರಗತಿ ಪ್ರವೇಶಾತಿಗೆ ಮಕ್ಕಳ ಕನಿಷ್ಠ ವಯೋಮಿತಿಯನ್ನು   6 ವರ್ಷ ಪೂರ್ಣವಾಗಿರುವಂತೆ  ನೋಡಿಕೊಳ್ಳಬೇಕೆಂದು  ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರದ ಜೊತೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯೂ ಸೂಚನೆ ನೀಡಿದೆ.

ನವದೆಹಲಿ (ಫೆ.26): ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು (RTE) ಕಾಯಿದೆಯಲ್ಲಿ ಒಳಗೊಂಡಿರುವ ನಿಬಂಧನೆಯ ಪ್ರಕಾರ ಪ್ರವೇಶದ ವಯಸ್ಸನ್ನು ಹೊಂದಿಸಲು ಕೇಂದ್ರವು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪ್ರಮುಖ ಸೂಚನೆಯನ್ನು ಬಿಡುಗಡೆ ಮಾಡಿದೆ. 2009 ಮತ್ತು 6+ ವರ್ಷದ ವಯಸ್ಸಿನಲ್ಲಿ 1 ನೇ ತರಗತಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳಿ ಎಂದು ಸೂಚನೆ ನೀಡಿದೆ.

ಈ ಬಗ್ಗೆ ಎಕ್ಸ್ ನಲ್ಲಿ  ಮಾಹಿತಿ ಹಂಚಿಕೊಂಡಿರುವ ಶಿಕ್ಷಣ ಸಚಿವಾಲಯವು, "ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯಯದ ಅಧಿಸೂಚನೆಯಂತೆ  ಗ್ರೇಡ್ 1 ಗೆ (1ನೇ ತರಗತಿಗೆ) ಪ್ರವೇಶದ ವಯಸ್ಸು 2024-25 ರಿಂದ 6+ ವರ್ಷಗಳು ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು/UTಗಳನ್ನು ವಿನಂತಿಸಲಾಗಿದೆ.

ಆಗಸ್ಟ್‌ 1 ರಿಂದ ಜೀಮೇಲ್‌ ಸ್ಥಗಿತ, ಗೂಗಲ್‌ ಕೊಟ್ಟ ಸ್ಪಷ್ಟನೆ ಇದು

ಎಲ್ಲಾ ರಾಜ್ಯಗಳ ಶಾಲೆಗಳು ಒಂದನೇ ತರಗತಿಗೆ ಪ್ರವೇಶ ಪಡೆಯಲು ಮಗುವಿನ ವಯಸ್ಸು 6 ವರ್ಷಗಳಿಗಿಂತ ಕಡಿಮೆಯಿಲ್ಲ ಎಂದು ನೋಡಬೇಕು ಎಂದು ಕೇಂದ್ರ ಹೇಳಿದೆ. ಈ ವಯಸ್ಸಿನ ಮಿತಿಯನ್ನು ಎನ್ಇಪಿ 2020 ರ ಮತ್ತು ಉಚಿತ ಮತ್ತು ಕಡ್ಡಾಯ ಶಿಕ್ಷಣ ಮಕ್ಕಳ ಹಕ್ಕು (RTE) ಕಾಯಿದೆ, 2009ರ ಅಡಿಯಲ್ಲಿ ಪ್ರಸ್ತಾಪಿಸಲಾಗಿದೆ   ಎಂದು ಸ್ಪಷ್ಟಪಡಿಸಿದೆ. 

ಏನಿಲ್ಲ ಏನಿಲ್ಲ ನಮ್ಮ ನಡುವೆ ವೈಷಮ್ಯವಿಲ್ಲ, ಮಂಡ್ಯದಲ್ಲಿ ಬಿಜೆಪಿಯಿಂದ ಸ್ಪರ್ಧಿಸುವ ಸುಳಿವು ಕೊಟ್ಟ ಸುಮಲತಾ

ಕಳೆದ ವರ್ಷ ಅಂದರೆ 2023 ರಲ್ಲಿ ಕೂಡ ಶಿಕ್ಷಣ ಸಚಿವಾಲಯವು ಈ ನಿಟ್ಟಿನಲ್ಲಿ ಪತ್ರವನ್ನು ಸಿದ್ಧಪಡಿಸಿ ರಾಜ್ಯಗಳಿಗೆ ಕಳುಹಿಸಿತು. ಮತ್ತೆ, ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತನ್ನ ಸೂಚನೆಗಳನ್ನು ಪುನರುಚ್ಚರಿಸಿದೆ. ಇದೇ ರೀತಿಯ ನೋಟಿಸ್ ಅನ್ನು ಈ ಹಿಂದೆಯೂ ನೀಡಲಾಗಿತ್ತು. 

click me!