Bagalkot: ನೀಟ್‌ ಪರೀಕ್ಷೆಯಲ್ಲಿ ಮುಧೋಳದ ಕೂಲಿಕಾರನ ಮಗ ದೇಶಕ್ಕೇ ಪ್ರಥಮ..!

By Kannadaprabha News  |  First Published Feb 3, 2022, 6:30 AM IST

*  ಸೂಪರ್‌ ಸ್ಪೆಷಾಲಿಟಿ ನೀಟ್‌ನ 2 ವಿಷಯದಲ್ಲಿ ಪ್ರಥಮ ರ‍್ಯಾಂಕ್‌
*  ಕರುನಾಡಿಗೆ ಕೀರ್ತಿ ತಂದ ಯುವಕಗೆ ಗ್ರಾಮಸ್ಥರ ಸನ್ಮಾನ
*  ಡಾ.ಚಿದಾನಂದ ಸಾಧನೆಗೆ ಶುಭ ಕೋರಿದ ಸಚಿವ ಗೋವಿಂದ ಕಾರಜೋಳ 
 


ಮಹಾಲಿಂಗಪುರ(ಫೆ.03):  ವೈದ್ಯಕೀಯ ವಿಭಾಗದ ಸೂಪರ್‌ ಸ್ಪೆಷಾಲಿಟಿ ‘ನೀಟ್‌’ ಪರೀಕ್ಷೆಯಲ್ಲಿ(Super Specialty NEET Exam) ಬಾಗಲಕೋಟೆ(Bagalkot) ಜಿಲ್ಲೆ ಮುಧೋಳ ತಾಲೂಕು ರನ್ನಬೆಳಗಲಿಯ ಕೂಲಿಕಾರನ ಮಗ ಡಾ.ಚಿದಾನಂದ ಕಲ್ಲಪ್ಪ ಕುಂಬಾರ(Dr Chidanand Kallappa Kumbar) ಎರಡು ವಿಷಯಗಳಲ್ಲಿ ದೇಶಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ.

ರನ್ನಬೆಳಗಲಿಯ ಬಡ ಕುಟುಂಬದ ಕಲ್ಲಪ್ಪ- ಕಸ್ತೂರಿ ದಂಪತಿಯ ಪುತ್ರ ಡಾ.ಚಿದಾನಂದ ಕುಂಬಾರ ಅವರು 2021ನೇ ಸಾಲಿನ ಸೂಪರ್‌ ಸ್ಪೆಷಾಲಿಟಿ ನೀಟ್‌ ಪರೀಕ್ಷೆಯಲ್ಲಿ ಎಂಡಿ ಗ್ಯಾಸ್ಟ್ರೋ ಎಂಟರಾಲಜಿ (Digestive system)ಯಲ್ಲಿ 400ಕ್ಕೆ 340 ಅಂಕ ಮತ್ತು ಎಂಡಿ ಹೆಪಟಾಲಜಿ (Liver Specialist)ಯಲ್ಲಿ 400ಕ್ಕೆ 330 ಅಂಕಗಳಿಸಿ ಈ ಎರಡು ವಿಭಾಗದಲ್ಲಿ ದೇಶಕ್ಕೆ(India) ಪ್ರಥಮ ರ‍್ಯಾಂಕ್‌ ಪಡೆದಿದ್ದಾರೆ.

Tap to resize

Latest Videos

undefined

Guest Faculty Provisional Selection List 2022: ಅತಿಥಿ ಉಪನ್ಯಾಸಕರ ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಬಡವನಾದರೂ ಬುದ್ಧಿವಂತ:

ಡಾ.ಚಿದಾನಂದ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ(Kannada Medium) ರನ್ನ ಬೆಳಗಲಿಯಲ್ಲಿ ಮುಗಿಸಿದ್ದಾರೆ. ಕನ್ನಡ ಮಾಧ್ಯಮವೇ ಇವರಿಗೆ ಬುನಾದಿಯಾಗಿದ್ದು, ಕರುನಾಡಿಗೂ(Karnataka) ಕೀರ್ತಿ ತಂದಿದ್ದಾರೆ. ಎಂಬಿಬಿಎಸ್‌ ಪ್ರವೇಶ ಪರೀಕ್ಷೆಯಲ್ಲಿ(MBBS Entrance Examination) 806ನೇ ಸ್ಥಾನ ಗಳಿಸಿದ್ದ ಚಿದಾನಂದ, ಹುಬ್ಬಳ್ಳಿ ಕೆಎಂಸಿಯಲ್ಲಿ ಎಂಬಿಬಿಎಸ್‌(MBBS) ಪದವಿ ಪಡೆದಿದ್ದಾರೆ. ದೆಹಲಿಯ ಏಮ್ಸ್‌ನಲ್ಲಿ ವಿದ್ಯಾಭ್ಯಾಸ ಮಾಡಿ ಎಂಡಿ ಔಷಧ ಪದವಿಯಲ್ಲಿ ದೇಶಕ್ಕೆ 3ನೇ ರ‍್ಯಾಂಕ್‌ ಪಡೆದುಕೊಂಡಿದ್ದರು. 2 ವರ್ಷದಿಂದ ಹೈದ್ರಾಬಾದ್‌ನ ಗ್ಲೋಬಲ್‌ ಆಸ್ಪತ್ರೆಯಲ್ಲಿ(Global Hospital Hyderabad) ವ್ಯೆದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಡಾ.ಚಿದಾನಂದ ಅವರು ಚಿಕ್ಕ ವಯಸ್ಸಿನಲ್ಲೇ (1998ರಲ್ಲಿ) ತಾಯಿಯನ್ನು ಕಳೆದುಕೊಂಡಿದ್ದರು. ಅವರ ತಂದೆ ಕಲ್ಲಪ್ಪ ಕೂಲಿ ಕೆಲಸ ಮಾಡಿ ಬಂದ ಹಣದಲ್ಲಿ ಕುಟುಂಬ ನಿರ್ವಹಣೆಯೊಂದಿಗೆ ಈತನನ್ನು ಓದಿಸಿದ್ದಾರೆ. ಡಾ.ಚಿದಾನಂದ ಅವರ ತಂದೆ ಈಗಲೂ ಕೂಲಿ ಕೆಲಸ ಮಾಡುತ್ತಾರೆ. ಡಾ.ಚಿದಾನಂದ ಸಹೋದರ ಪರಮಾನಂದ ಮಹಾಲಿಂಗಪುರದಲ್ಲಿ ಟೇಲರಿಂಗ್‌ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಡಾ.ಚಿದಾನಂದ ಅವರ ಸಾಧನೆಗೆ ಸಚಿವ ಗೋವಿಂದ ಕಾರಜೋಳ(Govind Karjol) ಸೇರಿದಂತೆ ಹಲವರು ಫೋನ್‌ ಮಾಡಿ ಶುಭ ಕೋರಿದ್ದಾರೆ. ಗ್ರಾಮಸ್ಥರು ಡಾ.ಚಿದಾನಂದ ಅವರ ಮನೆಗೆ ತೆರಳಿ ತಂದೆ ಕಲ್ಲಪ್ಪ ಅವರನ್ನು ಸನ್ಮಾನಿಸಿದ್ದಾರೆ.

ಹೂವು ಕಟ್ಟುವ ಹುಡುಗಿ ಈಗ ಪಿಎಸ್‌ಐ!

ಕುಕನೂರು: ಹೂವು ಕಟ್ಟಿ, ರಸ್ತೆ ಬದಿ ಕುಳಿತು ಮಾರಾಟ ಮಾಡುವ ಹುಡುಗಿ ಈಗ ಪಿಎಸ್‌ಐ(PSI) ಆಗಿದ್ದಾಳೆ. ಕೊಪ್ಪಳ(Koppal) ಜಿಲ್ಲೆಯ ಕುಕನೂರಿನ ವೀರಭದ್ರಪ್ಪ ವೃತ್ತದಲ್ಲಿ ನಿತ್ಯ ಹೂವು ಮಾರುವ ಪಟೇಲ್‌ ಕುಟುಂಬದ ಫರೀದಾಬೇಗಂ ಇತ್ತೀಚೆಗೆ ನಡೆದ ಪಿಎಸ್‌ಐ ಆಯ್ಕೆ ಪರೀಕ್ಷೆಯಲ್ಲಿ ಕಲ್ಯಾಣ ಕರ್ನಾಟಕ(Kalyana Karnataka) ವಲಯದಲ್ಲಿ 17ನೇ ರಾರ‍ಯಂಕ್‌ ಪಡೆದಿದ್ದಾಳೆ. ಆದರೆ ಮಗಳ ಸಾಧನೆ ನೋಡಲು ತಂದೆ ಮೌಲಾಹುಸೇನ ಪಟೇಲ್‌ ಇಲ್ಲ. 7 ತಿಂಗಳ ಹಿಂದೆ ಅನಾರೋಗ್ಯದಿಂದ ಅಸು ನೀಗಿದರು. ಮೌಲಾಹುಸೇನ್‌ಗೆ ಒಟ್ಟು 12 ಮಕ್ಕಳು. ಐವರು ಗಂಡು, ಏಳು ಹೆಣ್ಣುಮಕ್ಕಳು. ಮನೆಯಲ್ಲಿ ಇಡೀ ಕುಟುಂಬದವರು ಹೂವು ಕಟ್ಟುವ ಕೆಲಸ ಮಾಡುತ್ತಾರೆ. 

ಕರ್ನಾಟಕದ ಶಾಲಾ ಪಠ್ಯ ಪುಸ್ತಕದಲ್ಲಿ ಮತ್ತೊಂದು ಎಡವಟ್ಟು

ಫರೀದಾ ಬೇಗಂ 9ನೇ ಮಗಳು. ಹೂವು ಕಟ್ಟುವ ಕೆಲಸದೊಂದಿಗೆ ಫರೀದಾ ಓದು ಮುಂದುವರಿಸಿದ್ದಳು. ಒಂದೆಡೆ ಹೂವು ಕಟ್ಟುತ್ತಾ, ಪಕ್ಕದಲ್ಲಿ ಪುಸ್ತಕ ಇಟ್ಟುಕೊಂಡು, ಇಲ್ಲವೆ ಯುಟ್ಯೂಬ್‌ನಲ್ಲಿ ಪಠ್ಯ ಆಲಿಸುತ್ತಾ ಕೆಲಸ ಮಾಡುತ್ತಿದ್ದರು. ಇವರ ಕುಟುಂಬದಲ್ಲಿ ಫರೀದಾ ಬೇಗಂ(Fareed Begum) ಹಾಗೂ ಅವರ ಕಿರಿಯ ತಂಗಿ ಮಾತ್ರ ಪದವಿವರೆಗೂ ಓದಿದ್ದಾರೆ. ಉಳಿದವರಾರ‍ಯರು ಹೆಚ್ಚು ಓದಿಲ್ಲ.

ನಮ್ಮ ತಂದೆ ಆಸೆಯಂತೆ ಇಂದು ನಾನು ಪಿಎಸ್‌ಐ ಆಗಿದ್ದೇನೆ. ಅವರು ಕಷ್ಟಪಟ್ಟು ಓದಿಸಿದ್ದಕ್ಕೆ ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು. ಮುಂದೆ ಇನ್ನೂ ಓದಿ ಐಎಎಸ್‌ ಅಧಿಕಾರಿ ಆಗಬೇಕೆಂಬ ಹಂಬಲವಿದೆ. ನನಗೆ ನಮ್ಮ ತಾಯಿ, ಅಣ್ಣಂದಿರು, ಅಕ್ಕಂದಿರು ಸಾಥ್‌ ನೀಡಿದ್ದಾರೆ ಅಂತ ಕುಕನೂರಿನ ಪಿಎಸ್‌ಐ ಆಗಿ ಆಯ್ಕೆಯಾದ ಯುವತಿ ಫರೀದಾಬೇಗಂ ತಿಳಿಸಿದ್ದಾರೆ. 
 

click me!