ಪುಟ್ಟ ಮಕ್ಕಳ ಫೀಸ್ ಕಟ್ಟೋಕೋ EMI, ಸಾಲ, ನೇರ ವ್ಯಾಪಾರಕ್ಕಿಳಿದ ಶಿಕ್ಷಣ ಸಂಸ್ಥೆಗಳು!

Suvarna News   | Asianet News
Published : Jun 11, 2021, 08:26 AM ISTUpdated : Jun 11, 2021, 09:03 AM IST
ಪುಟ್ಟ ಮಕ್ಕಳ ಫೀಸ್ ಕಟ್ಟೋಕೋ EMI, ಸಾಲ, ನೇರ ವ್ಯಾಪಾರಕ್ಕಿಳಿದ ಶಿಕ್ಷಣ ಸಂಸ್ಥೆಗಳು!

ಸಾರಾಂಶ

 ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಫೀಸ್ ಟಾರ್ಚರ್ ಖಾಸಗಿ ಶಾಲೆಗಳು ಹಣ ವಸೂಲಿಗೆ ಹೊಸ ಪ್ಲಾನ್ ಶಾಲೆಗಳ ಫೀಸ್ ಕಟ್ಟಲು ಸಾಲ ನೀಡುವ ಸಂಸ್ಥೆಗಳೊಂದಿಗೆ ಟೈ ಅಪ್

ಬೆಂಗಳೂರು (ಜೂ.11):   ಶೈಕ್ಷಣಿಕ ವರ್ಷದ ಆರಂಭಕ್ಕೂ ಮೊದಲೇ ಫೀಸ್ ಟಾರ್ಚರ್ ಶುರುಮಾಡಿ ಲಾಕ್ ಡೌನ್ ಸಂದರ್ಭದಲ್ಲಿ ಖಾಸಗಿ ಶಾಲೆಗಳು ಹಣ ವಸೂಲಿಗೆ ಹೊಸ ಪ್ಲಾನ್ ಮಾಡಿಕೊಂಡಿವೆ.   ಶಾಲೆಗಳ ಫೀಸ್ ಕಟ್ಟಲು ಸಾಲ ನೀಡುವ ಸಂಸ್ಥೆಗಳೊಂದಿಗೆ ಟೈ ಅಪ್ ಮಾಡಿಕೊಂಡು ಆಮಿಷ ಒಡ್ಡುತ್ತಿವೆ. 

ಸಾಲ ತೆಗೆದುಕೊಳ್ಳಿ, ಶುಲ್ಕ ಕಟ್ಟಿ ಎಂದು ಶಾಲಾ ಆಡಳಿತದಿಂದಲೇ ಪೋಷಕರಿಗೆ ಸಾಲದ ವ್ಯವಸ್ಥೆ ಬಗ್ಗೆ ಸೂಚನೆ ನೀಡಲಾಗುತ್ತಿದೆ. ಈಗ ಎಲ್ಲೆಡೆ ರಕ್ತ ಬಿಜಾಸುರನಂತೆ ಇದ್ದ ಸಾಲಕೋರ ಸಂಸ್ಥೆಗಳು ಈಗ ಶಾಲಾ ಅಂಗಳಕ್ಕೂ ಕಾಲಿಟ್ಟಂತಾಗಿದೆ.  

ಪಿಯು ಪರೀಕ್ಷಾ ಶುಲ್ಕ ವಾಪಸ್‌ಗೆ ವಿದ್ಯಾರ್ಥಿಗಳು, ಪೋಷಕರ ಆಗ್ರಹ ...

ಫೈನಾನ್ಸ್ ಆ್ಯಪ್ ಗಳ‌ ಮೂಲಕ ಪೋಷಕರಿಗೆ ಸಾಲ ವಿತರಣೆ ಮಾಡುವ ಆಮಿಷ ಒಡ್ಡುತ್ತಿವೆ. ಫೈನಾನ್ಸ್ ಸಂಸ್ಥೆಗಳ ಜತೆ ಖಾಸಗಿ ಶಾಲೆಗಳು ಟೈ ಅಪ್ ಆಗಿದ್ದು ಸಾಲ ತೆಗೆದುಕೊಳ್ಳಿ ಎಂದು ಪೋಷಕರಿಗೆ ಸಲಹೆ ನೀಡುತ್ತಿವೆ. 

ಹತ್ತು ಹಲವು ಶಾಲೆಗಳಲ್ಲಿ ಈಗಾಗಲೇ ಪರಿಚಯವಾಗಿರುವ ಸಾಲದ ಸಂಸ್ಥೆಗಳು ಪೋಷಕರಿಗೆ ಇಎಂಐ ಮೂಲಕ ಫೀಸ್ ಕಟ್ಟುವ ವ್ಯವಸ್ಥೆ ಬಗ್ಗೆ ಸೂಚನೆ ನೀಡುತ್ತಿವೆ. 

11 ತಿಂಗಳಿಗೆ ಸಾಲ, ಶುಲ್ಕ ಪಾವತಿಗೆ ಮಾತ್ರ ಈ ಸಾಲ ಸೀಮಿತವಾಗಿದ್ದು, ಮೊದಲ 6 ತಿಂಗಳಿಗೆ ಝೀರೋ ಬಡ್ಡಿ ವಿಧಿಸಲಾಗುತ್ತದೆ. ನಂತರ 9 ತಿಂಗಳಿಗೆ ಶೇಕಡಾ 2 % ಬಡ್ಡಿ 11 ತಿಂಗಳಿಗೆ 3.5% ಬಡ್ಡಿ ವಿಧಿಸಲಾಗುತ್ತದೆ.  

ಇಎಂಐ ಕಟ್ಟಲು ಪೋಷಕರು ಅಶಕ್ತರಾದರೆ, ಮಕ್ಕಳ ಟಿಸಿ ಅಡಮಾನ ಇಟ್ಟು ಸಾಲ ತೀರಿಸಬಹುದಾಗಿದೆ.  ಟಿಸಿ ಅಡ ಇಟ್ಟು ಸಾಲ ತೀರಿಸಲು ಒತ್ತಡವಿದ್ದು, ಈ ನಿಟ್ಟಿನಲ್ಲಿ ಪೋಷಕರ ಉದ್ಯೋಗ, ವಾರ್ಷಿಕ ಸಂಬಳದ ಮಾಹಿತಿ‌ ಪಡೆಯುತ್ತಿವೆ. ಇದರಿಂದ ಶಾಲಾ ಆಡಳಿತದ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. 

PREV
click me!

Recommended Stories

1ನೇ ತರಗತಿ ದಾಖಲಾತಿಗೆ 6 ವರ್ಷ ಕಡ್ಡಾಯ, ಇಂಗ್ಲೀಷ್ ಶಾಲೆಗಳ ಪೋಷಕರಿಂದ ಸಡಿಲಿಕೆಗೆ ಮನವಿ
SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ