ರಾತ್ರಿ ಹೃದಯಾಘಾತಕ್ಕೆ ತಂದೆ ಸಾವು: 700 ಕಿಮೀ ಕ್ರಮಿಸಿ ಅಂತಿಮ ದರ್ಶನ ಪಡೆದ ಮಗಳು ಬೆಳಗ್ಗೆ ಪರೀಕ್ಷೆಗೆ ಹಾಜರು!

By Ravi Janekal  |  First Published Apr 7, 2023, 2:27 PM IST

ಸಮಾಜದಲ್ಲಿ ಇನ್ನೂ ಮಾನವೀಯ ಮುಖಗಳಿವೆ ಎನ್ನುವುದಕ್ಕೆ ಹೊಸನಗರದಲ್ಲೊಂದು ನಿದರ್ಶನ ಸಿಕ್ಕಿದೆ. ಜಾತಿ ಧರ್ಮ ಭಾಷೆ ಮೀರಿಯೂ ಜನರಲ್ಲಿ ಇನ್ನೂ ಮಾನವೀಯತೆ ಇದೆ ಈ ಮೂಲಕ ಅನೇಕ ಪರೋಪಕಾರಿ ಕೆಲಸಗಳು ನಡೆಯುತ್ತಿವೆ ಎಂಬುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ.


ಶಿವಮೊಗ್ಗ (ಏ.7) : ಸಮಾಜದಲ್ಲಿ ಇನ್ನೂ ಮಾನವೀಯ ಮುಖಗಳಿವೆ ಎನ್ನುವುದಕ್ಕೆ ಹೊಸನಗರದಲ್ಲೊಂದು ನಿದರ್ಶನ ಸಿಕ್ಕಿದೆ. ಜಾತಿ ಧರ್ಮ ಭಾಷೆ ಮೀರಿಯೂ ಜನರಲ್ಲಿ ಇನ್ನೂ ಮಾನವೀಯತೆ ಇದೆ ಈ ಮೂಲಕ ಅನೇಕ ಪರೋಪಕಾರಿ ಕೆಲಸಗಳು ನಡೆಯುತ್ತಿವೆ ಎಂಬುದಕ್ಕೆ ಸಾಕ್ಷಿಯೊಂದು ಸಿಕ್ಕಿದೆ.

ಹೊಸನಗರ(Hosanagar) ತಾಲೂಕಿನ ಗೇರುಪುರ, ಹಿಂದುಳಿದ ವರ್ಗಗಳ ಇಂದಿರಾಗಾಂಧಿ ವಸತಿ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಆರ್ಶಿಯಾ ಮನಿಯರ್(Arshia Maniar) ತಂದೆಯ ಸಾವಿನ ನೋವಿನಲ್ಲಿಯೂ ಗುರುವಾರ ವಾರ್ಷಿಕ ಪರೀಕ್ಷೆ ಇಂಗ್ಲಿಷ್ ಭಾಷೆಯನ್ನು ಬರೆದರು. ವಿದ್ಯಾರ್ಥಿನಿಯ ತಂದೆ ಅಬಿದ್ ಭಾಷಾ ಮನಿಯರ್ ಅವರು ಕೊಪ್ಪಳದ ನಿವಾಸದಲ್ಲಿ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದರು. 

Tap to resize

Latest Videos

undefined

ಗ್ರಾಮೀಣ ಜನರ ಸ್ಥಿತಿ ಅರಿಯಲು ಐಐಎಂ-ಶಿಲ್ಲಾಂಗ್‌ ವಿದ್ಯಾರ್ಥಿಗಳಿಂದ ಗ್ರಾಮವಾಸ್ತವ್ಯ

ವಿದ್ಯಾರ್ಥಿನಿಯ ಪೋಷಕರು ತಂದೆಯ ಸಾವಿನ ಸುದ್ಧಿಯನ್ನು ವಸತಿ ಶಾಲೆಯ ಪ್ರಾಂಶುಪಾಲರ ಗಮನಕ್ಕೆ ತಂದರು  ವಿದ್ಯಾರ್ಥಿನಿಗೆ ತಂದೆಯ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡುವಂತೆ ಕೋರುತ್ತಾರೆ.ಕೂಡಲೆ ಸ್ಪಂದಿಸಿದ ವಸತಿ ಶಾಲೆಯ ಆಡಳಿತ ಮಂಡಳಿ, ಗುರುವಾರ ಬೆಳಗ್ಗೆ 10:30 ಕ್ಕೆ ವಿದ್ಯಾರ್ಥಿನಿಗೆ 10 ನೇ ತರಗತಿಯ ಇಂಗ್ಲಿಷ್ ಭಾಷಾ ವಾರ್ಷಿಕ ಪರೀಕ್ಷೆ ಇದೆ ಎಂದು ಪೋಷಕರಿಗೆ ತಿಳಿಸುತ್ತಾರೆ. ಆದರೆ ತಂದೆಯ ಅಂತಿಮ ದರ್ಶನ ಪಡೆಯುವುದು ವಿದ್ಯಾರ್ಥಿನಿಯ ಆದ್ಯ ಕರ್ತವ್ಯ ಎಂದು ಮನಗಂಡರು. ತಕ್ಷಣ ಪೋಷಕರಿಗೆ ವಿದ್ಯಾರ್ಥಿನಿಯನ್ನು ಕೊಪ್ಪಳಕ್ಕೆ ಕರೆತರುವುದಾಗಿ ತಿಳಿಸುತ್ತಾರೆ. ವಿದ್ಯಾರ್ಥಿನಿ ಖಾಸಗಿ ವಾಹನದಲ್ಲಿ ಕೊಪ್ಪಳಕ್ಕೆ ತೆರಳಲು ವ್ಯವಸ್ಥೆಯನ್ನು ಮಾಡಿದ್ದಾರೆ.

ವಸತಿ ಶಾಲೆಯ ಪ್ರಾಂಶುಪಾಲ ಯೋಗೇಶ್ ಎಚ್. ಹೆಬ್ಬಳಗೆರೆ ನೇತೃತ್ವದಲ್ಲಿ ಪ್ರಯಾಣಕ್ಕೆ ಸಿದ್ಧತೆಮಾಡಿಕೊಂಡು ನಿಲಯಪಾಲಕ ಆರ್. ಶಾಂತಾನಾಯ್ಕ್ ಹಾಗೂ ಮಹಿಳಾ ಸಿಬ್ಬಂದಿ ಸುನೀತಾ ಅವರು ರಾತ್ರಿ 10:30ರ ಸುಮಾರಿಗೆ ಹೊಸನಗರದಿಂದ ಹೊರಡುತ್ತಾರೆ ಬೆಳಗ್ಗೆ 4 ಗಂಟೆ ಸುಮಾರಿಗೆ 300 ಕಿ.ಮೀ ದೂರದ ಕೊಪ್ಪಳದ ವಿದ್ಯಾರ್ಥಿನಿ ನಿವಾಸಕ್ಕೆ ತಲುಪಿ  ತಂದೆಯ ಅಂತಿಮ ದರ್ಶನಕ್ಕೆ ಸಹಕರಿಸಿದ್ದಾರೆ. ವಿದ್ಯಾರ್ಥಿನಿಯ ತಂದೆಯ ಅಂತಿಮ ದರ್ಶನ ಪಡೆದು, ಕುಟುಂಬ ಸದಸ್ಯರಿಗೆ ಧೈರ್ಯ ತುಂಬಿ ಬೆಳಗ್ಗೆ 5 ಗಂಟೆಗೆ ಕೊಪ್ಪಳದಿಂದ ಹೊರಡುತ್ತಾರೆ  ಬೆಳಗ್ಗೆ 10:30 ಕ್ಕೆ ಹೊಸನಗರ ತಾಲ್ಲೂಕು ಹೋಲಿ ರೆಡಿಮರ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿನಿಯನ್ನು ಕರೆತರಲಾಗಿದೆ.

ಗೀವ್ ಮಿ ಸಮ್ ಸನ್ ಶೈನ್ ಎಂದ ವಿದ್ಯಾರ್ಥಿ: ಉತ್ತರ ಪತ್ರಿಕೆಯಲ್ಲಿ ಸಾಲು ಸಾಲು ಮೊಟ್ಟೆ ನೀಡಿದ ಶಿಕ್ಷಕ

ವಿದ್ಯಾರ್ಥಿನಿಗೆ ವಸತಿ ಶಾಲೆಯ ಆಡಳಿತ ಮಂಡಳಿ ಹಾಗೂ ಪರೀಕ್ಷಾ ಕೇಂದ್ರದ ಸಿಬ್ಬಂದಿ ಧೈರ್ಯ ತುಂಬಿ ಪರೀಕ್ಷೆ ಬರೆಯಲು ಸಹಕರಿಸಿದ್ದಾರೆ. ಇದೊಂದು ಘಟನೆ ಮಾನವೀಯತೆಯ ಪ್ರತೀಕವಾಗಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ

click me!