ಶಿಕ್ಷಣ ಮಾತ್ರವಲ್ಲ ಎಲ್ಲವನ್ನು ಬದಲಾವಣೆ ಮಾಡಿದ್ದೇವೆ BC Nagesh

By Suvarna News  |  First Published May 25, 2022, 11:27 AM IST

ಆಡಳಿತಾರೂಢ ಬಿಜೆಪಿ ರಾಜ್ಯ ಸರ್ಕಾರ ಪಠ್ಯಪುಸ್ತಕಗಳನ್ನು ಕೇಸರಿಮಯಗೊಳಿಸುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪಕ್ಕೆ ಬಿಸಿ ನಾಗೇಶ್  ವಾಗ್ದಾಳಿ ನಡೆಸಿದ್ದಾರೆ.


ಮೈಸೂರು (ಮೇ.25): ನಾವು ಶಿಕ್ಷಣವನ್ನ‌ (Education) ಮಾತ್ರ ಬದಲಾವಣೆ ಮಾಡಿಲ್ಲ. ಎಲ್ಲವನ್ನು ಬದಲಾವಣೆ ಮಾಡಿದ್ದೇವೆ ಎಂದು ಶಿಕ್ಷಣ ಸಚಿವ ಬಿ ಸಿ ನಾಗೇಶ್ (BC Nagesh)  ಮೈಸೂರಿನಲ್ಲಿ (Mysuru) ಹೇಳಿಕೆ ನೀಡಿದ್ದಾರೆ. ಈ ದೇಶದಲ್ಲಿ ವಾಜಪೇಯಿ ಸರ್ಕಾರ ಬರುವವರೆಗೂ ಅಂತರಾಜ್ಯ ರಸ್ತೆ ಇರಲಿಲ್ಲ. ನಾವು ರಸ್ತೆಯನ್ನು ಬದಲಾವಣೆ ಮಾಡಿದ್ದೇವೆ. ಅದರ ಬಗ್ಗೆಯು ಮಾತನಾಡಿ. ಪಠ್ಯ ಪುಸ್ತಕದ ಮೇಲೆ ಮಾತನಾಡುತ್ತಿರುವವರು ವಿಷಯದ ಮೇಲೆ ಮಾತನಾಡುತ್ತಿದ್ದಾರಾ?  ರಾಜಕೀಯದ ಮೇಲೆ ಮಾತನಾಡುತ್ತಿದ್ದಾರಾ? ಎಂದು ಪ್ರಶ್ನಿಸಿದ್ದಾರೆ.

ಬರಗೂರು ರಾಮಚಂದ್ರಪ್ಪ ಪಠ್ಯ ಬದಲಾಯಿಸಿದ್ರೆ ಅದು ವಿರೋಧವಲ್ಲ. ಆಗ ಒಂದೇ ಪಂಥದ ಪಠ್ಯ ಪುಸ್ತಕ ಸೇರಿದಾಗ ಅದು ತಪ್ಪಲ್ಲ ಅಲ್ವಾ. ಈಗ ಮಾತ್ರ ನಿಮಗೆ ಪಂಥಗಳು ಕಾಣುತ್ತಿದೆ. ನಮ್ಮ ಇಚ್ಚೆ ಪಂಥದಲ್ಲ.  ನಾವು ಎಲ್ಲವನ್ನು ಒಪ್ಪಿ ಶ್ರೇಷ್ಠವಾದುದ್ದನ್ನು ಕೊಡುತ್ತಿದ್ದೇವೆ. ಬಿಜೆಪಿ ಪಠ್ಯ ಸಂಸ್ಕರಣ ಮಾಡುತ್ತಿದ್ದಂತೆ. ನಿಮಗೆ ಚಾತುರ್ ವರ್ಣ ಎಲ್ಲ ನೆನಪಾಗುತ್ತಿದೆ ಎಂದಿದ್ದಾರೆ.

Tap to resize

Latest Videos

ಜ್ಞಾನವ್ಯಾಪಿ ಮಂದಿರದ ಪರ ಬ್ಯಾಟ್ ಮಾಡಿದ ಬೆಂಗಳೂರು ಶಿಕ್ಷಣ ಸಂಸ್ಥೆ

ವಾಜಪೇಯಿ ಪ್ರಧಾನಿ ಆಗುವ ಮೊದಲು ಅಮೇರಿಕಾ ಹೇಳಿದಂತೆ ನಡೆಯುತ್ತಿತ್ತು. ಈ ದೇಶದಲ್ಲಿ ಯಾವಾಗ ಯುದ್ಧ ಆಗಬೇಕು ಎಂಬುದನ್ನು ಅಮೇರಿಕಾ ತೀರ್ಮಾನ ಮಾಡುತ್ತಿತ್ತು. ಆದರೆ ವಾಜಪೇಯಿ ಕಾರ್ಗೀಲ್ ಯುದ್ಧದಲ್ಲಿ ಕೊನೆ ಸೈನಿಕ ಹೋರಾಡುವ ವರೆಗೆ ಯಾರ ಜೊತೆ ಮಾತಾಡಲ್ಲ ಅಂದಿದ್ರು. ಕಾಂಗ್ರೆಸ್ ಯಾರ್ಯಾರಿಗೋ ರಾಜಿ ಮಾಡಿಕೊಂಡು ರಾಜಕೀಯ ಮಾಡಿದೆ. ಆದರೆ ನಾವು ರಾಜಕೀಯ ಮಾಡಿರೋದು ಈ ಜನರಿಗಾಗಿ ಈ ನೆಲಕ್ಕಾಗಿ, ಇಲ್ಲಿನ ಸಂಸ್ಕೃತಿಗಾಗಿ ಎಂದರು.

ಬೇರೆ ದೇಶಗಳಲ್ಲಿ ನಮಗೆ 400-500 ವರ್ಷಗಳ ಇತಿಹಾಸ ಇಲ್ಲ. ಭಾರತಕ್ಕೆ 5-6 ಸಾವಿರ ವರ್ಷಗಳ ಇತಿಹಾಸ ಇದೆ. ನಾವು ಜ್ಞಾನ ಇಟ್ಟುಕೊಂಡು ಬೇರೆ ದೇಶಕ್ಕೆ ಹೋದವರು. ಬೇರೆಯವರಂತೆ ಪಿಸ್ತೂಲ್, ಕತ್ತಿ ಹಿಡಿದುಕೊಂಡು ಬಂದವರಲ್ಲ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ:  ನಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯಪುಸ್ತಕಗಳಲ್ಲಿ ಬಣ್ಣ ಅಥವಾ ರಾಜಕೀಯ ಇಲ್ಲ ಕಾಣುತ್ತಿಲ್ಲ. ಆದರೆ, ಕಾಂಗ್ರೆಸ್ ಕಣ್ಣಿನಲ್ಲಿ ಮಾತ್ರ ಪಠ್ಯಪುಸ್ತಕಗಳಲ್ಲಿ ಕೇಸರಿಕರಣ ಕಾಣುತ್ತಿದೆ. ಕಾಂಗ್ರೆಸ್ ನವರು ಕೇಸರೀಕರಣವನ್ನು ಎಲ್ಲದರಲ್ಲೂ ನೋಡುತ್ತಾರೆ. ಮತಗಳ ಕಳೆದುಕೊಳ್ಳುವ ಭೀತಿ ಅವರಿಗಿದೆ. ಆದ್ದರಿಂದಲೇ ಪಠ್ಯಪುಸ್ತಕಗಳನ್ನು ಕೇಸರಿಮಯಗೊಳಿಸಲಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಹೇಳಿದರು.

ಉದಯಪುರ ಮಾದರಿಯಲ್ಲೇ ಕರ್ನಾಟಕದಲ್ಲೂ CONGRESS ಚಿಂತನ ಮಂಥನ ಸಭೆ

ಕಾಂಗ್ರೆಸ್ ತನ್ನ ಆಡಳಿತದಲ್ಲಿ ಶಿಕ್ಷಣ ಇಲಾಖೆಯನ್ನು ತಮ್ಮ ಮತ ಬ್ಯಾಂಕ್‌ಗಾಗಿ ಬಳಸಿಕೊಂಡಿತ್ತು. ಟಿಪ್ಪು ಮಾತ್ರ ಸ್ವಾತಂತ್ರ್ಯ ಹೋರಾಟಗಾರನೇ? ಸಂಗೋಳಿ ರಾಯಣ್ಣ, ಕಿತ್ತೂರು ರಾಣಿ ಚನ್ನಮ್ಮ ಮತ್ತು ಇತರರು ಸ್ವಾತಂತ್ರ್ಯ ಹೋರಾಟಗಾರರಲ್ಲವೇ?. ಟಿಪ್ಪುವಿಗೆ ಕನ್ನಡದ ಬಗ್ಗೆ ಗೌರವವಿರಲಿಲ್ಲ. ಹೈದರ್ ಅಲಿ ಮತ್ತು ಟಿಪ್ಪು ಮೈಸೂರು ರಾಜರಿಗೆ ದ್ರೋಹ ಬಗೆದಿದ್ದರು ಎಂದು ಆರೋಪಿಸಿದರು.

ಇದೇ ವೇಳೆ ಪರಿಷ್ಕೃತ ಪಠ್ಯಪುಸ್ತಕದಲ್ಲಿ ಕವಿ ಕುವೆಂಪು ಅವರಿಗೆ ಅಗೌರವ ತೋರಲಾಗಿದೆ ಎಂಬ ಆರೋಪದ ಕುರಿತು ಮಾತನಾಡಿ, ಕಾಂಗ್ರೆಸ್ ಸುಳ್ಳು ಸುದ್ದಿ ಹಬ್ಬಿಸುತ್ತಿದೆ. ಟಿಪ್ಪು, ಭಗತ್ ಸಿಂಗ್ ಮತ್ತು ನಾರಾಯಣ ಗುರುಗಳಿಗೆ ಸಂಬಂಧಿಸಿದ ಅಧ್ಯಾಯಗಳನ್ನು ಕೈಬಿಡಲಾಗಿದೆ ಎಂದು ಕಾಂಗ್ರೆಸ್ ಮೊದಲು ಹೇಳಿತ್ತು. ನಂತರ ಅದು ಸತ್ಯವಲ್ಲ ಎಂಬುದನ್ನು ಅರಿತ ಬಳಿಕ ಹೊಸ ಆರೋಪ ಮಾಡುವುದನ್ನು ಶುರು ಮಾಡಿದ್ದಾರೆ. ಸುಳ್ಳು ಸುದ್ದಿ ಹಬ್ಬಿಸಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷಮೆಯಾಚಿಸಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದ ಅವಧಿಯಲ್ಲಿ ಕೈಬಿಟ್ಟಿದ್ದ ಕುವೆಂಪು ಅವರ ನಾಲ್ಕು ಪಾಠಗಳನ್ನು ಈ ಬಾರಿಯ ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಿದ್ದೇವೆ. ಇಂತಹ ಸುಳ್ಳು ಆರೋಪಗಳನ್ನು ಮಾಡುವ ಮೊದಲು ಕಾಂಗ್ರೆಸ್ ಪಠ್ಯಪುಸ್ತಕಗಳನ್ನು ಓದಬೇಕು. ನಂತರ ಆ ಕುರಿತು ಮಾತನಾಡಬೇಕು ಎಂದು ತಿಳಿಸಿದರು.

ಬಳಿಕ ಪಠ್ಯಪುಸ್ತಕ ಈಗಾಗಲೇ ಮುದ್ರಣಗೊಂಡಿರುವುದರಿಂದ ಮತ್ತೊಮ್ಮೆ ಪರಿಷ್ಕರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು. ನಂತರ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ (TextBook Revision Committee) ಮುಖ್ಯಸ್ಥ ರೋಹಿತ್ ಚಕ್ರತೀರ್ಥ (Rohith chakrathirtha) ಅವರನ್ನು ಸಮರ್ಥಿಸಿಕೊಂಡ ನಾಗೇಶ್ ಅವರು, “ರೋಹಿತ್ ಅವರು ನಾಡಗೀತೆಗೆ ಅಗೌರವ ತೋರಿದ್ದಾರೆಂಬ ಆರೋಪ ಕುರಿತು ಪೊಲೀಸರು ಈಗಾಗಲೇ ‘ಬಿ’ ವರದಿಯನ್ನು ಸಲ್ಲಿಸಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗಲೇ ಬಿ ರಿಪೋರ್ಟ್ ನೀಡಲಾಗಿತ್ತು ಎಂದರು.

click me!