* ಧಾರವಾಡ ಜಿಲ್ಲೆಯ 116 ಕೇಂದ್ರದಲ್ಲಿ 29599 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ
* ಮಾ. 28ರಿಂದ ಏ. 16ರ ವರೆಗೆ ಪರೀಕ್ಷೆ, ಪಾರದರ್ಶಕತೆ ಹಿನ್ನೆಲೆಯಲ್ಲಿ ಸಿಸಿ ಟಿವಿ ಕ್ಯಾಮರಾ
* ಎಲ್ಲ ಕೋವಿಡ್ ನಿರ್ಬಂಧಗಳನ್ನು ತೆಗೆದು ಹಾಕಿದ ಸರ್ಕಾರ
ಬಸವರಾಜ ಹಿರೇಮಠ
ಧಾರವಾಡ(ಮಾ.25): ಕೋವಿಡ್-19(Covid-19) ಸೋಂಕಿನ ಭಯದ ಹಿನ್ನೆಲೆಯಲ್ಲಿ ಕಳೆದ ಎರಡು ವರ್ಷಗಳ ಕಾಲ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಲು ಹರಸಾಹಸ ಪಟ್ಟಿದ್ದ ಶಿಕ್ಷಣ ಇಲಾಖೆ(Department of Education) ಇದೀಗ ಕೋವಿಡ್ ಸೋಂಕು ಸಂಪೂರ್ಣ ತಗ್ಗಿದ ಹಿನ್ನೆಲೆಯಲ್ಲಿ ಮಾ. 28ರಿಂದ ನಿರಾತಂಕವಾಗಿ ಪರೀಕ್ಷೆ ನಡೆಸಲು ಅಂತಿಮ ತಯಾರಿ ನಡೆಸಿದೆ.
ಕೋವಿಡ್ ಪಾಸಿಟಿವಿಟಿ ದರ ಜಿಲ್ಲೆಯಲ್ಲಿ ಶೇ. 0ರಷ್ಟಿದೆ. ಕೋವಿಡ್ ತಗ್ಗಿದೆ. ಹೀಗಾಗಿ ಸರ್ಕಾರ ಸಹ ಎಲ್ಲ ನಿರ್ಬಂಧಗಳನ್ನು ತೆಗೆದು ಹಾಕಿದೆ. ಇಷ್ಟಾಗಿಯೂ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಯೊಂದು ಪರೀಕ್ಷಾ ಕೇಂದ್ರ ಸ್ಯಾನಿಟೈಜ್ ಮಾಡಿದ್ದು ಶಾರೀರಿಕ ಅಂತರದಲ್ಲಿ ವಿದ್ಯಾರ್ಥಿಗಳು(Students) ಪರೀಕ್ಷೆ(Exam) ಬರೆಯುವಂತೆ ವ್ಯವಸ್ಥೆ ಮಾಡಲಾಗುತ್ತಿದೆ.
ಅಲ್ಲಾಹು ಅಕ್ಬರ್' ಘೋಷಣೆ ಕೂಗಿ ಸುದ್ದಿಯಾಗಿದ್ದ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು
ಹಿಂದೇನಾಗಿತ್ತು:
ವರ್ಷ ಪೂರ್ತಿ ಪರೀಕ್ಷೆಗಾಗಿ ಓದಿದರೂ 2020ರಲ್ಲಿ ಪರೀಕ್ಷಾ ಸಮಯದಲ್ಲಿ ಕೋವಿಡ್-19 ಮೊದಲ ಅಲೆಯ ಹಿನ್ನೆಲೆಯಲ್ಲಿ ತುಂಬಾ ವಿಳಂಬವಾಗಿ ಪರೀಕ್ಷೆ ನಡೆಸಲಾಯಿತು. ಇನ್ನು, 2021ರಲ್ಲೂ ಪರೀಕ್ಷೆ ಸಮಯದಲ್ಲಿ ಕೋವಿಡ್ 2ನೇ ಅಲೆಯು ವಿದ್ಯಾರ್ಥಿಗಳನ್ನು ತೀವ್ರವಾಗಿ ಕಾಡಿತು. ಆಗ ತರಗತಿಗಳು ನಡೆಯದೇ ಆನಲೈನ್ ಮೂಲಕ ಪಾಠ ಮಾಡಲಾಗಿತ್ತು. ಕೊನೆ ಕೆಲವು ತಿಂಗಳು ಮಾತ್ರ ಭೌತಿಕವಾಗಿ ತರಗತಿಗಳು ನಡೆದರೂ ಪಠ್ಯಕ್ರಮ ಪೂರ್ಣವಾಗಿರಲಿಲ್ಲ. ಹೀಗಾಗಿ ಪರೀಕ್ಷೆಯಲ್ಲಿ ಶೇ. 30ರಷ್ಟುಕಡಿತ ಮಾಡಲಾಯಿತು. ಜೊತೆಗೆ ಬಹುಆಯ್ಕೆ ಪ್ರಶ್ನೆಗಳ ಮೂಲಕ ಬಹುತೇಕ ಪರೀಕ್ಷೆ ಕುಳಿತ ವಿದ್ಯಾರ್ಥಿಗಳನ್ನು ಉತ್ತೀರ್ಣ ಸಹ ಮಾಡಲಾಯಿತು.
ಪ್ರಸ್ತುತ ಕೋವಿಡ್ ಹಿನ್ನೆಲೆಗೆ ಬಂದ ಕಾರಣ ಸಾಮಾನ್ಯವಾಗಿ ಈ ಹಿಂದೆ ನಡೆಸುವಂತೆ ಪರೀಕ್ಷಾ ಮಾದರಿಯಲ್ಲಿಯೇ ನಡೆಸಲಾಗುತ್ತಿದೆ. ಆದರೂ 3ನೇ ಅಲೆಯ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಪಠ್ಯಕ್ರಮವಾಗದ ಕಾರಣ ಈ ಬಾರಿಯೂ ಶೇ. 20ರಷ್ಟು ಪಠ್ಯಕ್ರಮದಲ್ಲಿ ಕಡಿತ ಮಾಡಿ ಪ್ರಶ್ನೆಗಳನ್ನು ತೆಗೆಯಲಾಗಿದೆ. ಬಹುಆಯ್ಕೆ ಪ್ರಶ್ನೆಗಳು ಸೇರಿದಂತೆ ಮುಂಚಿನಂತೆ ಪ್ರಶ್ನೆ ಪತ್ರಿಕೆಯು ತಯಾರಾಗಿದ್ದು ಈ ಬಗ್ಗೆ ವಿದ್ಯಾರ್ಥಿಗಳಿಗೂ ಮಾಹಿತಿ ನೀಡಲಾಗಿದೆ ಎಂದು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಡಿಡಿಪಿಐ ಎಸ್.ಎಸ್. ಕೆಳದಿಮಠ, ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಈಗಾಗಲೇ ಎಲ್ಲ ಸಿದ್ಧತೆಯಾಗಿದೆ. ಜಿಲ್ಲೆಯ ಎಲ್ಲ 166 ಪರೀಕ್ಷಾ ಕೇಂದ್ರಗಳಲ್ಲಿ ಸಿ.ಸಿ. ಕ್ಯಾಮರಾ(CC Camera) ಅಳವಡಿಸಿದ್ದು ಮೂಲಭೂತ ಸೌಕರ‍್ಯಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದರು.
SSLC Exams: ಎಕ್ಸಾಂನಲ್ಲಿ ಕಾಪಿ ಹೊಡೆಯೋಕೆ ಚಾನ್ಸೇ ಇಲ್ಲ: ವಿದ್ಯಾರ್ಥಿಗಳ ಮೇಲೆ ಹದ್ದಿನ ಕಣ್ಣು..!
ಎಷ್ಟು ಕೇಂದ್ರ, ವಿದ್ಯಾರ್ಥಿಗಳು?
ಜಿಲ್ಲೆಯ ಧಾರವಾಡ(Dharwad) ಶಹರದಲ್ಲಿ 8526 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದು 36 ಕೇಂದ್ರ ತೆರೆಯಲಾಗಿದೆ. ಹಾಗೆಯೇ, ಧಾರವಾಡ ಶಹರದಲ್ಲಿ 5250 ವಿದ್ಯಾರ್ಥಿಗಳು 21 ಪರೀಕ್ಷಾ ಕೇಂದ್ರಗಳು, ಧಾರವಾಡ ಗ್ರಾಮೀಣದಲ್ಲಿ 4063 ವಿದ್ಯಾರ್ಥಿಗಳಿದ್ದು 16 ಪರೀಕ್ಷಾ ಕೇಂದ್ರಗಳು, ಹುಬ್ಬಳ್ಳಿ ಗ್ರಾಮೀಣದಲ್ಲಿ 3968 ವಿದ್ಯಾರ್ಥಿಗಳಿದ್ದು 16 ಕೇಂದ್ರಗಳು, ಕಲಘಟಗಿಯಲ್ಲಿ 2775 ವಿದ್ಯಾರ್ಥಿಗಳಿದ್ದು 9 ಕೇಂದ್ರಗಳು, ಕುಂದಗೋಳದಲ್ಲಿ 2355 ವಿದ್ಯಾರ್ಥಿಗಳಿದ್ದು 8 ಕೇಂದ್ರಗಳು ಹಾಗೂ ನವಲಗುಂದದಲ್ಲಿ 2662 ವಿದ್ಯಾರ್ಥಿಗಳಿದ್ದು 10 ಕೇಂದ್ರಗಳನ್ನು ತೆರೆಯಲಾಗಿದೆ. ಜಿಲ್ಲೆಯಲ್ಲಿ ಒಟ್ಟು 116 ಪರೀಕ್ಷಾ ಕೇಂದ್ರಗಳಲ್ಲಿ 29599 ವಿದ್ಯಾರ್ಥಿಗಳು ಬರೆಯಲಿದ್ದಾರೆ. ಪರೀಕ್ಷೆಗೆ ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಶಿಕ್ಷಕರು ಸಜ್ಜುಗೊಳಿಸಿದ್ದಾರೆ. ಪರೀಕ್ಷೆಯ ಮಾದರಿ ಬಗ್ಗೆ ಶಿಕ್ಷಕರಿಗೆ ಹಾಗೂ ಶಿಕ್ಷಕರಿಂದ ಮಕ್ಕಳಿಗೆ ತರಬೇತಿ ಆಗಿದೆ. ರಾಜ್ಯದಲ್ಲಿಯೇ ಉತ್ತಮ ಅಂಕ ಪಡೆದು ಒಂದಂಕಿ ರಾರಯಂಕಿನಲ್ಲಿ ಬರುವಂತೆ ವಿದ್ಯಾರ್ಥಿಗಳಿಗೆ ತರಬೇತಿ ದೊರೆತಿದೆ ಎಂಬ ಮಾಹಿತಿ ನೀಡಿದರು.
ಒಟ್ಟಾರೆ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟಗಳಲ್ಲಿ ಒಂದಾದ ಎಸ್ಸೆಸ್ಸೆಲ್ಸಿ(SSLC) ಪರೀಕ್ಷೆಯನ್ನು ಎರಡು ವರ್ಷಗಳ ಕಾಲ ಕೋವಿಡ್ ಭಯದಲ್ಲಿಯೇ ಬರೆದ ವಿದ್ಯಾರ್ಥಿಗಳು ಈ ಬಾರಿ ನಿರಾತಂಕವಾಗಿ ಪರೀಕ್ಷೆ ಎದುರಿಸುತ್ತಿದ್ದು
ಪರೀಕ್ಷಾರ್ಥಿಗಳಿಗೆ ಆಲ್ ದಿ ಬೆಸ್ಟ್!
ದಿನಾಂಕ ಪರೀಕ್ಷಾ ವಿಷಯ
ಮಾ. 28 ಪ್ರಥಮ ಭಾಷೆ
ಮಾ. 30 ದ್ವಿತೀಯ ಭಾಷೆ
ಏ. 4 ಗಣಿತ
ಏ. 6 ಸಮಾಜ ವಿಜ್ಞಾನ
ಏ. 8 ತೃತೀಯ ಭಾಷೆ
ಏ. 11 ವಿಜ್ಞಾನ