Karnataka CET Schedule 2022 ಮಾರ್ಚ್ 25 ರಂದು ವೇಳಾಪಟ್ಟಿ ಪ್ರಕಟ

By Suvarna News  |  First Published Mar 24, 2022, 5:03 PM IST

ವೃತ್ತಿ ಶಿಕ್ಷಣ ಕೋರ್ಸುಗಳ ಸಾಮಾನ್ಯ ಪ್ರವೇಶ ಪರೀಕ್ಷೆ ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ  ನಡೆಯಲಿದೆ.


ಬೆಂಗಳೂರು (ಮಾ.24): ವೃತ್ತಿ ಶಿಕ್ಷಣ ಕೋರ್ಸುಗಳ (Vocational Education Course) ಸಾಮಾನ್ಯ ಪ್ರವೇಶ ಪರೀಕ್ಷೆ - ಸಿಇಟಿ (Common Entrance Test - CET) ಮಾರ್ಚ್ 25 ರಂದು ಅಂದರೆ ನಾಳೆ ವೇಳಾಪಟ್ಟಿ ಪ್ರಕಟಿಸಲಾಗುವುದು. ಜೂನ್ ಮೊದಲ ಅಥವಾ ಎರಡನೇ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ (ashwath narayan) ಮಾಹಿತಿ ನೀಡಿದ್ದಾರೆ.

ಈ ಬಾರಿ ನೀಟ್  (Neet) ಪ್ರಕ್ರಿಯೆ ವಿಳಂಬವಾದ ಕಾರಣ  ಸಿಇಟಿ ಅರ್ಜಿ ಆಹ್ವಾನ ವಿಳಂಬವಾಗಿದೆ. ಜನವರಿಯಲ್ಲಿ ಸಿಇಟಿ ಅರ್ಜಿಯನ್ನು ಪ್ರಕಟಿಸಲಾಗುತ್ತಿತ್ತು. ಈ ಬಾರಿ ಮೇ 18ರವರೆಗೆ ವಾರ್ಷಿಕ ಪರೀಕ್ಷೆಯು ನಡೆಯಲಿದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಯುಜಿ ತರಗತಿ CUET ಪರೀಕ್ಷೆ ಕಡ್ಡಾಯ 

SSLC ಪರೀಕ್ಷೆಗೆ ಇದೇ 28ರಿಂದ ಪ್ರಾರಂಭ: ಕೊರೋನಾ ನಂತರ ಇದೇ ಮೊದಲ ಬಾರಿಗೆ SSLC ಪರೀಕ್ಷೆ ನಡೆಸಲು ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಸಿದ್ಧತೆ ಮಾಡಿಕೊಂಡಿದೆ. ಕೋವಿಡ್ ನಂತರ ನಡೆಯುತ್ತಿರುವ ಮೊದಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಇದಾಗಿದ್ದು, ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಬೋರ್ಡ್ ಕಠಿಣ ಕ್ರಮ ವಹಿಸಿದೆ. ಇದೇ 28 ರಿಂದ ಪರೀಕ್ಷೆ ಪ್ರಾರಂಭವಾಗಲಿದ್ದು, ಏಪ್ರಿಲ್ 11 ರವರೆಗೆ ನಡೆಯಲಿದೆ. ಈ‌ ಬಾರಿ ವಿದ್ಯಾರ್ಥಿಗಳು ಹಾಲ್ ಟಿಕೆಟ್‌ನ್ನ ಸ್ಕೂಲ್ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಇಂದಿನಿಂದ ಎಲ್ಲಾ ಶಾಲೆಗಳಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿ ವಿದ್ಯಾರ್ಥಿಗಳಿಗೆ ಕೊಡಲಾಗಿದೆ.

ಕೊರೋನಾ ಕಡಿಮೆಯಾದರೂ ಪರೀಕ್ಷಾ ಕೇಂದ್ರದಲ್ಲಿ ಮಾರ್ಗಸೂಚಿ ಪಾಲನೆ. 
-ಕೋವಿಡ್ ಬಂದಿರುವ ವಿದ್ಯಾರ್ಥಿಗೆ  ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ನಡೆಸಲಾಗುತ್ತದೆ. 

-ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ ಪಾಲನೆ

ಪರೀಕ್ಷೆ ಬರೆಯುತ್ತಿರುವ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ
-ಈ ಬಾರಿ ಒಟ್ಟು 8 ಲಕ್ಷದ 73 ಸಾವಿರದ 846 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

-ಹೆಣ್ಣು ಮಕ್ಕಳು 4 ಲಕ್ಷದ 21ಸಾವಿರದ 110 ವಿದ್ಯಾರ್ಥಿನಿಯರು ಪರೀಕ್ಷೆ ತೆಗೆದುಕೊಂಡಿದ್ದಾರೆ

-ಗಂಡು ಮಕ್ಕಳು 4 ಲಕ್ಷದ 52 ಸಾವಿರದ 765 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

-ತೃತೀಯ ಲಿಂಗಿ 4 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ

-ಈ‌ ಬಾರಿ 3,444 ಪರೀಕ್ಷಾ ಕೇಂದ್ರಗಳನ್ನ ತೆರೆಯಲಾಗಿದೆ

-ಖಾಸಗಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ತೆರಯಲಾಗಿದೆ

-ಈಗಾಗಲೇ ಪರೀಕ್ಷಾ ಕೇಂದ್ರಗಳಿಗೆ ಅಧಿಕ್ಷರು, ಮುಖ್ಯ ಅಧಿಕ್ಷರನ್ನ ನೇಮಕ ಮಾಡಲಾಗಿದೆ

-ಪರೀಕ್ಷಾ ಅಕ್ರಮ ತಡೆಯಲು ಸಿಸಿಟಿವಿ ಅಳವಡಿಕೆ

-ಕೊಠಡಿ ಮೆಲ್ವೀಚಾರಕರು, ಸ್ಥಳೀಯ ಜಾಗೃತದಳದ ನೇಮಕ ಕೂಡ ಮಾಡಲಾಗಿದೆ

ಈ ಬಾರಿ ಪ್ರಶ್ನೆ ಪತ್ರಿಕೆ ಹೇಗಿರಲಿದೆ
-ಈ ವರ್ಷದ ಪ್ರಶ್ನೆ ಪತ್ರಿಕೆಯಲ್ಲಿ ಶೇ.20% ಸಿಲಬಸ್ ಕಡಿತ 

-ಉಳಿದ ಶೇ.80% ಸಿಲಬಸ್‌ನಲ್ಲಿ ಪ್ರಶ್ನೆಗಳನ್ನ ಕೇಳಲಾಗಿದೆ

-ಹಳೆ ಪದ್ಧತಿಯಲ್ಲಿ SSLC ಪರೀಕ್ಷೆ ನಡೆಯಲಿದೆ

-ಬೆಳ್ಳಿಗೆ 10.30 ರಿಂದ 1.45 ರವರೆಗೆ ಪರೀಕ್ಷೆ ನಡೆಯಲಿದೆ

-ಒಟ್ಟು 3 ಗಂಟೆ 15 ನಿಮಿಷಗಳ ಕಾಲ ಪರೀಕ್ಷೆ ನಡೆಯಲಿದೆ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳಾಪಟ್ಟಿ 
-ಮಾರ್ಚ್ 28-ಕನ್ನಡ ,ತೆಲುಗು, ಹಿಂದಿ, ಮರಾಠಿ,ತಮಿಳು,ಉರ್ದು, ಇಂಗ್ಲಿಷ್, ಇಂಗ್ಲಿಷ್, ಸಂಸ್ಕೃತ

-ಮಾರ್ಚ್-30 ಇಂಗ್ಲಿಷ್, ಕನ್ನಡ

-ಏಪ್ರಿಲ್ 1-ಎಲಿಮೆಂಟ್ಸ್ ಆಫ್ ಮೆಕಾನಿಕಲ್ & ಎಲೆಕ್ಟ್ರಿಕ್ ಇಂಜಿನಿಯರಿಂಗ್, ಇಂಜಿನಿಯರಿಂಗ್ ಗ್ರಾಫಿಕ್ಸ್ -2, ಎಲಿಮೆಂಟ್ಸ್ ಆಫ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಅರ್ಥಶಾಸ್ತ್ರ

-ಏಪ್ರಿಲ್- 4 ಗಣಿತ,ಸಮಾಜಶಾಸ್ತ್ರ

-ಏಪ್ರಿಲ್-06 ಸಮಾಜ ವಿಜ್ಞಾನ

-ಏಪ್ರಿಲ್- 08 ಹಿಂದಿ, ಕನ್ನಡ, ಇಂಗ್ಲಿಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು

ಎನ್‌ಎಸ್‌ಕ್ಯೂ ಪರೀಕ್ಷಾ ವಿಷಯಗಳು
-ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್ 

-ಏಪ್ರಿಲ್-11 ವಿಜ್ಞಾನ, ರಾಜ್ಯಶಾಸ್ತ್ರ

click me!