ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಕಲಿಯುವಾಗಲೇ ಗಳಿಸಿರಿ’ ಎಂಬ ಯೋಜನೆಯನ್ನು ಶೀಘ್ರವೇ ಜಾರಿ ಮಾಡಲಾಗುತ್ತದೆ ಎಂದು ಯುಜಿಸಿ ಬುಧವಾರ ಹೇಳಿದೆ.
ನವದೆಹಲಿ: ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸಹಾಯ ಒದಗಿಸಲು, ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗಾಗಿ ‘ಕಲಿಯುವಾಗಲೇ ಗಳಿಸಿರಿ’ ಎಂಬ ಯೋಜನೆಯನ್ನು ಶೀಘ್ರವೇ ಜಾರಿ ಮಾಡಲಾಗುತ್ತದೆ ಎಂದು ಯುಜಿಸಿ ಬುಧವಾರ ಹೇಳಿದೆ.
ಯುಜಿಸಿ (UGC) ಈಗಾಗಲೇ ಈ ಯೋಜನೆಯ ಕರಡನ್ನು ತಯಾರಿಸಿದ್ದು, ಇದರ ಪ್ರಕಾರ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ವಿದ್ಯಾಭ್ಯಾಸ (Study) ನಡೆಸುತ್ತಿರುವ ಕ್ಯಾಂಪಸ್‌ನಲ್ಲೇ ಅರೆಕಾಲಿಕ ಉದ್ಯೋಗಗಳನ್ನು ಒದಗಿಸಲಾಗುತ್ತದೆ. ಈ ಕೆಲಸಗಳಲ್ಲಿ ಗಂಟೆಯ ಆಧಾರದಲ್ಲಿ ವಿದ್ಯಾರ್ಥಿಗಳಿಗೆ ವೇತನ ನೀಡಲಾಗುತ್ತದೆ. ಪ್ರತಿ ವಾರ ಗರಿಷ್ಠ 20 ಗಂಟೆ ಮತ್ತು ತಿಂಗಳಿಗೆ 20 ದಿನ ಉದ್ಯೋಗ ಒದಗಿಸಲಾಗುತ್ತದೆ. ತರಗತಿ ಅವಧಿ ಮುಗಿದ ಬಳಿಕ ವಿದ್ಯಾರ್ಥಿ ಕೆಲಸ ಮಾಡುವ ಅವಧಿಯನ್ನು ಆಧಾರವಾಗಿಟ್ಟುಕೊಂಡು ವೇತನವನ್ನು ನೀಡಲಾಗುತ್ತದೆ ಎಂದು ತಿಳಿಸಿದೆ.
ಭಾರತಕ್ಕೆ ಆಗಮಿಸಿರುವ ಆ್ಯಪಲ್ ಸಿಇಒ ಟಿಮ್ ಕುಕ್ ಪ್ರತಿ ದಿನ ಸ್ಯಾಲರಿ 1.10 ಕೋಟಿ ರೂ!
ಆರ್ಥಿಕವಾಗಿ ಹಿಂದುಳಿದ (Economicaly Poor) ವಿದ್ಯಾರ್ಥಿಗಳು ಶಿಕ್ಷಣ, ಕೌಶಲ್ಯಗಳನ್ನು ಪಡೆದುಕೊಳ್ಳುವುದರ ಜೊತೆಗೆ ಸಂಪಾದನೆಯನ್ನು ಮಾಡಲು ಈ ಯೋಜನೆಯನ್ನು ರೂಪಿಸಲಾಗಿದೆ. ಈ ಮೂಲಕ ಶಿಕ್ಷಣ ಪಡೆದುಕೊಳ್ಳಲು ವಿದ್ಯಾರ್ಥಿಗಳು ಅನುಭವಿಸುತ್ತಿರುವ ಕಷ್ಟವನ್ನು ಕಡಿಮೆ ಮಾಡಲಾಗುತ್ತದೆ. ಅಲ್ಲದೇ ಇದು ವಿದ್ಯಾರ್ಥಿಗಳು (student) ತಮ್ಮ ವ್ಯಕ್ತಿತ್ವ, ತಾಂತ್ರಿಕ ಕೌಶಲ್ಯ ಮತ್ತು ಉದ್ಯಮಶೀಲತಾ ಗುಣಗಳನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡಲಿದೆ ಎಂದು ಯುಜಿಸಿ ಹೇಳಿದೆ.
ಈ ಯೋಜನೆಯನ್ನು 2020ರ ನೂತನ ಶಿಕ್ಷಣ ನೀತಿಯನ್ನು ಆಧರಿಸಿ ತಯಾರು ಮಾಡಲಾಗಿದೆ. ಹೊಸ ಶಿಕ್ಷಣ ನೀತಿಯ ಪ್ರಕಾರ ಆರ್ಥಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದ ಹಾಗೂ ತೃತೀಯ ಲಿಂಗಿ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲು ಸೂಚಿಸಲಾಗಿದೆ. ಹಾಗೆಯೇ ಈ ಯೋಜನೆಯ ಮೂಲಕ ವಿದ್ಯಾರ್ಥಿಗಳಿಗೆ ಬ್ರಿಡ್ಜ್ ಕೋರ್ಸ್‌ಗಳನ್ನು ಸಹ ಒದಗಿಸಲಾಗುತ್ತದೆ ಎಂದು ಯುಜಿಸಿ ಹೇಳಿದೆ.
ಬೈಂದೂರು ಬಿಜೆಪಿ ಅಭ್ಯರ್ಥಿ: ಈಶಾನ್ಯ ರಾಜ್ಯಗಳ ಮಕ್ಕಳಿಗೆ ವಿದ್ಯೆ ಕೊಟ್ಟ ಬರಿಗಾಲ ಫಕೀರ..!