ಚಿತ್ರದುರ್ಗದ ಸರ್ಕಾರಿ ಶಾಲೆಯ ಶತಮಾನೋತ್ಸವ ಸಂಭ್ರಮ, ಮಾದರಿಯಾದ ಹಳೆ ವಿದ್ಯಾರ್ಥಿಗಳ ಕಾರ್ಯ

By Suvarna News  |  First Published Feb 11, 2023, 6:08 PM IST

ಸರ್ಕಾರಿ  ಶಾಲೆಯಲ್ಲಿ ಓದುವವರ ಸಂಖ್ಯೆ ದಿನ ದಿನಕ್ಕೂ ಕಡಿಮೆಯಾಗ್ತಿದೆ. ಹೀಗಾಗಿ ಬಹುತೇಕ ಸರ್ಕಾರಿ ಶಾಲೆಗಳು ವಿನಾಶದ ಅಂಚಿನಲ್ಲಿವೆ. ಆದ್ರೆ ಕೋಟೆ‌ನಾಡಿನ ಸರ್ಕಾರಿ ಶಾಲೆಯೊಂದು ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿದೆ.


ವರದಿ: ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್

ಚಿತ್ರದುರ್ಗ (ಫೆ.11): ಸರ್ಕಾರಿ  ಶಾಲೆಯಲ್ಲಿ ಓದುವವರ ಸಂಖ್ಯೆ ದಿನ ದಿನಕ್ಕೂ ಕಡಿಮೆಯಾಗ್ತಿದೆ. ಹೀಗಾಗಿ ಬಹುತೇಕ ಸರ್ಕಾರಿ ಶಾಲೆಗಳು ವಿನಾಶದ ಅಂಚಿನಲ್ಲಿವೆ. ಆದ್ರೆ ಕೋಟೆ‌ನಾಡಿನ ಸರ್ಕಾರಿ ಶಾಲೆಯೊಂದು ಶತಮಾನೋತ್ಸವದ ಸಂಭ್ರಮವನ್ನು ಆಚರಿಸಿಕೊಂಡಿದೆ. ಇಲ್ಲಿನ ಹಳೆಯ ವಿದ್ಯಾರ್ಥಿಗಳು ಕೈಗೊಂಡ ಕಾರ್ಯಗಳು ಇತರರಿಗೆ ಮಾದರಿ‌ ಎನಿಸಿವೆ.  

Tap to resize

Latest Videos

ಅದ್ದೂರಿಯಾಗಿ ಕುಂಭ, ಕಳಶ ಹಾಗು ಕಲಾತಂಡಗಳೊಂದಿಗೆ ನಡೆಯುತ್ತಿರುವ ಭವ್ಯ ಮೆರವಣಿಗೆ. ಆ ಮೆರವಣಿಗೆಯಲ್ಲಿ  ಹಳೆಯ ವಿದ್ಯಾರ್ಥಿಗಳು ಸಡಗರ ಸಂಭ್ರಮ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲ್ಲೂಕಿನ ಮರಡಿಹಳ್ಳಿ ಸರ್ಕಾರಿ ಶಾಲೆ ಆವರಣ. ಈ ಮರಡಿಹಳ್ಳಿ ಸರ್ಕಾರಿ ಶಾಲೆಯನ್ನು 1920 ರಲ್ಲಿ ಆರಂಭಿಸಲಾಗಿತ್ತು. ಸ್ವತಂತ್ರ ಪೂರ್ವದ ಈ ಶಾಲೆಯಲ್ಲಿ ಓದಿದ ಸಾವಿರಾರು ಜ‌ನ ವಿದ್ಯಾರ್ಥಿಗಳು ಇಂದಿನ ಸಮಾಜದಲ್ಲಿ ನ್ಯಾಯಧೀಶರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಗಣ್ಯಾತಿಗಣ್ಯರಾಗಿ ಹೊರ ಹೊಮ್ಮಿದ್ದಾರೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳೆಲ್ಲಾ ಸೇರಿ ಸರ್ಕಾರಿ ಶಾಲೆಯ‌ ಶತಮಾನೋತ್ಸವವನ್ನು ಆಚರಿಸಿದರು.

ಈ ವೇಳೆ  ಮಾತನಾಡಿದ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ,ಕಂಠಿರವ ಬಾಲ ಸರಸ್ವತಿಯವರು, ಈ ಶಾಲೆಯ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೇರಿದ್ದು, ನಾವುಗಳು ಈ ಶಾಲೆಯ ವಿದ್ಯಾರ್ಥಿಗಳ ಕೊಡುಗೆಯಾಗಿ, ವೈಜ್ಞಾನಿಕ ಪ್ರಯೋಗಾಲಯ ಹಾಗು ಸುತ್ತಮುತ್ತಲ ಗ್ರಾಮಸ್ಥರ ಅನುಕೂಲಕ್ಕಾಗಿ ಮುಕ್ತಿಧಾಮ ತೆರೆಯಲು ಮುಂದಾಗಿರುವುದಾಗಿ‌ ತಿಳಿಸಿದರು.

Dharwad: ಶಾಲೆಯಿಂದ ಹೊರಗುಳಿದ 688 ಮಕ್ಕಳು!

ಇನ್ನು ಈ ವೇಳೆ ಈ ಶಾಲೆ ಆರಂಭವಾದಾಗಿನಿಂದ ನಡೆದು ಬಂದ ದಾರಿಯನ್ನು ಕುರಿತು ಶತಾಮೃತ ಎಂಬ ಸ್ಮರಣ ಸಂಚಿಕೆ ಹೊರತಂದರು. ಈ ವೇಳೆ ಸರ್ಕಾರಿ ಶಾಲೆಯಲ್ಲಿ ಓದಿ ಉನ್ನತ ಸ್ಥಾನದಲ್ಲಿರುವ ಲಹರಿ ಸಂಸ್ಥೆಯ ಮಾಲಿಕರಾದ ಲಹರಿ ವೇಲು ಅವರನ್ನು ಅಭಿನಂದಿಸಲಾಯಿತು. ಬಳಿಕ ಮಾತನಾಡಿದ ಅವರು, ಕರ್ನಾಟಕದಲ್ಲಿ ಎಷ್ಟು ಸರ್ಕಾರಿ ಶಾಲೆಗಳು ಈರೀತಿ ಇವೆಯೋ ಗೊತ್ತಿಲ್ಲ. ಆದ್ರೆ ಈ ಶಾಲೆ ಹೀಗೆ ಬೆಳೆದಿರೋದು ನಮಗೆಲ್ಲ ಹೆಮ್ಮೆ. ಅಲ್ಲದೇ ನಾವು ಮನೆಯಲ್ಲಿನ ಒಂದು ಮಗುಗೆ ಉಚಿತ ಶಿಕ್ಷಣ‌ ನೀಡಿದ್ರೆ, ಹತ್ತು ಮನೆಯ ದೀಪ‌ ಬೆಳಗಿಸ್ತದೆ. ಹೀಗಾಗಿ ಕಷ್ಟದಲ್ಲಿರುವ ಬಡ ಮಕ್ಕಳಿಗೆ ಹಣ ನೀಡುವುದಕ್ಕಿಂತ‌ ಶಿಕ್ಷಣ ನೀಡಬೇಕು. ಆ ಮೂಲಕ ಸರ್ಕಾರಿ ಶಾಲೆಯಲ್ಲಿ ಓದುವ ವಿದ್ಯಾರ್ಥಿಗಳ ಶಿಕ್ಷಣಕ್ಕೆ‌ ಉತ್ತೇಜನ ನೀಡಬೇಕು ಎಂದರು.

ಶಿಕ್ಷಕರ ನೇಮಕಾತಿ ಹಗರಣ; ಮತ್ತೆ 8 ಶಿಕ್ಷಕರು ಸೆರೆ

ಒಟ್ಟಾರೆ ಮರಡಿಹಳ್ಳಿ ಸರ್ಕಾರಿ ಶಾಲೆಯ ದಶಮಾನೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾಗಿ ನಡೆಯಿತು. ಈ ವೇಳೆ ನೆರೆದಿದ್ದ ಪ್ರತಿಯೊಬ್ಬ ಗಣ್ಯರು, ಜನಪ್ರತಿನಿಧಿಗಳು  ಈ ಶಾಲೆಯ ಅಭಿವೃದ್ಧಿಗಾಗಿ‌ ಸರ್ಕಾರ ಹಾಗು ವಯುಕ್ತಿಕವಾಗಿ ದೇಣಿಗೆ ನೀಡಿದ್ದು ಇತರರಿಗೆ ಮಾದರಿ ಎನಿಸಿತು.

click me!