ಗಾರೆ, ಪೇಂಟಿಂಗ್ ಕೆಲಸದೊಂದಿಗೆ 14 ಚಿನ್ನ, ಮೈಸೂರು ವಿವಿಯ ಬಂಗಾರದ ವಿದ್ಯಾರ್ಥಿ ಮಹಾದೇವಸ್ವಾಮಿ

By Suvarna NewsFirst Published Mar 22, 2022, 10:18 PM IST
Highlights

* ಮಾಡಿದ್ದು ಗಾರೆ, ಪೇಂಟಿಂಗ್ ಕೆಲಸ, ಬಾಚಿದ್ದು 14 ಚಿನ್ನ
* ಮೈಸೂರು ವಿವಿ ಘಟಿಕೋತ್ಸವದಲ್ಲಿ ಗಮನ ಸೆಳೆದ ಕೂಲಿ ಯುವಕ
* ಮೈಸೂರು ವಿವಿಯ ಬಂಗಾರದ ವಿದ್ಯಾರ್ಥಿ ಮಹಾದೇವಸ್ವಾಮಿ

ವರದಿ : ಮಧು.ಎಂ.ಚಿನಕುರಳಿ

ಮೈಸೂರು, (ಮಾ.22): ಪ್ರ
ತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯದ 102ನೇ ಘಟಿಕೋತ್ಸವ (Mysore University 102nd Convocation) ಇಂದು (ಮಂಗಳವಾರ) ಮೈಸೂರಿನ ಕ್ರಾಫರ್ಡ್ ಭವನದಲ್ಲಿ ಜರುಗಿತು. ಕರ್ನಾಟಕ ರತ್ನ ಡಾ.ಪುನೀತ್ ರಾಜ್‌ಕುಮಾರ್‌ಗೆ ಮರಣೋತ್ತರ ಗೌರವ ಡಾಕ್ಟರೇಟ್‌ ಪದವಿ ಪ್ರಧಾನ ಮಾಡಲಾಯಿತು. 

ಜೊತೆಗೆ ಡಿಆರ್‌ಡಿಓ ವಿಶ್ರಾಂತ ಮಹಾ ನಿರ್ದೇಶಕ ಡಾ.ವಾಸುದೇವ್. ಕೆ. ಆತ್ರೆ, ಜನಪದ ಕಲಾವಿಡ ಡಾ.ಮಹಾದೇವಸ್ವಾಮಿಗೂ ಗೌರವ ಡಾಕ್ಟರೇಟ್ ಗೌರವ ಸಲ್ಲಿಸಲಾಯಿತು. ಇದೇ ವೇದಿಕೆಯಲ್ಲಿ ರಾಜ್ ಕುಟುಂಬದಿನಮದ ಎರಡು ಚಿನ್ನದ ಪದಕ ಘೋಷಣೆಯಾಗಿದ್ದು, ಕೂಲಿ ಮಾಡಿಕೊಂಡು ಓದಿದ ಯುವಕ 14 ಚಿನ್ನದ ಪದಕ ಪಡೆದು ಎಲ್ಲರ ಗಮನ ಸೆಳೆದ.

ಮೈಸೂರು ವಿವಿ 102ನೇ ಘಟಿಕೋತ್ಸವದಲ್ಲಿ ಪುನೀತ್‌ ರಾಜ್‌ಕುಮಾರ್‌ಗೆ ಗೌರವ ಡಾಕ್ಟರೇಟ್!

ಮಾಡಿದ್ದು ಗಾರೆ, ಪೇಂಟಿಂಗ್ ಕೆಲಸ, ಬಾಚಿದ್ದು 14 ಚಿನ್ನ
ಮಾಡಿದ್ದು ಗಾರೆ, ಪೇಂಟಿಂಗ್ ಕೆಲಸ, ಬಾಚಿದ್ದು 14 ಚಿನ್ನ, 3 ನಗದು ಬಹುಮಾನ. ಘಟಿಕೋತ್ಸವದಲ್ಲಿ ಗಮನ ಸೆಳೆದ ಕೂಲಿ ಯುವಕ. ಗಾರೆ ಕೆಲಸ, ಪೇಟಿಂಗ್ ಮಾಡಿಕೊಂಡೆ 14 ಚಿನ್ನದ ಪದಕ ಹಾಗೂ 3 ನಗದು ಬಹುಮಾನ ಪಡೆದ ವಿದ್ಯಾರ್ಥಿ 102ನೇ ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಎಲ್ಲರ ಪ್ರಶಂಸೆಗೆ ಪಾತ್ರರಾದರು. 

ಮೂಲತಃ ಚಾಮರಾಜನಗರ ತಾಲೂಕಿನ ನಾಗವಳ್ಳಿ ಗ್ರಾಮದ ದಿ.ಪುಟ್ಟ ಬಸವಯ್ಯ ಮತ್ತು ನಾಗಮ್ಮ ಅವರ ಪುತ್ರ  ಮಹಾದೇವಸ್ವಾಮಿ ಇಂತಹ ಸಾಧನೆ ಮಾಡಿದ ಯುವಕ. ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರದ ಕನ್ನಡ ವಿಭಾಗದ ವಿದ್ಯಾರ್ಥಿ ಪಿ. ಮಹದೇವಸ್ವಾಮಿ ಬಡತನದಲ್ಲಿ ಅರಳಿದ ಅಪರೂಪದ ಪ್ರತಿಭೆ. ತಂದೆ ನಿಧನರಾದ ನಂತರ ತಾಯಿ ಹಾಗೂ ಅಣ್ಣನ ನೆರಳಿನಲ್ಲಿ ಬೆಳೆದರು. ರಜೆ ದಿನಗಳಲ್ಲಿ ಗಾರೆ ಕೆಲಸ, ಕೂಲಿ ಕೆಲಸ ಮಾಡಿ ಓದಿಕೊಂಡು ಇಂದು ದೊಡ್ಡ ಸಾಧನೆ ಮಾಡಿದ್ದಾರೆ. ಎಂಎ ಕನ್ನಡದಲ್ಲಿ ಇವರಿಗೆ 2200 ಅಂಕಗಳಿಗೆ 1963 ಅಂಕ ದೊರೆತಿದೆ. ಮಹದೇವಸ್ವಾಮಿ ಮಳವಳ್ಳಿಯ ಭಗವಾನ್ ಬುದ್ಧ ಬಿಇಡಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಓದುತ್ತಿದ್ದಾಗ ಮೊದಲ ‌ರ್ಯಾಂಕ್ ನೊಂದಿಗೆ 2 ಚಿನ್ನದ ಪದಕ, 2 ನಗದು ಬಹುಮಾನ ಪಡೆದಿದ್ದರು.

JNU ಮೊಟ್ಟ ಮೊದಲ ಮಹಿಳಾ ಉಪ ಕುಲಪತಿ ಶಾಂತಿಶ್ರೀ ಧೂಳಿಪುಡಿ ಸಂದರ್ಶನ

ಓದುವಾಗಲೇ ನಾನೀಗ ಕೆ-ಸೆಟ್ ಪರೀಕ್ಷೆ ಪಾಸು ಮಾಡಿಕೊಂಡಿದ್ದೇನೆ. ಮುಂದೆ ಯುಪಿಎಸ್ಸಿ ಅಥವಾ ಕೆಪಿಎಸ್ಸಿ ಮಾಡುವ ಆಸೆ ಹೊರ ಹಾಕಿದ್ದಾರೆ.

ಪ್ರಶಸ್ತಿ ಪ್ರಧಾನದ ವೇಳೆ ಬಾವುಕರಾದ ರಾಜ್‍ಕುಮಾರ್‌ ಕುಟುಂಬ
ನಟ ಪುನೀತ್ ರಾಜ್‍ಕುಮಾರ್ ಗೆ ಮರಣೋತ್ತರ ಗೌರವ ಡಾಕ್ಟರೇಟ್ ಪ್ರಶಸ್ತಿ ಸಮಾರಂಭಕ್ಕೆ ಪತ್ನಿ ಅಶ್ವಿ, ಅಣ್ಣ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ, ನಟ ವಿನಯ್‌ ರಾಜ್‌ಕುಮಾರ್, ಅಕ್ಕ ಲಕ್ಷ್ಮಿ ಗೋವಿಂದ್ ಹಾಗೂ ಮೊಮ್ಮಕ್ಕಳು ಕುಟುಂಬ ಸೇರಿ ರಾಜ್ ಪರಿವಾರ ನೆರೆದಿತ್ತು. ವೇದಿಕೆ ಮೇಲೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪುನೀತ್ ಪತ್ನಿ ಅಶ್ವಿನಿ ಅವರ ಕೈಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ನೆರೆದಿದ್ದ ರಾಜ್‌ಕುಮಾರ್ ಕುಟುಂಬ ಭಾವುಕರಾದರು.

ರಾಜ್‌ಕುಮಾರ್ ಹಾಗೂ ಪುನೀತ್‌ಗೆ ಒಂದೇ ವಿವಿಯಿಂದ ಗೌರವ ಡಾಕ್ಟರೇಟ್.
ಮೈಸೂರು ವಿಶ್ವವಿದ್ಯಾನಿಲಯ ಘಟಿಕೋತ್ಸವದ ಮತ್ತೊಂದು ವಿಶೇಷವೆಂದರೆ ಇದೇವಿವಿಯು ವರನಟ ಡಾ.ರಾಜಕುಮಾರ್‌ಗೂ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿತ್ತು. ಈಗ ಅವರ ಮಗ, ಕರುನಾಡಿನ ಪ್ರೀತಿಯ ಅಪ್ಪುಗೂ ಕೂಡ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗಿದೆ. ಈ ಸಂದರ್ಭ ಮೆಲುಕು ಹಾಕಿದ ಅಣ್ಣ ರಾಘವೇಂದ್ರ ರಾಜ್ ಕುಮಾರ್ ಜೀವನ ಒಂದು ಚಕ್ರ ಇದ್ದಂತೆ. ನಮ್ಮ ತಂದೆಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಕೊಟ್ಟಿದ್ರು. ಇಂದು ನನ್ನ ತಮ್ಮನಿಗೂ ಇದೇ ವಿವಿಯಲ್ಲಿ ಗೌರವ ಡಾಕ್ಟರೇಟ್ ಸಿಕ್ಕಿದೆ. ನನಗೆ ಇದು ವೇದಿಕೆ ರೀತಿ ಕಾಣಿಸುಸ್ತಿಲ್ಲ. ಸರಸ್ವತಿಯ ಮಂದಿರ ತರ ಕಾಣ್ತಿದೆ ಎಂದರು. ನಿಮ್ಮ ಕೆಲಸವನ್ನ ಶ್ರದ್ದೆಯಿಂದ ಮಾಡಿದ್ರೆ ಪ್ರಶಸ್ತಿಗಳು ಹುಡುಕಿ ಬರುತ್ತವೇ ಅಂತ ಪುನೀತ್ ಯಾವಾಗಲೂ ಹೇಳ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ ಎಂದು ಭಾವುಕರಾದರು. ಈ ಗೌರವ ಡಾಕ್ಟರೇಟ್‌ ನಮ್ಮ ಕುಟುಂಬದ ಜವಾಬ್ದಾರಿಯನ್ನ ಹೆಚ್ಚಿಸಿದ್ದು, ಅಶ್ವಿನಿ ಮಾರ್ಗದರ್ಶನದಲ್ಲಿ ನಾವೆಲ್ಲರೂ ಸಾಮಾಜಿಕ ಸೇವೆ ಮುಂದುವರೆಸುತ್ತೇವೆ ಎಂದಿದ್ದಾರೆ.

ಡಾ.ರಾಜ್ ಕುಟುಂಬದಿಂದ 2 ಚಿನ್ನದ ಪದಕ ಘೋಷಣೆ

ತಮ್ಮ ಪತಿಗೆ ನೀಡಲಾದ ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿದ ಪತ್ನಿ ಅಶ್ವಿನಿ ಎರಡು ಬಂಗಾರದ ಪದಕ ಘೋಷಣೆ ಮಾಡಿದರು. 
ಒಮದು ಬಿಸಿನೆಸ್ ಮ್ಯಾನೆಜ್‌ಮೆಂಟ್‌‌ನಲ್ಲಿ ಉತ್ತಮ ಸಾಧನೆ ಮಾಡಿದವರಿಗೆ ಮೀಸಲಿದ್ದು, ಮತ್ತೊಂದು ಚಿನ್ನದ ಪದಕ ಲಲಿತಾಕಲಾ ವಿಭಾಗಕ್ಕೆ ಮೀಸಲಿರಿಸಲಾಗಿದೆ. ಪಾರ್ವತಮ್ಮ ರಾಜ್‍ಕುಮಾರ್ ಹೆಸರಿನಲ್ಲಿ ಬಿಸಿನೆಸ್‌ ಮ್ಯಾನೆಜ್‌ಮೆಂಟ್‌ ವಿಭಾಗಕ್ಕೆ ಚಿನ್ನದ ಪದಕ ನೀಡಿದರೆ, ಪುನೀತ್ ರಾಜ್‍ಕುಮಾರ್ ಹೆಸರಿನಲ್ಲಿ  ಲಲಿತಾಕಲಾ ವಿಭಾಗಕ್ಕೆ ಚಿನ್ನದ ಪದಕ ನೀಡಿದರು.

ಪುನೀತ್ ಕುಟುಂಬದ ಆಶೀರ್ವಾದ ಪಡೆದ ಚಿನ್ನದ ಹುಡುಗಿ

ಸ್ನಾತಕೋತ್ತರ ಪದವಿಯಲ್ಲಿ 21ಚಿನ್ನದ ಪದಕ ಪಡೆದ ವಿದ್ಯಾರ್ಥಿ‌ನಿ ಭಾವನ ಪ್ರಶಸ್ತಿ ಸ್ವೀಕರಿಸಿದ ನಂತರ ಅಶ್ವಿನಿ ಅವರ ಆಶಿರ್ವಾದ ಪಡೆದರು. ಕೆಮಿಸ್ಟ್ರಿ ವಿಭಾಗದಲ್ಲಿ 21 ಚಿನ್ನದ ಪದಕ ಭೇಟೆಯಾಡಿ ಖುಷಿ ಪಟ್ಟರು. ನಟ ರಾಘವೇಂದ್ರ ರಾಜ್‌ಕುಮಾರ್ ಹಾಗೂ ಪತ್ನಿ ಮಂಗಳ ಜೊತೆ ಸಂಭ್ರಮ ಹಂಚಿಕೊಂಡರು. ಈ ವೇಳೆ ಚಿನ್ನದ ಹುಡುಗಿಗೆ ರಾಜ್ ಕುಟುಂಬ ಅಭಿನಂದನೆ ಸಲ್ಲಿಸಿತು.

ಉಳಿದಂತೆ ಮೈಸೂರು ವಿವಿಯ 102ನೇ ಘಟಿಕೋತ್ಸವದಲ್ಲಿ  376 ಪದಕಗಳ ಪ್ರಧಾನ ಮಾಡಲಾಗಿದ್ದು, 213 ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಸ್ವೀಕರಿಸಿದರು. ಇದರಲ್ಲಿ 158 ಮಹಿಳೆಯರು ಹಾಗೂ 55 ಪುರುಷರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಈ ಬಾರಿ ಅತಿ ಹೆಚ್ಚು 29 ಚಿನ್ನದ ಪದಕ ಪಡೆದ ಮೈಸೂರಿನ ಭಾವನಾ, ಬಿಎ ವಿಭಾಗದಲ್ಲಿ ಪ್ರಶಸ್ತಿ ಬಾಚಿಕೊಂಡರು. ಗಡಿ ಜಿಲ್ಲೆ ಚಾಮರಾಜನಗರದ ಮಹಾದೇವಸ್ವಾಮಿಗೆ ಕನ್ನಡ ವಿಭಾಗದಲ್ಲಿ 14 ಚಿನ್ನದ ಪದಕ 3 ನಗದು ಬಹುಮಾನ, ಕೊಳ್ಳೇಗಾಲದ ವಿದ್ಯಾರ್ಥಿ ತೇಜಸ್ವಿನಿ.ವಿ ಗೆ 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನ ಸಿಕ್ಕಿದೆ. ತಂದೆ-ತಾಯಿ ಇಲ್ಲದೆ ಹಾಸ್ಟೆಲ್ ನಲ್ಲಿ ವ್ಯಾಸಂಗ ಮಾಡಿ 9 ಚಿನ್ನದ ಪದಕ ಪಡೆದ ಚಾಮರಾಜನಗರದ ಗ್ರಾಮೀಣ ಪ್ರತಿಭೆ ತೇಜಸ್ವಿನಿ ಕೂಡ ಘಟಿಕೋತ್ಸವದಲ್ಲಿ ಗಮನ ಸೆಳೆದರು.

click me!