ಜುಲೈ 18ರಿಂದ ಸಿಇಟಿ ದಾಖಲಾತಿ ಪರಿಶೀಲನೆ: ಈ ದಾಖಲೆ ತರುವುದು ಕಡ್ಡಾಯ

By Sathish Kumar KHFirst Published Jul 3, 2023, 7:52 PM IST
Highlights

ರಾಜ್ಯದಲ್ಲಿ ಸರ್ಕಾರಿ ಕೋಟಾದಡಿ ಇಂಜಿನಿಯರಿಂಗ್‌ ಸೇರಬಯಸುವ ಸಿಇಟಿ ಬರೆದ ವಿದ್ಯಾರ್ಥಿಗಳಿಗೆ ಜು.18ರಿಂದ ಸಿಇಟಿ ದಾಖಲೆಗಳ ಪರಿಶೀಲನೆ ಆರಂಭವಾಗಲಿದೆ.

ಬೆಂಗಳೂರು (ಜು.03): ರಾಜ್ಯದಲ್ಲಿ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಇಂಜಿನಿಯರಿಂಗ್‌ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳಿಗೆ ಈಗಾಗಲೇ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಸಿ, ಫಲಿತಾಂಶವನ್ನೂ ಬಿಡುಗಡೆ ಮಾಡಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈಗ ಜು.18ರಿಂದ ಜು.21ರವರೆಗೆ ದಾಖಲಾತಿಗಳನ್ನು ಪರಿಶೀಲನೆ ದಿನಾಂಕ ಘೋಷಣೆ ಮಾಡಿದೆ. 

ರಾಜ್ಯದಲ್ಲಿ 2022-23ನೇ ಸಾಲಿನಲ್ಲಿ ಪಿಯುಸಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಹಾಗೂ ಇಂಜಿನಿಯರಿಂಗ್ ಪ್ರವೇಶಾತಿ ಸೇರ ಬಯಸುವ ವಿದ್ಯಾರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಪರೀಕ್ಷೆಯನ್ನು ನಡೆಸಿದೆ. ಇನ್ನು ಪರೀಕ್ಚೆಯ ಫಲಿತಾಂಶವನ್ನೂ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳು ಪಡೆದ ರ್ಯಾಂಕಿಂಗ್‌ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಈಗ ಕೆಲವು ವೃತ್ತಿಪರ ಕೋರ್ಸ್‌ಗಳಿಗೆ ಸರ್ಕಾರಿ ಕೋಟಾದಡಿ ಪ್ರತಿಷ್ಠಿತ ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಕೂಲ ಆಗುವಂತೆ ದಾಖಲಾತಿ ಪರಿಶೀಲನೆ ಕಾರ್ಯವನ್ನು ಮಾಡಲಾಗುತ್ತಿದೆ. ಈಗ ಇಂಜಿನಿಯರಿಂಗ್‌ ಸೇರಬಯಸುವ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ದಾಖಲಾತಿ ಪರಿಶೀಲನೆ ಕಾರ್ಯಕ್ಕೆ ಕೆಇಎ ಮುಮದಾಗಿದೆ.

ಎಂಜಿನಿಯರಿಂಗ್‌ ಸೀಟು 10% ದುಬಾರಿ, ಇದು ಬಿಜೆಪಿ ಸರ್ಕಾರದಲ್ಲೇ ತೀರ್ಮಾನವಾಗಿತ್ತು: ಸಚಿವ ಡಾ.ಎಂ.ಸಿ.ಸುಧಾಕರ್‌

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಜುಲೈ 18 ರಿಂದ 21 ರವರೆಗೆ ದಾಖಲಾತಿ ಪರಿಶೀಲನೆ ಮಾಡಲು ದಿನಾಂಕವನ್ನು ಘೋಷಣೆ ಮಾಡಿದೆ. ಪರೀಕ್ಷೆ ಬರೆದು ಅರ್ಹರಾಗಿರುವ ಎಲ್ಲ ವಿದ್ಯಾರ್ಥಿಗಳು ತಮ್ಮ ತಮ್ಮ ಮೂಲ ದಾಖಲಾತಿಗಳೊಂದಿಗೆ ಪರೀಕ್ಷಾ ಪ್ರಾಧಿಕಾರದಂದು ನಡೆಸುವ ದಾಖಲಾತಿ ಪರಿಶೀಲನೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಇನ್ನು ಎಲ್ಲ ವಿದ್ಯಾರ್ಥಿಗಳು ತಮ್ಮ ರ್ಯಾಂಕಿಂಗ್‌ ಪಟ್ಟಿಗೆ ಅನುಗುಣವಾಗಿ ಪ್ರಾಧಿಕಾರದಿಂದ ನಿಗದಿ ಮಾಡಲಾದ ಸಮಯಕ್ಕೆ ಅನುಗುಣವಾಗಿ ದಾಖಲಾತಿ ಪರಿಶೀಲನೆಗೆ ವಿದ್ಯಾರ್ಥಿಗಳು ಹಾಜರಾಗಬೇಕು ಎಂದು ತಿಳಿಸಲಾಗಿದೆ. 

ಯಾವ್ಯಾವ ದಾಖಲೆಗಳು ಬೇಕು: ವಿದ್ಯಾರ್ಥಿಯ ಪರೀಕ್ಷಾ ಪ್ರವೇಶಪತ್ರ ಸಂಖ್ಯೆ, ವಿದ್ಯಾರ್ಥಿಯ ರ್ಯಾಂಕಿಂಗ್‌ ಪಡೆದ ಸ್ಥಾನ, ಇಂಜಿನಿಯರಿಂಗ್‌ ಸೇರಲು ಬೇಕಾಗಿರುವ ದಾಖಲೆಗಳಾದ ಅಂಕಪಟ್ಟಿ, ಜಾತಿ ಮತ್ತು ಆದಾಯ ಪ್ರಮಾಣಪತ್ರ, ಗ್ರಾಮೀಣ ವಿದ್ಯಾರ್ಥಿ, ಕನ್ನಡ ಮಾಧ್ಯಮ, ಎನ್‌ಸಿಸಿ, ಎನ್ಎಸ್‌ಎಸ್‌ ಪ್ರಮಾಣಪತ್ರ, ಕ್ರೀಡಾ ಸಾಧನೆ ಪ್ರಮಾಣಪತ್ರ, ಹೊರನಾಡು ಕನ್ನಡಿಗ, ರಕ್ಷಣಾ ಸಿಬ್ಬಂದಿ ಮಕ್ಕಳ ದಾಖಲಾತಿ ಹಾಗೂ ಕಾಲೇಜುಗಳಿಗೆ ಸಂಬಂಧಪಟ್ಟ ಎಲ್ಲ ದಾಖಲೆಗಳನ್ನು ವಿದ್ಯಾರ್ಥಿಗಳು ದಾಖಲಾತಿ ಪರಿಶೀಲನೆ ವೇಳೆ ಹಾಜರುಪಡಿಸಬೇಕು. ಒಂದು ಸೆಟ್ ಮೂಲ‌ ದಾಖಲಾತಿಗಳ ಜೆರಾಕ್ಸ್ ಪ್ರತಿ ಕಡ್ಡಾಯವಾಗಿ ತರುವಂತೆ ಸೂಚಿಸಲಾಗಿದೆ.

Breaking: ಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ನಿಮ್ಮ ರಿಸಲ್ಟ್‌ ಚೆಕ್‌ ಮಾಡಲು ಇಲ್ಲಿದೆ ವಿವರ..

ನಿಮ್ಮ ದಿನಾಂಕ, ಸಮಯ ನೋಡಿಕೊಂಡು ಬನ್ನಿ:  ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ನಿಗದಿ ಮಾಡಿರುವ ಸಮಯದಲ್ಲಿ ವಿದ್ಯಾರ್ಥಿಗಳು ಹಾಜರಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ kea.kar.nic.in ವೆಬ್ ಸೈಟ್ ‌ನಲ್ಲಿ ದಾಖಲಾತಿ ಪರಿಶೀಲನೆ ದಿನಾಂಕ, ಸಮಯ ಪ್ರಕಟ ಮಾಡಲಾಗಿದೆ. ಇದನ್ನು ನೋಡಿಕೊಂಡು ವಿದ್ಯಾರ್ಥಿಗಳು ಆಗಮಿಸಬೇಕು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ನಿರ್ದೇಶಕಿ ಎಸ್. ರಮ್ಯಾ ಮಾಹಿತಿ ನೀಡಿದ್ದಾರೆ.

click me!