ಖಾಸಗಿ ಪ್ಲೇ ಹೋಂ ಮೀರಿಸುತ್ತೆ ವಿಜಯಪುರದ ಸರ್ಕಾರಿ ಅಂಗನವಾಡಿ!

By Suvarna News  |  First Published Jul 3, 2023, 5:41 PM IST

ವಿಜಯಪುರ ಜಿಲ್ಲೆಯ ಲೋಹಗಾಂವ ಗ್ರಾಮದಲ್ಲಿರುವ ಅಂಗನವಾಡಿಯೊಂದು ರಾಜ್ಯದ ಗಮನ ಸೆಳೆಯುತ್ತಿದೆ. ಯಾವುದೆ ಖಾಸಗಿ LKG, UKG ಶಾಲೆಗಳಿಗೆ ಕಮ್ಮಿ ಇಲ್ಲ ಎನ್ನುವಂತೆ ನಿರ್ಮಾಣಗೊಂಡಿದೆ. 


ವರದಿ: ಷಡಕ್ಷರಿ‌ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್

ವಿಜಯಪುರ (ಜು.03) : ಕಾನ್ವೆಂಟ್ ಸ್ಕೂಲ್‌‌ಗಳಲ್ಲಿ ಇರುವ ಸೌಲಭ್ಯ, ಸೌಕರ್ಯಗಳು ಸರ್ಕಾರಿ ಶಾಲೆಗಳಲ್ಲಿ ಸಿಗೋದಿಲ್ಲ. ಅದ್ರಲ್ಲೂ ಅಂಗನವಾಡಿಗಳು ಅಂದ್ರೆ ಕೇವಲ ಬಡವರ ಮಕ್ಕಳ ಊಟೋಪಹಾರಕ್ಕೆ ಎನ್ನುವ ಆರೋಪಗಳಿವೆ. ಆದ್ರೆ ಈ ನಡುವೆ ವಿಜಯಪುರ ಜಿಲ್ಲೆಯ ಲೋಹಗಾಂವ ಗ್ರಾಮದಲ್ಲಿರುವ ಅಂಗನವಾಡಿಯೊಂದು ರಾಜ್ಯದ ಗಮನ ಸೆಳೆಯುತ್ತಿದೆ. ಯಾವುದೆ ಖಾಸಗಿ LKG, UKG ಶಾಲೆಗಳಿಗೆ ಕಮ್ಮಿ ಇಲ್ಲ ಎನ್ನುವಂತೆ ನಿರ್ಮಾಣಗೊಂಡಿದೆ. 

Tap to resize

Latest Videos

undefined

ಕಾನ್ವೆಂಟ್‌ಗಳಿಗು ಮಾದರಿ ಈ ಅಂಗನವಾಡಿ
ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರಭಾವ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಇಲಾಖೆ, ಗ್ರಾ. ಪಂ. ಆಡಳಿತ ಮಂಡಳಿ ಮತ್ತು ಶಿಕ್ಷಕರು ಮನಸ್ಸು ಮಾಡಿದರೆ ಹೇಗೆ ಮಾದರಿ ಕೆಲಸ ಮಾಡಬಲ್ಲರು ಎಂಬುದಕ್ಕೆ ಈ ಅಂಗನವಾಡಿ ಸಾಕ್ಷಿಯಾಗಿದೆ. ಅಂಗಮವಾಡಿಯನ್ನ ನೋಡಿದ್ರೆ ಯಾರು ಸಹ ಇದು ಸರ್ಕಾರಿ ಅಂಗನವಾಡಿ ಇರೋದಕ್ಕೆ ಸಾದ್ಯವೆ ಇಲ್ಲ. ಬದಲಿಗೆ ಇದೊಂದು ಹೈಪೈ ಪ್ಲೇಹೋಮ್ ಎನ್ನುತ್ತಾರೆ. ಹಾಗೇ ಹೈಟೆಕ್ ಆಗಿ ಸರ್ಕಾರಿ ಅಂಗನವಾಡಿ ನಿರ್ಮಾಣಗೊಂಡಿದೆ.

ಆಟದೊಂದಿಗೆ ಪಾಠ, ಮಕ್ಕಳಿಗೆ ಹೈಪೈ ಟ್ರೀಟ್ಮೆಂಟ್
ಇಲ್ಲಿ ಮಕ್ಕಳ ಆಟದ ಜೊತೆಗೆ ಪಾಠವನ್ನು ಕಲಿಸಲಾಗುತ್ತಿದ್ದು, ಎಲ್ಲವೂ ಹೊಸ ಶಿಕ್ಷಣ ನೀತಿಯಂತೆ ನಡೆಯುತ್ತಿರುವುದು ಗಮನಾರ್ಹವಾಗಿದೆ.  ಯಾವುದೇ ಕಾನ್ವೆಂಟ್ ಗಳಿಗೂ ಕಮ್ಮಿ ಇಲ್ಲ ನಮ್ಮ ಅಂಗನವಾಡಿ ಎಂದು ಅಲ್ಲಿ ಪೋಷಕರೇ ಹೇಳುವುದು ಕುತೂಹಲ ಕೆರಳಿಸುತ್ತಿದೆ. ಇಲ್ಲಿ ಅಂಗನವಾಡಿ ಮಕ್ಕಳಿಗೆ ಆಟದೊಂದಿಗೆ ಪಾಠವನ್ನ ಹೇಳಿಕೊಡಲಾಗುತ್ತೆ. ಟೇಬಲ್, ಖುರ್ಚಿ, ಆಧುನಿಕ ರೀತಿಯಲ್ಲಿ ಪಾಠ ಹೇಳುವ ಪರಿಕರಗಳಿವೆ. ಮಕ್ಕಳಿಗೆ ತಿಳಿಯುವ ರೀತಿಯಲ್ಲಿ ಹಾಡು, ಇಂಗ್ಲಿಷ್ ಬೆಬಿ ರ್ಯಾಮ್ಸ್, ಅಕ್ಷರಮಾಲೆಗಳನ್ನ ಹೇಳಿ ಕೊಡಲಾಗ್ತಿದೆ. ಮಕ್ಕಳು ಸಹ ಕಲಿಕಾ ವಾತಾವರಣದಿಂದಾಗಿ ಚೆನ್ನಾಗಿಯೆ ಕಲಿಯುತ್ತಿವೆ.‌ 

ಲೋಹಗಾಂವ ಗ್ರಾಮ ಪಂಚಾಯ್ತಿಯ ಸಹಕಾರ
ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಕುರ್ಚಿ ಮತ್ತು ಬೇಂಚ್ ಗಳನ್ನು ನೀಡಿದ್ದು ಇತರರಿಗೆ ಮಾದರಿಯಾಗಿದೆ.  ಮಕ್ಕಳು ಸುಂದರವಾದ ಕುರ್ಚಿಯ ಮೇಲೆ ಕುಳಿತು, ಮೇಜಿನ ಮೇಲೆ ಪುಸ್ತಕಗಳನ್ನು ಇಟ್ಟುಕೊಂಡು ಆಟದ ಜೊತೆಗೆ ಪಾಠ ಕೇಳುತ್ತ,  ಹಾಡು ಹೇಳುತ್ತ ಬೆರೆಯುತ್ತಿದ್ದಾರೆ.

ಅಂಗನವಾಡಿ ಕಾರ್ಯಕರ್ತೆಯರ ಶ್ರಮ 
ಇಲ್ಲಿನ ಅಂಗನವಾಡಿ ಕಾರ್ಯಕರ್ತೆಯರು ಮಾಡುವ ಪಾಠ, ಆಂಗಿಕ ಭಾಷೆಯೊಂದಿಗೆ ಕಲಿಸಿ ಕೊಡುವ ಹಾಡುಗಳು ಮಕ್ಕಳನ್ನು ಇನ್ನಿಲ್ಲದಂತೆ ಸೆಳೆಯುತ್ತಿದೆ.  ಬಣ್ಣಬಣ್ಣದ ಕುರ್ಚಿಗಳು, ವಿಶಾಲವಾದ ಬೆಂಚ್, ಅಂಗನವಾಡಿ ಕೇಂದ್ರದ ತುಂಬ ಮಕ್ಕಳಿಗೆ ಕುತೂಹಲದಿಂದ ಕಲಿಯುವಂತಾಗಲು ಅಂಟಿಸಲಾಗಿರುವ ಚಿತ್ರಸಹಿತ ಮಾಹಿತಿಯನ್ನು ಹೊಂದಿರುವ ಪೋಸ್ಟರ್ ಗಳು ಎಂಥವರೂ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡುತ್ತಿವೆ. 

ಮಕ್ಕಳಿಗೆ ಆಟವಾಡಲು ತರಹೇವಾಡಿ ಆಟಿಕೆ 
ಲೋಗಾಂವಿಯ ಅಂಗನವಾಡಿ ಖಾಸಗಿ ಹೈಟೆಕ್ ಪ್ಲೇ ಹೋಮ್ ನೆನಪಿಸುತ್ತೆ. ಮಕ್ಕಳು ಆಟವಾಡಲು ಜಾರಗುಂಡಿ, ಕುದುರೆ, ಸೈಕಲ್ ಕೂಡ ಮಕ್ಕಳನ್ನು ಇನ್ನಿಲ್ಲದಂತೆ ಸೂಜಿಗಲ್ಲಿನಂತೆ ಅಂಗನವಾಡಿಗೆ ಸೆಳೆಯುತ್ತಿದೆ. ಇಲ್ಲಿ ಉಚಿತವಾಗಿ ಖಾಸಗಿ ಶಾಲೆಗಳಿಗಿಂತ ಉತ್ತಮ ಶಿಕ್ಷಣ ನೀಡಲಾಗುತ್ತಿದೆ.  

ಮಕ್ಕಳಿಗೆ ಪಾಠದ ಜೊತೆಗೆ ಗುಣಮಟ್ಟದ ಆಹಾರ
ಪಾಠದ ಜೊತೆಗೆ ಅಂಗನವಾಡಿ ಮಕ್ಕಳಿಗೆ  ಗುಣಮಟ್ಟದ ಆಹಾರ ನೀಡಲಾಗ್ತಿದೆ. ಮೊಟ್ಟೆ, ಅನ್ನ, ಸಿಹಿ ತಿಂಡಿ ಸೇರಿದಂತೆ ತರಹೇವಾರಿ ಆರೋಗ್ಯಕರ ತಿಂಡಿ-ತಿನುಸುಗಳನ್ನ ಮಕ್ಕಳಿಗೆ ನೀಡಲಾಗ್ತಿದೆ. ಇನ್ನು ಮಕ್ಕಳ‌ ಪೋಷಕರು ಸಹ ಈ ಅಂಗನವಾಡಿಯಲ್ಲಿ ತಮ್ಮ ಮಕ್ಕಳಿಗೆ ಸಿಗ್ತಿರೋ ಪೈಪೈ ಟ್ರಿಟ್ಮೆಂಟ್ ನಿಂದ ಪುಲ್ ಖುಷ್ ಆಗಿದ್ದಾರೆ. ಮಗುವಿನ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ ಎನ್ನುತ್ತಾರೆ ಪಾಲಕರು.

ಅಂಗನವಾಡಿಯ ಬಗ್ಗೆ ಸಚಿವ ಎಂ ಬಿ ಪಾಟೀಲ್ ಮೆಚ್ಚುಗೆ 
ಇತ್ತೀಚೆಗೆ ನಡೆದ ಜಿಲ್ಲಾ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಈ ಅಂಗನವಾಡಿ ಕೇಂದ್ರದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೆಮ್ಮೆಯಿಂದ ಹೇಳಿಕೊಂಡಿದ್ದರು.  ಅಲ್ಲದೇ, ಈ ಅಂಗನವಾಡಿ ಕೇಂದ್ರದ ಮಾದರಿಯಲ್ಲಿ ಜಿಲ್ಲೆಯಲ್ಲಿಯೂ ಅಭಿವೃದ್ಧಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. 

ಅಂಗನವಾಡಿ ನೋಡಿ ಬನ್ನಿ ಎಂದು ಕೆಡಿಪಿ ಸಭೆಯಲ್ಲಿ ಛಾಟಿ ಬೀಸಿದ್ದ ಎಂ.ಬಿ.ಪಿ 
ನಮ್ಮ ಜಿಲ್ಲೆಯಲ್ಲಿ ಖಾಸಗಿ ಕಾನ್ವೆಂಟೂಗಳು ಸಹ ನಾಚುವಂತಹ ಅಂಗನವಾಡಿ ಕೇಂದ್ರವೊಂದಿದೆ. ಗೊತ್ತಾ ನಿಮಗೆ, ಜಿಲ್ಲಾ ಪಂಚಾಯತಿ ಸಿಎಸ್‌ಹಾಗೂ ಇಲಾಖೆಯ ಡಿಡಿ ಯಾವತ್ತಾದ್ರೂ ವಿಸಿಟ್‌ಹಾಕಿದ್ದೀರಾ...? ಎಂದು ಜಿಲ್ಲಾ ಉಸ್ತುವಾರಿ ಸಚಿವರು ಕೆ.ಡಿ.ಪಿ ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಂಡಿದ್ದರು. ಇಡೀ ಜಿಲ್ಲೆಯಲ್ಲಿನ ಅಂಗನವಾಡಿ ಕೇಂದ್ರಗಳು ಅದರಂತಾಗಬೇಕು. ಇದನ್ನೊಂದು ಅಭಿಯಾನದ ರೂಪದಲ್ಲಿ ಮಾಡಿ ಅಂತ ಜಿಲ್ಲಾ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ಗುಡುಗಿದ್ದರು. ಸಾಲದೆಂಬಂತೆ ನಮ್ಮ ನಿಮ್ಮ ಮಕ್ಳು ಕಾನ್ವೆಂಟಿಗೆ, ಬಡವರ ಮಕ್ಳು ಅಂಗನವಾಡಿಗೆ ಅಂತಾನೂ ಆಕ್ಷೇಪ ವ್ಯಕ್ತಪಡಿಸಿದ್ರು.

click me!