9 ರಿಂದ 12 ನೇ ತರಗತಿ ಮಕ್ಕಳೇ... ಪುಸ್ತಕ ನೋಡಿ ಪರೀಕ್ಷೆ ಬರೀರಿ...!

By Kannadaprabha News  |  First Published Feb 23, 2024, 1:24 PM IST

 ವಿದ್ಯಾರ್ಥಿಗಳು, ಪಠ್ಯ ಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಒಪನ್ ಬುಕ್ ಎಕ್ಸಾಂ (ತೆರೆದ ಪುಸ್ತಕ ಪರೀಕ್ಷೆ) ಅನ್ನು ಈ ವರ್ಷ ಸಿಬಿಎಸ್‌ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲು ನಿರ್ಧರಿಸಲಾಗಿದೆ.


ನವದೆಹಲಿ: ವಿದ್ಯಾರ್ಥಿಗಳು, ಪಠ್ಯ ಪುಸ್ತಕ, ನೋಟ್ಸ್ ನೋಡಿಕೊಂಡೇ ಪರೀಕ್ಷೆ ಬರೆಯಲು ಅವಕಾಶ ನೀಡುವ ಒಪನ್ ಬುಕ್ ಎಕ್ಸಾಂ (ತೆರೆದ ಪುಸ್ತಕ ಪರೀಕ್ಷೆ) ಅನ್ನು ಈ ವರ್ಷ ಸಿಬಿಎಸ್‌ಇಯ 9 ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲು ನಿರ್ಧರಿಸಲಾಗಿದೆ.

ದೇಶವ್ಯಾಪಿ, ಆಯ್ದ ಶಾಲೆಗಳಲ್ಲಿ ಮಾತ್ರವೇ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ರಾಷ್ಟ್ರೀಯ ಪಠ್ಯ ಚೌಕಟ್ಟಿನ ಶಿಫಾರಸಿನ ಅನ್ವಯ ಈ ಪ್ರಾಯೋಗಿಕ ಪರೀಕ್ಷೆ ಆಯೋಜಿಸಲಾಗುತ್ತಿದೆ. ಆದರೆ ಇದನ್ನು ಬೋರ್ಡ್ ಎಕ್ಸಾಂ ಅಂದರೆ ಅಂತಿಮ ಪರೀಕ್ಷೆ ವೇಳೆ ಬಳಕೆ ಮಾಡುವುದಿಲ್ಲ. ಎಂದು ಸಿಬಿಎಸ್‌ಇ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

Tap to resize

Latest Videos

undefined

ಯಾವ ವಿಷಯಗಳಿಗೆ ಪ್ರಯೋಗ
9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಿಗೆ ಮತ್ತು 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಇಂಗ್ಲೀಷ್, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಸಂಬಂಧಿಸಿದಂತೆ ಈ ಪರೀಕ್ಷೆ ಆಯೋಜಿಸಲಾಗುವುದು.

SSLC ಪೂರ್ವಸಿದ್ಧತಾ ಪರೀಕ್ಷೆಗೆ ವಿದ್ಯಾರ್ಥಿಗಳೇ ಉತ್ತರ ಪತ್ರಿಕೆ ತರಬೇಕೆಂಬ ಆದೇಶ ಸಮರ್ಥಿಸಿಕೊಂಡ ಇಲಾಖೆ!

ಓಪನ್ ಎಕ್ಸಾಂ ಉದ್ದೇಶ ಏನು?

ಪರೀಕ್ಷೆಯನ್ನು ಬರೆಯಲು ವಿದ್ಯಾರ್ಥಿಗಳು ತೆಗೆದುಕೊಳ್ಳುವ ಸಮಯ, ವಿದ್ಯಾರ್ಥಿಗಳ ಯೋಚನಾ ಶಕ್ತಿ, ವಿಶ್ಲೇಷಣಾ ಶಕ್ತಿ, ಗಂಭೀರ ಮತ್ತು ರಚನಾತ್ಮಕ ಆಲೋಚನೆ, ಸಮಸ್ಯೆ ಬಗೆಹರಿಸುವ ಸಾಮರ್ಥ, ಈ ಮಾದರಿಯ ಲಾಭಗಳೇನು, ನಷ್ಟಗಳೇನು? ಇದ

ಭಾರತವಲ್ಲದೇ 12 ವಿದೇಶಗಳಲ್ಲೂ ಈ ವರ್ಷ ನೀಟ್‌ ಪರೀಕ್ಷೆ ಆಯೋಜನೆ: ಎನ್‌ಟಿಎ

click me!