ಇಂಗ್ಲಿಷ್ ಬಾರದೆ ಸಹಪಾಠಿಗಳ ಗೇಲಿಗೆ ಗುರಿಯಾದ ಐಎಎಸ್ ಆಫೀಸರ್ ಸುರಭಿ ಇಂಗ್ಲಿಷ್ ಕಲಿತದ್ದು ಹೇಗೆ?

By Suvarna News  |  First Published Feb 21, 2024, 2:56 PM IST

ತಮ್ಮ ಬಟ್ಲರ್ ಇಂಗ್ಲಿಷಿಗೆ ಎಲ್ಲರೂ ಗೇಲಿ ಮಾಡುವಾಗ ಸುರಭಿ ಗೌತಮ್ ಇಂಗ್ಲಿಷ್ ಕಲಿಯಲು ತಮ್ಮದೇ ತಂತ್ರಗಳನ್ನು ಹುಡುಕಿಕೊಂಡರು. ಅವರ ತಂತ್ರಗಳು ನಿಮಗೂ ಹೆಲ್ಪ್ ಆಗ್ಬೋದು.


ಮಧ್ಯಪ್ರದೇಶದ ಯುವತಿ ಸುರಭಿ ಗೌತಮ್ ಇಂದು ಐಎಎಸ್ ಅಧಿಕಾರಿ. ಆಕೆ, ಕೇವಲ ಯುಪಿಎಸ್ಸಿ ಪರೀಕ್ಷೆ ಪಾಸು ಮಾಡಿಕೊಳ್ಳಲಿಲ್ಲ. ಜೊತೆಗೆ, ISRO, BARC, ಗೇಟ್, MPPSC, SAIL, FCI, SSC, ಮತ್ತು SI ದೆಹಲಿ ಪೊಲೀಸ್ ಎಲ್ಲ ರೀತಿಯ ಕ್ಲಿಷ್ಟಕರ ಪರೀಕ್ಷೆಯಲ್ಲಿ ಪಾಸಾಗಿ ಸಾಬೀತುಪಡಿಸಿಕೊಂಡಿದ್ದಾರೆ. 

ಇಂಗ್ಲಿಷನ್ನು ಸುಲಲಿತವಾಗಿ ಮಾತನಾಡುವ, ಶ್ರೀಮಂತ ಕುಟುಂಬದಿಂದ ಬಂದ, ಸಾಕಷ್ಟು ಟ್ಯೂಶನ್, ಟ್ರೇನಿಂಗ್ ತೆಗೆದುಕೊಂಡವರೇ ಯುಪಿಎಸ್ಸಿ ಪಾಸಾಗದೇ ಅದರ ಯೋಚನೆಯನ್ನೇ ಕೈ ಬಿಡುವಾಗ - ಮಧ್ಯಪ್ರದೇಶದ ಸತ್ನಾ ಜಿಲ್ಲೆಯ ಅಮದಾರ ಎಂಬ ಪುಟ್ಟ ಹಳ್ಳಿಯಿಂದ ಬಂದ ಸುರಭಿ  ಬಡತನದ ಕಾರಣದಿಂದಾಗಿ 12ನೇ ತರಗತಿವರೆಗೂ ಹಿಂದಿ ಮೀಡಿಯಂನಲ್ಲೇ ಓದಿದವರು. ಈ ಎಲ್ಲ ಹಿನ್ನೆಲೆಗಳು ಅವರ ಯಶಸ್ಸನ್ನು ತಡೆಯಲು ಸಾಧ್ಯವಾಗಿಲ್ಲ ಎಂಬುದೇ ಅವರ ಅಸಾಧಾರಣ ಪ್ರತಿಭೆಗೆ ಹಿಡಿದ ಕನ್ನಡಿ. 

Tap to resize

Latest Videos

undefined

ಇಂಗ್ಲಿಷ್ ಗೊತ್ತಿಲ್ಲದೆ ಪರದಾಡಿದ ಸುರಭಿ ಪಾಸಾಗಿದ್ದು UPSC ಮಾತ್ರವಲ್ಲ, ಗೇಟ್, ಬಾರ್ಕ್, ಇಸ್ರೋ, SAIL, SSC-CGL, IES..!
 

ಹೀಗೆ 12ನೇ ತರಗತಿವರೆಗೆ ಹಿಂದಿ ಮೀಡಿಯಂನಲ್ಲಿ ಓದಿದ ಸುರಭಿಗೆ ಇಂಗ್ಲಿಷ್ ಸರಿಯಾಗಿ ಬರುತ್ತಿರಲಿಲ್ಲ. ಅವರು ಭೋಪಾಲ್‌ನ ಇಂಜಿನಿಯರಿಂಗ್ ಕಾಲೇಜಿಗೆ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್‌ಗೆ ಓದಲು ಹೋದಾಗ ಅವರ ಬಟ್ಲರ್ ಇಂಗ್ಲಿಷನ್ನು ಸಹಪಾಠಿಗಳು ಗೇಲಿ ಮಾಡಿ ನಗುತ್ತಿದ್ದರು. ಎಲ್ಲರಂತೆ ಆಕೆಗೂ ಈ ಅಪಹಾಸ್ಯಗಳು ಬಹಳ ನೋಯಿಸುತ್ತಿದ್ದವು. ಆದರೆ, ಖಿನ್ನತೆಗೆ ತನ್ನ ಯಶಸ್ಸನ್ನು ಬಿಟ್ಟುಕೊಡುವ ಮನಸ್ಸು ಸುರಭಿಗಿರಲಿಲ್ಲ. ಹಾಗಾಗಿ ಆಕೆ ಇನ್ನೂ ಹೆಚ್ಚು ಪ್ರಯತ್ನ ಹಾಕಿ ಅಧ್ಯಯನ ಮಾಡಲಾರಂಭಿಸಿದರು. ತರಗತಿಗೆ ಮೊದಲಿಗರಾಗಿ ಬರತೊಡಗಿದರು. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಯಶಸ್ಸಿಗೆ ಇಂಗ್ಲಿಷ್ ಬೇಕಾಗಿಲ್ಲ ಎಂದು  ಸಾಬೀತುಪಡಿಸಿದರು. ಈ ಎಲ್ಲದರ ನಡುವೆ ಸುರಭಿ ಇಂಗಿಷನ್ನು ಕೂಡಾ ಚೆನ್ನಾಗಿ ಕಲಿಯಲು ತಮ್ಮದೇ ಆದ ದಾರಿ ಕಂಡುಕೊಂಡರು. ಅವರ ಆ ದಾರಿ- ಇಂದು ಇಂಗ್ಲಿಷ್ ಕಾರಣದಿಂದ ಹಿಂದೆ ಹೆಜ್ಜೆ ಇಡುವವರಿಗೆ ಸಹಾಯವಾಗಬಹುದು. 

ಹೆಚ್ಚು ಓದದ ಈ ಉದ್ಯಮಿ ಇಂದು 10,000 ಕೋಟಿ ಮೌಲ್ಯದ ಕಂಪನಿ ಒಡೆಯ; 10ಕ್ಕೂ ಹೆಚ್ಚು ಜನಪ್ರಿಯ ಬ್ರ್ಯಾಂಡ್‌‌ ಹಿಂದಿನ ಅಣ್ಣಾಬಾಂಡ್
 

ಸುರಭಿ ಇಂಗ್ಲಿಷ್ ಕಲಿತದ್ದು ಹೇಗೆ?
ಸುರಭಿ ಗೌತಮ್ ಕಾಲೇಜು ದಿನಗಳಲ್ಲಿ ತನ್ನ ಇಂಗ್ಲಿಷ್ ಅನ್ನು ಸುಧಾರಿಸುವ ಸಲುವಾಗಿ ಒಂದು ಉಪಾಯವನ್ನು ಸುಧಾರಿತಗೊಳಿಸಿದಳು. ಭಾಷೆಯ ವಾಕ್ಯಗಳು ಮತ್ತು ಪದಗಳ ಮೇಲೆ ಆತ್ಮವಿಶ್ವಾಸದಿಂದ ಹಿಡಿತ ಸಾಧಿಸುವವರೆಗೆ ಅವಳು ಪ್ರತಿದಿನ ಇಂಗ್ಲಿಷ್‌ನಲ್ಲಿ ತನ್ನೊಂದಿಗೆ ಮಾತನಾಡಲು ಪ್ರಾರಂಭಿಸಿದಳು. ಪ್ರತಿದಿನ ಕನಿಷ್ಠ 10 ಪದಗಳ ಅರ್ಥವನ್ನು ಕಲಿತಳು. ತನ್ನ ಸುತ್ತಮುತ್ತಲಿನವರಿಂದ ಕೇಳಿದ ನುಡಿಗಟ್ಟುಗಳು ಮತ್ತು ಪದಗಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನ ಹಾಕಿದಳು. ಅಂತಿಮವಾಗಿ ಸುರಭಿಗೆ ಇಂಗ್ಲಿಷ್ ಹೆಚ್ಚು ನಿರರ್ಗಳವೂ, ಸುಲಲಿತವೂ ಆಯಿತು. 

ಕೊನೆಗೆ ಐಎಎಸ್ ಅಧಿಕಾರಿಯಾಗುವ ಮೂಲಕ ತನಗೆ, ತನ್ನ ಹೆತ್ತವರಿಗೆ ಮತ್ತು ಇಡೀ ಅಮದಾರ ಗ್ರಾಮಕ್ಕೆ ಹಿಂದೆಂದೂ ಕಾಣದಂತಹ ಪ್ರಶಸ್ತಿಗಳು ಮತ್ತು ಸಂತೋಷವನ್ನು ತಂದ ಸುರಭಿ ವಿದ್ಯಾರ್ಥಿಗಳಿಗೆ ಹೇಳುವ ಕಿವಿಮಾತು ಇಲ್ಲಿದೆ.
ನಿಮ್ಮ ಸಾಮರ್ಥ್ಯವನ್ನು ಗುರುತಿಸಿ ಮತ್ತು ನಿಮ್ಮ ದಾರಿಯಲ್ಲಿ ಬರಬಹುದಾದ ಅಡೆತಡೆಗಳನ್ನು ಲೆಕ್ಕಿಸದೆ ಕೆಲಸ ಮಾಡಿ.
ಕೆಲವು ಜನರು ಯಾವಾಗಲೂ ನಿಮ್ಮನ್ನು ನಿಂದಿಸುವ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆದರೆ ಸಾಧಿಸಲು ನಿಮ್ಮ ಸಾಮರ್ಥ್ಯಕ್ಕೆ ನಿಮ್ಮ ಬದ್ಧತೆ ಮುಖ್ಯವಾದುದು.
‘ನಿಮಗಿಂತ ಉತ್ತಮರು ಯಾರೂ ಇಲ್ಲ’ ಎಂದು ಹೇಳುವ ನಿಮ್ಮ ಅಂತರಂಗದ ಧ್ವನಿಯನ್ನು ನೀವು ಕೇಳಿದರೆ ನಿಮಗೆ ಉತ್ತಮ ಭವಿಷ್ಯವಿದೆ.
ನೀವು ಯಶಸ್ಸಿನ ಫಲವನ್ನು ಸವಿಯುವ ಮೊದಲು, ಕೆಲವು ಕಷ್ಟಗಳನ್ನು ಅನುಭವಿಸುತ್ತೀರಿ ಎಂಬುದು ಪ್ರಕೃತಿಯ ನಿಯಮ; ಮುಂದುವರಿಸಿ - ತೊರೆಯುವುದು ಎಂದಿಗೂ ಉತ್ತರವಲ್ಲ.

click me!