ಕೋಟಿ ಕೋಟಿ ಬಿಸಿನೆಸ್ ನಿರ್ವಹಿಸೋ ಮುಕೇಶ್ ಅಂಬಾನಿ ಕುಟುಂಬ ಸದಸ್ಯರ ವಿದ್ಯಾರ್ಹತೆ ಎಷ್ಟು?

By Vinutha PerlaFirst Published Feb 21, 2024, 9:55 AM IST
Highlights

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಸಿದ್ಧತೆಗಳು ಆರಂಭವಾಗಿವೆ. ಮದ್ವೆಗೆ ಕೆಲವೇ ದಿನ ಇರುವಾಗಲೇ ಅಂಬಾನಿ ಫ್ಯಾಮಿಲಿಯ ಅಳಿಯ ಮತ್ತು ಸೊಸೆಯ ಶೈಕ್ಷಣಿಕ ಹಿನ್ನಲೆ ಎಲ್ಲರ ಗಮನ ಸೆಳೆಯುತ್ತಿದೆ. ಇಷ್ಟಕ್ಕೂ ಅವರ ಎಜುಕೇಶನ್ ಕ್ವಾಲಿಫಿಕೇಶನ್ ಏನು?

ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಅವರು ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಇವರಿಬ್ಬರ ಮದುವೆಯ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಂಬಾನಿ ಅಳಿಯ ಮತ್ತು ಸೊಸೆಯ ಶೈಕ್ಷಣಿಕ ಹಿನ್ನಲೆ ಎಲ್ಲರ ಗಮನ ಸೆಳೆಯುತ್ತಿದೆ. ಹೊಸ ಜೋಡಿಯ ವಿವಾಹ ಪೂರ್ವದ ಕಾರ್ಯಕ್ರಮಗಳು ಮಾರ್ಚ್ 1ರಂದು ಪ್ರಾರಂಭವಾಗುತ್ತವೆ. ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 3ರ ವರೆಗೆ ನಡೆಯಲಿದೆ. ಮದುವೆಯ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ. 

ಮುಕೇಶ್ ಮತ್ತು ನೀತಾ ಅಂಬಾನಿ ಅಳಿಯ ಮತ್ತು ಸೊಸೆಯರು ತಮ್ಮ ಕುಟುಂಬದ ವ್ಯವಹಾರಗಳಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಶಿಕ್ಷಣವನ್ನು ಪೂರೈಸಿದ್ದಾರೆ. ಕೋಟಿಗಟ್ಟಲೆ ವ್ಯವಹಾರ ನಡೆಸೋ ಉದ್ಯಮವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಆಕಾಶ್ ಅಂಬಾನಿಯನ್ನು ವಿವಾಹವಾದ ಶ್ಲೋಕಾ ಮೆಹ್ತಾ ಮತ್ತು ಇಶಾ ಅಂಬಾನಿ ಅವರನ್ನು ವಿವಾಹವಾದ ಆನಂದ್ ಪಿರಾಮಲ್ ಅವರಂತೆಯೇ ರಾಧಿಕಾ ಶ್ರೀಮಂತ ಕುಟುಂಬದಿಂದ ಬಂದವರು. ಇಬ್ಬರೂ ಉನ್ನತ ಶೈಕ್ಷಣಿಕ ಹಿನ್ನೆಲೆಯನ್ನು ಹೊಂದಿದ್ದಾರೆ.

ಕೋಟಿಗೆ ಬೆಲೆಯೇ ಇಲ್ವಾ, ಮುಕೇಶ್ ಅಂಬಾನಿ ಕಿರಿ ಸೊಸೆ ಧರಿಸಿದ ಸಿಂಪಲ್‌ ನೆಕ್ಲೇಸ್ ಬೆಲೆ ಭರ್ತಿ 12 ಕೋಟಿ!

ಆನಂದ್ ಪಿರಾಮಲ್
ಅಜಯ್ ಮತ್ತು ಡಾ.ಸ್ವಾತಿ ಎ.ಪಿರಮಾಲ್ ಮಗನಾಗಿರುವ, ಆನಂದ್ ಪಿರಮಾಲ್ ಪಿರಾಮಲ್ ಗ್ರೂಪ್‌ನ್ನು ನಿರ್ವಹಿಸುತ್ತಿದ್ದಾರೆ. ಪೋಷಕರು ಕ್ರಮವಾಗಿ ಈ ಸಂಸ್ಥೆಯಲ್ಲಿ ಉಪಾಧ್ಯಕ್ಷರು ಮತ್ತು ಅಧ್ಯಕ್ಷರಾಗಿದ್ದಾರೆ. ಕುಟುಂಬದ ವ್ಯವಹಾರದ ನಿರ್ಣಾಯಕ ಸದಸ್ಯರಾಗಿ, ಆನಂದ್ ಪಿರಾಮಲ್ ಗ್ರೂಪ್ ಬೋರ್ಡ್‌ನಲ್ಲಿ ನಿರ್ದೇಶಕರಾಗಿದ್ದಾರೆ. 

ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಿಂದ ಮತ್ತು ಬೋಸ್ಟನ್‌ನ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಆನಂದ್ ಪಿರಾಮಲ್ 2018ರಲ್ಲಿ ಇಶಾ ಅಂಬಾನಿಯನ್ನು ಮದುವೆಯಾದರು. ದಂಪತಿಗಳು 2022ರಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದರು.

ಅಂಬಾನಿ ಸದಾ ಹೇಳುವ ಈ ಮಾತುಗಳೇ ನನಗೆ ಸ್ಪೂರ್ತಿ: ಅವರಿಂದಲೇ ದೊಡ್ಡ ಜೀವನ ಪಾಠ ಕಲಿತೆ: ರಣ್‌ಬೀರ್ ಕಪೂರ್

ಶ್ಲೋಕಾ ಮೆಹ್ತಾ
ಶ್ಲೋಕಾ ಮೆಹ್ತಾ ಪೋಷಕರಾದ ರಸೆಲ್ ಮೆಹ್ತಾ ಮತ್ತು ಮೋನಾ ಮೆಹ್ತಾ, ರೋಸಿ ಬ್ಲೂ ಇಂಡಿಯಾದ ಪ್ರಮುಖ ಕಾರ್ಯನಿರ್ವಾಹಕರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ. ರೋಸಿ ಬ್ಲೂ ಇಂಡಿಯಾ ಕಂಪನಿಯ ಮಂಡಳಿಯಲ್ಲಿ ನಿರ್ದೇಶಕಿಯಾಗಿರುವ ಜೊತೆಗೆ, ಶ್ಲೋಕಾ ಆಕಾಶ್ ಅಂಬಾನಿ ಅವರ ಪತ್ನಿ. ನ್ಯೂಜೆರ್ಸಿಯ ಐವಿ ಲೀಗ್ ವಿಶ್ವವಿದ್ಯಾನಿಲಯವಾದ ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯದಲ್ಲಿ ಮಾನವಶಾಸ್ತ್ರದಲ್ಲಿ ತನ್ನ ಪದವಿಪೂರ್ವ ಅಧ್ಯಯನವನ್ನು ಪೂರ್ಣಗೊಳಿಸಿದರು. 

ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಂಡ್ ಪೊಲಿಟಿಕಲ್ ಸೈನ್ಸ್ (LSE) ನಿಂದ ಕಾನೂನು, ಮಾನವಶಾಸ್ತ್ರ ಮತ್ತು ಸಮಾಜದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿದರು. ಆಕಾಶ್ ಅಂಬಾನಿ ಮತ್ತು ಶ್ಲೋಕಾ 2019 ರಲ್ಲಿ ವಿವಾಹವಾದರು ಮತ್ತು ಡಿಸೆಂಬರ್ 2020ರಲ್ಲಿ ಮಗುವಿಗೆ ಜನ್ಮ ನೀಡಿದರು. ಇಬ್ಬರು ಮಕ್ಕಳು ಪೃಥ್ವಿ ಆಕಾಶ್ ಅಂಬಾನಿ ಮತ್ತು ಮಗಳು ವೇದಾ ಅಂಬಾನಿ.

ರಾಧಿಕಾ ಮರ್ಚೆಂಟ್‌
ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ. ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ. ಶೀಘ್ರದಲ್ಲೇ ಅನಂತ್ ಅಂಬಾನಿ ಅವರನ್ನು ವಿವಾಹವಾಗಲಿರುವ ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

click me!