ಡಿಸಿಇಟಿ-2023: ಡಿ.16ರಿಂದ ಕ್ಯಾಶುಯಲ್ ತೆರವು ಹಂತದ ಸೀಟು ಹಂಚಿಕೆ ಪ್ರಕ್ರಿಯೆ ಆರಂಭ

By Girish Goudar  |  First Published Dec 14, 2023, 9:32 PM IST

ಮೊದಲ ಎರಡು ಸುತ್ತುಗಳಲ್ಲಿ ಯಾವುದೇ ಸೀಟುಗಳನ್ನು ಪಡೆದಿಲ್ಲದಿರುವ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ: ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ 
 


ಬೆಂಗಳೂರು(ಡಿ.14):  2023ನೇ ಸಾಲಿಗೆ ಡಿಪ್ಲೊಮಾ ಲ್ಯಾಟರಲ್ ಪ್ರವೇಶಾತಿ ಮೂಲಕ ಎಂಜಿನಿಯರಿಂಗ್ ಕೋರ್ಸುಗಳಿಗೆ ಇನ್ನೊಂದು ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ ಡಿ.16ರಿಂದ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.

ಕೆಇಎ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಇಂದು(ಗುರುವಾರ) ಪತ್ರಿಕಾ ಹೇಳಿಕೆ ನೀಡಿದ್ದು, ಮೊದಲ ಎರಡು ಸುತ್ತುಗಳಲ್ಲಿ ಯಾವುದೇ ಸೀಟುಗಳನ್ನು ಪಡೆದಿಲ್ಲದಿರುವ ಅಭ್ಯರ್ಥಿಗಳಿಗೆ ಎರಡನೇ ಸುತ್ತಿನ ನಂತರ ಉಳಿದಿರುವ ಸೀಟುಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿರುತ್ತದೆ ಎಂದು ಹೇಳಿದ್ದಾರೆ.

Tap to resize

Latest Videos

undefined

ಚಾಮರಾಜನಗರ ವಿವಿ ಭವಿಷ್ಯ ಡೋಲಾಯಮಾನ; ಸರ್ಕಾರದ ನಡೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಆಕ್ರೋಶ

ಈ ಹಿನ್ನೆಲೆಯಲ್ಲಿ ಸೀಟು ರದ್ದುಪಡಿಸಿಕೊಳ್ಳಲು ಅಪೇಕ್ಷಿಸುವ ಅಭ್ಯರ್ಥಿಗಳು ಇಚ್ಚೆ /ಆಯ್ಕೆಗಳನ್ನು ದಾಖಲಿಸಲು ನಿಗದಿಪಡಿಸಿರುವ ಗಡುವಿನ ಡಿ.19ರ ಬೆಳಿಗ್ಗೆ 11 ರೊಳಗೆ ರೂ. 5000  ಅನ್ನು ದಂಡದ ರೂಪದಲ್ಲಿ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಸಲ್ಲಿಸಬೇಕಾಗುತ್ತದೆ. ಈಗಾಗಲೇಸೀಟು ರದ್ದುಪಡಿಸಿಕೊಂಡಿರುವ ಅಭ್ಯರ್ಥಿಗಳಿಗೆ ರೂ.5000 ಕಡಿತಗೊಳಿಸಿ ಶುಲ್ಕ ಮರುಪಾವತಿ ಮಾಡಲಾಗುವುದು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ಒಂದು ವೇಳೆ ಕ್ಯಾಶುಯಲ್ ತೆರವು ಹಂತದ ಸುತ್ತಿನ ಸೀಟು ಹಂಚಿಕೆಯ ನಂತರ ಸೀಟು ರದ್ದುಪಡಿಸಿಕೊಂಡಲ್ಲಿ, ಅಂತಹವರು ನಿಯಮದ ಪ್ರಕಾರ ಒಂದು ವರ್ಷದ ಶುಲ್ಕ ಮತ್ತು ಐದು ಪಟ್ಟು ಶುಲ್ಕವನ್ನು ದಂಡದ ರೂಪದಲ್ಲಿ ಪಾವತಿಸಬೇಕಾಗುತ್ತದೆ. ಕ್ಯಾಶುಯಲ್‌ ತೆರವು ಹಂತದ ಸೀಟು ಹಂಚಿಕೆ ವೇಳಾಪಟ್ಟಿಗಾಗಿ ಪ್ರಾಧಿಕಾರದ ವೆಬ್ಸೈಟ್ ನೋಡಲು ಸೂಚಿಸಲಾಗಿದೆ.

click me!