ಬಳ್ಳಾರಿ: ಸಿನಿಮಾ ಟಾಕೀಸ್‌ನಲ್ಲೇ ನಡೀತಿದೆ ವಸತಿ ಶಾಲೆ, ಬಾಲಕಿಯರ ವಸತಿ ಶಾಲೆಯ ದುರಂತ ಕಥೆ

By Girish Goudar  |  First Published Dec 13, 2023, 8:49 PM IST

ಕುರುಗೋಡು ಪಟ್ಟಣದಲ್ಲಿರೋ ಹಳೆಯದಾದ ಸಿನಿಮಾ ಟಾಕೀಸಿನ ಕಟ್ಟಡ ಮೇಲ್ನೋಟಕ್ಕೆ ಸಿನಿಮಾ ಟಾಕೀಸ್ ಕಟ್ಟಡವಾದ್ರೂ ಇದೊಂದು ಬಾಲಕಿಯರ ವಸತಿ ಶಾಲೆ ಅನ್ನೋದು ಮಾತ್ರ ದುರಂತ


ವರದಿ; ನರಸಿಂಹ ಮೂರ್ತಿ ಕುಲಕರ್ಣಿ

ಬಳ್ಳಾರಿ(ಡಿ.13):  ಸಾಮಾನ್ಯವಾಗಿ ಎಲ್ಲರೂ ಸಿನಿಮಾ ಟಾಕೀಸ್ ಗಳಲ್ಲಿ ಸಿನಿಮಾ ನೋಡ್ತಾರೆ. ಆದರೆ ಇಲ್ಲಿ ಸಿನಿಮಾ ಬದಲಾಗಿ ಇಲ್ಲಿರೋ ಹಳೇಯ ಟಾಕೀಸ್ ನಲ್ಲಿ ನೂರಾರು ವಿದ್ಯಾರ್ಥಿಗಳಿರೋ ಶಾಲೆ ನಡೆಯುತ್ತಿದೆ. ಕೇವಲ ಶಾಲೆ ನಡೆಯೋದಷ್ಟೇ ಅಲ್ಲ ಇದು ವಸತಿ ಶಾಲೆಯಾದ ಹಿನ್ನಲೆ ರಾತ್ರಿಯ ವೇಳೆ ಇಲ್ಲಿಯೇ ವಿದ್ಯಾರ್ಥಿಗಳು ಊಟ ಮಾಡುತ್ತಾರೆ ಮತ್ತು ಮಲಗುತ್ತಾರೆ. ಇದರ ಜೊತೆಗೆ ಇನ್ನೊಂದು ದುರಂತವಂದ್ರೇ ಅಂದ್ರೇ ಇದು ಬಾಲಕಿಯರ ವಸತಿ ಶಾಲೆಯಾಗಿದೆ. ಕುರುಗೋಡಿನಲ್ಲಿರೋ ವಸತಿ ಶಾಲೆಯ ಅವ್ಯವಸ್ಥೆ ಕುರಿತ ಒಂದು ವರದಿ ಇಲ್ಲಿದೆ ನೋಡಿ..

Latest Videos

undefined

ಪಾಠ ಪ್ರವಚನದ ಜೊತೆ ಊಟ,ನಿದ್ದೆಯೂ ಇದೇ ಸಿನಿಮಾ ಟಾಕೀಸ್‌ನಲ್ಲಿ

ಹತ್ತು ವರ್ಷ ಮಠದ ಕಟ್ಟಡದಲ್ಲಿತ್ತು ಈಗ ಮೂರು ವರ್ಷದಿಂದ ಸಿನಿಮಾ ಟಾಕೀಸ್ ನಲ್ಲಿದೆ ಬಾಲಕಿಯರ ಈ ವಸತಿ ಶಾಲೆ.. ಹೆಸರಿಗೆ  ವಸತಿ ಶಾಲೆ ಇರೋದು ಮಾತ್ರ ಹಳೇಯದಾದ ಸಿನಿಮಾ ಟಾಕೀಸಿನ ಕಟ್ಟಡದಲ್ಲಿ.. ಹೌದು, ಇದು ಕುರುಗೋಡು ಪಟ್ಟಣದಲ್ಲಿರೋ ಹಳೆಯದಾದ ಸಿನಿಮಾ ಟಾಕೀಸಿನ ಕಟ್ಟಡ ಮೇಲ್ನೋಟಕ್ಕೆ ಸಿನಿಮಾ ಟಾಕೀಸ್ ಕಟ್ಟಡವಾದ್ರೂ ಇದೊಂದು ಬಾಲಕಿಯರ ವಸತಿ ಶಾಲೆ ಅನ್ನೋದು ಮಾತ್ರ ದುರಂತ.. ಇದು ಹಿಂದೂಳಿದ ವರ್ಗದ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಗಾಂಧಿ ತತ್ವಾಧಾರಿತ ಬಾಲಕಿಯರ ವಸತಿ ಶಾಲೆಯ ದುರಂತ ಕಥೆ. ಪ್ರತ್ಯೇಕ ಕೊಠಡಿಗಳಿಲ್ಲ, ಮಾತನಾಡಿದ್ರೇ, ಪಾಠ ಹೇಳಿದ್ರೇ ಎಕೋ ( ಪ್ರತಿಧ್ವನಿ) ಬರುವ ಈ ಹಳೇಯದಾದ ಟಾಕೀಸ್ ವಿವಿಧ ಭಾಗದಲ್ಲಿ ತಾತ್ಕಲಿಕ ತಡೆಗೋಡೆ ಮಾಡಿಕೊಂಡು ಕ್ಲಾಸ್ ನಡೆಯುತ್ತಿದೆ.. ಕೆಲವು ಕಡೆ ಬೆಂಚ್ ಮತ್ತೊಂದಷ್ಟ ಕಡೆ ವಿದ್ಯಾರ್ಥಿನಿಯರು ನೆಲದ ಮೇಲೆ ಕುಳಿತು ಪಾಠ ಕೇಳ್ತಾರೆ.  ಕಳೆದ ಹದಿಮೂರು ವರ್ಷದ ಹಿಂದೆ ಈ ವಸತಿ ಶಾಲೆಯನ್ನು ನಿರ್ಮಾಣ ಮಾಡಲಾಗಿತ್ತು. ಹತ್ತು ವರ್ಷದಿಂದ ಮಠವೊಂದರ ಕಟ್ಟಡದಲ್ಲಿತ್ತು. ಕಾರಣಾಂತರದಿಂದ ಅಲ್ಲಿ ಬಿಟ್ಟು ಇದೀಗ ಹಳೆಯದಾದ ಸಿನಿಮಾ ಟಾಕೀಸ್ ನಲ್ಲಿ ನಡೆಯುತ್ತಿದೆ. ಈ ವಸತಿ ಶಾಲೆಯಲ್ಲಿ 6ರಿಂದ 10ನೇ ತರಗತಿ ಯವರೆಗೆ 226 ವಿದ್ಯಾರ್ಥಿನಿಯರಿದ್ದಾರೆ. ಇರೋ ಬರೋ ಸಂಕಷ್ಟದಲ್ಲಿಯೇ ಇಲ್ಲಿಯ ವಿದ್ಯಾರ್ಥಿನಿಯರು ಕ್ಲಾಸ್ ಕೇಳುವ ದುಸ್ಥಿತಿ ಇಲ್ಲಿದೆ..

ಚಾಮರಾಜನಗರ ವಿವಿ ಭವಿಷ್ಯ ಡೋಲಾಯಮಾನ; ಸರ್ಕಾರದ ನಡೆಗೆ ವಿದ್ಯಾರ್ಥಿಗಳು, ಉಪನ್ಯಾಸಕರು ಆಕ್ರೋಶ

ಯಾರಿಗೆ ಹೇಳೋಣ ನಮ್ಮ ಪ್ರಾಬ್ಲಂ ಅಂತಿದ್ದಾರೆ ಇಲ್ಲಿಯ ವಿದ್ಯಾರ್ಥಿನಿಯರು

ಇನ್ನೂ ಈ  ವಸತಿ ಶಾಲೆಗೆ ಸ್ವಂತ ಕಟ್ಟಡವಿರದ ಕಾರಣ 40 ವರ್ಷ ಹಳೆಯದಾದ ಚಿತ್ರ ಮಂದಿರ ಕಟ್ಟಡದಲ್ಲೇ ಕಳೆದ ಮೂರು ವರ್ಷಗಳಿಂದ ವಸತಿ ಶಾಲೆ ನಡೆಯುತ್ತಿದೆ. ಇಷ್ಟೊಂದು ವಿದ್ಯಾರ್ಥಿಗಳು ಇರೋ ದೊಡ್ಡ  ಸ್ಥಳ ಬಾಡಿಗೆ ಸಿಗದ ಕಾರಣ ಸಿನಿಮಾ ಟಾಕೀಸ್ ನಲ್ಲಿ ನಡೆಯುತ್ತಿದೆ ಎನ್ನುತ್ತಿದ್ದಾರೆ ಇಲ್ಲಿಯ ಸಿಬ್ಬಂದಿ. ಆಲ್ಲದೇ ಈಗಾಗಲೇ ವಸತಿ ಶಾಲೆ ನಿರ್ಮಾಣಕ್ಕೆ ಆರು ಎಕರೆ ಸ್ಥಳವನ್ನು ಗುರುತು ಮಾಡಲಾಗಿದೆ. ಆದರೆ ಇದರ ನಿರ್ಮಾಣಕ್ಕೆ ಕನಿಷ್ಠ 20 ಕೋಟಿ ಹಣ ಬೇಕಂತೆ ಅಷ್ಟೊಂದು ಹಣದ ಅನುದಾನವಿರದ ಕಾರಣ ತಿಂಗಳಿಗೆ ಒಂದು ಲಕ್ಷದ ಇಪ್ಪತ್ತು ಸಾವಿರ ಬಾಡಿಗೆ ನೀಡಿ ಸಿನಿಮಾ ಟಾಕೀಸ್ ನಲ್ಲಿ ತರಗತಿ ನಡೆಸುತ್ತಿದ್ದಾರೆ. 

ಗುತ್ತು ಗುರಿ ಇಲ್ಲದೇ ನಿರ್ಮಾಣ ಮಾಡಿದ್ರೇ ಹೀಗೆ ಅಗೋದು…

ಸರ್ಕಾರ ಈ ರೀತಿಯ ವಸತಿ ಶಾಲೆಯ ನಿರ್ಮಾಣ ಮಾಡುವ ಮುನ್ನ ಸರಿಯಾದ ಕಟ್ಟಡ, ಸಿಬ್ಬಂದಿ ಮಕ್ಕಳಿಗೆ ಬೇಕಾದ ಮೂಲಭೂತ ಸೌಕರ್ಯದ ಬಗ್ಗೆ ಪರಿಶೀಲನೆ ಮಾಡಬೇಕು.  ಇದ್ಯಾವುದನ್ನು ಯೋಚನೆ ಮಾಡದೇ ವಸತಿ ಶಾಲೆ ನಿರ್ಮಾಣ ಮಾಡಿದ್ರೇ ವಿದ್ಯಾರ್ಥಿಗಳು ಹೇಗೆ ಪರದಾಡುತ್ತಾರೆ ಅನ್ನೋದಕ್ಕೆ ಈ ಶಾಲೆಯ ಸಾಕ್ಷಿಯಾಗಿದೆ.

click me!