1ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ದಾಖಲಾತಿಗೆ ಇನ್ನೂ ಒಪ್ಪಿಗೆ ನೀಡದ ಬೆಂಗಳೂರು ನಗರ ವಿವಿ..!

Kannadaprabha News   | Asianet News
Published : Feb 05, 2022, 09:10 AM IST
1ನೇ ಸೆಮಿಸ್ಟರ್‌ ವಿದ್ಯಾರ್ಥಿಗಳ ದಾಖಲಾತಿಗೆ ಇನ್ನೂ ಒಪ್ಪಿಗೆ ನೀಡದ ಬೆಂಗಳೂರು ನಗರ ವಿವಿ..!

ಸಾರಾಂಶ

*  ಅನುಮೋದನೆ ಸಿಗದೇ ಪರೀಕ್ಷೆ ನಡೆಸೋದು ಕಷ್ಟ *  ಕಾಲೇಜುಗಳಿಗೆ ಇಕ್ಕಟ್ಟಿನ ಪರಿಸ್ಥಿತಿ *  ವಿದ್ಯಾರ್ಥಿಗಳ ಪರೀಕ್ಷಾ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ   

ಲಿಂಗರಾಜು ಕೋರಾ

ಬೆಂಗಳೂರು(ಫೆ.05): ಬೆಂಗಳೂರು ನಗರ ವಿಶ್ವವಿದ್ಯಾಲಯ(Bengaluru City University) ಪದವಿ ವ್ಯಾಸಂಗದ ವಿವಿಧ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ 2021-22ನೇ ಸಾಲಿನ ತರಗತಿ ಬೋಧನಾ ಪ್ರಕ್ರಿಯೆ ಮುಕ್ತಾಯದ ಹಂತ ತಲುಪಿದ್ದರೂ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳ(Students) ದಾಖಲಾತಿಗೆ(Admission) ಇನ್ನೂ ಅನುಮೋದನೆಯನ್ನೇ ನೀಡಿಲ್ಲ. ಇದರಿಂದ ಈ ವಿದ್ಯಾರ್ಥಿಗಳ ಪರೀಕ್ಷಾ ಪ್ರಕ್ರಿಯೆ ವಿಳಂಬವಾಗುವ ಸಾಧ್ಯತೆ ಇದೆ.

ವಿಶ್ವವಿದ್ಯಾಲಯ ತನ್ನ ಹಾಗೂ ತನ್ನ ವ್ಯಾಪ್ತಿಯ ಸಂಯೋಜಿತ ಕಾಲೇಜುಗಳಲ್ಲಿ ಉನ್ನತ ಶಿಕ್ಷಣಕ್ಕೆ(Higher Education) ಪ್ರವೇಶ ಪಡೆದ ಎಲ್ಲ ವಿದ್ಯಾರ್ಥಿಗಳ ದಾಖಲಾತಿಯನ್ನು ಶೈಕ್ಷಣಿಕ ವೇಳಾಪಟ್ಟಿ ಅನುಸಾರ ನಿಗದಿತ ಅವಧಿಯಲ್ಲಿ ಅನುಮೋದನೆ ನೀಡಬೇಕು. ಆಗ ಮಾತ್ರ ವಿದ್ಯಾರ್ಥಿಗಳಿಗೆ ನಿಗದಿತ ಸಮಯಕ್ಕೆ ಪರೀಕ್ಷೆ ನಡೆಸಲು ಸಾಧ್ಯವಾಗುತ್ತದೆ. ವೇಳಾಪಟ್ಟಿ ಪ್ರಕಾರ ಜ.10ಕ್ಕೆ ವಿದ್ಯಾರ್ಥಿಗಳ ದಾಖಲಾತಿಗೆ ಅನುಮೋದನೆ ನೀಡಬೇಕಿತ್ತು. ಆದರೆ, ಇದುವರೆಗೂ ಅನುಮೋದನೆಯನ್ನೇ ನೀಡಿಲ್ಲ. ಇದರಿಂದ ಮೊದಲ ಸೆಮಿಸ್ಟರ್‌ ವಿದ್ಯಾರ್ಥಿಗಳ ಪರೀಕ್ಷಾ ಪ್ರಕ್ರಿಯೆ(Examination Process) ವಿಳಂಬವಾಗುವ ಸಾಧ್ಯತೆ ಇದೆ ಎಂದು ಸಂಯೋಜಿತ ಕಾಲೇಜುಗಳ ವ್ಯಾಪ್ತಿಯಲ್ಲಿ ಆರೋಪಗಳು ಕೇಳಿಬರುತ್ತಿವೆ.

ABVP Protests at Bengaluru University: ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಬಿವಿಪಿ ಪ್ರತಿಭಟನೆ, ಪೋಲಿಸರಿಂದ ಲಾಠಿಚಾರ್ಜ್

ವಿವಿಯ ಪ್ರಸಕ್ತ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಾರ ಕಳೆದ ಆಗಸ್ಟ್‌ 22ರಿಂದ ನ.10ರವರೆಗೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅವಕಾಶ ನೀಡಲಾಗಿತ್ತು. ಅಕ್ಟೋಬರ್‌ 12ರಿಂದ 1, 3, 5 ಮತ್ತು 7ನೇ ಸೆಮಿಸ್ಟರ್‌ ತರಗತಿಗಳ ಬೋಧನೆ ಆರಂಭಿಸಲಾಗಿದೆ. ಪ್ರವೇಶ ಪಡೆದ ವಿದ್ಯಾರ್ಥಿಗಳ ಮಾಹಿತಿಯನ್ನು ವಿವಿಯ ವೆಬ್‌ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲು ನ.2ರಿಂದ 30ರವರೆಗೆ ಅವಕಾಶ ನೀಡಲಾಗಿತ್ತು. ಅದರಂತೆ ಕಾಲೇಜುಗಳು ಮಾಹಿತಿಯನ್ನು ಅಪ್‌ಲೋಡ್‌ ಮಾಡಲಾಗಿದೆ. ಇದರ ಆಧಾರದ ಮೇಲೆ ವಿಶ್ವವಿದ್ಯಾಲಯ ಡಿ.22ರಿಂದ ಜ.10ರೊಳಗೆ ದಾಖಲಾತಿಗೆ ಅನುಮೋದನೆ ನೀಡಬೇಕಿತ್ತು. ಆದರೆ, ನಿಗದಿತ ಸಮಯ ಮುಗಿದು ತಿಂಗಳು ಕಳೆಯುತ್ತಿದ್ದರೂ

ಅನುಮೋದನೆ ನೀಡಿಲ್ಲ.

ಇನ್ನು, ಫೆ.10ಕ್ಕೆ ಈ ಎಲ್ಲಾ ಸೆಮಿಸ್ಟರ್‌ ವಿದ್ಯಾರ್ಥಿಗಳಿಗೂ ತರಗತಿ ಬೋಧನಾ ಚಟುವಟಿಕೆ ಮುಕ್ತಾಯಗೊಳ್ಳಲಿವೆ. ಫೆ.16ರಿಂದ ಪರೀಕ್ಷೆಗಳು ಆರಂಭವಾಗಬೇಕಿದೆ. ಆದರೆ, ದಾಖಲಾತಿಗೆ ಅನುಮೋದನೆ ದೊರೆಯದೆ ಪರೀಕ್ಷಾ ಪ್ರಕ್ರಿಯೆ ಆರಂಭವಾಗಲು ಸಾಧ್ಯವಿಲ್ಲ. ಕೂಡಲೇ ವಿವಿ ಅಧಿಕಾರಿಗಳು ತಮ್ಮ ನಿಧಾನ ಧೋರಣೆ ಬಿಟ್ಟು ದಾಖಲಾತಿಗೆ ಅನುಮೋದನೆ ನೀಡಿ ಮುಂದಿನ ಪರೀಕ್ಷೆ, ಮೌಲ್ಯಮಾಪನ, ಫಲಿತಾಂಶ(Result) ನೀಡಿಕೆ ಪ್ರಕ್ರಿಯೆಗಳು ನಿಗದಿತ ಸಮಯದಲ್ಲಿ ನಡೆಯಲು ಅವಕಾಶ ಮಾಡಿಕೊಡಬೇಕೆಂದು ಹೆಸರು ಹೇಳಲು ಇಚ್ಚಿಸದ ವಿವಿಧ ಪದವಿ ಕಾಲೇಜುಗಳ ಪ್ರಾಂಶುಪಾಲರು ಕೋರಿದ್ದಾರೆ.

ದಾಖಲಾತಿ ಅನುಮೋದನೆ ಬಳಿಕ ಮಕ್ಕಳ ಪರೀಕ್ಷಾ ನೋಂದಣಿ, ಶುಲ್ಕ ಪಾವತಿ, ನೋಂದಣಿ ಸಂಖ್ಯೆ ನೀಡುವುದು, ಪ್ರಾಯೋಗಿಕ ಪರೀಕ್ಷೆ ನಡೆಸುವುದು ಸೇರಿದಂತೆ ಸಾಕಷ್ಟು ಕಾರ್ಯಗಳನ್ನು ಪೂರ್ಣಗೊಳ್ಳಲು ಹೆಚ್ಚಿನ ಸಮಯಾವಕಾಶ ಬೇಕು. ವಿಶ್ವವಿದ್ಯಾಲಯ ಇನ್ನಷ್ಟು ವಿಳಂಬ ಮಾಡಿದರೆ ಪರೀಕ್ಷೆ ಪ್ರಕ್ರಿಯೆ ಸಾಕಷ್ಟುವಿಳಂಬವಾಗುವ ಸಾಧ್ಯತೆ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು ಎಂದು ಕೆಲ ಪ್ರಾಂಶುಪಾಲರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಈ ಸಂಬಂಧ ಪ್ರತಿಕ್ರಿಯೆ ಪಡೆಯಲು ವಿವಿಯ ಕುಲಪತಿ ಅವರಿಗೆ ಕರೆ ಮಾಡಿದಾಗ ಅವರು ಕರೆಗೆ ಲಭ್ಯವಾಗಲಿಲ್ಲ.

Bengaluru University: ಇಂಟರ್ನಲ್, ವೈವಾ ಪರೀಕ್ಷೆ ಅಂಕ ನೀಡಿದ್ರೂ ವಿದ್ಯಾರ್ಥಿಗಳು ಫೇಲ್.!

ವಿವಿ ಆವರಣದೊಳಗೆ ABVP, NSUI ಗೆ ನಿಷೇಧ..?

ಬೆಂಗಳೂರು: ಯಾರು ಮೊದಲು ಪ್ರತಿಭಟನೆ ನಡೆಸಬೇಕು ಎಂಬ ವಿಚಾರದ ಬಗ್ಗೆ ABVP VS NSUI ವಿದ್ಯಾರ್ಥಿ ಸಂಘಟನೆಗಳ ನಡುವೆ ಮಾತಿನ ಚಕಮಕಿ ನಡೆದ ಘಟನೆ ಫೆ. 02 ರಂದು ಬೆಂಗಳೂರು ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದಿತ್ತು. ಘರ್ಷಣೆ ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದದ್ದರು. ಈ ವೇಳೆ ಓರ್ವ ವಿದ್ಯಾರ್ಥಿನಿ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವವಾಗಿ, ಉಳಿದಂತೆ 10 ಮಂದಿಗೆ ಸಣ್ಣ ಪುಟ್ಟಗಾಯಗಳಾಗಿದ್ದವು. 

ವಿವಿ ಆವರಣದೊಳಗೆ ರಾಜಕಿಯ ಪ್ರೇರಿತ ಸಂಘಟನೆಗಳ ಕಾರುಬಾರು ಜೋರಾಗಿದ್ದು ವಿದ್ಯಾರ್ಥಿಗಳು ಬೇಸತ್ತಿದ್ದಾರೆ. ಇಂತಹ ಸಂಘಟನೆಗಳನ್ನು ರಾಜಕೀಯದಿಂದ ದೂರವಿಡಲು, ಸಂಶೋಧನಾ ವಿದ್ಯಾರ್ಥಿಗಳ ಒಕ್ಕೂಟ ರಚನೆಯಾಗಿದೆ. ವಿವಿ ಆವರಣಕ್ಕೆ ABVP, SFI, CFI ಸಂಘಟನೆಗಳ ಪ್ರವೇಶಕ್ಕೆ ನಿಷೇಧ ಹೇರುವಂತೆ ವಿಸಿಗೆ ಮನವಿ ಮಾಡಿದ್ದರು. 
 

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ