ತಮಿಳುನಾಡು ಸರಕಾರದ ಜೊತೆ ಘರ್ಷಣೆ, ನೀಟ್ ಮಸೂದೆ ಹಿಂದಿರುಗಿಸಿದ ರಾಜ್ಯಪಾಲ

By Suvarna NewsFirst Published Feb 4, 2022, 4:12 PM IST
Highlights

ತಮಿಳುನಾಡು ಸರ್ಕಾರದೊಂದಿಗೆ ಘರ್ಷಣೆಗೆ ಮುಂದಾಗಿರುವ ರಾಜ್ಯಪಾಲ ಆರ್.ಎನ್.ರವಿ ನೀಟ್‌ ನಿಂದ ವಿನಾಯಿತಿ ಕೋರಿ ಸರ್ಕಾರ ಸಲ್ಲಿಸಿದ್ದ ವಿಧೇಯಕವನ್ನು ಸದನದ ಮರುಪರಿಶೀಲನೆಗಾಗಿ ವಿಧಾನಸಭೆ ಸ್ಪೀಕರ್‌ಗೆ ಹಿಂದಿರುಗಿಸಿದ್ದಾರೆ.

ಚೆನ್ನೈ: ತಮಿಳುನಾಡು (Tamil Nadu) ಸರ್ಕಾರದೊಂದಿಗೆ ಘರ್ಷಣೆಗೆ ಮುಂದಾಗಿರುವ ರಾಜ್ಯಪಾಲ ಆರ್.ಎನ್.ರವಿ ( Governor  R N Ravi) ಅವರು ರಾಜ್ಯಕ್ಕೆ ರಾಷ್ಟ್ರೀಯ ಪ್ರವೇಶ ಮತ್ತು ಅರ್ಹತಾ ಪರೀಕ್ಷೆ(National Eligibility Entrance Test - NEET)ನಿಂದ ವಿನಾಯಿತಿ ಕೋರಿ ಸರ್ಕಾರ ಸಲ್ಲಿಸಿದ್ದ ವಿಧೇಯಕವನ್ನು ಸದನದ ಮರುಪರಿಶೀಲನೆಗಾಗಿ ವಿಧಾನಸಭೆ ಸ್ಪೀಕರ್‌ಗೆ ಹಿಂದಿರುಗಿಸಿದ್ದಾರೆ. "ಈ ಮಸೂದೆ ರಾಜ್ಯದ ವಿದ್ಯಾರ್ಥಿಗಳು, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಮತ್ತು ಆರ್ಥಿಕವಾಗಿ ಬಡ ವಿದ್ಯಾರ್ಥಿಗಳ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ ರಾಜ್ಯಪಾಲರು ಫೆಬ್ರವರಿ 1 ರಂದು ತಮಿಳುನಾಡು ವಿಧಾನಸಭೆಯ ಸ್ಪೀಕರ್ ಅವರಿಗೆ ವಿವರವಾದ ವಿವರಗಳನ್ನು ಕೋರಿ ಮಸೂದೆಯನ್ನು ಹಿಂದಿರುಗಿಸಿದ್ದಾರೆ" ಎಂದು ರಾಜಭವನ ತಿಳಿಸಿದೆ.

ಇದಕ್ಕೆ ಸಂಬಂಧಿಸಿದಂತೆ, ರಾಜಭವನ, ವೆಲ್ಲೂರ್ ನ ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ತಮಿಳುನಾಡು ಸರ್ಕಾರ ವಿಧಾನಸಭೆಯಲ್ಲಿ ಈ ಮಸೂದೆಯನ್ನು ಅಂಗೀಕರಿಸಿತ್ತು. ನೀಟ್ ಪರೀಕ್ಷೆಯು ಖಾಸಗಿ ಕೋಚಿಂಗ್ ಅನ್ನು ನಿಭಾಯಿಸಬಲ್ಲ ಶ್ರೀಮಂತ ವರ್ಗಗಳಿಗೆ ಅನುಕೂಲಕರವಾಗಿದೆ ಎಂದು ರಾಜ್ಯ ಸರ್ಕಾರ ಹೇಳಿದೆ.

ರಾಜ್ಯಪಾಲರು ಗಣರಾಜ್ಯೋತ್ಸವ ಭಾಷಣದಲ್ಲಿ ನೀಟ್ ಪರಿಚಯಿಸಿದ ನಂತರ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಾಗಿದೆ ಎಂದು ಹೇಳಿದ್ದರು. ನೀಟ್ ಅನ್ನು ಪರಿಚಯಿಸುವ ಮೊದಲು, ಸರ್ಕಾರಿ ಶಾಲೆಗಳಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿನ ಸೀಟುಗಳಿಗೆ ವಿದ್ಯಾರ್ಥಿಗಳ ಪಾಲು ಶೇಕಡಾ 1 ರಷ್ಟಿರಲಿಲ್ಲ. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶೇ. 7.5 ರಷ್ಟು ಮೀಸಲಾತಿಯ ದೃಢವಾದ ಕ್ರಮಕ್ಕೆ ಧನ್ಯವಾದಗಳು, ಆ ಸಂಖ್ಯೆ ಗಮನಾರ್ಹವಾಗಿ ಸುಧಾರಿಸಿದೆ ಎಂದು ರಾಜ್ಯಪಾಲರು ಜನವರಿ 26 ರಂದು ಹೇಳಿದ್ದರು.

NEET PG Exam 2022 Postponed: ಮಾರ್ಚ್‌ 12ಕ್ಕೆ ನಿಗದಿಯಾಗಿದ್ದ ನೀಟ್‌–ಪಿಜಿ ಪರೀಕ್ಷೆ ಮುಂದೂಡಿದ ಆರೋಗ್ಯ ಸಚಿವಾಲಯ 

ನೀಟ್‌–ಪಿಜಿ ಪರೀಕ್ಷೆ ಮುಂದೂಡಿದ ಆರೋಗ್ಯ ಸಚಿವಾಲಯ: ಕೇಂದ್ರ ಆರೋಗ್ಯ ಸಚಿವಾಲಯ (Union Health Ministry) ನೀಟ್ ಪಿಜಿ (NEET PG) ಪರೀಕ್ಷೆಯನ್ನು ಮುಂದೂಡಿದೆ. ಮಾರ್ಚ್ 12ಕ್ಕೆ ನಿಗದಿಯಾಗಿದ್ದ ನೀಟ್ ಪಿಜಿ ಪರೀಕ್ಷೆಯನ್ನು 6 ರಿಂದ  8 ವಾರಗಳ ಕಾಲ ಮುಂದೂಡಿದೆ. 2022ರ ನೀಟ್ ಪರೀಕ್ಷೆಯ ( National Eligibility Entrance Test) ದಿನಾಂಕವನ್ನು ಮುಂದೂಡುವಂತೆ ಕೋರಿ ಎಂಬಿಬಿಎಸ್ ವಿದ್ಯಾರ್ಥಿಗಳು ಸುಪ್ರೀಂಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದು, ಇದರ ಬೆನ್ನಲ್ಲೇ ಸರ್ಕಾರ ಪರೀಕ್ಷೆಯನ್ನು ಮುಂದೂಡಿದೆ. ಫೆ. 4ರಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯಕಾಂತ್ ಅವರ ಪೀಠ ಅರ್ಜಿಯ ವಿಚಾರಣೆ ನಡೆಸಲಿದೆ. 

ವಾಸ್ತವದಲ್ಲಿ,  ಈ ಪರೀಕ್ಷೆಯನ್ನು ಮುಂದೂಡಬೇಕೆಂದು ವಿದ್ಯಾರ್ಥಿಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ಕಳೆದ ವರ್ಷ ಅಂದರೆ 2021ರ NEET ಪಿಜಿ ಕೌನ್ಸೆಲಿಂಗ್‌ನ ದಿನಾಂಕಗಳು ಮತ್ತು ಈ ವರ್ಷದ ಪರೀಕ್ಷೆಯ ದಿನಾಂಕಗಳು ಪರಸ್ಪರ ಘರ್ಷಣೆಯಾಗುತ್ತಿವೆ ಹೀಗಾಗಿ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದರು.

PUC Exam: ಪಿಯು ಪ್ರಾಕ್ಟಿಕಲ್ ಎಕ್ಸಾಂಗೂ ಸಿಸಿಟಿವಿ ಕಾವಲು

ವಿದ್ಯಾರ್ಥಿಗಳ ಬೇಡಿಕೆಗಳನ್ನು ನ್ಯಾಯಯುತವೆಂದು ಪರಿಗಣಿಸಿ ಆರೋಗ್ಯ ಸಚಿವಾಲಯ ಇದೀಗ ಪರೀಕ್ಷೆಯನ್ನು 6-8 ವಾರಗಳ ಕಾಲ ಮುಂದೂಡಿದೆ. ಆದರೆ, ಪರೀಕ್ಷೆಯ ಮುಂದಿನ ದಿನಾಂಕವನ್ನು ಇನ್ನೂ ಪ್ರಕಟಿಸಿಲ್ಲ. ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್ ಸೂಕ್ತ ನಡವಳಿಕೆ ಕಾಪಾಡುವುದು ಸೇರಿದಂತೆ ಎಲ್ಲಾ ಶಿಷ್ಟಾಚಾರಗಳನ್ನು ಅನುಸರಿಸಿ ಮತ್ತು ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಪರೀಕ್ಷೆ ಆಯೋಜಿಸಲಾಗುವುದು. ಜತೆಗೆ, ಅಭ್ಯರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿಗೆ ಹೆಚ್ಚುವರಿ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದು ಈ ಹಿಂದೆ ಕೇಂದ್ರ ಸರಕಾರ ಹೇಳಿತ್ತು.

click me!