CBSE ಗಣಿತದಲ್ಲಿ ಪುತ್ರನಿಗೆ ನೂರಕ್ಕೆ 100 ಅಂಕ, ಮಗ ಕಾಫಿ ಮಾಡೋ ಫೋಟೋ ಹಂಚಿಕೊಂಡ ಬೆಂಗಳೂರು ಹೃದ್ರೋಗ ತಜ್ಞ

Published : May 15, 2024, 05:38 PM IST
CBSE ಗಣಿತದಲ್ಲಿ ಪುತ್ರನಿಗೆ ನೂರಕ್ಕೆ 100 ಅಂಕ, ಮಗ ಕಾಫಿ ಮಾಡೋ ಫೋಟೋ ಹಂಚಿಕೊಂಡ ಬೆಂಗಳೂರು ಹೃದ್ರೋಗ ತಜ್ಞ

ಸಾರಾಂಶ

ಬೆಂಗಳೂರಿನ ಹೃದ್ರೋಗ ತಜ್ಞರೊಬ್ಬರು ತಮ್ಮ ಪುತ್ರ ಸಿಬಿಎಸ್‌ಸಿ 10 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಬಗ್ಗೆ ಬರೆದುಕೊಂಡು ಟೀ ಮಾಡುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ಹೃದ್ರೋಗ ತಜ್ಞರೊಬ್ಬರು ತಮ್ಮ ಪುತ್ರ ಸಿಬಿಎಸ್‌ಸಿ 10 ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಸಾಧನೆ ಮಾಡಿರುವ ಬಗ್ಗೆ ಬರೆದುಕೊಂಡಿದ್ದು, ಗಣಿತದಲ್ಲಿ 100/100 ಅಂಕಗಳನ್ನು ತೆಗೆದುಕೊಂಡಿದ್ದಾನೆ.  ಮಗನ ಸಾಧನೆಗಳ ಬಗ್ಗೆ ತಂದೆ, ಬೆಂಗಳೂರಿನ ಹೃದ್ರೋಗ ತಜ್ಞರು ಹಂಚಿಕೊಂಡ ಪೋಸ್ಟ್ ವೈರಲ್ ಆಗಿದೆ. 

ಟೈಗರ್ ನೆಸ್ಟ್ (ಭೂತಾನ್‌) ಕಠಿಣವಾದ ಟ್ರೆಕ್ಕಿಂಗ್ ಮಾಡಿದ ಬಳಿಕ ಮಗ ನಮಗಾಗಿ ಕಾಫಿ ಮಾಡುತ್ತಿದ್ದಾನೆ. CBSE 10 ನೇ ಬೋರ್ಡ್ ಪರೀಕ್ಷೆಗಳಲ್ಲಿ ಒಟ್ಟು 96.6% ಅಂಕಗಳನ್ನು ಗಳಿಸಿದ್ದಾನೆ ಎಂದು ಹಂಚಿಕೊಳ್ಳಲು ನನಗೆ ಸಂತೋಷವಾಗುತ್ತಿದೆ. ಗಣಿತದಲ್ಲಿ 100ಕ್ಕೆ ನೂರು ಅಂಕ ಪಡೆದಿದ್ದಾನೆ. ನಾವು ಟೈಗರ್ ನೆಸ್ಟ್ ದೇವಸ್ಥಾನದಿಂದ ಮರಳಿ ಬಂದ ನಂತರ ನಮಗೆ ಅವರ ಫಲಿತಾಂಶದ ಬಗ್ಗೆ ತಿಳಿಯಿತು ಎಂದು ಬೆಂಗಳೂರು ಮಾರತಹಳ್ಳಿಯಲ್ಲಿ ಕಾವೇರಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ದೀಪಕ್‌ ಕೃಷ್ಣ ಮೂರ್ತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕರ್ನಾಟಕಕ್ಕೆ ಪ್ರಥಮ ಸ್ಥಾನ ಪಡೆದ ಅಂಕಿತಾ ಬಸಪ್ಪಗೆ 10 ಲಕ್ಷ..!

ಈ ಫೋಟೋಗೆ ಹಲವು ಮಂದಿ ಕಮೆಂಟ್ ಮಾಡಿದ್ದು, ಪುತ್ರನ ಹೆಸರೇನು ಮುಂದೆ ಏನು ಓದುತ್ತಾನೆ ಎಂದು ಕೇಳಿದ್ದಾರೆ ಇದಕ್ಕೆ ಉತ್ತರಿಸಿರುವ ಡಾ. ದೀಪಕ್‌ ಕೃಷ್ಣಮೂರ್ತಿ ಮಗನ ಹೆಸರು ಆದಿತ್ಯ, ಮುಂದೆ ಮೆಡಿಕಲ್ ಓದುತ್ತಾನೆ ಎಂದಿದ್ದಾರೆ. ಡಾಕ್ಟರ್ ಮಾಡಿರುವ ಈ ಪೋಸ್ಟ್ 4 ಸಾವಿರದಷ್ಟು ಲೈಕ್‌ ಪಡೆದಿದ್ದರೆ, 80 ಸಾವಿರ ವೀಕ್ಷಣೆಯನ್ನು ಪಡೆದಿದೆ.

ಇತ್ತೀಚೆಗೆ ಪ್ರಕಟವಾದ CBSE 10 ನೇ ತರಗತಿ ಪರೀಕ್ಷೆಯ ಫಲಿತಾಂಶದಲ್ಲಿ, 11,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತದಲ್ಲಿ ನೂರಕ್ಕೆ 100 ಅಂಕಗಳನ್ನು ಗಳಿಸಿದ್ದಾರೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) 10 ಮತ್ತು 12 ನೇ ತರಗತಿಗಳ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಮೇ 13 ರಂದು ಪ್ರಕಟಿಸಿತ್ತು. ಮಂಡಳಿಯು ಟಾಪರ್‌ಗಳ ಮೆರಿಟ್ ಪಟ್ಟಿಯನ್ನು ತಡೆಹಿಡಿದಿದ್ದು, ಅನಾರೋಗ್ಯಕರ ಸ್ಪರ್ಧೆಯನ್ನು ತಪ್ಪಿಸಲು ಯಾವುದೇ ಹೆಸರನ್ನು ಘೋಷಿಸಲಿಲ್ಲ.

ದೇಶದಾದ್ಯಂತ ಬಾಂಬ್‌ ಬೆದರಿಕೆ ಬೆನ್ನಲ್ಲೇ ಬೆಂಗಳೂರಿನ ಖಾಸಗಿ ಶಾಲೆಗೆ ಮಧ್ಯರಾತ್ರಿ ಬಾಂಬ್ ಬೆದರಿಕೆ

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ