ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಬಿ.ಇಡ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ಕೇಂದ್ರದ 11ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಉಪನ್ಯಾಸವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಉದ್ಘಾಟಿಸಿದರು.
ಧಾರವಾಡ (ಮಾ.11) : ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಾಗೂ ಬಿ.ಇಡ್ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ(National Science Day) ಹಾಗೂ ವಿಜ್ಞಾನ ಕೇಂದ್ರದ 11ನೇ ವಾರ್ಷಿಕೋತ್ಸವ ಅಂಗವಾಗಿ ನಡೆದ ಉಪನ್ಯಾಸವನ್ನು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ(Basavaraj Horatti)ಉದ್ಘಾಟಿಸಿದರು.
ಉತ್ತರ ಕರ್ನಾಟಕ ಭಾಗದಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆಯ ಅನಿವಾರ್ಯತೆ ಇತ್ತು. ವಿಜ್ಞಾನಿಗಳೊಟ್ಟಿಗೆ ಚರ್ಚಿಸಿ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಮಂತ್ರಿಗಳಿದ್ದಾಗ ವಿಜ್ಞಾನ ಕೇಂದ್ರದ ಸ್ಥಾಪನೆಗೆ ಅನುದಾನ ತಂದು ಕೇಂದ್ರ ಸ್ಥಾಪಿಸಿದ್ದು ಸಾರ್ಥಕವಾಗಿದೆ. ಕಳೆದ 11 ವರ್ಷಗಳಿಂದ ವಿಜ್ಞಾನ ಕೇಂದ್ರ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ವಿಜ್ಞಾನ ಮತ್ತು ವೈಜ್ಞಾನಿಕತೆಯನ್ನು ತಲುಪಿಸುವಲ್ಲಿ ಯಶಸ್ವಿಯಾಗಿದೆ ಎಂದರು.
Karnataka election 2023: ಕಾಂಗ್ರೆಸ್ ಪಕ್ಷದ ಪಾಲಾಗುವರೇ ಲಿಂಬಿಕಾಯಿ, ಚಿಕ್ಕನಗೌಡರ?
ಕವಿವಿ ನಿವೃತ್ತ ಪ್ರಾಧ್ಯಾಪಕ ಪ್ರೊ. ಜೆ.ಆರ್. ಟೋಣನ್ನವರ, ಸರ್. ಸಿ.ವಿ. ರಾಮನ್ ಜೀವನ ಹಾಗೂ ಸಂಶೋಧನೆ, ಬಾಲ್ಯ, ಕಾಲೇಜು ಶಿಕ್ಷಣ ಹಾಗೂ ನೋಬೆಲ್ ಪಾರಿತೋಷಕ ಪಡೆಯುವ ತನಕ ಅವರಿಗೆ ತಮ್ಮ ಕೆಲಸದಲ್ಲಿದ್ದ ಶ್ರದ್ಧೆ ಮತ್ತು ಪರಿಶ್ರಮದ ಕುರಿತು ವಿವರಣೆ ನೀಡಿದರು.
ಕವಿವಿ ಮೌಲ್ಯಮಾಪನ ಕುಲಸಚಿವ ಡಾ. ಸಿ. ಕೃಷ್ಣಮೂರ್ತಿ, ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಬಗ್ಗೆ ಮಾತನಾಡಿ, ಯಾವುದೇ ಸೌಲಭ್ಯಗಳು ಇಲ್ಲದಂತ ಬ್ರಿಟಿಷರ ಕಾಲದಲ್ಲಿ ಅದ್ಭುತ ಸಂಶೋಧನೆ ಮಾಡಿ ನೊಬೆಲ್ ಪಾರಿತೋಷಕ ಪಡೆದ ಸರ್ ಸಿ.ವಿ. ರಾಮನ್ ಸಂಶೋಧನೆ ಸ್ಮರಣೀಯ ಎಂದರು.
ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಎನ್.ಎಲ್. ತೇರದಾಳ ಮಾತನಾಡಿದರು. ಡಾ. ವೀರಣ್ಣ ಡಿ. ಬೋಳಿಶೆಟ್ಟಿ ವಾರ್ಷಿಕ ವರದಿ ಪ್ರಸ್ತುತ ಪಡಿಸಿದರು. ಪ್ರೊ. ಯು.ಎಸ್. ರಾಯಕರ, ರೂಪಾ ವಸ್ತ್ರದ ಇದ್ದರು. ವಿಶಾಲಾಕ್ಷಿ ಎಸ್.ಜೆ. ನಿರೂಪಿಸಿದರು. ಸಿ.ಎಫ್.ಚಂಡೂರ ವಂದಿಸಿದರು.
ಪದೇಪದೆ ರಾಜ್ಯಕ್ಕೆ ಭೇಟಿ ನೀಡುವ ಮೋದಿದು ಚುನಾವಣೆ ಗಿಮಿಕ್: ಒಂದುಸಲವೂ ಜನರ ಸಮಸ್ಯೆ ಕೇಳಲಿಲ್ಲ