ಆಂಧ್ರ : 2021-22ನೇ ಸಾಲಿನಿಂದ ಪದವಿ ವ್ಯಾಸಂಗಕ್ಕೆ ಇಂಗ್ಲೀಷ್ ಮೀಡಿಯಂ ಕಡ್ಡಾಯ

By Suvarna NewsFirst Published Jun 16, 2021, 11:13 AM IST
Highlights
  • 2021-22ನೇ ಸಾಲಿನಲ್ಲಿ ಪದವಿಗೆ ಇಂಗ್ಲಿಷ್ ಮೀಡಿಯಂ ಕಡ್ಡಾಯ
  • ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಇಂಗ್ಲೀಷ್ ಮೀಡಿಯಂ ಕಡ್ಡಾಯ
  • ಖಾಸಗಿ-ಸರ್ಕಾರಿ ಕಾಲೇಜುಗಳಲ್ಲಿಯೂ ಇಂಗ್ಲೀಷ್ ಮೀಡಿಯಂ ಕಡ್ಡಾಯಗೊಳಿಸಿದ ಸರ್ಕಾರ

ಅಮರಾವತಿ (ಜೂ.16): ಪದವಿ ತರಗತಿಗಳಿಗೆ ಸರ್ಕಾರಿ ಹಾಗೂ ಖಾಸಗಿ ಕಾಲೇಜುಗಳಲ್ಲಿ ಆಂಧ್ರ ಪ್ರದೇಶ ಸರ್ಕಾರ 2021 - 22ನೇ ಸಾಲಿನಿಂದ ಇಂಗ್ಲೀಷ್ ಮೀಡಿಯಂ ಕಡ್ಡಾಗೊಳಿಸಲಾಗುತ್ತಿದೆ.

ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪದವಿ ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಮೀಡಿಯಂ ಕಡ್ಡಾಯ ಗೊಳಿಸಲಾಗುತ್ತಿದೆ. ಇದರಿಂದ ಔದ್ಯೋಗಿಕ ಕ್ಷೇತ್ರಗಳಲ್ಲಿಯೂ ಅವಕಾಶಗಳು ಲಭಿಸಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ. 

ಮಲಯಾಳಂ ಬೇಡ, ಹಿಂದಿ- ಇಂಗ್ಲೀಷ್ ಮಾತ್ರ ಸಾಕು: ಭುಗಿಲೆದ್ದ ವಿವಾದ, ಆದೇಶ ವಾಪಾಸ್!

ಆದರೆ ಈ ಹಿಂದೆ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿತ್ತು. ಅಲ್ಲದೇ ವಿರೋಧ ಪಕ್ಷಗಳು  ಇಂಗ್ಲೀಷ್ ಮೀಡಿಯಂ ಕಡ್ಡಾಯಗೊಳಿಸುವ ಪ್ರಕ್ರಿಯೆಗೆ ವಿರೋಧ ವ್ಯಕ್ತಪಡಿಸಿದ್ದವು. 

ಆದರೆ ಜೂನ್ 15 ರಂದು ಆಂಧ್ರ ಪ್ರದೇಶ ಉನ್ನತ ಶಿಕ್ಷಣ ಇಲಾಖೆ ಆದೇಶ ನೀಡಿದ್ದು ಇಂಗ್ಲೀಷ್ ಮೀಡಿಯಂ ಕಡ್ಡಾಯದಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಅಲ್ಲದೇ ಮುಂದೆ ಉದ್ಯೋಗ ಪಡೆಯುವ ದೃಷ್ಟಿಯಿಂದಲೂ ಉತ್ತಮ ಮಾರ್ಗವಾಗಿದೆ ಎಂದು ಹೇಳಿದೆ. 

click me!