ದ್ವಿತೀಯ ಪಿಯು ಪ್ರವೇಶ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

By Kannadaprabha NewsFirst Published Jun 16, 2021, 9:05 AM IST
Highlights

* ದ್ವಿತೀಯ ಪಿಯು ಪ್ರವೇಶಕ್ಕೆ ಜು.15-ಆ.15ರವರೆಗೆ ಅವಕಾಶ
* ಜು.15ರಿಂದ ಆನ್‌ಲೈನ್‌ ತರಗತಿ ಆರಂಭ
* ಪ್ರಥಮ ಪಿಯು ಪ್ರವೇಶ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ನಂತರದಲ್ಲಿ ಪ್ರಕಟ 
 

ಬೆಂಗಳೂರು(ಜೂ.16): 2021​-22ನೇ ಸಾಲಿನ ದ್ವಿತೀಯ ಪಿಯು ತರಗತಿಗಳ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಪದವಿ ಪೂರ್ವ ಶಿಕ್ಷಣ ಇಲಾಖೆಯು ತಾತ್ಕಾಲಿಕ ರೂಪಿಸಿ ಪ್ರಕಟಿಸಿದೆ. ಇದರ ಪ್ರಕಾರವಾಗಿ ಜು.15ರಿಂದ ದ್ವಿತೀಯ ಪಿಯು ಆನ್‌ಲೈನ್‌ ತರಗತಿಗಳನ್ನು ಆರಂಭಿಸಬೇಕಿದೆ. 

ಪ್ರಥಮ ಪಿಯು ಪ್ರವೇಶವನ್ನು ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡ ನಂತರದಲ್ಲಿ ಪ್ರಕಟಿಸುವುದಾಗಿ ತಿಳಿಸಿದೆ. ದ್ವಿತೀಯ ಪಿಯು ಪ್ರವೇಶಕ್ಕೆ ಜು.15ರಿಂದ ಆ.15ರವರೆಗೆ ಅವಕಾಶ ಇರಲಿದೆ. ಆನಂತರದಲ್ಲಿ ದಂಡ ಶುಲ್ಕ ಪಾವತಿಸಿ ಪ್ರವೇಶ ಪಡೆಯಬೇಕಾಗಿರುತ್ತದೆ. ಇನ್ನೂ ಪ್ರಥಮ ಹಾಗೂ ದ್ವಿತೀಯ ಪಿಯು ಪ್ರವೇಶಕ್ಕೆ 2020​-21ನೇ ಸಾಲಿಗೆ ನಿಗದಿ ಪಡಿಸಿದ ಶುಲ್ಕವನ್ನು ಸಂಗ್ರಹಿಸುವಂತೆ ಸೂಚಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಶಾಲೆಗಳ ಪ್ರವೇಶ ಪ್ರಕ್ರಿಯೆ ಆರಂಭ

ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ 2021 ಜನವರಿ 1ರಿಂದ ಭೌತಿಕ ತರಗತಿಗಳನ್ನು ಆರಂಭಿಸಲಾಗಿತ್ತು. ಅವುಗಳಲ್ಲಿ ಸಕಾರಾತ್ಮಕವಾಗಿ ಭಾಗವಹಿಸಲು ಸಾಧ್ಯವಾಗಿರುವುದಿಲ್ಲ. ಭೌತಿಕ ತರಗತಿಗಳು ನಡೆಯದಿರುವುದರಿಂದ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಅದರಲ್ಲೂ ವಿಶೇಷವಾಗಿ ಗ್ರಾಮೀಣ ಪ್ರದೇಶಗಳ ಕಲಿಕೆಯಲ್ಲಿ ಕೊರತೆ ಉಂಟಾಗಿರುತ್ತದೆ. ಈ ಹಿನ್ನೆಲೆಯಲ್ಲಿ 2021​-22ನೇ ಸಾಲಿಗೆ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರಿ​ರೆಕಾರ್ಡಿಡ್‌ ಯುಟ್ಯೂಬ್‌ ಮೂಲಕ ತರಗತಿಗಳನ್ನು ಜು.15ರಿಂದ ಆರಂಭಿಸಲಾಗುವುದು. ಭೌತಿಕ ತರಗತಿಗಳನ್ನು ಆರಂಭಿಸುವ ಬಗ್ಗೆ ಮುಂದಿನ ದಿನಗಳಲ್ಲಿ ವೇಳಾಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಖೆ ನಿರ್ದೇಶಕಿ ಆರ್‌.ಸ್ನೇಹಲ್‌ ತಿಳಿಸಿದ್ದಾರೆ.
 

click me!