30 ವರ್ಷದ ನಂತರ ಪಿಯುಸಿ ಪರೀಕ್ಷೆ ಬರೆದು ಪಾಸ್ ಆದ ಸಾರಾ ಮಹೇಶ್ ಪತ್ನಿ!

By Santosh NaikFirst Published Jun 18, 2022, 6:48 PM IST
Highlights

1993ರಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪಾಸ್ ಆಗಿದ್ದ ಸಾರಾ ಮಹೇಶ್ ಅವರ ಪತ್ನಿ ಅನಿತಾ ಆ ಬಳಿಕ ಅನಿವಾರ್ಯ ಕಾರಣಗಳಿಂದ ವಿದ್ಯಾಭ್ಯಾಸ ಮುಂದುವರಿಸಲು ಸಾಧ್ಯವಾಗಿರಲಿಲ್ಲ. ಈಗ ಖಾಸಗಿಯಾಗಿ ಅಭ್ಯಾಸ ಮಾಡಿ ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ.

ಮೈಸೂರು (ಜೂನ್ 18) : 2021-22ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷಾ ಫಲಿತಾಂಶ (2nd Puc Result) ಪ್ರಕಟಿಸಿದ್ದು ಶಾಸಕರ ಪತ್ನಿ ಪರೀಕ್ಷೆ ಪಾಸು ಮಾಡಿ ಖುಷಿ ಪಟ್ಟಿದ್ದಾರೆ. ಕೆ ಆರ್ ನಗರ ಶಾಸಕ ಸಾ.ರಾ.ಮಹೇಶ್ ಪತ್ನಿ ಅನಿತಾ ಸಾ.ರಾ.ಮಹೇಶ್ (Anita Sa Ra Mahesh,) ಉತ್ತೀರ್ಣರಾಗಿ ಖುಷಿ ಪಟ್ಟಿದ್ದಾರೆ. 

ಬರೋಬ್ಬರಿ 30 ವರ್ಷಗಳ ನಂತರ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಉತ್ತೀರ್ಣ ಆಗಿರುವುದು ವಿಶೇಷವಾಗಿದೆ. ಅನಿತಾ ಅವರು ಕಲಾ ವಿಭಾಗದಲ್ಲಿ 600ಕ್ಕೆ 418 ಅಂಕ ಪಡೆದು ಪ್ರಥಮ ದರ್ಜೆಯಲ್ಲಿ

ತೇರ್ಗಡೆಯಾಗಿದ್ದಾರೆ. ಅನಿತಾ ಸಾ.ರಾ.ಮಹೇಶ್ ಅವರು1993 ರಲ್ಲಿ ಎಸ್ ಎಸ್ಎಲ್‌ಸಿ (SSLC Exam) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದರು. ನಂತರ ಮುಂದಿನ ವಿದ್ಯಾಭ್ಯಾಸ ಮುಂದುವರಿಸಿರಲಿಲ್ಲ. 

ಕಾಂಗ್ರೆಸ್‌ ನಾಯಕರ ವಿರುದ್ಧ ಬಿಜೆಪಿ ಸೇಡಿನ ರಾಜಕೀಯ: ಆರ್‌. ಧ್ರುವನಾರಾಯಣ್‌

ಇದೀಗ ಖಾಸಗಿಯಾಗಿ ಪರೀಕ್ಷೆ ಬರೆದು ಪಾಸಾಗಿದ್ದಾರೆ. ಇವರು ತಮ್ಮಪತಿಯ ರಾಜಕೀಯ ಜಂಜಾಟದ ಜೊತೆಗೆ ತಮ್ಮ ಹಿರಿಯ ಪುತ್ರ ಧನುಷ್ ಎಂ.ಬಿ.ಬಿ.ಎಸ್‌, ಉನ್ನತ ಶಿಕ್ಷಣ ಮುಗಿಸಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಎಂ.ಎಸ್‌, ಎಂ.ಡಿ ಮಾಡುತ್ತಿದ್ದಾರೆ. ಅಲ್ಲದೆ ಕಿರಿಯ ಪುತ್ರ ಜಯಂತ್ ಉದ್ಯಮಿಯಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ತಂದೆ ಸಾ.ರಾ.ಮಹೇಶ್ ಅವರಿಗೆ ರಾಜಕೀಯವಾಗಿ ಬೆನ್ನೆಲುಬಾಗಿ ನಿಂತಿದ್ದಾರೆ. 

MYSURU ಅರಮನೆಯಲ್ಲಿ ಪ್ರಧಾನಿ ಯೋಗ ಕಾರ್ಯಕ್ರಮ: ರಾಜ ಮನೆತನದ ಕುಟುಂಬಕ್ಕೆ ಆಹ್ವಾನ

ಇದೆಲ್ಲರ ಮಧ್ಯೆ ಶಾಸಕ ಸಾ.ರಾ.ಮಹೇಶ್ ಅವರ ಪತ್ನಿ ಶ್ರೀಮತಿ ಅನೀತಾ ಮಹೇಶ್ ಅವರು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದು ಎಲ್ಲರಲ್ಲೂ ಸಂತಸ ತರುಸಿದೆ. ಶಾಸಕರ ಪತ್ನಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.

click me!