ವಿಜಯನಗರ (ಜೂನ್.18) : ನಿರಂತರ ಪರಿಶ್ರಮ ಮತ್ತು ಗೆಲ್ಲಬೇಕೆನ್ನುವ ಛಲ ಇದ್ರೇ. ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಈ ಕಾಲೇಜಿನ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ. ಯಾಕಂದ್ರೇ ಒಂದಲ್ಲ ಎರಡಲ್ಲ ಬರೋಬ್ಬರಿ ಏಳು ವರ್ಷಗಳ ಕಾಲ ( ಕೊರೋನಾ ಕಳೆದ ವರ್ಷ ಬಿಟ್ಟು ) ಯಾವುದೇ ಒಂದು ಕಾಲೇಜಿನ ವಿದ್ಯಾರ್ಥಿಗಳು ನಿರಂತರವಾಗಿ ರ್ಯಾಂಕ್ ಬರೋದು ಅಂದ್ರೇ, ಅದು ಸುಲಭದ ಮಾತಲ್ಲ. ಇದಕ್ಕೆ ವಿದ್ಯಾರ್ಥಿಗಳ ಶ್ರಮವಷ್ಟೇ ಅಲ್ಲ ವಿದ್ಯಾರ್ಥಿಗಳ ಜೊತೆ ಪೋಷಕರ ಮತ್ತು ಶಿಕ್ಷಕರ ಶ್ರಮವೂ ಪ್ರಮುಖವಾಗಿರುತ್ತದೆ. ಪಿಯುಸಿ ಫಲಿತಾಂಶದಲ್ಲಿ ದಾಖಲೆ ಬರೆದ ಕೊಟ್ಟೂರಿನ ಇಂದೂ ಪಿಯೂ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ ಕುರಿತ ಒಂದು ವರದಿ ಇಲ್ಲಿದೆ
ದಾಖಲೆ ಬರೆದ ಕೊಟ್ಟೂರು ಇಂದು ಕಾಲೇಜು: ಕಲಾ ವಿಭಾಗದಲ್ಲಿ ಮೊದಲ ಎರಡು ರ್ಯಾಂಕ್ ಸೇರಿದಂತೆ ಟಾಪ್ ಟೆನ್ ನಲ್ಲಿ ಆರು ವಿದ್ಯಾರ್ಥಿಗಳು ಸ್ಥಾನವನ್ನು ಗಿಟ್ಟಿಸಿಕೊಳ್ಳುವ ಮೂಲಕ ಕೊಟ್ಟೂರಿನ ಇಂದೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ದಾಖಲೆ ಬರೆದಿದ್ದಾರೆ. 2006-07 ರಲ್ಲಿ ಕೊಟ್ಟೂರು ಪಟ್ಟಣದ ಹೊರವಲಯದಲ್ಲಿ ಆರಂಭವಾದ ಇಂದೂ ಪಿಯೂ ಕಾಲೇಜಿಜ 2015ರ ಬಳಿಕ ರಾಜ್ಯಮಟ್ಟದಲ್ಲಿ ಮಿಂಚ ತೊಡಗಿದೆ. ಇದಕ್ಕೆ ಕಾರಣ ಇಲ್ಲಿಯ ಫಲಿತಾಂಶ. ಹೌದು, 2015ರಲ್ಲಿ ಮೊದಲ ಬಾರಿ ಕಲಾ ವಿಭಾಗದಲ್ಲಿ ರ್ಯಾಂಕ್ ಪಡೆಯೋದಕ್ಕೆ ಆರಂಭ ಮಾಡಿದ ಇಲ್ಲಿಯ ವಿದ್ಯಾರ್ಥಿಗಳು ಸತತ ವಾಗಿ ಏಳು ವರ್ಷಗಳ ಕಾಲ ಅದನ್ನು ಮುಂದುವರೆಸಿದ್ದಾರೆ.
undefined
ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ರಾಜ್ಯದ ಇಬ್ಬರು ವಿದ್ಯಾರ್ಥಿಗಳು ಆತ್ಮಹತ್ಯೆ!
ಈ ಬಾರಿ ಶ್ವೇತಾ ಮತ್ತು ಸಹನಾ ಮೊದಲೇರಡು ಸ್ಥಾನದಲ್ಲಿದ್ರೇ, ಮೌನೇಶ್, ಸಮೀರ್, ಶಾಂತಾ, ಕಾವೇರಿ, ಪೂರ್ಣಿಮಾ 6ರಿಂದ 10ನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ಮೂಲಕ ಕಾಲೇಜಿನ ಕೀರ್ತಿಯನ್ನಷ್ಟೇ ರಾಜ್ಯಮಟ್ಟದಲ್ಲಿ ಪಸರಿಸುವಂತೆ ಮಾಡಿದ್ದಾರೆ. ಮೊದಲ ರ್ಯಾಂಕ್ ಸಹನಾ ಮತ್ತು ಆರನೇ ರ್ಯಾಂಕ್ ಪಡೆದ ( ಪಂಚಮಸಾಲಿ ಕಾಲೇಜು) ಪೂರ್ಣಿಮಾ ಸುವರ್ಣ ನ್ಯೂಸ್ ಜೊತೆಗೆ ಮಾತನಾಡಿ ತಮ್ಮ ಸಾಧನೆಗೆ ಕಾಲೇಜು ಆಡಳಿತ ಮಂಡಳಿ ಮತ್ತು ಶಿಲ್ಷಕ ವೃಂದ ಕಾರಣವೆಂದರು.
ಕಲಾ ವಿಭಾಗ ಮಾತ್ರವಲ್ಲ ಸೈನ್ಸ್ ನಲ್ಲೂ ಮೇಲುಗೈ: ಇನ್ನೂ ಕೇವಲ ಕಲಾ ವಿಭಾಗದಲ್ಲಿ ಮಾತ್ರವಲ್ಲದೇ ಸೈನ್ಸ್ ನಲ್ಲಿ ನಿಂಶಾಂಕ್ ಎನ್ನುವ ವಿದ್ಯಾರ್ಥಿ ಟಾಪ್ 5 ನಲ್ಲಿ ಬರೋ ಮೂಲಕ ಕಾಲೇಜಿನ ಗೌರವವನ್ನು ಹೆಚ್ಚಿಸಿದ್ದಾರೆ. ಇನ್ನೂ ಕಳೆದ ಬಾರಿ ಪಿಯೂ ಪರೀಕ್ಷೆ ನಡೆಯದೇ ಎಲ್ಲ ವಿದ್ಯಾರ್ಥಿಗಳನ್ನು ಪಾಸ್ ಮಾಡಲಾಗಿತ್ತು. ಅದು ಇಲ್ಲಿಯ ವಿದ್ಯಾರ್ಥಿಗಳಿಗಷ್ಟೇ ಅಲ್ಲ. ಇಲ್ಲಿರೋ ಸಿಬ್ಬಂದಿ ಮತ್ತು ಆಡಳಿತ ಮಂಡಳಿಗೂ ಬೇಸರವನ್ನು ಮೂಡಿಸಿತ್ತು.
2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ
ಆದ್ರೆ ಈ ಬಾರಿ ಕಳೆದ ಬಾರಿಗಿಂತ ಹೆಚ್ಚು ಫಲಿತಾಂಶವನ್ನು ಪಡೆಯೋ ಮೂಲಕ ಇಲ್ಲಿಯ ವಿದ್ಯಾರ್ಥಿಗಳು ಸಾಧಿಸಿ ತೋರಿಸಿದ್ದಾರೆ. ಇನ್ನೂ ನಮ್ಮ ಕಾಲೇಜಿನ ವಿದ್ಯಾರ್ಥಿಗಳು ರ್ಯಾಂಕ್ ಬಂದಿದ್ದಾರೆ ಎನ್ನುವ ವಿಷಯ ತಿಳಿಯುತ್ತಲೇ ಕಾಲೇಜಿನ ವಿದ್ಯಾರ್ಥಿಗಳು ಸಂಭ್ರಮಿಸಿದ್ರು. ಮಕ್ಕಳಿಗೆ ಸಿಹಿ ತಿನಿಸೋ ಮೂಲಕ ವಿದ್ಯಾರ್ಥಿಗಳ ಸಾಧನೆ ಕೊಂಡಾಡಿದ್ರು. ಕಾಲೇಜು ಪ್ರಾಂಶುಪಾಲರಾದ ವೀರಭದ್ರಪ್ಪ ( ಬದ್ರಿ) ವಿದ್ಯಾರ್ಥಿಗಳ ಸಾಧನೆ ಕೊಂಡಾಡಿದ್ರು.
ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳ ಸಾಧನೆ: ಇನ್ನೂ ಈ ಕಾಲೇಜಿನಲ್ಲಿ ವ್ಯಾಸಂಗ ಮಾಡೋ ಬಹುತೇಕ ವಿದ್ಯಾರ್ಥಿಗಳು ಬಡ ಮತ್ತು ಮದ್ಯಮ ವರ್ಗದವ ರಾಗಿದ್ದು, ಮಕ್ಕಳ ಸಾಧನೆ ನಿಜಕ್ಕೂ ಮೆಚ್ಚುವಂತಾದ್ಧಾಗಿದೆ. ಅದೇನೆ ಇರಲಿ ಸಾಧಿಸಬೇಕೆನ್ನುವ ಛಲ ಇದ್ರೇ ಏನನ್ನಾದ್ರೂ ಮಾಡಬಹುದು ಅನ್ನೋದಕ್ಕೆ ಈ ವಿದ್ಯಾರ್ಥಿಗಳು ಸಾಕ್ಷಿಯಾಗಿದ್ದಾರೆ.