Dharwad; ನಾಗರಾಜ ಗೌರಿ ಫೌಂಡೇಶನ್‌ನಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ಉಚಿತ ತರಬೇತಿ

By Suvarna News  |  First Published Jun 18, 2022, 5:54 PM IST

ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿ ಸಹಭಾಗಿತ್ವದಲ್ಲಿ ನಾಗರಾಜ ಗೌರಿ ಫೌಂಡೇಶನ್‌ನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಆಸಕ್ತರು ಅರ್ಜಿ ಸಲ್ಲಿಸಬಹುದು.


ವರದಿ : ಪರಮೇಶ್ವರ ಅಂಗಡಿ ಏಷ್ಯಾನೆಟ್ ಸುವರ್ಣ ನ್ಯೂಸ್  

ಧಾರವಾಡ (ಜೂನ್ 18) : ಯುವ ಜನತೆಯ ಆಶಾಕಿರಣ, ಸಮಾಜ ಸೇವಕ ಹಾಗೂ ಶಿಕ್ಷಣ ಪ್ರೇಮಿ ಮತ್ತು ಕಾಂಗ್ರೆಸ್‌ನ ರಾಣಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷ ನಾಗರಾಜ ಗೌರಿ ಅವರು ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿ ಸಹಭಾಗಿತ್ವದಲ್ಲಿ ನಾಗರಾಜ ಗೌರಿ ಫೌಂಡೇಶನ್‌ನಿಂದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು ಎಂದು ತಿಳಿಸಿದರು.

Tap to resize

Latest Videos

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಫೌಂಡೇಶನ್‌ನಿಂದ ಈಗಾಗಲೇ ಹಲವಾರು ಸಮಾಜ ಸೇವಾ ಕಾರ್ಯ ಮಾಡಲಾಗಿದೆ. 2020_21ರ ಲಾಕ್‌ಡೌನ್ ಸಂದರ್ಭದಲ್ಲಿ ಕರೊನಾ ರೋಗಿಗಳಿಗೆ ಉಚಿತ ಆ್ಯಂಬುಲೆನ್ಸ್ ಸೇವೆ ಮತ್ತು ಸಮಾಜದ ಅಗತ್ಯವುಳ್ಳವರಿಗೆ ಉಚಿತ ಆಹಾರದ ಕಿಟ್ ವಿತರಣೆ ಮಾಡಲಾಗಿದೆ.

2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ

ಈ ಬಾರಿ ಯುವ ಜನತೆಗೆ ಅನುಕೂಲವಾಗುವಂತೆ ಕೆಎಎಸ್, ಪಿಎಸ್‌ಐ, ಪಿಸಿ, ಎಫ್‌ಡಿಎ, ಎಸ್‌ಡಿಎ, ಪಿಡಿಒ, ಜಿಪಿಎಸ್‌ಟಿಆರ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡಲಾಗುವುದು. ಜೂ. 20 ರಿಂದ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಜುಲೈ 10 ರವರೆಗೆ ಅರ್ಜಿ ಸಲ್ಲಿಸಬಹುದು ಎಂದರು.

ಸುತಗಟ್ಟಿ, ಅಮರಗೋಳ, ಸತ್ತೂರು, ನವಲೂರು ಸೇರಿದಂತೆ 10_12 ಗ್ರಾಮಗಳ ಯುವಕರಿಂದ ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಬೇಡಿಕೆ ಇತ್ತು. ಯುವ ಜನತೆಯ ವಿದ್ಯಾರ್ಹತೆಗೆ ತಕ್ಕ ನೌಕರಿ ಸಿಗುತ್ತಿಲ್ಲ. ಕೋವಿಡ್‌ನಿಂದಾಗಿ ಜೀವನ ನಿರ್ವಹಣೆ ಕಷ್ಟಕರವಾಗಿದ್ದು, ತರಬೇತಿ ಪಡೆಯುವುದು ದೂರದ ಮಾತಾಗಿದೆ.

VIJYANAGARA; ಫಲಿತಾಂಶದಲ್ಲಿ ದಾಖಲೆ ಬರೆದ ಕೊಟ್ಟೂರಿನ‌ ಇಂದೂ ಪಿಯು ಕಾಲೇಜು

ಇದನ್ನು ಮನಗಂಡು ಮೊದಲ ಬ್ಯಾಚ್‌ನಲ್ಲಿ ಕನಿಷ್ಠ 1,000 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು. ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿಯ 3 ಶಾಖೆಗಳಲ್ಲಿ ತರಬೇತಿಯನ್ನು ಫೌಂಡೇಶನ್‌ನಿಂದ ಉಚಿತವಾಗಿ ನೀಡಲಾಗುವುದು.

 ತರಬೇತಿಯ ನಂತರ ಉದ್ಯೋಗ ದೊರಕಿಸಿಕೊಡಲು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು ಎಂದರು.ಸ್ಪರ್ಧಾ ವಿಕಾಸ ಕರಿಯರ್ ಅಕಾಡೆಮಿಯ ಅಹ್ಮದ್ ಮುಜಾವರ, ದೀಪಾ ಗೌರಿ, ಪಾಲಿಕೆ ಸದಸ್ಯೆ ಕವಿತಾ ಕಬ್ಬೇರ, ಮುಖಂಡರಾದ ಬಸವರಾಜ ಮಲಕಾರಿ, ವಸಂತ ಅರ್ಕಾಚಾರಿ, ಮುತ್ತು ಮಾಕಡವಾಲೆ, ಲಕ್ಷಿ ಗುತ್ತೆ, ದಾವಲಸಾಬ, ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Yadgir ಅಂಚೆ ಸಿಬ್ಬಂದಿಯಿಂದಲೇ ಫಲಾನುಭವಿಗಳಿಗೆ 1 ಕೋಟಿ 27 ಲಕ್ಷ ರೂ. ವಂಚನೆ!

 ಅರ್ಜಿ ದೊರೆಯುವ ಸ್ಥಳ: ಲೌಕ್ಯ ಬಿಲ್ಡಿಂಗ್, ಸಪ್ತಾಪುರ ಲಾಸ್ಟ್ ಬಸ್ ಸ್ಟಾಪ್.
ನ್ಯೂ ಅಂಜುಮನ್ ಕಾಂಪ್ಲೆಕ್ಸ್ ಧಾರವಾಡ
ಯಶ್ ಬಿಲ್ಡಿಂಗ್, ಭಾಸ್ಕರ್ ಕಾಂಪ್ಲೆಕ್ಸ್, ಎನ್‌ಟಿಟಿಎಫ್ ಹತ್ತಿರ, ಧಾರವಾಡ
ಮಾಹಿತಿಗೆ: 7760010998, 9741878672

ಅಗ್ನಿಪಥ್ ಯೋಜನೆಯ ಬಗ್ಗೆ ಕೇಂದ್ರ ಸರಕಾರದ ವಿರುದ್ದ ಕಿಡಿಕಾರಿದ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ,  ಲಾಠಿ ಏಟು ಖಂಡನೀಯ ಅಗ್ನಿಪಥ ಯೋಜನೆ  ವಿರುದ್ದ ಪ್ರತಿಭಟನೆ ನಡೆಸಲು ಮುಂದಾದ ಯುವಕರ ಮೇಲೆ ಲಾಠಿಪ್ರಹಾರ ನಡೆಸಿರುವುದು ಖಂಡನೀಯ ಎಂದು ಕಾಂಗ್ರೆಸ್‌ನ ರಾಣಿ ಚೆನ್ನಮ್ಮ ಬ್ಲಾಕ್ ಅಧ್ಯಕ್ಷ ನಾಗರಾಜ ಗೌರಿ ಹೇಳಿದರು. ಯುವಕರಿಗೆ ಉದ್ಯೋಗ ಕಲ್ಪಿಸದೆ, ನೌಕರಿಗೆ ಕಲ್ಲು ಹಾಕುವ ಕೆಲಸ ಮಾಡುತ್ತಿರುವುದು ದುರ್ದೈವದ ಸಂಗತಿ. ನಿರುದ್ಯೋಗಿ ಯುವಕರ ಧ್ವನಿಯಾಗಿ ಸಾಥ್ ನೀಡಲಾಗುವುದು..ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನಿಂದ ಹೋರಾಟ ಮಾಡಲಾಗುವುದು ಎಂದು ಹೇಳಿದರು. 

click me!