JEE Mains ಪರೀಕ್ಷೆಗೆ ತಯಾರಾಗಿ, ಈ ಟಿಪ್ಸ್ ಫಾಲೋ ಮಾಡಿ..

By Suvarna News  |  First Published May 16, 2022, 2:16 PM IST

* ಜೂನ್ 21ರಿಂದ 29ರವರೆಗೆ ನಡೆಯಲಿವೆ ಜೆಇಇ ಮೇನ್ಸ್ ಪರೀಕ್ಷೆಗಳು, ಸಿದ್ಧರಾಗಿ.
* ಉನ್ನತ ತಾಂತ್ರಿಕ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಈ ಪರೀಕ್ಷೆ ತುಂಬ ಮುಖ್ಯ
* ಯಾವುದೇ ಒತ್ತಡ, ಗೊಂದಲವಿಲ್ಲದೇ ಜೆಇಇ ಎಕ್ಸಾಮ್‌ಗೆ ತಯಾರಿ ನಡೆಸಿ


ಪ್ರತಿಯೊಬ್ಬ ವಿದ್ಯಾರ್ಥಿ ಜೆಇಇ ಪ್ರವೇಶ ಪರೀಕ್ಷೆಯನ್ನು ರಾಂಕ್ ಮೂಲಕ ಪಡೆಯುವ ಕನಸು ಹೊಂದಿರುತ್ತಾನೆ. ಅದರಲ್ಲೂ ತಾಂತ್ರಿಕ ಉನ್ನತ ಶಿಕ್ಷಣದ ಕನಸು ಕಟ್ಟಿಕೊಂಡವರು ಜೆಇಇ ಮೇನ್ಸ್ ಎಕ್ಸಾಮ್ ಬರೆದು ತಮ್ಮ ಕನಸನ್ನು ಈಡೇರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾರೆ. ಹಾಗೆಯೇ, ಈ ಪ್ರವೇಶ ಪರೀಕ್ಷೆ ಕೂಡ ಅಷ್ಟೇ ಕಾಠಿಣ್ಯವನ್ನು ಹೊಂದಿರುತ್ತದೆ. ಅದೇ ಕಾರಣಕ್ಕೆ ವಿದ್ಯಾರ್ಥಿಗಳು ನಾನಾ ರೀತಿಯಲ್ಲಿ ಈ ಪರೀಕ್ಷೆಗೆ ರೆಡಿಯಾಗುತ್ತಾರೆ. ವಾಸ್ತವದಲ್ಲಿ ಈ ಪರೀಕ್ಷೆ ಏಪ್ರಿಲ್ 21 ರಿಂದ ಮೇ 4 ರ ವರೆಗೆ ನಿಗದಿಯಾಗಿದ್ದ ಜಂಟಿ ಪ್ರವೇಶ ಪರೀಕ್ಷೆ ಮೇನ್ಸ್ (JEE Mains) ಅನ್ನು ಮುಂದೂಡಿಕೆ ಮಾಡಲಾಗಿದೆ. ಜೂನ್ 21ರಿಂದ 29 ರವರೆಗೆ ಜೆಇಇ ಮೇನ್ಸ್ ಪರೀಕ್ಷೆಗಳು ನಡೆಯಲಿವೆ. ವಿದ್ಯಾರ್ಥಿ ಸಮುದಾಯದಿಂದ ನಿರಂತರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA), ಜಂಟಿ ಪ್ರವೇಶ ಪರೀಕ್ಷೆ ಮೇನ್ಸ್ (JEE Mains)  ಅವಧಿಯನ್ನು ವಿಸ್ತರಿಸುವ ನಿರ್ಧಾರವನ್ನು ತೆಗೆದುಕೊಂಡಿದೆ. ಇದರಿಂದಾಗಿ ಪರೀಕ್ಷೆಗೆ ತಯಾರಾಗುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರಾಕ್ಟೀಸದ ಮಾಡಲು ಈಗ ಸಾಕಷ್ಟು ಸಮಯಾವಕಾಶ ಸಿಕ್ಕಂತಾಗಿದೆ. ಈ ಪ್ರವೇಶ ಪರೀಕ್ಷೆಗೆ ರೆಡಿಯಾಗಲು ಇಲ್ಲೊಂದಿಷ್ಟು ಟೀಪ್ಸ್ ನೀಡಲಾಗಿದೆ.

ಪೆಟ್ರೋಲಿಯಂ ಇಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು

Tap to resize

Latest Videos

ಸಮಯವಿಡಿ:  ನಿಮ್ಮ ಸಾಮರ್ಥ್ಯಕ್ಕಿಂತ ಹೆಚ್ಚಿನದನ್ನು ಮಾಡುವ ಬದಲು, ವಾಸ್ತವಿಕ ಪುನರಾವರ್ತನೆ (revision) ಯೋಜಕರಾಗಿರಿ. ನಿಮ್ಮ ಪುನರಾವರ್ತನೆ ಯೋಜನೆಯಲ್ಲಿ ಪ್ರತಿಯೊಂದು ವಿಷಯವು ದೃಢವಾಗಿ ಒಳಗೊಂಡಿದೆ ಎಂದು ಖಚಿತಪಡಿಸಿಕೊಳ್ಳಲು, ಪ್ರತಿಯೊಂದು ವಿಷಯಕ್ಕೆ ಸರಿಯಾದ ಸಮಯವನ್ನು ಮೀಸಲಿಡಿ. 

ಪುನರಾವರ್ತಿಸಿ: ಜೆಇಇ (JEE) ಪರೀಕ್ಷೆಗಳಲ್ಲಿ ಕೆಲವು ಸೂತ್ರ ಆಧಾರಿತ ಸುಲಭ ಅಂಕ-ಸ್ಕೋರಿಂಗ್ ಪ್ರಶ್ನೆಗಳಿರುತ್ತವೆ. ನೀವು ಸೂತ್ರಗಳು ಮತ್ತು ಪರಿಕಲ್ಪನೆಗಳಲ್ಲಿ ಚೆನ್ನಾಗಿ ಅಭ್ಯಾಸ ಮಾಡಿದ್ದರೆ, ನೀವು ಈ ಪ್ರಶ್ನೆಗಳಿಗೆ ಸುಲಭವಾಗಿ ಅಂಕಗಳನ್ನು ಪಡೆಯಬಹುದು. ಇದರಿಂದ ಪ್ರಮುಖ ವ್ಯತ್ಯಾಸವನ್ನು ಕಾಣಬಹುದು. ನಿಮ್ಮ ಕೊನೆಯ ಕ್ಷಣದ ಪುನರಾವರ್ತನೆಯ ಭಾಗವಾಗಿ, ಸೂತ್ರ ಮತ್ತು ಪರಿಕಲ್ಪನೆಯ ಪುಟವನ್ನು ಹಲವು ಬಾರಿ ಅಭ್ಯಾಸ ಮಾಡಿ.

ಅಣುಕು ಪರೀಕ್ಷೆ ಬರೆಯಿರಿ: ನೀವು ಪರೀಕ್ಷೆಗೂ ಮುಂಚಿತವಾಗಿ ಕನಿಷ್ಠ ಮೂರರಿಂದ ಐದು ಅಣಕು ಪರೀಕ್ಷೆಗಳನ್ನು ಬರೆಯಬೇಕು. ಈ ಅಣಕು ಪರೀಕ್ಷೆಗಳ ಸಮಯದಲ್ಲಿ ಪರೀಕ್ಷೆಯ ಸರಿಯಾದ ಷರತ್ತುಗಳನ್ನು ಅನುಕರಿಸಬೇಕು.

ಹಳೆಯ ಪ್ರಶ್ನೆಪತ್ರಿಕೆ ಬಿಡಿಸಿ:  ನೀವು ಪರೀಕ್ಷೆಗಳಲ್ಲಿ ಎದುರಿಸಬಹುದಾದ ಪ್ರಶ್ನೆಗಳ ಮಾದರಿ ಮತ್ತು ಪರಿಕಲ್ಪನೆಗಳ ಬಗ್ಗೆ ಹಿಂದಿನ ವರ್ಷಗಳ ಪ್ರಶ್ನೆಗಳು ಉತ್ತಮ ಕಲ್ಪನೆಯನ್ನು ನೀಡುತ್ತವೆ. ಹಾಗಾಗಿ ಹಿಂದಿನ ವರ್ಷಗಳ ಪ್ರಶ್ನೆಗಳನ್ನು ಪರಿಹರಿಸುವುದು ಪ್ರತಿ ವಿಷಯವನ್ನು ಒಳಗೊಳ್ಳಲು ಉತ್ತಮ ಮಾರ್ಗವನ್ನು ನೀಡುತ್ತದೆ ಎಂಬುದನ್ನು ಮರೆಯಬಾರದು.

ಹೊಸದಾಗಿ ಶುರು ಮಾಡಬೇಡಿ:  ಪರೀಕ್ಷೆಗೂ ಮುಂಚೆ ಎಲ್ಲಾ ವಿಷಯಗಳನ್ನು ಕವರ್ ಮಾಡಲು ಸಾಧ್ಯವಾಗದಿರಬಹುದು. ನೀವು ಯಾವುದೇ ಅಧ್ಯಾಯ ಅಥವಾ ವಿಷಯವನ್ನು ಓದದೆ ಬಿಟ್ಟಿದ್ದರೆ, ಪುನರಾವರ್ತನೆಯ ಹಂತದಲ್ಲಿ ಅದನ್ನು ಓದದೆ ಇರುವುದು ಉತ್ತಮ. ಕವರ್ ಮಾಡಿಲ್ಲ ಎಂದು ಪರೀಕ್ಷೆ ಹತ್ತಿರ ಇದ್ದಂತೆ ಹೊಸದಾಗಿ ಓದಲು ಹೋಗಬೇಡಿ. ಈಗಾಗಲೇ ಓದಿರುವುದನ್ನೇ ಗಟ್ಟಿಯಾಗಿ ಮಾಡಿಕೊಳ್ಳಿ.

ಹರಿಯಾಣ ಸರ್ಕಾರದಿಂದ 3 ಲಕ್ಷ ಟ್ಯಾಬ್ ವಿತರಣೆ

ಚೆನ್ನಾಗಿ ನಿದ್ದೆ ಮಾಡಿ: ಪುನರಾವರ್ತನೆಯ ಸಮಯ(revision time) ಕ್ಕಾಗಿ ನಿದ್ರೆಯ ಸಮಯವನ್ನು ತ್ಯಾಗ ಮಾಡಬೇಡಿ. ಪುನರಾವರ್ತನೆಯೊಂದಿಗೆ ಮೆದುಳಿಗೆ ವಿಶ್ರಾಂತಿಯನ್ನು ನೀಡುವುದು ಕೂಡ ಅದರ ಜೊತೆಯಲ್ಲಿ ಸಾಗಬೇಕು ಎಂಬುದನ್ನು ನೆನಪಿಟ್ಟುಕೊಳ್ಳಿ.

ಗೊಂದಲಬೇಡ:  ನೀವು ಜೆಇಇ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯನ್ನು ಬರೆಯಲು ತಯಾರಿ ನಡೆಸುವಾಗ ಆತ್ಮವಿಶ್ವಾಸದಿಂದ ಇರುವುದು ಬಹಳ ಮುಖ್ಯ. ಸ್ವಯಂ-ಗೊಂದಲದಿಂದ ಮುಕ್ತವಾದ ಸಕಾರಾತ್ಮಕ ಮನಸ್ಥಿತಿಯು ವಿದ್ಯಾರ್ಥಿಯನ್ನು ಪರೀಕ್ಷೆಯ ಮೇಲೆ ಕೇಂದ್ರೀಕರಿಸುತ್ತದೆ ಹೊರತು ಬೇರೆಡೆ ಗಮನ ಹರಿಸುವುದಿಲ್ಲ. ಅದೇನೆಯಿರಲಿ, ಪರೀಕ್ಷೆ ತಯಾರಿಯಲ್ಲಿ ಕಠಿಣ ಪರಿಶ್ರಮ ವಹಿಸಿ ಅದರಲ್ಲಿ ನಂಬಿಕೆ ಇಡಿ.  ಪ್ರಶ್ನೆಗಳಿಗೆ ಉತ್ತರಿಸುವಾಗ ಅತಿಯಾಗಿ ಯೋಚಿಸದಿರಲು ಪ್ರಯತ್ನಿಸಿ.

click me!