ಕಸ ಆಯುವ ಕೆಲಸ ಮಾಡ್ತಾ ಮಗನೊಂದಿಗೆ SSLC ಪಾಸ್ ಮಾಡಿದ ಅಮ್ಮ

Published : Jun 03, 2023, 03:41 PM IST
ಕಸ ಆಯುವ ಕೆಲಸ ಮಾಡ್ತಾ ಮಗನೊಂದಿಗೆ  SSLC ಪಾಸ್ ಮಾಡಿದ ಅಮ್ಮ

ಸಾರಾಂಶ

ಮಹಾರಾಷ್ಟ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ನಿನ್ನೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಅಮ್ಮ ಮಗ ಇಬ್ಬರು ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪಾಸಾಗುವ ಮೂಲಕ ಸಂಭ್ರಮ ಪಟ್ಟಿದ್ದಾರೆ.

ಮುಂಬೈ: ಮಹಾರಾಷ್ಟ್ರ ಮಾಧ್ಯಮಿಕ ಶಿಕ್ಷಣ ಮಂಡಳಿ ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟಿಸಿದ್ದು, ಅಮ್ಮ ಮಗ ಇಬ್ಬರು ಒಟ್ಟಿಗೆ ಎಸ್‌ಎಸ್‌ಎಲ್‌ಸಿ ಪಾಸಾಗುವ ಮೂಲಕ ಸಂಭ್ರಮ ಪಟ್ಟಿದ್ದಾರೆ.  43 ವರ್ಷದ ಅಮ್ಮ ಮೋನಿಕಾ ಹಾಗೂ 15 ವರ್ಷದ ಮಂಥನ್ ತೆಲಂಗೆ 10ನೇ ತರಗತಿ ಪರೀಕ್ಷೆಯನ್ನು ಒಟ್ಟಿಗೆ ಬರೆದಿದ್ದರು. ಮಗ ಮಂಥನ್ 64% ಮಾರ್ಕ್‌ ಗಳಿಸಿದ್ದರೆ, ಅಮ್ಮ ಮೋನಿಕಾ 51.8% ಮಾರ್ಕ್ಸ್‌ಗಳಿಸುವ  ಮೂಲಕ ಕಲಿಯುವುದಕ್ಕೆ ವಯಸ್ಸು ಮುಖ್ಯವಲ್ಲ, ಮನಸ್ಸು ಮುಖ್ಯ ಎಂಬುದನ್ನು ಸಾಬೀತುಪಡಿಸಿದ್ದಾರೆ. 

ಕಳೆದ ವರ್ಷದಂತೆ ಈ ವರ್ಷವೂ ಕೂಡ ಕಸ ಆಯುವವರ ಮಕ್ಕಳಿಗಾಗಿ (ಕಾಗದ ಕಚ್ ಪತ್ರಾ ಕಷ್ಟಕಾರಿ ಪಂಚಾಯತ್ (ಕೆಕೆಪಿಕೆಪಿ) ಸಹಯೋಗದೊಂದಿಗೆ ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಮಂಡಳಿ (ಎಂಎಸ್‌ಬಿಎಸ್‌ಎಚ್‌ಎಸ್‌ಇ) ನಡೆಸಿದ ಪರೀಕ್ಷೆಯಲ್ಲಿ ಈ ಅಮ್ಮ ಮಗ ಜೋಡಿ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.

ಬೆಂಗಳೂರು: 10ನೇ ತರಗತಿಗೆ ತೇರ್ಗಡೆಗೆ ಲಂಚ: ಪ್ರಾಂಶುಪಾಲ ಪೊಲೀಸರ ಬಲೆಗೆ

ಮಗನ ಪಾಲಿಗೆ ಅಪ್ಪ ಅಮ್ಮ ಇಬ್ಬರೂ ಒಬ್ಬರೇ ಆಗಿರುವ ಮೋನಿಕಾ ಅವರು ತಮ್ಮ ಮಗನೊಂದಿಗೆ ಪರೀಕ್ಷೆ ಬರೆದು ಸಾಧನೆ ಮಾಡಿದ್ದಾರೆ. ಮಗನ ಪಠ್ಯ ಪುಸ್ತಕಗಳನ್ನೇ ಬಳಸಿ  ಓದಿ ಪರೀಕ್ಷೆ ಬರೆದು ಮೋನಿಕಾ ಈ ಸಾಧನೆ ಮಾಡಿದ್ದಾರೆ. ಹಡಪ್ಸರ್ ವಸ್ತಿಯಲ್ಲಿ ಕುಟುಂಬದೊಂದಿಗೆ ಇರುವ ಈ ಅಮ್ಮನ ಸಾಧನೆಯಿಂದ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ. ವಿವಿಧ ಉದ್ಯೋಗಗಳಿಗೆ ಅಗತ್ಯವಾಗಿ ಬೇಕಾದ ಕನಿಷ್ಠ ವಿದ್ಯಾರ್ಹತೆ 10ನೇ ತರಗತಿಯಾಗಿದ್ದು, ಹೀಗಾಗಿ ಮೋನಿಕಾ 10ನೇ ಕ್ಲಾಸ್ ಪಾಸ್ ಮಾಡಲು ತೀರ್ಮಾನಿಸಿದ್ದರು. 

ಮಗ ಮಂಥನ್ ಮುಂದೆ ವೈದ್ಯನಾಗುವ ಕನಸು ಹೊತ್ತಿದ್ದು, ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ನಾನು ನರ್ಸಿಂಗ್ ಕೋರ್ಸ್ ಮಾಡುವ ಸಲುವಾಗಿ ಭವಿಷ್ಯದಲ್ಲಿ 12 ನೇ ತರಗತಿ ಪರೀಕ್ಷೆಗಳಿಗೆ ತಯಾರಿ ಮಾಡಲು ಬಯಸುತ್ತೇನೆ ಮಗನೇ ನನಗೆ ಸ್ಪೂರ್ತಿ, ಆತನೇ ನನ್ನ ಶಿಕ್ಷಕ ಎಂದು ಅಮ್ಮ ಮೋನಿಕಾ ಹೆಮ್ಮೆಯಿಂದ ಹೇಳಿದ್ದಾರೆ. 

Guest Teacher Recruitment: ಪ್ರೌಢ ಶಾಲೆಗಳಿಗೆ 6 ಸಾವಿರ ಅತಿಥಿ ಶಿಕ್ಷಕರ ನೇಮಕಕ್ಕೆ ರಾಜ್ಯ ಶಿಕ್ಷಣ ಇಲಾಖೆ ಸೂಚನೆ

14 ವರ್ಷಗಳ ಹಿಂದೆ ಮಂಥನ್ ತಂದೆ ಪತ್ನಿ ಮಗನನ್ನು ತೊರೆದು ಹೋದ ನಂತರ ಮಂಥನ್‌ ಅವರ ತಾಯಿ ಮೋನಿಕಾ ತನ್ನ ತಾಯಿ ಹಾಗೂ ಸಹೋದರಿಯ ಜೊತೆ ವಾಸ ಮಾಡುತ್ತಿದ್ದಾರೆ. ಬೆಳಗ್ಗೆ ತ್ಯಾಜ್ಯ ಸಂಗ್ರಹಿಸುವ ಮೋನಿಕಾ ಸಂಜೆ ಮಧ್ಯಾಹ್ನ ಮನೆಕೆಲಸಗಳಿಗೆ ಹೋಗುತ್ತಾರೆ.  ಇತ್ತ ಮಗ ಮಂಥನ್ ಅಧ್ಯಯನದ ಜೊತೆ ಜೊತೆಗೆ ಕುಟುಂಬವನ್ನು ಪೋಷಿಸಲು ಮಾಂಜ್ರಿಯಲ್ಲಿನ ಬಿಸ್ಲೇರಿ ಬಾಟಲ್ ವಾಟರ್ ತಯಾರಿಕಾ ಘಟಕದಲ್ಲಿ ಕೆಲಸ ಮಾಡುತ್ತಿದ್ದರು.

PREV
Read more Articles on
click me!

Recommended Stories

SSLCಗೆ ಶೇ.33 ಪಾಸಿಂಗ್ ಮಾರ್ಕ್ಸ್ ಸಮರ್ಥಿಸಿ ಕೊಳ್ಳುತ್ತಲೇ ರಾಜ್ಯ ಪೊಲಿಟಿಕ್ಸ್ ಅಪ್ಟೇಡ್ ಕೊಟ್ಟ ಮಧು ಬಂಗಾರಪ್ಪ
ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ