ಉಡುಪಿ: ಸರಕಾರಿ ಶಾಲೆಯಲ್ಲಿ ಕುಡಿಯಲು ನೀರೇ ಇಲ್ಲ, ಅತಂಕದಲ್ಲಿ ಪೋಷಕರು..!

By Girish Goudar  |  First Published Jun 3, 2023, 12:26 PM IST

ರಾಜ್ಯದ ಅತ್ಯಂತ ಪ್ರತಿಷ್ಠಿತ ಶಾಲೆ. ನಗರದಲ್ಲಿ ಸೌತ್ ಶಾಲೆ ಅಂತಾನೇ ಫೇಮಸ್ಸು! ಬರೋಬ್ಬರಿ 1,600ಕ್ಕೂ ಅಧಿಕ ಮಕ್ಕಳು ಇಲ್ಲಿ ಕಲಿಯುತ್ತಾರೆ. ಸರ್ಕಾರಿ ಶಾಲೆಯೊಂದು ಈಥರ ಫೇಮಸ್ ಆಗಿರೋಕೆ ಅಲ್ಲಿನ ಗುಣಮಟ್ಟದ ಶಿಕ್ಷಣವೇ ಕಾರಣ, ಆದರೆ ಶಿಕ್ಷಣದ ಗುಣಮಟ್ಟ ಚೆನ್ನಾಗಿದ್ದು ಮಕ್ಕಳ ಆರೋಗ್ಯದ ಗುಣಮಟ್ಟ ಹದಗೆಟ್ಟರೆ ಏನು ಮಾಡೋದು? 


ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ

ಉಡುಪಿ(ಜೂ.03): ಶಾಲೆ ಶುರುವಾಗಿದೆ ಆದರೆ ಮಳೆ ಮಾತ್ರ ಇನ್ನು ಶುರುವಾಗಿಲ್ಲ. ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಕುಡಿಯಲು ನೀರಿಲ್ಲ. ಕೊಳಕು ನೀರು ಕುಡಿದು ಮಕ್ಕಳ ಆರೋಗ್ಯದ ಹದಗೆಡಬಹುದು ಎಂಬುದು ಪೋಷಕರ ಆತಂಕ. ನಗರದ ಹೃದಯ ಭಾಗದಲ್ಲಿರುವ ಮಾದರಿ ಸರಕಾರಿ ಶಾಲೆಯಲ್ಲಿ ಸಮಸ್ಯೆ ಗಂಭೀರ ಸ್ಥಿತಿ ತಲುಪಿದ್ದು, ಒಂದು ವಾರ ತರಗತಿ ಮುಂದೂಡುವಂತೆ ಪೋಷಕರು ಒತ್ತಾಯಿಸಿದ್ದಾರೆ.

Latest Videos

undefined

ಇದು ರಾಜ್ಯದ ಅತ್ಯಂತ ಪ್ರತಿಷ್ಠಿತ ಶಾಲೆ. ನಗರದಲ್ಲಿ ಸೌತ್ ಶಾಲೆ ಅಂತಾನೇ ಫೇಮಸ್ಸು! ಬರೋಬ್ಬರಿ 1,600ಕ್ಕೂ ಅಧಿಕ ಮಕ್ಕಳು ಇಲ್ಲಿ ಕಲಿಯುತ್ತಾರೆ. ಸರ್ಕಾರಿ ಶಾಲೆಯೊಂದು ಈಥರ ಫೇಮಸ್ ಆಗಿರೋಕೆ ಅಲ್ಲಿನ ಗುಣಮಟ್ಟದ ಶಿಕ್ಷಣವೇ ಕಾರಣ, ಆದರೆ ಶಿಕ್ಷಣದ ಗುಣಮಟ್ಟ ಚೆನ್ನಾಗಿದ್ದು ಮಕ್ಕಳ ಆರೋಗ್ಯದ ಗುಣಮಟ್ಟ ಹದಗೆಟ್ಟರೆ ಏನು ಮಾಡೋದು?. 

ಚಿತ್ರದುರ್ಗ ಮೆಡಿಕಲ್ ಕಾಲೇಜು ಸ್ಥಾಪನೆಗೆ ಪ್ಲಾನ್ ರೂಪಿಸಿ: ಅಧಿಕಾರಿಗಳಿಗೆ ಕೇಂದ್ರ ಸಚಿವ ನಾರಾಯಣಸ್ವಾಮಿ ಖಡಕ್ ವಾರ್ನ್

ಸದ್ಯ ಶಾಲೆಯಲ್ಲಿ ಮಕ್ಕಳಿಗೆ ಕುಡಿಯಲು ನೀರಿಲ್ಲ. ಶಾಲೆಯ ಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ. ನಗರಸಭೆಯಿಂದ ಬರುವ ನಳ್ಳಿ ನೀರು ಕೆಂಪು ಕೆಸರಾಗಿದೆ. ಫಿಲ್ಟರ್ ಇದ್ದರೂ ಇಷ್ಟೊಂದು ಮಕ್ಕಳಿಗೆ ಸ್ವಚ್ಛ ನೀರು ಕೊಡುವುದು ಕಷ್ಟ ಸಾಧ್ಯ. ಇನ್ನು ಟ್ಯಾಂಕರ್ ನೀರು ತರಿಸಿ, ತರಿಸಿ ಆಡಳಿತ ಮಂಡಳಿ ಸೋತು ಹೋಗಿದೆ. ಇನ್ನು ನಮ್ಮ ಕೈಯಲ್ಲಿ ಆಗಲ್ಲ ಎಂದು ಕೈಚಲ್ಲಿ ಕುಳಿತಿದೆ. ಕಳಕು ನೀರು ಕುಡಿಯಬೇಕಾದ ಪರಿಸ್ಥಿತಿಯಲ್ಲಿ ಮಕ್ಕಳ ಆರೋಗ್ಯದ ಬಗ್ಗೆ ಪೋಷಕರಿಗೆ ಚಿಂತೆ ಉಂಟಾಗಿದೆ.

ಇದು ಸರಕಾರಿ ಶಾಲೆ. ಹಾಗಾಗಿ ಶಿಕ್ಷಕರು ಗಟ್ಟಿ ಧ್ವನಿಯಲ್ಲಿ ಮಾತನಾಡುವಂತಿಲ್ಲ. ಆದರೆ ಶಾಲಾ ಆಡಳಿತ ಮಂಡಳಿ ಮತ್ತು ಹಳೆ ವಿದ್ಯಾರ್ಥಿಗಳು, ತರಗತಿ ಮುಂದೂಡುವಂತೆ ಶಿಕ್ಷಣ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಒಂದು ವಾರಗಳ ಕಾಲ ತರಗತಿ ಮುಂದೂಡಿ, ಮಕ್ಕಳ ಆರೋಗ್ಯ ರಕ್ಷಿಸಿ ಎಂದು ಕೇಳುತ್ತಿದ್ದಾರೆ.

ಈ ಶಾಲೆಯಲ್ಲಿ 1600 ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಐದು ಮಂದಿ ಸಿಬ್ಬಂದಿಗಳಿದ್ದಾರೆ. ಅಡುಗೆ ಮಾಡಲು ನೀರು ಬೇಕು, ಊಟದ ಮೊದಲು ಮತ್ತು ನಂತರ ತಟ್ಟೆ ತೊಳೆಯಲು ನೀರು ಬೇಕು. ಶೌಚಾಲಯಕ್ಕೆ ಲೀಟರ್ಗಟ್ಟಲೆ ನೀರು ಬೇಕು. ಇನ್ನು ಕುಡಿಯಲು ಸ್ವಚ್ಛ ನೀರು ಬೇಕೇ ಬೇಕು. ಏನಿಲ್ಲ ಅಂದ್ರು ದಿನ ಬಳಕೆಗೆ ಇಪ್ಪತ್ತು ಸಾವಿರ ಲೀಟರ್ ನೀರಿಗೆ ಎಲ್ಲಿ ಹೋಗೋದು ಎಂದು ಆಡಳಿತ ಮಂಡಳಿ ಸದಸ್ಯರು ಕೇಳುತ್ತಾರೆ.

ಪಠ್ಯಪುಸ್ತಕ ಪುನರ್‌ ಪರಿಷ್ಕರಣೆ: ಬರಗೂರು ರಾಮಚಂದ್ರಪ್ಪ ಜತೆ ಸಚಿವ ಮಧು ಬಂಗಾರಪ್ಪ ಚರ್ಚೆ

ಕ್ಷೇತ್ರದಲ್ಲಿ ಈ ರೀತಿ ಸಮಸ್ಯೆ ಆಗಬಹುದು ಎಂಬುದನ್ನು ಮನಗಂಡು, ಈಗಾಗಲೇ ಉಡುಪಿ ಶಾಸಕ ಯಶ ಪಾಲ ಸುವರ್ಣ ಸಿಎಂ ಗೆ ಪತ್ರ ಬರೆದಿದ್ದರು. ಒಂದು ವಾರಗಳ ಕಾಲ ಶಾಲೆ ಮುಂದೂಡುವಂತೆ ಕೊರಿದ್ದರು. ಇಷ್ಟೆಲ್ಲಾ ಆದರೂ ಶಿಕ್ಷಣ ಇಲಾಖೆ ಮಾತ್ರ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳುತ್ತಿದೆ. ಮಕ್ಕಳು ಮಾತ್ರ ಶುದ್ಧ ಕುಡಿಯುವ ನೀರಿಗೆ ಪರಿತಪಿಸುತ್ತಿದ್ದಾರೆ. 

ಈ ಬಾರಿ ಮುಂಗಾರುಪೂರ್ವ ಮಳೆ ಕೈಕೊಟ್ಟಿದೆ. ಮುಂಗಾರು ಮಳೆ ಕೂಡ 15 ದಿನ ವಿಳಂಬ ಎಂದು ಹವಾಮಾನ ಇಲಾಖೆ ಹೇಳಿದೆ. ಅತಿ ಹೆಚ್ಚು ಮಳೆ ಬಿದ್ದರೂ ಕರಾವಳಿಯಲ್ಲಿ ನೀರು ಹಿಡಿದಿಡುವ ವ್ಯವಸ್ಥೆ ಮಾಡಲು ಆಡಳಿತ ಯಂತ್ರ ಸೋತು ಹೋಗಿದೆ. ಕೇವಲ ಒಳಕಾಡು ಶಾಲೆ ಮಾತ್ರವಲ್ಲ, ಜಿಲ್ಲೆಯ ಇನ್ನೂ ಅನೇಕ ಶಾಲೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಶಿಕ್ಷಣ ಇಲಾಖೆ ಸೂಕ್ತ ಸರ್ವೆ ನಡೆಸಿ ಅಗತ್ಯವಿದ್ದಲ್ಲಿ ಶಾಲಾ ತರಗತಿಗಳನ್ನು ಮುಂದೊಡುವುದೇ ಇದಕ್ಕೆ ಪರಿಹಾರ.

click me!