Chamarajanagar: ಮರದ ಕೆಳಗೆ ಮಕ್ಕಳಿಗೆ ಪಾಠ: ಸ್ಟೋರ್ ರೂಮ್‌ನಲ್ಲಿ ತರಗತಿ!

By Govindaraj S  |  First Published Jun 4, 2022, 1:05 AM IST

ಮರದ ಕೆಳಗೆ ಪಾಠ. ಹಾಗಂತ ಇದೇನು ಪುರಾಣದ ಕಥೆಯಲ್ಲ. 21ನೇ ಶತಮಾನದಲ್ಲು ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಪಾಠ ಕಲಿಯಬೇಕಾದ ದುಸ್ಥಿತಿ ಇದೆ. ಈ ಮಕ್ಕಳಿಗೆ ನಿತ್ಯವೂ ನಡೆಯುತ್ತೆ ಮರದ ನೆರಳಲ್ಲಿ ನಡೆಯುತ್ತೆ ಪಾಠ-ಪ್ರವಚನ. 


ವರದಿ: ಪುಟ್ಟರಾಜು. ಆರ್.ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ (ಜೂ.04): ಮರದ ಕೆಳಗೆ ಪಾಠ. ಹಾಗಂತ ಇದೇನು ಪುರಾಣದ ಕಥೆಯಲ್ಲ. 21ನೇ ಶತಮಾನದಲ್ಲು ವಿದ್ಯಾರ್ಥಿಗಳು ಬಯಲಿನಲ್ಲಿ ಕುಳಿತು ಪಾಠ ಕಲಿಯಬೇಕಾದ ದುಸ್ಥಿತಿ ಇದೆ. ಈ ಮಕ್ಕಳಿಗೆ ನಿತ್ಯವೂ ನಡೆಯುತ್ತೆ ಮರದ ನೆರಳಲ್ಲಿ ನಡೆಯುತ್ತೆ ಪಾಠ-ಪ್ರವಚನ. ಒಂದೇ ಕೊಠಡಿಯಲ್ಲಿ ನಡೆಯುತ್ತೆ ಮೂರು ತರಗತಿ. ಮುಖ್ಯ ಶಿಕ್ಷಕರ ಕಚೇರಿಯೇ  ಮಕ್ಕಳಿಗೆ ಪಾಠ ಮಾಡೋ ಕೊಠಡಿಯಾಗಿದೆ. ಇತ್ತ ಶಿಕ್ಷಣ ಇಲಾಖೆಯ ಅನುಮತಿ ದೊರೆಯದ ಅರ್ಧಕ್ಕೆ ನಿಂತಿದೆ ಶಾಲಾ ಕೊಠಡಿ. ಶಾಲೆಯಲ್ಲಿನ ಮೂಲಭೂತ ಸೌಕರ್ಯದ ಕೊರತೆಯಿಂದ ಮಕ್ಕಳು ಸರ್ಕಾರಿ ಶಾಲೆ ಬಿಟ್ಟು ಹೋಗ್ತಿದ್ದಾರೆ. 

Tap to resize

Latest Videos

undefined

ಇನ್ನಾದ್ರೂ ಒಂದು ಕೊಠಡಿ ನಿರ್ಮಿಸಿಕೊಡಿ ಅಂತಾ ಗ್ರಾಮಸ್ಥರು ಸರ್ಕಾರದ ಅಂಗಲಾಚ್ತಿದ್ದಾರೆ. ಪಠ್ಯ ಪುಸ್ತಕ ವಿವಾದದಲ್ಲೇ ಮುಳುಗಿ ಹೋಗಿರುವ ಸರ್ಕಾರಕ್ಕೆ ಇದೆಲ್ಲಾ ಕಾಣ್ತಾ ಇಲ್ಲ ಅನ್ನೋದೆ ಒಂದು ದೊಡ್ಡ ದುರಂತವಾಗಿದೆ. ಇದು ಚಾಮರಾಜನಗರ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ದುಸ್ಥಿತಿ. ರಾಜ್ಯದಲ್ಲಿ ಒಂದು ಕಡೆ ಪಠ್ಯ ಪುಸ್ತಕ ಪರಿಷ್ಕರಣೆ ಸಂಬಂಧ ಫೈಟ್ ನಡೀತಿದೆ. ಈ ನಡುವೆ ಸರ್ಕಾರಿ ಶಾಲೆಯಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕಾರ್ಯಗಳು,ಮೂಲಭೂತ ಸೌಕರ್ಯಗಳ ಬಗ್ಗೆ ಚಿಂತನೆ ಮಾಡುವ ಕೆಲಸಕ್ಕೆ ಯಾರೂ ಕೂಡ ಮುಂದಾಗ್ತಿಲ್ಲ. ಚಾಮರಾಜನಗರ ತಾಲೋಕು ಮೇಲಾಜಿಪುರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ ಆರನೇ ತರಗತಿಯವರೆಗೆ ಇದ್ದು ಕೇವಲ ಎರಡು ಕೊಠಡಿಗಳಿವೆ.

ಮಳೆ ನೀರು ಬಂದ್ರೆ ತುಂಬಿಕೊಳ್ಳುತ್ತೆ ಜ್ಞಾನ ದೇಗುಲ: ಶಾಲೆಯ ಕೊಠಡಿಗೆ ನೀರು ರಜೆ ಫಿಕ್ಸ್!

ಅದರಲ್ಲು ಒಂದು ಕೊಠಡಿ ಮುಖ್ಯೋಪಾಧ್ಯಾಯರ ಕಚೇರಿ ಹಾಗು ಸ್ಟೋರ್ ರೂಂ ಸಹ ಆಗಿದೆ. ಮೂವರು ಶಿಕ್ಷಕರಿದ್ದು ಇರುವ ಎರಡು ಕೊಠಡಿಗಳಲ್ಲಿ ಎಲ್ಲಾ ಮಕ್ಕಳನ್ನು ಒಟ್ಟಿಗೆ ಕೂರಿಸಿ ಪಾಠ ಮಾಡಲಾಗದ ದುಸ್ಥಿತಿ ಇದೆ. ಇಬ್ಬರು ಶಿಕ್ಷಕರು ಎರಡು ಕೊಠಡಿಯೊಳಗೆ ಪಾಠ ಮಾಡಿದರೆ ಇನ್ನೊಬ್ಬ ಶಿಕ್ಷಕರು ಬಯಲಿನಲ್ಲಿ  ಮರದ ಕೆಳಗೆ ಪಾಠ ಮಾಡುತ್ತಿದ್ದಾರೆ. ಮಳೆ ಬಂದಂತಹ ಸಂದರ್ಭದಲ್ಲಿ ಶಾಲೆಯ ಹೊರಾಂಗಣದ ಆವರಣದಲ್ಲಿ ಪಾಠ ಮಾಡಲಾಗುತ್ತದೆ. ಆರನೇ ತರಗತಿವರೆಗೆ  ಮಂಜೂರಾಗಿರುವ ತರಗತಿಗಳಿಗೆ ತಕ್ಕಂತೆ ಶಾಲಾ‌ ಕೊಠಡಿಗಳು ಇಲ್ಲದಿರುವುದು ಶಿಕ್ಷಕರಲ್ಲಿ ಹಾಗು ಪೋಷಕರಲ್ಲಿ ಅಸಮಾಧಾನ ಮೂಡಿಸಿದೆ. 

ಹೊರಗಡೆ ಮೈದಾನದಲ್ಲಿ ಮರದ ಕೆಳಗೆ ಪಾಠ ಮಾಡುವುದರಿಂದ ಮಕ್ಕಳ ಏಕಾಗ್ರತೆ ಗೆ ಭಂಗವಾಗಿ ಕಲಿಕೆಯಲ್ಲಿ ಹಿಂದುಳಿಯುವ‌ ಸಾಧ್ಯತೆ ಹೆಚ್ಚಾಗಿದೆ ಎಂದು ತಮ್ಮ ಅಳನ್ನು ವಿಧ್ಯಾರ್ಥಿಗಳು ತೋಡಿಕೊಳ್ಳುತ್ತಾರೆ. ಇನ್ನೂ ಚಳಿ, ಗಾಳಿ, ಬಿಸಿಲಿನ ನಡುವೆ ಪಾಠ ಕೇಳಬೇಕಾದ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು ಓದ್ತಿದ್ದಾರೆ. ಇಬ್ಬರು ಶಿಕ್ಷಕರು ಎರಡು ಕೊಠಡಿಯೊಳಗೆ ಪಾಠ ಮಾಡಿದರೆ ಇನ್ನೊಬ್ಬ ಶಿಕ್ಷಕರಿಂದ ಮರದ ಕೆಳಗೆ ಪಾಠ ಮಾಡ್ತಾರೆ. ಅದರಲ್ಲೂ ಒಂದು ಕೊಠಡಿ ಮುಖ್ಯೋಪಾಧ್ಯಾಯರ ಕಚೇರಿಯು ಹೌದು! ಸ್ಟೋರ್ ರೂಂ ಸಹ ಹೌದು. ಶಾಲಾವರಣದಲ್ಲಿ  ಕಳೆದ ವರ್ಷ ಹೊಸ ಕೊಠಡಿ ನಿರ್ಮಾಣ ಆರಂಭವಾಯಿತಾದರೂ ಅಡಿಪಾಯದ ಹಂತದಲ್ಲೇ ಕಾಮಗಾರಿ ಸ್ಥಗಿತಗೊಂಡಿದೆ. 

ಚಾಮರಾಜನಗರ: ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಸ್ಥಗಿತ, ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಶಾಸಕ

ಕೊಠಡಿಗಳ ಕೊರತೆ ಹಿನ್ನಲೆ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲಿಸುವ ಅನಿವಾರ್ಯತೆಯಲ್ಲಿ ಪೋಷಕರು  ಮುಂದಾಗುತ್ತಿದ್ದಾರೆ. ಅಲ್ಲದೇ ಕೊಠಡಿ ಸಮಸ್ಯೆ ಹಿನ್ನಲೆ, ಕೆಲವರು ಶಾಲೆಯಿಂದ ಟಿಸಿ ಪಡೆದು ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸ್ತಿದ್ದಾರೆ. ಇನ್ನಾದ್ರೂ ಸರ್ಕಾರಿ ಶಾಲೆ ಉಳಿಸಿ ಅಂತಾ ಗ್ರಾಮಸ್ಥರು ಮನವಿ ಮಾಡ್ತಿದ್ದಾರೆ. ಸರ್ಕಾರ ಹಿಜಾಬ್, ಪಠ್ಯಪುಸ್ತಕ ಪರಿಷ್ಕರಣೆ ವಿವಾದದಲ್ಲೇ ಮುಳುಗಿ ಹೋಗಿದ್ದು ಶಾಲೆಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳ ಬಗ್ಗೆ  ಮರತೇ ಹೋಗಿದೆ. ಮೇಲಾಜಿಪುರದಲ್ಲಿ ಕೊಠಡಿ ಕೊರತೆಯಿಂದ ಮಕ್ಕಳ ಕಲಿಕೆ ಮೇಲೆ ದುಷ್ಪರಿಣಾಮ ಬೀರುವುದರಿಂದ  ಪೋಷಕರು ವಿಧಿ ಇಲ್ಲದೆ ಖಾಸಗಿ ಶಾಲೆಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

click me!