ಪಠ್ಯ ಪುಸ್ತಕಗಳ ವಿಚಾರದಲ್ಲಿ ಯಾವುದೇ ರಾಜಕೀಯ ಹಸ್ತ ಕ್ಷೇಪ ಇರಬಾರದು: ಬಸವರಾಜ ಹೊರಟ್ಟಿ

By Govindaraj S  |  First Published Jun 3, 2022, 11:24 PM IST

ಪಠ್ಯ ಪುಸ್ತಕಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಇರಬಾರದು ಎಂದು ಮಾಜಿ ಸಭಾಪತಿ , ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು. 


ಹಾವೇರಿ (ಜೂ.03): ಪಠ್ಯ ಪುಸ್ತಕಗಳ ವಿಚಾರದಲ್ಲಿ ರಾಜಕೀಯ ಪಕ್ಷಗಳ ಹಸ್ತಕ್ಷೇಪ ಇರಬಾರದು ಎಂದು ಮಾಜಿ ಸಭಾಪತಿ , ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಹೇಳಿದರು. ಹಾವೇರಿಗೆ ಚುನಾವಣೆ ಪ್ರಚಾರಾರ್ಥವಾಗಿ ಬಂದಿದ್ದ ಬಸವರಾಜ ಹೊರಟ್ಟಿ, ಯಾವುದೇ ರಾಜಕೀಯ ಪಕ್ಷಗಳು ಇದರಲ್ಲಿ ಭಾಗವಹಿಸಬಾರದು. ಶಿಕ್ಷಣ ಇಲಾಖೆಯಲ್ಲಿ ಡಿ.ಎಸ್.ಸಿ ಆರ್ ಟಿ ಅಂತ ಒಂದು ಸಂಸ್ಥೆ ಇದೆ. ಅವರೇ ಸಿಲೆಬಸ್, ಮತ್ತು ಬುಕ್‌ಗಳನ್ನು ತಯಾರಿ ಮಾಡೋದು. 

ಮಕ್ಕಳ  ಭವಿಷ್ಯ ರೂಪಿಸುವ ಪಠ್ಯ ರಚಿಸಬೇಕು. ಅದರಲ್ಲಿ ಯಾರೂ ಹಸ್ತಕ್ಷೇಪ ಮಾಡೋದು ಒಳ್ಳೆಯದಲ್ಲ. ಈಗಿನ ಶಿಕ್ಷಣ ಪದ್ದತಿ ಯಾವುದಕ್ಕೂ ಪ್ರಯೋಜನ ಇಲ್ಲ. ವೃತ್ತಿಪರತೆ ಕಲಿಸುವ ಶಿಕ್ಷಣ ಇಲ್ಲ.ಕೇವಲ ಸರ್ಟಿಫಿಕೇಟ್  ತಗೊಳೋಕೆ ಮಾತ್ರ ಶಿಕ್ಷಣ ಅನ್ನುವಂತಾಗಿದೆ ಎಂದರು. ಈ ಬಾರಿ ನಾನು ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ 40% ಹೆಚ್ಚು ಮತಗಳ ಅಂತರದಿಂದ ಗೆಲ್ಲುವೆ. ಇದುವರೆಗೂ ಯಾವ ಶಿಕ್ಷಕನಿಗೂ ನಾನು ಅನ್ಯಾಯ ಮಾಡಿಲ್ಲ. ಈ ಬಾರಿ ಗೆಲುವು ನನ್ನದೇ ಅಂತ ವಿಶ್ವಾಸ ವ್ಯಕ್ತಪಡಿಸಿದರು.

Latest Videos

undefined

MLC Election: ಶಿಕ್ಷಕರ ನಂಬಿಗಸ್ಥ ಸೇವಕನಾಗಿ ಚುನಾವಣೆ ಗೆಲ್ಲುವೆ: ಬಸವರಾಜ ಹೊರಟ್ಟಿ

ಶಿಕ್ಷಕರಿಂದ ನಯಾಪೈಸೆ ಪಡೆಯದೇ ಸೇವೆ ಸಲ್ಲಿಸಿದ್ದೇನೆ: ಶಿಕ್ಷಕರಿಂದ ನಯಾಪೈಸೆ ಪಡೆಯದೇ ಶಿಕ್ಷಕರ ಕೆಲಸ ಮಾಡಿಕೊಟ್ಟಿರುವ ನೆಮ್ಮದಿಗೆ ನನಗಿದೆ. ಈ ಸಲ ಮತ್ತೊಂದು ಅವಕಾಶ ಕೊಡಿ ಎಂದು ಕೇಳುತ್ತಿದ್ದೇನೆ. ಆಶೀರ್ವದಿಸಿ ಆರಿಸಿ ಕಳುಹಿಸಿ ಎಂದು ಪಶ್ಚಿಮ ಶಿಕ್ಷಕರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಹೊರಟ್ಟಿ ಮನವಿ ಮಾಡಿದರು. ಗುರುವಾರ ಗದಗ ಜಿಲ್ಲೆಯ ರೋಣ, ನರಗುಂದ, ಗಜೇಂದ್ರಗಡ ಸೇರಿದಂತೆ ವಿವಿಧೆಡೆ ಮಿಂಚಿನ ಸಂಚಾರ ನಡೆಸಿ ಮತದಾರರೊಂದಿಗೆ ಮನದಾಳದ ಮಾತು ಕಾರ್ಯಕ್ರಮದ ಮೂಲಕ ಪ್ರಚಾರ ನಡೆಸಿ ಈ ರೀತಿಯಾಗಿ ಮತಯಾಚಿಸಿದರು. ಈ ಕ್ಷೇತ್ರದಿಂದ ಏಳು ಬಾರಿ ಆಯ್ಕೆಯಾಗಿದ್ದೇನೆ. ನನ್ನ ಇಡೀ ಜೀವನದಲ್ಲಿ ಶಿಕ್ಷಕರಿಂದ ನಯಾಪೈಸೆ ಪಡೆಯದೇ ಅವರ ಸಮಸ್ಯೆಗಳಿಗೆ ಕಿವಿಯಾಗಿದ್ದೇನೆ. 

ಶಿಕ್ಷಕರ ಬೆಂಬಲವೇ ನನಗೆ ಶ್ರೀರಕ್ಷೆ. ಶಾಸಕ, ಸಚಿವ ಹಾಗೂ ಸಭಾಪತಿಯಾಗಿ ಶಿಕ್ಷಕರ ಹಾಗೂ ಸಾರ್ವಜನಿಕರ ಸೇವೆಯನ್ನು ಕಳೆದ 42 ವರ್ಷಗಳಿಂದ ಮಾಡಿದ ಸಂತೋಷ ನನಗೆ ಇದೆ ಎಂದರು. ಪ್ರತಿ ಚುನಾವಣೆಯಲ್ಲಿ ಶಿಕ್ಷಕರಿಗೆ ನಾನು ಮಾಡಿದ ಕೆಲಸಗಳ ರಿಪೋರ್ಟ್‌ ಕಾರ್ಡ್‌ನ್ನು ನೀಡಿದ್ದೇನೆ. ವಿದ್ಯಾರ್ಥಿಗಳಿಗೆ ಸೈಕಲ್‌ ವಿತರಣೆ, ದೈಹಿಕ ಶಿಕ್ಷಣ ವಿಷಯವನ್ನು ಪ್ರಾಥಮಿಕ ಹಂತದಿಂದ ಪದವಿಪೂರ್ವ ಶಿಕ್ಷಣವರಗೆ ಕಡ್ಡಾಯ ವಿಷಯವನ್ನಾಗಿ ಮಾಡಿದ್ದು ದೇಶದಲ್ಲಿ ಮೊದಲು. ಈ ರೀತಿ ಹತ್ತಾರು ಕೆಲಸ ಮಾಡಿದ್ದೇನೆ ಎಂದು ಹೇಳಿದರು. 

ಹೊರಟ್ಟಿ ಬಂದಿರುವುದು ಬಿಜೆಪಿಗೆ ಆನೆ ಬಲ ಬಂದಂತಾಗಿದೆ: ಜಗದೀಶ ಶೆಟ್ಟರ್‌

ಸಚಿವ ಸಿ.ಸಿ. ಪಾಟೀಲ ಮಾತನಾಡಿ, ಅಧಿಕಾರ ಇಲ್ಲದಾಗ ಹೋರಾಟ ಮಾಡಬೇಕು. ಅಧಿಕಾರ ಸಿಕ್ಕಾಗ ಸೇವೆ ಮಾಡಬೇಕು. ಅಧಿಕಾರ ಇರಲಿ, ಬಿಡಲಿ ಹೊರಟ್ಟಿಸದಾ ಶಿಕ್ಷಕರ ಜೊತೆಗಿದ್ದವರು. ಹೊರಟ್ಟಿಶಿಕ್ಷಕರ ಆಸ್ತಿ. ಶಿಕ್ಷಕರು ಯಾವತ್ತೂ ಇವರನ್ನು ಕೈಬಿಡುವುದಿಲ್ಲ. ಈ ಚುನಾವಣೆಯಲ್ಲಿ ಹಿಂದಿಗಿಂತ ಅತ್ಯಾಧಿಕ ಮತಗಳಿಂದ ಆರಿಸಿ ಕಳುಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಏಳು ಅವಧಿ ಕಾಂಗ್ರೆಸ್‌-ಬಿಜೆಪಿ ವಿರುದ್ಧ ಸೆಣಸಿ ಗೆಲುವು ಸಾಧಿಸಿದ ಹೊರಟ್ಟಿ ಅವರಿಂದು ಬಿಜೆಪಿ ಅಭ್ಯರ್ಥಿಯಾಗಿದ್ದರಿಂದ ಅವರ ಶಕ್ತಿ ದ್ವಿಗುಣವಾಗಿದೆ. ಮೊಸರಲ್ಲಿ ಕಲ್ಲು ಹುಡುಕುವ ಪ್ರವೃತ್ತಿ ವಿರೋಧ ಪಕ್ಷದ್ದಾಗಿದೆ. ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಹೊರಟ್ಟಿ ಅವರ ಗೆಲುವಿಗೆ ಶಿಕ್ಷಕರು ಆಶೀರ್ವದಿಸಬೇಕು ಎಂದು ವಿನಂತಿಸಿದರು.

click me!