ಪೇಪರ್​ ಲೀಕ್​ ಹಗರಣದ ದೊಡ್ಡ ಪಟ್ಟಿಯೇ ಬಿಡುಗಡೆಯಾಯ್ತು: ರಾಜೀನಾಮೆ ಕೊಟ್ಟವರೆಷ್ಟು ಮಂದಿ

Published : Jul 25, 2026, 07:07 PM IST
Paper Leak

ಸಾರಾಂಶ

ನೀಟ್-ಯುಜಿ ಪೇಪರ್ ಲೀಕ್ ಹಿನ್ನೆಲೆಯಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ್ದಾರೆ. ಆದರೆ, ಈ ಘಟನೆಯು ಕಾಂಗ್ರೆಸ್ ಮತ್ತು ಯುಪಿಎ ಆಡಳಿತಾವಧಿಯಲ್ಲಿ ನಡೆದಿದ್ದ ಹಲವಾರು ಪೇಪರ್ ಲೀಕ್ ಹಗರಣಗಳನ್ನು ಮುನ್ನೆಲೆಗೆ ತಂದಿದೆ, ಆ ಸಮಯದಲ್ಲಿ ಯಾವುದೇ ಸಚಿವರು ರಾಜೀನಾಮೆ ನೀಡಿರಲಿಲ್ಲ ಎಂಬ ಚರ್ಚೆ ಶುರುವಾಗಿದೆ.

ನೀಟ್​-ಯುಜಿ ಪೇಪರ್​ ಲೀಕ್​ ಘಟನೆಯ ಹಿನ್ನೆಲೆಯಲ್ಲಿ ಸಿಜೆಪಿ ನಡೆಸಿದ ಪ್ರತಿಭಟನೆ ಹಾಗೂ ಈ ನಡುವೆ ನಡೆದ ಹಲವಾರು ಘಟನೆಗಳ ಹಿನ್ನೆಲೆಯಲ್ಲಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಇಂದು (ಜುಲೈ 25) ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಧ್ಯರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದ ಬೆನ್ನಲ್ಲೇ ಅತ್ಯಂತ ಕುತೂಹಲದ ಬೆಳವಣಿಗೆಯಲ್ಲಿ, ಈ ರಾಜೀನಾಮೆ ನೀಡಲಾಗಿದೆ. ಪೇಪರ್​ ಲೀಕ್​ ಪ್ರಕರಣಗಳು ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಕೆಲವು ಬಾರಿ ಆಗಿರುವುದಾಗಿ ವಿಪಕ್ಷಗಳು ಹಾಗೂ ಅವುಗಳಿಗೆ ಬೆಂಬಲ ಸೂಚಿಸುವ ಹಾಗೂ ವಿದ್ಯಾರ್ಥಿಗಳ ಹಿತದೃಷ್ಟಿಯನ್ನು ನೆಪಮಾಡಿಕೊಂಡಿರುವ ಕೆಲವರು ಗಲಾಟೆ ಮಾಡುತ್ತಿರುವುದು ನಡೆದೇ ಇದೆ. ಉದ್ದೇಶ ಏನೇ ಇದ್ದರೂ ಪ್ರಶ್ನೆ ಪತ್ರಿಕೆ ಲೀಕ್​ ಆದಾಗ, ವಿದ್ಯಾರ್ಥಿಗಳ ಅನುಭವಿಸುವ ತೊಂದರೆ, ನೋವುಗಳು ಮಾತ್ರ ಸುಳ್ಳೇನಲ್ಲ.

ಇದರ ನಡುವೆಯೇ, ಇದೀಗ ಪೇಪರ್​ ಲೀಕ್​ ಪ್ರಕರಣದ ದೊಡ್ಡ ಪಟ್ಟಿಯನ್ನು ಬಿಜೆಪಿ ಬೆಂಬಲಿಗರು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಮಾಡಿದ್ದಾರೆ. ಇತ್ತ ನೀಟ್​ ಪೇಪರ್​ ಲೀಕ್​ ನೆಪವೊಡ್ಡಿ ಸಿಜೆಪಿ ವಿದ್ಯಾರ್ಥಿಗಳ ಹಿತದೃಷ್ಟಿ ಎಂದುಕೊಂಡು ದೊಡ್ಡ ಗಲಾಟೆ ಮಾಡುತ್ತಿರುವಾಗಲೇ ಅತ್ತ ಕೇರಳದಲ್ಲಿ, ಕಳೆದ ವಾರವಷ್ಟೇ ಕೇರಳ ಲೋಕಸೇವಾ ಆಯೋಗದ (PSC) ಪರೀಕ್ಷೆಗಳಲ್ಲಿ ಅವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ, ಪ್ರಶ್ನೆ ಪತ್ರಿಕೆ ವಿತರಣೆಯಲ್ಲಿ ದೋಷ ಕಂಡುಬಂದ ಹಿನ್ನೆಲೆಯಲ್ಲಿ ಆಯೋಗವು ಪರೀಕ್ಷೆಯನ್ನು ರದ್ದುಗೊಳಿಸಿದೆ.

ಕಾಂಗ್ರೆಸ್​ ನೇತೃತ್ವದ ಪೇಪರ್​ಲೀಕ್​ ಹಗರಣಗಳು

ಇದು ಪ್ರಶ್ನೆ ಪತ್ರಿಕೆಯಲ್ಲಿನ ದೋಷದ ಮಾತಾದರೆ, ಕಾಂಗ್ರೆಸ್​ ನೇತೃತ್ವದ ಸರ್ಕಾರಗಳಲ್ಲಿ ಎಷ್ಟು ಬಾರಿ ಪ್ರಶ್ನೆ ಪತ್ರಿಕೆ ಲೀಕ್​ ಆಗಿದೆ. ಇದರಲ್ಲಿ ಎಷ್ಟು ಮಂದಿ ಸಚಿವರು ರಾಜೀನಾಮೆ ಕೊಟ್ಟಿದ್ದಾರೆ ಎನ್ನುವ ದೊಡ್ಡ ಪಟ್ಟಿಯೇ ಬಿಡುಗಡೆಯಾಗಿದೆ.

2006ರ ಹಗರಣಗಳ ಪಟ್ಟಿ

2006ರಿಂದ ಮಾತ್ರ ಈ ಪಟ್ಟಿ ಹೇಳುತ್ತದೆ. ಆದರೆ 2006ರಿಂದ ಇಲ್ಲಿಯವರೆಗೆ ಕಾಂಗ್ರೆಸ್​ ಮತ್ತು ಕಾಂಗ್ರೆಸ್​ ಮೈತ್ರಿ ಸರ್ಕಾರಗಳ ನೇತೃತ್ವದ ರಾಜ್ಯಗಳಲ್ಲಿ ಆಗಿರುವ ಪಟ್ಟಿಗಳ ಹಗರಣ ಮಾತ್ರ ತುಸು ದೊಡ್ಡದಾಗಿಯೇ ಇದೆ. ಕುತೂಹಲ ಎಂದರೆ, ಆಗ ವಿದ್ಯಾರ್ಥಿಗಳ ನೋವು ಯಾರಿಗೂ ಕಾಣಿಸಲೇ ಇಲ್ಲ. ವಿದ್ಯಾರ್ಥಿಗಳಿಗೆ ಕಂಬನಿ ಮಿಡಿದು ಪ್ರತಿಭಟನೆಯನ್ನೂ ಮಾಡಲಿಲ್ಲ, ಸಚಿವರ ರಾಜೀನಾಮೆಯನ್ನೂ ಕೇಳಲಿಲ್ಲ. ಈ ಹಿನ್ನೆಲೆಯಲ್ಲಿ ಯಾವೊಬ್ಬ ಕಾಂಗ್ರೆಸ್​ ಸಚಿವ ರಾಜೀನಾಮೆ ನೀಡಲಿಲ್ಲ ಎಂದು ಈ ಪೋಸ್ಟ್​ನಲ್ಲಿ ಟೀಕಿಸಲಾಗುತ್ತಿದೆ. ಈಗ ವಿದ್ಯಾರ್ಥಿಗಳಿಗೆ ಕಣ್ಣೀರು ಇಡುತ್ತಾ ವಿಡಿಯೋ ಮಾಡ್ತಿರೋರೆಲ್ಲಾ ಆಗ ಎಲ್ಲಿ ಅಡಗಿ ಕುಳಿತಿದ್ದರು ಎಂದು ಹಲವರು ಪ್ರಶ್ನೆ ಕೇಳುತ್ತಿದ್ದಾರೆ.

ಅಂದಹಾಗೆ ವೈರಲ್​ ಆಗಿರೋ ಈ ಲಿಸ್ಟ್​ ಒಮ್ಮೆ ನೋಡುವುದಾದರೆ, (ಯಾವೊಬ್ಬ ಶಿಕ್ಷಣ ಸಚಿವ ರಾಜೀನಾಮೆ ನೀಡಿಲ್ಲ)

  • 2006- ಏಮ್ಸ್​ ಎಂಬಿಬಿಎಸ್​ ಪೇಪರ್​ ಲೀಕ್​ (ಕೇಂದ್ರದ UPA ಅವಧಿಯಲ್ಲಿ )
  • 2009- ಹರಿಯಾಣ ಟೀಚರ್​ ರಿಕ್ರೂಟ್​ಮೆಂಟ್​ (ಕಾಂಗ್ರೆಸ್​ ಸರ್ಕಾರ)
  • 2011- AIEEE ಪೇಪರ್ ಲೀಕ್​ (ಕೇಂದ್ರದ UPA ಅವಧಿಯಲ್ಲಿ )
  • 2011- UPPCS (BSP ಅವಧಿಯಲ್ಲಿ)
  • 2012- ಏಮ್ಸ್​ ಎಂಬಿಬಿಎಸ್​ (ಕೇಂದ್ರದ UPA ಅವಧಿಯಲ್ಲಿ ) (ಕಾಂಗ್ರೆಸ್​-UPA)
  • 2012- ರೈಲ್ವೆ ಗ್ರೂಪ್​-ಡಿ ನೇಮಕಾತಿ (ಕಾಂಗ್ರೆಸ್​-UPA)
  • 2012-ಟಿಎನ್​ಪಿಎಸ್​ಸಿ (ಎಐಎಡಿಎಂಕೆ)
  • 2012-ಮುಂಬೈ ವಿಶ್ವವಿದ್ಯಾಲಯ (ಕಾಂಗ್ರೆಸ್)
  • 2012-ಜಮ್ಮು ಮತ್ತು ಕಾಶ್ಮೀರ ಮೆಡಿಕಲ್​ ಅಡ್ಇಷನ್​ (ನ್ಯಾಷನ್​ ಕಾನ್ಫರೆನ್ಸ್​-ಕಾಂಗ್ರೆಸ್​)
  • 2012-ಅಣ್ಣಾ ವಿಶ್ವವಿದ್ಯಾಲಯ (AIADMK)
  • 2013- ಕರ್ನಾಟಕ ಪಿಯುಸಿ (ಕಾಂಗ್ರೆಸ್)
  • 2014- ಸಿಸಿಎಸ್​ಇ ಕ್ಲಾಸ್​ 12 ಭೌತಶಾಸ್ತ್ರ (ಕಾಂಗ್ರೆಸ್-ಯುಪಿಎ)
  • 2015- UPPCS (ಸಮಾಜವಾದಿ ಪಾರ್ಟಿ)
  • 2021- REET (ಕಾಂಗ್ರೆಸ್)
  • 2022- JSSC CGL (ಜೆಎಂಎಂ- ಕಾಂಗ್ರೆಸ್​)
  • 2022- ಬಿಹಾರ ರಿಕ್ರೂಟ್​ಮೆಂಟ್​ (ಮಹಾಘಟಬಂಧನ್​)
  • 2023- ರಾಜಸ್ಥಾನ ಎಸ್​ಐ ನೇಮಕಾತಿ (ಕಾಂಗ್ರೆಸ್)
  • 2023- ಬಿಹಾರ ಶಿಕ್ಷಕರ ನೇಮಕಾತಿ (ಮಹಾಘಟಬಂಧನ್​)
  • 2024- ಜಾರ್ಖಂಡ್​ CGL- (JMM ಅವಧಿಯಲ್ಲಿ)

PREV
Read more Articles on
click me!

Recommended Stories

ಭಾರತದಲ್ಲಿ ಅತಿ ಹೆಚ್ಚು ಮಾತನಾಡುವ 2ನೇ ಭಾಷೆ ಉರ್ದು ಅಲ್ಲ! ಹಾಗಾದ್ರೆ ಮತ್ಯಾವುದು? ಕನ್ನಡಕ್ಕೆ ಎಷ್ಟನೇ ಸ್ಥಾನ?
ಪರೀಕ್ಷೆ ಬರೆಯೋ ಮುನ್ನವೇ SSLC ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರದಿಂದ ಶಾಕ್‌!