ಲೆಕ್ಚರರ್ ಕೆಲಸ ಬಿಟ್ಟು ತರಕಾರಿ ಮಾರಾಟಕ್ಕಿಳಿದ 4 ಮಾಸ್ಟರ್ ಡಿಗ್ರಿ ಹೊಂದಿರುವ ಪಿಹೆಚ್‌ಡಿ ಸ್ಕಾಲರ್

By Anusha KbFirst Published Jan 2, 2024, 3:38 PM IST
Highlights

ಪಂಜಾಬ್‌ನ ವ್ಯಕ್ತಿಯೊಬ್ಬ ಪಿಹೆಚ್‌ಡಿ ಸ್ಕಾಲರ್ ಆಗಿರುವುದರ ಜೊತೆಗೆ 4 ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದು, ಆದರೂ ಉಪನ್ಯಾಸಕನ ವೃತ್ತಿ ತೊರೆದು ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ. ತಳ್ಳು ಗಾಡಿಯೊಂದರಲ್ಲಿ ತರಕಾರಿ ತುಂಬಿ ಮಾರಾಟ ಮಾಡುವ ಇವರಿಗೆ ಓದಿದ ವಿದ್ಯೆ ನೀಡುವುದಕ್ಕಿಂತ ಹೆಚ್ಚಿನ ದುಡ್ಡನ್ನು ಈ ತರಕಾರಿ ಮಾರುವ ಕೆಲಸ ತಂದು ಕೊಡುತ್ತಿದೆಯಂತೆ.

ಪಂಜಾಬ್‌ನ ವ್ಯಕ್ತಿಯೊಬ್ಬ ಪಿಹೆಚ್‌ಡಿ ಸ್ಕಾಲರ್ ಆಗಿರುವುದರ ಜೊತೆಗೆ 4 ಮಾಸ್ಟರ್ ಡಿಗ್ರಿಯನ್ನು ಹೊಂದಿದ್ದು, ಆದರೂ ಆತ ಉಪನ್ಯಾಸಕನ ವೃತ್ತಿ ತೊರೆದು ತರಕಾರಿ ಮಾರಾಟದಲ್ಲಿ ತೊಡಗಿದ್ದಾರೆ. ತಳ್ಳು ಗಾಡಿಯೊಂದರಲ್ಲಿ ತರಕಾರಿ ತುಂಬಿಕೊಂಡು ಮಾರಾಟ ಮಾಡುವ ಈತನಿಗೆ ಈತ ಓದಿದ ವಿದ್ಯೆ ನೀಡುವುದಕ್ಕಿಂತ ಹೆಚ್ಚಿನ ದುಡ್ಡನ್ನು ಈ ತರಕಾರಿ ಮಾರುವ ಕೆಲಸ ತಂದು ಕೊಡುತ್ತಿದೆಯಂತೆ. ಈತ ತನ್ನ ಗಾಡಿಯಲ್ಲಿ ಪಿಹೆಚ್‌ಡಿ ಸಬ್ಜಿವಾಲಾ ಎಂದು ಬರೆದುಕೊಂಡಿದ್ದಾನೆ(ಅಂದರೆ ಪಿಹೆಚ್‌ಡಿ ತರಕಾರಿ ಮಾರಾಟಗಾರ ಎಂದು)

ಅಂದಹಾಗೆ ಇವರ ಹೆಸರು ಸಂದೀಪ್ ಸಿಂಗ್, ವಯಸ್ಸು 39 ವರ್ಷ, ತರಕಾರಿ ಮಾರಾಟ ಮಾಡುವ ಮೊದಲು ಅವರು ಪಂಜಾಬ್ ವಿಶ್ವವಿದ್ಯಾಲಯಕ್ಕೆ ಸೇರುವ ಪಟಿಯಾಲದಲ್ಲಿ ಗುತ್ತಿಗೆ ಆಧಾರದಲ್ಲಿ ಉಪನ್ಯಾಸಕನ ವೃತ್ತಿ ನಿರ್ವಹಿಸುತ್ತಿದ್ದರು. ಆದರೆ ಸಮಯಕ್ಕೆ ಸರಿಯಾಗಿ ಹಣ ಕೈಗೆ ಸಿಗದ ಕಾರಣ ಅವರು ಆ ವೃತ್ತಿಯನ್ನು ತೊರೆದು ಈಗ ತರಕಾರಿ ಮಾರುವ ಕೆಲಸಕ್ಕೆ ಇಳಿದಿದ್ದಾರೆ.

ಇಂಥಾ ತರಕಾರಿ ದಿನಾ ತಿಂದ್ರೆ ಒಂದೇ ವಾರದಲ್ಲಿ ತೂಕ ಕಡಿಮೆ ಮಾಡ್ಕೋಬೋದು!

ಸಂದೀಪ್ ಸಿಂಗ್ ಪಂಜಾಬ್ ವಿವಿಯ ಕಾನೂನು ವಿಭಾಗದಲ್ಲಿ 10 ವರ್ಷಗಳ ಕಾಲ ಗುತ್ತಿಗೆ ಆಧಾರದಲ್ಲಿ ಪ್ರೊಫೆಸರ್ ಆಗಿ ಕೆಲಸ ಮಾಡಿದ್ದಾರೆ. ಕಾನೂನು ವಿಷಯದಲ್ಲಿ ಪಿಹೆಚ್‌ಡಿ ಮಾಡಿರುವ ಇವರು ಪಂಜಾಬಿ, ಪತ್ರಿಕೋದ್ಯಮ ಹಾಗೂ ರಾಜಕೀಯ ಶಾಸ್ತ್ರದಲ್ಲಿ ಮಾಸ್ಟರ್ ಡಿಗ್ರಿಯನ್ನು ಪಡೆದಿದ್ದಾರೆ. ಇದರ ಜೊತೆಗೆ ಅಧ್ಯಯನ ಮುಂದುವರಿಸುತ್ತಲೇ ಇದ್ದಾರೆ. ಸಂಬಳದಲ್ಲಿ ಕಡಿತ ಹಾಗೂ ಸರಿಯಾದ ಸಮಯಕ್ಕೆ ಸ್ಯಾಲರಿ ಆಗದೇ ಇರುವುದರಿಂದ ನನಗೆ ಜೀವನ ನಡೆಸುವುದಕ್ಕೆ ಕಷ್ಟವಾಗಲು ಶುರುವಾಯ್ತು ಹೀಗಾಗಿ ತಾನು ಕೆಲಸ ತೊರೆದು ತರಕಾರಿ ಮಾರಾಟ ಮಾಡುವ ಹೊಸ ವೃತ್ತಿ ಶುರು ಮಾಡಿದೆ ಹೇಳಿಕೊಂಡಿದ್ದಾರೆ ಸಂದೀಪ್. 

ಸಂದೀಪ್ ಮಾರೋ ತರಕಾರಿ ಗಾಡಿಯಲ್ಲಿ ಇವರ ವಿದ್ಯಾರ್ಹತೆಯೂ ಎದ್ದು ಕಾಣುತ್ತಿದೆ. ಪಿಹೆಚ್ಡಿ ಸಬ್ಜಿವಾಲಾ ಎಂದು ಬರೆದುಕೊಂಡಿದ್ದಾರೆ. ಪ್ರತಿ ಮನೆ ಮನೆಗೆ ಹೋಗಿ ತರಕಾರಿ ಮಾರುವ ಸಂದೀಪ್ ಅವರು ನನಗೆ ಪ್ರೊಫೆಸರ್ ಆಗಿ ಬರುವ ಸಂಬಳಕ್ಕಿಂತ ಹೆಚ್ಚು ದುಡ್ಡು ಈ ತರಕಾರಿ ಮಾರುವ ವೃತ್ತಿಯಲ್ಲಿ ಬರ್ತಿದೆ ಎಂದು ಹೇಳಿಕೊಂಡಿದ್ದಾರೆ. ಇಡೀ ದಿನ ತರಕಾರಿ ಮಾರುವ ಅವರು ತಮ್ಮ ಕೆಲಸ ಮುಗಿಯುತ್ತಿದ್ದಂತೆ ಮನೆಗೆ ಹೋಗಿ ನಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳುತ್ತಾರಂತೆ. ಉಪನ್ಯಾಸಕ ವೃತ್ತಿಯಿಂದ ಬ್ರೇಕ್ ತೆಗೆದುಕೊಂಡಿದ್ದರೂ ಸಂದೀಪ್ ಸಿಂಗ್ ಮಾತ್ರ ತಮ್ಮ ಶಿಕ್ಷಣದ ಮೇಲಿನ ಆಸಕ್ತಿ ಕಳೆದುಕೊಂಡಿಲ್ಲ,  ಹಣ ಉಳಿಸಿ ತನ್ನದೇ ಆದ ಟ್ಯೂಷನ್ ಸೆಂಟರ್ ಆರಂಭಿಸುವ ಗುರಿ ಹೊಂದಿದ್ದಾರೆ ಸಂದೀಪ್ ಸಿಂಗ್.

ತರಕಾರಿ ಮಾರೋ ಕುಟುಂಬದ ಹುಡುಗ ಈಗ ಜಗತ್ತಿನ ಅತೀ ಕಿರಿಯ ಬಿಲಿಯನೇರ್‌, ಆಸ್ತಿ ಮೌಲ್ಯ ಭರ್ತಿ 33 ಕೋಟಿ!

click me!