ರಜೆಯಲ್ಲಿ ಮಾಡಬಹುದಾದ ಪಾರ್ಟ್ ಟೈಮ್ ಉದ್ಯೋಗಗಳು

By Web Desk  |  First Published May 15, 2019, 4:27 PM IST

ನೀವು ಕಾಲೇಜಿಗೆ ಹೋಗುತ್ತಿದ್ದೀರಾ..? ಈಗ ಎಲ್ಲಾ ಎಕ್ಸಾಂ ಮುಗಿದು ರಜೆ ಸಿಕ್ರೇ ಏನ್ಮಾಡ್ತೀರಾ..? ಸುಮ್ಮನೆ ಟೈಮ್ ವೇಸ್ಟ್ ಮಾಡಬೇಡಿ. ಬದಲಾಗಿ ಪಾರ್ಟ್ ಟೈಮ್ ಕೆಲಸಗಳನ್ನು ಮಾಡಬಹುದು... ಹಾಗಾದ್ರೆ ಯಾವೆಲ್ಲ ಪಾರ್ಟ್ ಟೈಮ್ ಕೆಲಸಗಳನ್ನು ಮಾಡಬಹುದು. ಇಲ್ಲಿವೆ ನೋಡಿ 


ರಜೆಯಲ್ಲಿ ಸುಮ್ಮನೆ ಮನೇಲಿ ಕುಳಿತು ಕಾಲ ಕಳೆಯೋದಾ? ಅದರ ಬದಲಾಗಿ ಪಾರ್ಟ್ ಟೈಮ್ ಕೆಲಸ ಮಾಡಿದರೆ ಕೈಗೆ ಹಣವೂ ಬರುತ್ತದೆ. ಜೊತೆಗೆ ಸಮಯದ ಸದುಪಯೋಗವೂ ಆಗುತ್ತದೆ. ರಜಾ ಸಮಯದಲ್ಲಿ ಯಾವೆಲ್ಲಾ ಪಾರ್ಟ್ ಟೈಮ್ ಕೆಲಸ ಮಾಡಬಹುದು?.

ಹೆಚ್ಚಿನ ಉದ್ಯೋಗಗಳ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Tap to resize

Latest Videos

ಲೈಬ್ರರಿ ಸರ್ವೀಸ್: ಓದಿನಲ್ಲಿ ಮುಂದೆ ಬರಲು ಬಯಸಿದವರು ಲೈಬ್ರರಿ ಸರ್ವೀಸ್ ಕೆಲಸ ಮಾಡಬಹುದು. ಇದರಲ್ಲಿ ನೀವು ಲೈಬ್ರರಿಯಲ್ಲಿ ಕೆಲಸ ಮಾಡುತ್ತಾ ಇತರರಿಗೆ ಸಹಕರಿಸಬಹುದು. ಈ ಕೆಲಸ ಮಾಡುತ್ತಾ ನೀವು ದೇಶ ವಿದೇಶದ ಪುಸ್ತಕಗಳನ್ನೂ ಓದಿ. 

ಫಿಟ್‌ನೆಸ್ ಟ್ರೈನರ್: ಬೆಳಗ್ಗೆ ಎಕ್ಸರ್‌ಸೈಜ್ ಮಾಡುವ ಹಾಗೂ ಕಲಿಸುವ ಅಭ್ಯಾಸವಿದ್ದರೆ, ನೀವು ಫಿಟ್‌ನೆಸ್ ವೈದ್ಯರಾಗಬಹುದು. ಉತ್ತಮ ಜಿಮ್ ಅಥವಾ ಫಿಟ್‌ನೆಸ್ ಕ್ಲಾಸಿನಲ್ಲಿ ನೀವು ನಿಮ್ಮ ಸಮಯ ಕಳೆಯಬಹುದು. 

ಕೆಲಸ ಬಿಡುವ ಸಮಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ....

ಟೂರ್ ಗೈಡ್: ಇತ್ತೀಚಿಗೆ  ಟ್ರಾವೆಲ್ ಏಜನ್ಸಿಗಳಲ್ಲಿ ಫ್ರೆಷರ್ಸ್ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಟ್ರೈನಿಂಗ್ ನೀಡಿ ಎರಡು ತಿಂಗಳ ಕೆಲಸವನ್ನೂ ನೀಡಲಾಗುತ್ತದೆ. ಈ ಕೆಲಸದಿಂದ ಹಣವೂ ಸಿಗುತ್ತದೆ. ಎಲ್ಲೆಡೆ ತಿರುಗಾಡಲು ಸಾಧ್ಯವಾಗುತ್ತದೆ. 

ರಿಟೈಲ್ಸ್‌ಶಾಪ್: ಮಾಲ್‌ಗಳಲ್ಲಿ ರಿಟೈಲ್ಸ್‌ಶಾಪ್‌ಗಳಲ್ಲಿಯೂ ಕೆಲಸ ಮಾಡಬಹುದು. ಕಾಲೇಜು ಮುಗಿದು ಒಂದೆರಡು ತಿಂಗಳು ರಜೆ ಇರುವಾಗ ಅಥವಾ ಪಾರ್ಟ್ ಟೈಮ್ ಕೆಲಸವಾಗಿಯೂ ಸೇರಬಹುದು. ಇದರಿಂದ ಕಲಿಕೆ ಜೊತೆ ಸುಲಭವಾಗಿ ಗಳಿಸಬಹುದು. 

PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್

ಹೋಮ್ ಟ್ಯೂಷನ್: ಶಾಲಾ ಮಕ್ಕಳಿಗೆ ಕಳಿಸುವುದು ನಿಮಗೆ ಇಷ್ಟವಾಗುತ್ತದೆ ಎಂದಾದರೆ ನೀವು ಹೋಮ್ ಟ್ಯೂಷನ್ ಅಥವಾ ಕೋಚಿಂಗ್ ಕ್ಲಾಸ್ ಮಾಡಬಹುದು. ಇದರಿಂದಲೂ ಕಲಿಕೆ ಮತ್ತು ಗಳಿಕೆ ಸಾಧ್ಯ. 

ಹವ್ಯಾಸಗಳನ್ನೇ ಟ್ರೈನಿಂಗ್ ನೀಡಿ: ನಿಮ್ಮಲ್ಲಿ ಡಾನ್ಸ್, ಚಿತ್ರಕಲೆ, ಕಸೂತಿ, ಕ್ರಾಫ್ಟ್ ಮೊದಲಾದ ಕಲೆ ಇದ್ದರೆ ರಜಾ ಸಮಯದಲ್ಲಿ ಕ್ಲಾಸ್ ಮಾಡಿ. ಇವುಗಳನ್ನು ಹೇಳಿಕೊಡಬಹುದು. ಟ್ರೇನಿಂಗ್ ಕೊಡುವುದರಿಂದ ನಿಮ್ಮ ಹವ್ಯಾಸ ಉತ್ತಮ ರೀತಿಯಲ್ಲಿ ಮೂಡಿ ಬರುತ್ತದೆ. ಅಲ್ಲದೆ ಗಳಿಕೆಯೂ .

click me!