7 ಕೋಟಿ 60 ಲಕ್ಷ ಮೌಲ್ಯದ ರಸ್ತೆ ಕಾಮಗಾರಿಯಲ್ಲಿ ಕಳಪೆ ವಾಸನೆ : ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

Published : May 08, 2022, 12:42 PM IST
7 ಕೋಟಿ 60 ಲಕ್ಷ ಮೌಲ್ಯದ ರಸ್ತೆ ಕಾಮಗಾರಿಯಲ್ಲಿ ಕಳಪೆ ವಾಸನೆ : ಕ್ರಮಕ್ಕೆ ಗ್ರಾಮಸ್ಥರ ಆಗ್ರಹ

ಸಾರಾಂಶ

ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣ ವಾಗುತ್ತಿರುವ ರಸ್ತೆ  ಧಾರವಾಡ ತಾಲೂಕಿನ  ಅಮ್ಮಿನಭಾವಿ ಗ್ರಾಮದ ರಸ್ತೆ ಕಳಪೆ ಕಾಮಗಾರಿ ಎಂದು ಗ್ರಾಮಸ್ಥರ ಆರೋಪ

ಪರಮೇಶ್ವರ ಅಂಗಡಿ, ಏಷ್ಯಾನೆಟ್ ಸುವರ್ಣ ನ್ಯೂಸ್ ಧಾರವಾಡ 
ಧಾರವಾಡ : ಹಳ್ಳಿಗಳು ಅಭಿವೃದ್ದಿ ಆದರೆ ಪಟ್ಟಣಗಳು ಅಭಿವೃದ್ದಿ ಆಗುತ್ತವೆ ಅನ್ನೋ ಮಾತುಗಳು ಇವೆ. ಆದರೆ ಸರಕಾರ ಕೋಟಿ ಕೋಟಿ ಹಣ ಖರ್ಚು ಮಾಡಿದರೆ ಎನ್ ಪ್ರಯೋಜನೆ? ಬಿಡುಗಡೆ ಮಾಡಿದ ಹಣದಷ್ಡು ಕೆಲಸ ಆಗುತ್ತಿದೆಯೋ ಇಲ್ಲವೋ ಎಂಬುದನ್ನ ಪರಿಶಿಲನೆ ಮಾಡಬೇಕಿದೆ. ಯಾಕೆಂದ್ರೆ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆ ಅಡಿಯಲ್ಲಿ ಕೇಂದ್ರ ಸರಕಾರ (Central Govt) ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಿದೆ ಕೋಟ್ಯಂತರ ಹಣ ಅಭಿವೃದ್ಧಿಗೆ ಬಿಡುಗಡೆ ಮಾಡುತ್ತಿದೆ. ಆದರೆ ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಸರಕಾರವನ್ನ ಬಯ್ಯುವಂತಾಗಿದೆ.

ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ನಿರ್ಮಾಣವಾಗುತ್ತಿರುವ ರಸ್ತೆ ಕಳಪೆ ಯಾಗುತ್ತಿದೆ ಎಂದು ಗ್ರಾಮಸ್ಥರು ವಿರೋಧ ಮಾಡಿರುವ ಘಟನೆ ಧಾರವಾಡ (Dharwada) ತಾಲೂಕಿನ  ಅಮ್ಮಿನಭಾವಿ (Amminabhavi)ಗ್ರಾಮದಲ್ಲಿ ನಡೆದಿದೆ. 2021-22 ರ ಸಾಲಿನಲ್ಲಿ ಪ್ರಧಾನಮಂತ್ರಿ ಗ್ರಾಮೀಣ ಸಡಕ್ ಯೋಜನೆಯಡಿಯಲ್ಲಿ ತಿಮ್ಮಾಪೂರ ಗ್ರಾಮದಿಂದ ಮೊರಬ ಗ್ರಾಮದವರೆಗೆ ಒಟ್ಟು 9 ಕಿಲೋ ಮೀಟರ್ ರಸ್ತೆಯನ್ನು 7 ಕೋಟಿ 60 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಆದರೆ ಕಳೆದ 9 ತಿಂಗಳಿಂದ ನಡೆದ ರಸ್ತೆ ಕಾಮಗಾರಿಯಲ್ಲಿ (Construction) ಕಳಪೆ ಮಣ್ಣು ಬಳಕೆ ಮಾಡಿ ರಸ್ತೆಯನ್ನ ಮಾಡುತ್ತಿದ್ದಾರೆ ಎಂದು ಅಮ್ಮಿನಭಾವಿ ಗ್ರಾಮ ಪಂಚಾಯತಿ ಸದಸ್ಯರು ಮತ್ತು ಗ್ರಾಮಸ್ಥರು ಗುತ್ತಿಗೆದಾರರ ವಿರುದ್ದ ಗಂಬೀರ ಆರೋಪ ಮಾಡಿದ್ದಾರೆ.

MES Flyover: ಬೆಂಗ್ಳೂರಲ್ಲಿ ಮತ್ತೊಂದು ಫ್ಲೈಓವರ್‌ ಅಪಾಯದಲ್ಲಿ..!

ಈ ಕುರಿತು ಹಿರಿಯ ಅಧಿಕಾರಿಗಳಿಗೆ ಗ್ರಾಮಸ್ಥರು ಕೇಳಿಕೊಂಡಿದ್ದರು ಕಳಪೆ ರಸ್ತೆಯ ಬಗ್ಗೆ ಅಧಿಕಾರಿಗಳು ಸಹ ಗುತ್ತಿಗೆದಾರರಿಗೆ ಸೂಚನೆಯನ್ನು ನೀಡಿದ್ದರು ಗುತ್ತಿಗೆದಾರ ಕ್ಯಾರೆ ಎನ್ನದೆ ರಸ್ತೆಯನ್ನ ನಿರ್ಮಾಣ ಮಾಡುತ್ತಿದ್ದಾನೆ ಎಂದು ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಈ ಕುರಿತು ಅಧಿಕಾರಿಗಳನ್ನ ಕೇಳಿದರೆ ನಾವೂ ಗುಣಮಟ್ಟದ ರಸ್ತೆಯ ಬಗ್ಗೆ ಪರಿಶಿಲನೆ ಮಾಡಿ ಯಾರೇ ಕಳಪೆ ರಸ್ತೆ ಮಾಡಿದರೂ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ, ನಮ್ಮ  ಸೆಕ್ಷನ್ ಆಫೀಸರ್ ಅವರನ್ನ ಸ್ಥಳಕ್ಕೆ ಕಳುಹಿಸಿ ಪರಿಶೀಲನೆ ಮಾಡುತ್ತೇವೆ. ಮಳೆಗಾಲದಲ್ಲಿ ಜನರಿಗೆ ಒಳ್ಳೆಯ ರಸ್ತೆಯನ್ನು ನಿರ್ಮಾಣ ಮಾಡಲು ನಾವೂ ಕೂಡಾ ಕೆಲಸ ಮಾಡಿಸುತ್ತೇವೆ ಅಂತ ಹೇಳ್ತಾರೆ ಅಧಿಕಾರಿಗಳು.

ಅಧಿಕಾರಿ, ಗುತ್ತಿಗೆದಾರರ ಕಳಪೆ ಕಾಮಗಾರಿ, ಬಾವಿಗಳ ನೀರು ಉಪ್ಪಾಗಿ ಪರಿವರ್ತನೆ

ಗುತ್ತಿಗೆದಾರ  ಕಳಪೆ ರಸ್ತೆ  ಮಾಡುತ್ತಿರುವುರ ಬಗ್ಗೆ ಸುವರ್ಣ ನ್ಯೂಸ್ ಅಧಿಕಾರಿಗಳ ಗಮನಕ್ಕೆ ತಂದಿದೆ. ಇನ್ನು ಅಧಿಕಾರಿಗಳು ಗುಣಮಟ್ಟದ ರಸ್ತೆಯನ್ನು ಮಾಡುವಲ್ಲಿ ಕೆಲಸ ಮಾಡ್ತಾರೋ ಇಲ್ಲವೋ ಎಂಬುದನ್ನ ಕಾದು ನೋಡಬೇಕಿದೆ.


ಹುಬ್ಬಳ್ಳಿ-ಧಾರವಾಡದ BRTSಗೆ ಕಳಪೆ ಕಾಮಗಾರಿ ಸಂಕಟ!
ಈ ಬಸ್‌ ಓಡಾಡಾಕ ಶುರುವಾಗಿ ಎರಡು ವರ್ಸಾತು, ಕೆಲಸ ಮಾತ್ರ ಇನ್ನೂ ಮುಗಿದಿಲ್ಲ. ಅಷ್ಟರೊಳಗೆ ಪದೇ ಪದೇ ಸೇತುವೆಗೆ ಸೇತುವೆಯೇ ಕುಸಿಯುತ್ತಿದೆ. ಇದು ಹುಬ್ಬಳ್ಳಿ-ಧಾರವಾಡ ಮಹಾನಗರದ ಮಧ್ಯೆ ತ್ವರಿತ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಪ್ರಾರಂಭಿಸಲಾಗಿರುವ, ಬಹುನಿರೀಕ್ಷಿತ ಬಿಆರ್‌ಟಿಎಸ್‌ (ಚಿಗರಿ) ಬಸ್‌ ಸೇವೆ ಬಗ್ಗೆ ಸಾರ್ವಜನಿಕರು ವ್ಯಕ್ತಪಡಿಸುವ ಆಕ್ರೋಶದ ನುಡಿಗಳು. ಇದಕ್ಕೆ ಕಾರಣವೂ ಇಲ್ಲದಿಲ್ಲ. ಬರೀ ಎಂಟ್ಹತ್ತು ದಿನಗಳಲ್ಲಿ ನವಲೂರು ಬ್ರಿಡ್ಜ್‌ ಎರಡು ಬಾರಿ ಕುಸಿದಿದೆ. ಈ ಮೂಲಕ ಬಿಆರ್‌ಟಿಎಸ್‌ ಕಾಮಗಾರಿ ತೀರಾ ಕಳಪೆಯಾಗಿದೆ ಎಂಬುದಕ್ಕೆ ಸಾಕ್ಷಿ ನೀಡಿದಂತಾಗಿದೆ ಎಂದು ಸಾರ್ವಜನಿಕರು, ಜನಪ್ರತಿನಿಧಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇದನ್ನು ಅಧಿಕಾರಿ ವರ್ಗ ಮಾತ್ರ ತಳ್ಳಿ ಹಾಕುತ್ತಿದೆ. ಯಾವುದೇ ಬಗೆಯ ಕಳಪೆ ಕಾಮಗಾರಿಯಾಗಿಲ್ಲ ಎಂದು ಸ್ಪಷ್ಟಪಡಿಸುತ್ತಾರೆ.

PREV
click me!

Recommended Stories

ಡಿವೈಡರ್‌ಗೆ ಕಾರ್‌ ಡಿಕ್ಕಿ, ಕುಟುಂಬವನ್ನು ಭೇಟಿ ಮಾಡಲು ಹೋಗುತ್ತಿದ್ದ ಲೋಕಾಯುಕ್ತ ಇನ್ಸ್‌ಪೆಕ್ಟರ್‌ ಸಜೀವ ದಹನ
ವಧು-ವರ ಇಲ್ಲದೆ ಹುಬ್ಬಳ್ಳೀಲಿ ಆರತಕ್ಷತೆ!