ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಕಿತ್ತಾಟ ಜೋರಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಗಾಗಿ ಮಾಜಿ ಸಚಿವ ಸಂತೋಷ ಲಾಡ್, ಹಾಗೂ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಪರಸ್ಪರ ಕಿತ್ತಾಟ ನಡೆಸಿದ್ದಾರೆ.
ಹುಬ್ಬಳ್ಳಿ (ಎ.29): ರಾಜ್ಯ ಕಾಂಗ್ರೆಸ್ ಮಾತ್ರವಲ್ಲ, ಜಿಲ್ಲಾ ಕಾಂಗ್ರೆಸ್ ಘಟಕಗಳಲ್ಲೂ ಬಣ ರಾಜಕೀಯ ಮಿತಿಮೀರಿದೆ. ಇದನ್ನು ನಾವು ಹೇಳುತ್ತಿಲ್ಲ. ಸ್ವಂತ ಕಾಂಗ್ರೆಸ್ ನಾಯಕರೇ ಹೇಳವ ಮಾತಿದು. ವಿಧಾನಸಭೆ ಚುನಾವಣೆ ಇನ್ನೂ ಒಂದು ವರ್ಷ ಇರುವಾಗಲೇ ಧಾರವಾಡ ಜಿಲ್ಲಾ ಕಾಂಗ್ರೆಸ್ ನಲ್ಲಿ ಕಿತ್ತಾಟ ಜೋರಾಗಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದ ಟಿಕೇಟ್ ಗಾಗಿ ಮಾಜಿ ಸಚಿವ ಸಂತೋಷ ಲಾಡ್, ಹಾಗೂ ಮಾಜಿ ಪರಿಷತ್ ಸದಸ್ಯ ನಾಗರಾಜ ಛಬ್ಬಿ ಪರಸ್ಪರ ಕಿತ್ತಾಟ ನಡೆಸಿದ್ದಾರೆ. ನಾಗರಾಜ ಛಬ್ಬಿಕೆಪಿಸಿಸಿ ಅಧ್ಯಕ್ಷ ಡಿಕೆಶಿ ಬಣದಲ್ಲಿ ಗುರುತಿಸಿಕೊಂಡಿದ್ರೆ, ಸಂತೋಷ ಲಾಡ್ ಸಿದ್ದರಾಮಯ್ಯ ಪರಮ ಆಪ್ತ. ಈಗಾಗಲೇ ಕ್ಷೇತ್ರದಲ್ಲಿ ಇಬ್ಬರು ನಾಯಕರು ಬಹಿರಂಗ ಪ್ರಚಾರ ನಡೆಸುತ್ತಿದ್ದಾರೆ.
ಇದರ ಮಧ್ಯೆ ಧಾರವಾಡ ಜಿಲ್ಲಾ ಕಾಂಗ್ರೆಸ್‌ನ ಘಟಕದಲ್ಲೂ ಬಿರುಕು ಮೂಡಿದ್ದು, ಧಾರವಾಡ ಜಿಲ್ಲಾ ಗ್ರಾಮೀಣ ಘಟಕಕ್ಕೆ ಒಂದು ದಾರಿಯಾದ್ರೆ ಹುಬ್ಬಳ್ಳಿ-ಧಾರವಾಡ ಮಹಾನಗರ ಘಟಕದ್ದೂ ಇನ್ನೊಂದು ದಾರಿ. ಇತ್ತೀಚೆಗೆ ಕಾಂಗ್ರೆಸ್ ಮುಖಂಡರು ಹುಬ್ಬಳ್ಳಿಯಲ್ಲಿ ಸಭೆ ಸೇರಿದ್ರು. ಅದರಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಜಿಲ್ಲಾ ಕಾಂಗ್ರೆಸ್ ಹಾಗೂ ಧಾರವಾಡ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರುಗಳು ಸೇರಿದಂತೆ ಶಾಸಕರು, ಮಾಜಿ ಶಾಸಕರುಗಳು ಭಾಗವಹಿಸಿದ್ದರು.
undefined
Chikkamagaluru ಮೇಕೆ ಮರಿ ನುಂಗಿ ಗಡದ್ದಾಗಿ ನಿದ್ದೆ ಮಾಡಿದ್ದ ಹೆಬ್ಬಾವು ಸೆರೆ
ಸಭೆಯಲ್ಲಿ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ್ ಪಾಟೀಲ ಅಸಮಾಧಾನ ಹೊರಹಾಕಿದ್ದಾರೆ. ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿ ಗ್ರಾಮೀಣ ಜಿಲ್ಲಾಧ್ಯಕ್ಷ ಅನೀಲಕುಮಾರ ಪಾಟೀಲ್, ಶಾಸಕ ಪ್ರಸಾದ್ ಅಬ್ಬಯ್ಯನ ಎದುರು ತರಾಟೆಗೆ ತೆಗೆದುಕೊಂಡರು.
ಅನೀಲ್ ಕುಮಾರ್ ಪಾಟೀಲ್ ಏನ್ ಹೇಳಿದ್ರು?: ಇನ್ನೂ ಪಕ್ಷದ ಯಾವುದೇ ಮೀಟಿಂಗ್‌ಗಳಿಗೆ ನಮಗೆ ಹೇಳುವುದಿಲ್ಲ, ಧಾರವಾಡ ಜಿಲ್ಲೆಯ ಕಾಂಗ್ರೆಸ್ ಸ್ಥಿತಿ ಪ್ರೈವೇಟ್ ಲಿಮಿಟೆಡ್ ಕಂಪನಿ ಆಗಿದೆ. ನಾವು ರಕ್ತ ಸುಟ್ಟುಕೊಂಡು ಪಕ್ಷವನ್ನು ಕಟ್ಟಿದ್ದೇವೆ, ನಾವು ಸುಮ್ಮನೆ ಕುಳಿತುಕೊಳ್ಳುವ ಮಾತೆ ಇಲ್ಲ. ಪಕ್ಷದ ಸಿದ್ದಾಂತಗಳ ಮೇಲಾದ್ರೂ ನಮ್ಮನ್ನ ಕರೆಯಿರಿ. ಇಲ್ಲಿ ಯಾರೋ ಬರ್ತಾರೆ, ಯಾರೋ ಹೋಗ್ತಾರೆ ನಮ್ಮಲ್ಲಿ ಯಾವುದೇ ಒಗ್ಗಟ್ಟಿಲ್ಲ.
ಬಿಜೆಪಿ ಸರ್ಕಾರದಿಂದ ಕ್ರೈಸ್ತ ಸಂಸ್ಥೆಗಳ ಟಾರ್ಗೆಟ್: ಬೆಂಗಳೂರು ಬಿಷಪ್ ಆರೋಪ
ಇದರಿಂದಾಗಿ ಯಾವುದೇ ಹೋರಾಟ ಮಾಡುವಾಗ 10-15 ಕಾರ್ಯಕರ್ತರನ್ನ ಸೇರಿಸುವುದು ನಮ್ಮ ಕಡೆಯಿಂದ ಆಗುತ್ತಿಲ್ಲ.ಈ ರೀತಿಯಲ್ಲಿ ನಮ್ಮ ಜಿಲ್ಲೆಯಲ್ಲಿ ಪಕ್ಷ ಸಂಘಟನೆ ಮಾಡುವುದು ಹೇಗೆ. ಇದೇ ರೀತಿ ಆದ್ರೆ ಇನ್ನೂ ಇಪ್ಪತ್ತು ವರ್ಷಗಳಾದ್ರೂ ಇಲ್ಲಿಯ ಬಿಜೆಪಿಯನ್ನು ನಾವು ಏನೂ ಮಾಡಲಿಕ್ಕೆ ಆಗುವುದಿಲ್ಲ. ಕಾಂಗ್ರೆಸ್ ಪಕ್ಷ ಪ್ರೈವೇಟ್ ಲಿಮಿಟೆಡ್ ಕಂಪನಿ ಅಲ್ಲ, ನೀವು ಆ ಕಡೆ, ನಾವು ಈ ಕಡೆ ಆಗಬಾರದೆಂದ ಅನೀಲಕುಮಾರ ಪಾಟೀಲ್ ಗುಡುಗಿದ್ದರು ಸಭೆಯಲ್ಲಿದ್ದ ಶಾಸಕರು ಮಾಜಿ ಶಾಸಕರು ಮೌನವಾಗಿದ್ದರು.