BSY ಆಡಿಯೋ ರೆಕಾರ್ಡ್: ಹೋಟೆಲ್‌ ಮ್ಯಾನೇಜರ್‌ಗೆ ನೋಟಿಸ್‌

By Web Desk  |  First Published Nov 6, 2019, 7:19 AM IST

ಇಂದು ವಿಚಾರಣೆಗೆ ಬರುವಂತೆ ನೋಟಿಸ್‌|ಆಡಿಯೋ ಪ್ರಕರಣದ ತನಿಖೆ| ಬಿಜೆಪಿ ಸಭೆ ಆಯೋಜನೆಯಾಗಿದ್ದ ಖಾಸಗಿ ಹೊಟೇಲ್‌ನ ಸಿಬ್ಬಂದಿಯಿಂದ ಕೆಲ ಮಾಹಿತಿ ಪಡೆದ ಪೊಲೀಸ್‌ ಅಧಿಕಾರಿ| ಹೋಟೆಲ್‌ನ ಪ್ರಾಂಗಣ, ಪ್ರವೇಶದ್ವಾರದ ಬಳಿಯಿರುವ ಎಲ್ಲ ಸಿಸಿ ಕ್ಯಾಮೆರಾಗಳ ಪರಿಶೀಲನೆ|  ಹೋಟೆಲ್‌ ಸಿಬ್ಬಂದಿ ವಿಚಾರಣೆ|


ಹುಬ್ಬಳ್ಳಿ[ನ.6]: ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರದ್ದು ಎನ್ನಲಾದ ಆಡಿಯೋ ಪ್ರಕರಣದ ವಿಚಾರಣೆಗೆ ಬರುವಂತೆ ಬಿಜೆಪಿ ಸಭೆ ಆಯೋಜನೆಯಾಗಿದ್ದ ಹುಬ್ಬಳ್ಳಿಯ ಖಾಸಗಿ ಹೊಟೇಲ್‌ ಮ್ಯಾನೇಜರ್‌ಗೆ ಪೊಲೀಸರು ನೋಟಿಸ್‌ ನೀಡಿದ್ದಾರೆ.

ಆಡಿಯೋ ರೆಕಾರ್ಡ್ ಮಾಡಿರೋದು ಬಿಜೆಪಿಯವರೆ ಎಂದ ಮಾಜಿ ಸಿಎಂ

Latest Videos

undefined

ಆಡಿಯೋ ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ಮಂಗಳವಾರ ನಗರಕ್ಕೆ ಆಗಮಿಸಿ ಬಿಜೆಪಿ ಸಭೆ ಆಯೋಜನೆಯಾಗಿದ್ದ ಖಾಸಗಿ ಹೊಟೇಲ್‌ನ ಸಿಬ್ಬಂದಿಯಿಂದ ಕೆಲ ಮಾಹಿತಿ ಪಡೆದರು. ಈ ಸಂದರ್ಭದಲ್ಲಿ ಹೊಟೇಲ್‌ ಮ್ಯಾನೇಜರ್‌ ಪರಸ್ಥಳದಲ್ಲಿದ್ದರು. ಬುಧವಾರ ಬೆಂಗಳೂರಿಗೆ ಬಂದು ವಿವರಣೆ ನೀಡುವಂತೆ ಅವರಿಗೆ ನೋಟಿಸ್‌ ನೀಡಿದ್ದಾರೆ.

ಸುಪ್ರೀಂಕೋರ್ಟ್‌ನಲ್ಲಿ ಬಿಎಸ್‌ವೈ ಆಡಿಯೋ ಠುಸ್ ಪಟಾಕಿ..!

ಇದಕ್ಕೂ ಮುನ್ನ ಹೋಟೆಲ್‌ನ ಪ್ರಾಂಗಣ, ಪ್ರವೇಶದ್ವಾರದ ಬಳಿಯಿರುವ ಎಲ್ಲ ಸಿಸಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಅಲ್ಲದೆ, ಹೋಟೆಲ್‌ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದಾರೆ.

ಬಿಎಸ್‌ವೈ ಆಡಿಯೋಗೆ ಟಕ್ಕರ್ ಕೊಡಲು ಸಿದ್ದರಾಮಯ್ಯ ಆಡಿಯೋ ಔಟ್‌..!

ಉಪ ಚುನಾವಣೆ ಹಿನ್ನೆಲೆಯಲ್ಲಿ ಅ.26 ರಂದು ನಗರದ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಸಭೆ ಆಯೋಜಿಸಲಾಗಿತ್ತು. ಈ ವೇಳೆ ಬೆಳಗಾವಿ ಜಿಲ್ಲೆಯ ಮುಖಂಡರ ಸಭೆಯಲ್ಲಿ ಯಡಿಯೂರಪ್ಪ ಮಾತನಾಡಿದ್ದಾರೆನ್ನಲಾದ ಆಡಿಯೋ ವೈರಲ್‌ ಆಗಿತ್ತು. ಈ ವಿಚಾರವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ.
 

click me!