
ಧಾರವಾಡ [ನ.05]: ಧಾರವಾಡದ ಕೋರ್ಟ್ ಆವರಣದಲ್ಲಿ ಯುವಕನೊಬ್ಬನ ಮೇಲೆ ಮೂವರು ವಕೀಲರು ಹಲ್ಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಬೆಲ್ಟ್ ನಿಂದ ವಕೀಲುರ ಯುವಕನಿಗೆ ಮನಸೋ ಇಚ್ಚೆ ಥಳಿಸಿದ್ದು, ಅಷ್ಟೇ ಅಲ್ಲದೇ ಬೆನ್ನಟ್ಟಿ ಹಲ್ಲೆ ಮಾಡಿದ್ದಾರೆ. ಇಲ್ಲಿನ ಜಿಲ್ಲಾ ನ್ಯಾಯಾಲುದ ಆವರಣದಲ್ಲಿಯೇ ಈ ಘಟನೆ ಅಕ್ಟೋಬರ್ 25ರಂದು ನಡೆದಿದ್ದು, ಇದೀಗ ಬೆಳಕಿಗೆ ಬಂದಿದೆ.
ಆದರೆ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂವರು ವಕೀಲರು ಯುವಕನೊಬ್ಬನಿಗೆ ನಿಂದಿಸಿ, ನಮಗೆ ಹಲ್ಲೆ ಮಾಡಲು ಬರುತ್ತಿಯಾ ಎಂದು ಹಿಗ್ಗಾಮುಗ್ಗಾ ಹೊಡೆದಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾನೂನು ಪಾಲನೆ ಮಾಡಿ ಸಮಾಜಕ್ಕೆ ಮಾದಿಯಾಗಬೇಕಿದ್ದ ವಕೀಲರು ಕೋರ್ಟ್ ಆವರಣದಲ್ಲಿಯೇ ಈ ರೀತಿಯಾಗಿ ವರ್ತಿಸಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಇತ್ತೀಚೆಗೆ ದೆಹಲಿ ಕೋರ್ಟ್ ಆವರಣದಲ್ಲಿ ಪೊಲೀಸರು ಜಾಗೂ ವಕೀಲರ ನಡೆವೆ ನಡೆದ ಘರ್ಷಣೆ ದೊಡ್ಡ ಸುದ್ದಿಯಾಗುತ್ತಿರುವ ಹೊತ್ತಲ್ಲೆ ಇದೀಗ ಧಾರವಾರಡದ ಘಟಬೆ ಬೆಳಕಿಗೆ ಬಂದಿದೆ.