Treo electric auto: ಎಲೆಕ್ಟ್ರಿಕ್ ಆಟೋದಲ್ಲಿ Zoho ಸಿಇಓ ಸವಾರಿ, ಆನಂದ್ ಮಹೀಂದ್ರಾಗೆ ಮಹತ್ವದ ಸಲಹೆ!

Published : Dec 06, 2021, 03:52 PM ISTUpdated : Dec 06, 2021, 04:15 PM IST
Treo electric auto: ಎಲೆಕ್ಟ್ರಿಕ್ ಆಟೋದಲ್ಲಿ Zoho ಸಿಇಓ ಸವಾರಿ,  ಆನಂದ್ ಮಹೀಂದ್ರಾಗೆ ಮಹತ್ವದ ಸಲಹೆ!

ಸಾರಾಂಶ

ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಸೂಟರ್ ಸವಾರಿ ಮಾಡಿದ  Zoho ಸಿಇಓ ಎಲೆಕ್ಟ್ರಿಕ್ ಆಟೋ ವಾಹನ ಹಾಗೂ ಮಹೀಂದ್ರ ಕಂಪನಿಗ ಕಾರ್ಯಕ್ಕೆ ಶ್ಲಾಘನೆ ಶುಭಾಶಯ ಜೊತೆಗೆ ಹಲವು ಸುಧಾರಣಾ ಸಲಹೆ ನೀಡಿದ ಶ್ರೀಧರ್  

ಚೆನ್ನೈ(ಡಿ.06):  ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು(Electric Vehicle) ಹೊಸ ಸಂಚಲನ ಸೃಷ್ಟಿಸುತ್ತಿದೆ. ಕಾರು, ಸ್ಕೂಟರ್, ಬೈಕ್, ಆಟೋ ರಿಕ್ಷಾ, ಪಿಕ್ ಅಪ್ ಸೇರಿದಂತೆ ಹಲವು ರೀತಿಯ ಎಲೆಕ್ಟ್ರಿಕ್ ವಾಹನ ಬಿಡುಗಡೆಯಾಗುತ್ತಿದೆ. ಇದರಲ್ಲಿ ಮಹೀಂದ್ರ ಕಂಪನಿ(Mahindra Electric) ಬಿಡುಗಡೆ ಮಾಡಿರುವ ಎಲೆಕ್ಟ್ರಿಕ್ ಆಟೋ ಭಾರಿ(Treo electric auto) ಸಂಚಲನ ಸೃಷ್ಟಿಸಿದೆ. ಇದೀಗ Zoho ಕಾರ್ಪೋರೇಶನ್ ಕಂಪನಿ ಸಿಇಓ ಶ್ರೀಧರ್ ವೆಂಬು ಮಹೀಂದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ಸವಾರಿ ಮಾಡಿದ್ದಾರೆ. ಇಷ್ಟೇ ಅಲ್ಲ ಮುಖ್ಯಸ್ಥ ಆನಂದ್ ಮಹೀಂದ್ರಾಗೆ ಕೆಲ ಸಲಹೆ ನೀಡಿದ್ದಾರೆ.

ಮಹೀಂದ್ರ ಕಂಪನಿಯ ಎಲೆಕ್ಟ್ರಿಕ್ ಆಟೋ ಶ್ರೀಧರ್ ವೆಂಬು(Sridhar Vembu, CEO of Zoho) ಮನಸೂರೆಗೊಳಿಸಿದೆ. ಆಟೋ ಪರ್ಪಾಮೆನ್ಸ್, ಎಂಜಿನ್ ದಕ್ಷತೆ, ವಿನ್ಯಾಸ ಸೇರಿದಂತೆ ಎಲ್ಲವೂ ಶ್ರೀಧರ್ ವೆಂಬುಗೆ ಅತ್ಯಂತ ಹಿತವೆನಿಸಿದೆ. ಎಲೆಕ್ಟ್ರಿಕ್ ಆಟೋ ಚಾಲನೆ ಮಾಡಿದ ಶ್ರೀಧರ್ ವೆಂಬು, ಸಂತಸವನ್ನು ಹಂಚಿಕೊಂಡಿದ್ದಾರೆ. ಸರಣಿ ಟ್ವೀಟ್ ಮೂಲಕ ಆನಂದ್ ಮಹೀಂದ್ರಗೆ ಶುಭಾಶಯ ಹೇಳಿದ ಶ್ರೀಧರ್, ಮಹತ್ವದ ಸಲಹೆಯನ್ನೂ ನೀಡಿದ್ದಾರೆ.

ಮಹೀಂದ್ರ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ-ಬಜಾಜ್, ಟಿವಿಎಸ್‌ಗೆ ಪೈಪೋಟಿ!

ಮಹೀದ್ರ ಟ್ರಿಯೋ ಎಲೆಕ್ಟ್ರಿಕ್ ಆಟೋ ಗರಿಷ್ಠ ವೇಗ 55 ಕಿ.ಮೀ. ಇನ್ನು ಒಂದು ಬಾರಿ ಚಾರ್ಜ್ ಮಾಡಿದರೆ 125 ಕಿಲೋಮೀಟರ್ ಮೈಲೇಜ್ ನೀಡಲಿದೆ. ಟ್ರಿಯೋ ಆಟೋ ಬೆಲೆ ಅತ್ಯಂತ ಕೈಗೆಟುಕುವ ಕುಟುಂಬದ ವಾಹನವಾಗಿದೆ. ಈ ಬೆಲೆಯನ್ನು 3.5 ಲಕ್ಷ ರೂಪಾಯಿ ಒಳಗಡೆ ತಂದರೆ ಮತ್ತಷ್ಟು ಉಪಯುಕ್ತವಾಗಲಿದೆ. ಇಷ್ಟೇ ಅಲ್ಲ ಉತ್ಪಾದನೆ ಪ್ರಮಾಣ ಹೆಚ್ಚಾದಂತೆ ಬೆಲೆ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಶ್ರೀಧರ್ ವೆಂಬು ಟ್ವೀಟ್ ಮಾಡಿದ್ದಾರೆ.

 

ಇದೇ ವೇಳೆ ಶ್ರೀಧರ್ ಮತ್ತೊಂದು ಸಲಹೆ ನೀಡಿದ್ದಾರೆ. ಟ್ರಿಯೋ ಎಲೆಕ್ಟ್ರಿಕ್ ಸ್ಕೂಟರ್ ವಿವಿದ ಬಣ್ಣಗಳಲ್ಲಿ ಬಿಡುಗಡೆ ಮಾಡಬೇಕು. ಇಷ್ಟೇ ಅಲ್ಲ ಆಕರ್ಷಕ ವಿನ್ಯಾಸ ಆಟೋ ಜನಪ್ರಿಯತೆ ಹಾಗೂ ಮಾರಾಟವನ್ನು ಮತ್ತಷ್ಟು ಹೆಚ್ಚಿಸಲಿದೆ. ಕಡಿಮೆ ಬೆಲೆಯ ಎಲೆಕ್ಟ್ರಿಕ್ ವಾಹನಗಳನ್ನು ಜನಪ್ರಿಯಗೊಳಿಸಲು ಮಾರ್ಕೆಟಿಂಗ್ ಮಾಡಲು ಅಭಿಯಾನ ಮಾಡಬೇಕಿದೆ. ಈ ವಾಹನಗಳು ಉತ್ತಮ ಸಾಮರ್ಥ್ಯ ಹೊಂದಿದೆ ಎಂದು ಶ್ರೀಧರ್ ಟ್ವೀಟ್ ಮಾಡಿದ್ದಾರೆ.

ಮಹೀಂದ್ರ ಎಲೆಕ್ಟ್ರಿಕ್ ಆಟೋ ಬಿಡುಗಡೆ-ಪ್ರತಿ ಕಿ.ಮೀಗೆ 50 ಪೈಸೆ!

ಸರಣಿ ಟ್ವೀಟ್ ಮೂಲಕ ಆನಂದ್ ಮಹೀಂದ್ರಾಗೆ(anand mahindra) ಉತ್ತಮ ಸಲಹೆ ನೀಡಿದ್ದಾರೆ. ಭಾರತದಲ್ಲಿ ಕೈಗೆಟುಕವ ದರದಲ್ಲಿ ಎಲೆಕ್ಟ್ರಿಕ್ ಆಟೋ ಲಭ್ಯವಿದೆ. ಆದರೆ ಮಾಹಿತಿ ಹಲವರಿಗೆ ತಿಳಿದಿಲ್ಲ. ಹೀಗಾಗಿ ಇದನ್ನು ಜನಪ್ರೀಯತೆಗೊಳಿಸುವ ಅಗತ್ಯವಿದೆ. ಇಷ್ಟೇ ಅಲ್ಲ ಸಾಮಾನ್ಯವಾಗಿ ಭಾರತದಲ್ಲಿ ಎಲೆಕ್ಟ್ರಿಕ್ ವಾಹನದ ಬೆಲೆ ಕೊಂಚ ದುಬಾರಿಯಾಗಿದೆ. ಹೀಗಾಗಿ ಕೈಗೆಟುಕುವ ದರದಲ್ಲಿ ವಾಹನಗಳು ಮಾರಕಟ್ಟೆ ಲಭ್ಯವಿರಬೇಕು. ಈ ಕುರಿತು ಮಹೀಂದ್ರಗೆ ಸಲಹೆ ನೀಡಿದ್ದಾರೆ. ಈ ಸಲಹೆ ಮಹೀಂದ್ರಾಗೆ ಮಾತ್ರವಲ್ಲ, ಇತರ ಎಲ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಗಳು ಪರಿಗಣಿಸಿದರೆ ಉತ್ತಮ. ಎಲೆಕ್ಟ್ರಿಕ್ ವಾಹನಗಳ ಬೇಡಿಕೆ ಹೆಚ್ಚುತ್ತಿದೆ. ಆದರೆ ಉತ್ಪಾದನೆ, ಪೂರೈಕೆ ವಿಳಂಬವಾಗುತ್ತಲೇ ಇದೆ. ಹೀಗಾಗಿ ಹೆಚ್ಚಿನ ಉತ್ಪಾದನೆ ಮಾಡಿದರೆ ಉತ್ಪಾದನಾ ವೆಚ್ಚವೂ ಕಡಿಮೆಯಾಗಲಿದೆ. ಜೊತೆಗೆ ವಾಹನದ ಬೆಲೆಯೂ ಕಡಿಮೆಯಾಗಲಿದೆ ಅನ್ನೋದು ಶ್ರೀಧರ್ ಸಲಹೆ.

 

ಮಹೀಂದ್ರ ಕಂಪನಿ ಕಳೆದ ವರ್ಷ ಟ್ರಿಯೋ ಎಲೆಕ್ಟ್ರಿಕ್ ಆಟೋ ರಿಕ್ಷಾ ಬಿಡುಗಡೆ ಮಾಡಿದೆ. ಈ ಮೂಲಕ ದೇಶದ ಮೂಲೆ ಮೂಲೆಗೆ ಸಾರಿ ಸಂಪರ್ಕವನ್ನು ವಿದ್ಯುತ್ತೀಕರಣಗೊಳಿಸಿತ್ತು. ಹಲವು ಹಳ್ಳಿಗಳಲ್ಲಿ ಇದೀಗ ಮಹೀಂದ್ರ ಎಲೆಕ್ಟ್ರಿಕ್ ಆಟೋ ಕಾಣಸಿಗುತ್ತದೆ. ಇಂಧನ ದರ, ಇತರ ನಿರ್ವಹಣಾ ವೆಚ್ಚಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ಆಟೋ ಕಡಿಮೆ ದರದಲ್ಲಿ ನಿರ್ವಣೆ ಮಾಡಲು ಸಾಧ್ಯವಿದೆ. ಹೀಗಾಗಿ ನಗರಗಳಲ್ಲಿ ಮಾತ್ರವಲ್ಲ ಹಳ್ಳಿಗಳಲ್ಲೂ ಎಲೆಕ್ಟ್ರಿಕ್ ಆಟೋ ಸಂಚಲನ ಮೂಡಿಸುತ್ತಿದೆ.

PREV
Read more Articles on
click me!

Recommended Stories

ಭಾರತದ ಅತೀ ದುಬಾರಿ ನಂಬರ್ ಪ್ಲೇಟ್, ₹1.17 ಕೋಟಿಗೆ 8888 ಖರೀದಿಸಿದ ಯುವ ಉದ್ಯಮಿ ಯಾರು?
Hero Splendor ಬೈಕ್‌ಗಳಿಗಿಂತ ಕಡಿಮೆ ಬೆಲೆಗೆ ಸಿಗುವ ಎಲೆಕ್ಟ್ರಿಕ್ ಸ್ಕೂಟರ್‌ಗಳು