Tata Electric Bus: ದೇಶದ ಈ ನಗರಕ್ಕೆ 60 ಎಲೆಕ್ಟ್ರಿಕ್ ಬಸ್ ವಿತರಿಸಿದ ಟಾಟಾ ಮೋಟಾರ್ಸ್!

By Suvarna News  |  First Published Dec 4, 2021, 9:47 PM IST
  • 24 ಆಸನಗಳ ಝೀರೋ ಕಾರ್ಬನ್ ಬಸ್ ವಿತರಿಸಿದ ಟಾಟಾ
  • ಅಹಮ್ಮದಾಬಾದ್‌ಗೆ BRTSಗೆ ಟಾಟಾದಿಂದ 60 ಎಲೆಕ್ಟ್ರಿಕ್ ಬಸ್
  • ದೇಶ ಇದೀಗ ಎಲೆಕ್ಟ್ರಿಕ್ ವಾಹನಗಳತ್ತ ದಾಪುಗಾಲು

ಬೆಂಗಳೂರು(ಡಿ.04): ದೇಶದಲ್ಲಿ ಎಲೆಕ್ಟ್ರಿಕ್ ವಾಹನಕ್ಕೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಎದುರಾಗಿರುವ ವಾಯು ಮಾಲಿನ್ಯ ತಡೆಗಟ್ಟಲು ಸರ್ಕಾರ ಕೂಡ ಎಲೆಕ್ಟ್ರಿಕ್ ವಾಹನಗಳಿಗೆ(Electric Vehicle) ಹೆಚ್ಚಿನ ಒತ್ತು ನೀಡುತ್ತಿದೆ. ಸುಸ್ಥಿರ ಚಲನಶೀಲತೆಯನ್ನು ಉತ್ತೇಜಿಸುವ ತನ್ನ ಬದ್ಧತೆಯನ್ನು ಬಲಪಡಿಸುತ್ತಾ, ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕನಾದ ಟಾಟಾ ಮೋಟಾರ್ಸ್(Tata Motors), 60 ಅತ್ಯುತ್ತಮ ದರ್ಜೆಯ ಎಲೆಕ್ಟ್ರಿಕ್ ಬಸ್‍ಗಳನ್ನು ಅಹಮದಾಬಾದ್(Ahmedabad) ಜನಮಾರ್ಗ್ ಲಿಮಿಟೆಡ್ (AJL) ಗೆ ವಿತರಿಸಿದೆ. 

ಅಹಮದಾಬಾದ್‍ನ ಸಬರಮತಿ ರಿವರ್ ಫ್ರಂಟ್ ಈವೆಂಟ್ ಸೆಂಟರ್ ನಲ್ಲಿ ಗುಜರಾತ್(Gujarat)  ಗುಜರಾತ್‍ನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್(Bhupendra Patel) ಮತ್ತು ಅಹಮದಾಬಾದ್‍ನ  ಮೇಯರ್ ಕಿರಿತ್‍ಕುಮಾರ್ ಪರ್ಮಾರ್ ಟಾಟಾ ಅಲ್ಟ್ರಾ ಅರ್ಬನ್ 9/9 ಎಸಿ ಬಸ್‍ಗಳಿಗೆ ಚಾಲನೆ ನೀಡಿದರು.  24-ಆಸನಗಳ ಬಸ್‍ಗಳಾಗಿದೆ. ಈ ಬಸ್‌ಗಳು ಅಹಮದಾಬಾದ್‍ನ ಬಸ್ ರಾಪಿಡ್ ಟ್ರಾನ್ಸಿಟ್ ಸಿಸ್ಟಮ್ (BRTS) ಕಾರಿಡಾರ್ ನಲ್ಲಿ ಚಲಿಸುತ್ತವೆ. ಟಾಟಾ ಮೋಟಾರ್ಸ್, ಬಸ್‍ಗಳ ಸುಗಮ ಕಾರ್ಯನಿರ್ವಹಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಿರುವ ಚಾರ್ಜಿಂಗ್ ಮೂಲಸೌಕರ್ಯ ಮತ್ತು ಬೆಂಬಲ ವ್ಯವಸ್ಥೆಗಳನ್ನು ಸಹ ಸ್ಥಾಪಿಸುತ್ತದೆ.

Latest Videos

undefined

Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ, ಘಟಕ ಸ್ಥಾಪನೆಗೆ ಕರ್ನಾಟಕದಲ್ಲೂ ಸ್ಥಳ ಪರಿಶೀಲನೆ

ಟಾಟಾ ಅಲ್ಟ್ರಾ ಅರ್ಬನ್ 9/9 AC  ಎಲೆಕ್ಟ್ರಿಕ್ ಬಸ್‍ಗಳು 328 hp ಗರಿಷ್ಠ ಶಕ್ತಿ ಮತ್ತು 3000 Nm ಗರಿಷ್ಠ ಟಾರ್ಕ್‍ನೊಂದಿಗೆ ಸಂಪೂರ್ಣ-ವಿದ್ಯುತ್ ಡ್ರೈವ್‍ಟ್ರೇನ್‍ಗಳಿಂದ ಚಾಲಿತವಾಗಿವೆ. ಅವರ ವಿಶಾಲವಾದ ಒಳಾಂಗಣವು ಭವ್ಯವಾದ ಆಂತರಿಕ ಬೆಳಕಿನೊಂದಿಗೆ ಬರುತ್ತದೆ ಮತ್ತು ಅಪ್ಲಿಕೇಶನ್ ಮತ್ತು ನಿಯಮಗಳ ಪ್ರಕಾರ ಕಸ್ಟಮೈಸ್ ಮಾಡಬಹುದು. ಕ್ಲಚ್ ಮತ್ತು ಗೇರ್ ಶಿಫ್ಟಿಂಗ್ ಇಲ್ಲದೆ ಆರಾಮವಾದ ಚಾಲನಾ ಅನುಭವವನ್ನು ಒದಗಿಸಲು ವಿನ್ಯಾಸಗೊಳಿಸಲಾಗಿರುವ ಸುಗಮವಾದ ಮತ್ತು ಸಮರ್ಥ ಕಾರ್ಯಾಚರಣೆಗಾಗಿ ಅಲ್ಟ್ರಾ ಅರ್ಬನ್ 9/9 ಇ-ಬಸ್‍ಗಳು ರಿಜನರೇಟಿಂಗ್ ಬ್ರೇಕಿಂಗ್ ಸಿಸ್ಟಮ್, ಹೊಸ-ಪೀಳಿಗೆಯ ಟೆಲಿಮ್ಯಾಟಿಕ್ಸ್ ಮತ್ತು ಹೆಚ್ಚಿನ-ಸುರಕ್ಷತಾ ಇಂಟೆಲಿಜೆಂಟ್ ಟ್ರಾನ್ಸ್‍ಪೋರ್ಟ್ ಸಿಸ್ಟಮ್ (ಐಟಿಎಸ್) ಗಳೊಂದಿಗೆ ಬರುತ್ತವೆ.

ಟಾಟಾ ಅಲ್ಟ್ರಾ ಅರ್ಬನ್ 9/9 ಎಲೆಕ್ಟ್ರಿಕ್ ಬಸ್‍ಗಳನ್ನು AJL ಗೆ ತಲುಪಿಸಲು ನಮಗೆ ಬಹಳ ಸಂತೋಷವಾಗಿದೆ. ಸಾರ್ವಜನಿಕ ಸಾರಿಗೆಯನ್ನು ಆಧುನೀಕರಿಸುವ ಮತ್ತು ಭವಿಷ್ಯದ ವಾಹನಗಳ ವಿನ್ಯಾಸದಲ್ಲಿ ಸುಸ್ಥಿರತೆಯನ್ನು ಸಂಯೋಜಿಸುವ ನಿಟ್ಟಿನಲ್ಲಿ ಸ್ಥಿರವಾದ ಬದ್ಧತೆಯೊಂದಿಗೆ, ಟಾಟಾ ಮೋಟಾರ್ಸ್ ದೇಶದಲ್ಲಿ ವಿದ್ಯುತ್ ಚಲನಶೀಲತೆಯತ್ತ ಮುನ್ನಡೆದಿದೆ. ಅಲ್ಟ್ರಾ ಅರ್ಬನ್ 9/9 ಅನ್ನು ಶಬ್ಧರಹಿತ ಕಾರ್ಯಾಚರಣೆಗಳು ಮತ್ತು ಶೂನ್ಯ ಹೊರಸೂಸುವಿಕೆಯೊಂದಿಗೆ ವರ್ಧಿತ ಸೌಕರ್ಯ, ಸುರಕ್ಷತೆ ಮತ್ತು ದಕ್ಷತೆಯನ್ನು ನೀಡಲು ನಿರ್ಮಿಸಲಾಗಿದೆ. ಈ ಬಸ್‍ಗಳ ವಿತರಣೆಯು AJL ನೊಂದಿಗೆ ನಮ್ಮ ಪರಿಣಾಮಕಾರಿ ಸಂಬಂಧವನ್ನು ಮತ್ತಷ್ಟು ಭದ್ರಪಡಿಸುತ್ತದೆ ಮತ್ತು ಅಹಮದಾಬಾದ್‍ನಲ್ಲಿ ಪರಿಸರ ಸ್ನೇಹಿ ಸಮೂಹ ಚಲನಶೀಲತೆಯನ್ನು ಉತ್ತೇಜಿಸುತ್ತದೆ ಎಂದು   ಟಾಟಾ ಮೋಟಾರ್ಸ್ ನ ಬಸ್‍ಗಳ ಪ್ರಾಡಕ್ಟ್ ಲೈನ್ ನ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಹೇಳಿದರು.

Tata Motors ಕಂಪನಿಗೆ ಮಾರುತಿ ಸುಜುಕಿಗಿಂತ ಹೆಚ್ಚು ಲಾಭ

AJL ನ ಪ್ರಕಾರ, ಹೊಸ ಬಸ್‍ಗಳು ಅಹಮದಾಬಾದ್ ನಗರದ ಹೊಸ ಅಭಿವೃದ್ಧಿಶೀಲ ಪ್ರದೇಶಗಳು ಮತ್ತು ಹೊಸ ವಿಮಾನ ನಿಲ್ದಾಣದ ಮಾರ್ಗಗಳಿಗೆ ಸೇವೆಯನ್ನು ಪೂರೈಸುತ್ತವೆ. ಇದು ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ಮತ್ತು ಅಹಮದಾಬಾದ್‍ನ ಎಲ್ಲಾ ನಿವಾಸಿಗಳಿಗೆ ಶೂನ್ಯ-ಹೊರಸೂಸುವಿಕೆಯ ಚಲನಶೀಲತೆಯನ್ನು ನೀಡುತ್ತದೆ. ಟಾಟಾ ಮೋಟಾರ್ಸ್ ವಿಶ್ವಾಸಾರ್ಹ ಪಾಲುದಾರರಾಗಿದ್ದು, ಅವಶ್ಯಕತೆಗೆ ಅನುಗುಣವಾಗಿ ಎಲೆಕ್ಟ್ರಿಕ್ ಬಸ್‍ಗಳನ್ನು ವಿತರಿಸಿದೆ. ಈ ಸಹಯೋಗವು ಕಂಪನಿಯೊಂದಿಗಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ ಎಂದು AJL ಹೇಳಿದೆ.

ಟಾಟಾ ಮೋಟಾರ್ಸ್ ಭಾರತಕ್ಕೆ ಪರಿಸರ ಸ್ನೇಹಿ ಚಲನಶೀಲತೆಯನ್ನು ನೀಡುವಲ್ಲಿ ಮುಂಚೂಣಿಯಲ್ಲಿದೆ. ಇದರ ಅತ್ಯಾಧುನಿಕ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳು ಬ್ಯಾಟರಿ-ಎಲೆಕ್ಟ್ರಿಕ್, ಹೈಬ್ರಿಡ್, CNG, LNG  ಮತ್ತು ಹೈಡ್ರೋಜನ್ ಇಂಧನ ಕೋಶ ತಂತ್ರಜ್ಞಾನ ಸೇರಿದಂತೆ ಪರ್ಯಾಯ ಇಂಧನ ತಂತ್ರಜ್ಞಾನದಿಂದ ಚಾಲಿತ ಭವಿಷ್ಯದ ವಾಹನಗಳನ್ನು ವಿನ್ಯಾಸಗೊಳಿಸಲು ಸ್ಥಿರವಾಗಿ ಕೆಲಸ ಮಾಡಿದೆ. ಇಂಡಿಯನ್ ಆಯಿಲ್ ಕಾರ್ಪೊರೇಶನ್‍ಗೆ 15 ಹೈಡ್ರೋಜನ್ ಇಂಧನ ಸೆಲ್ ಬಸ್‍ಗಳನ್ನು ಒದಗಿಸಲು ಕಂಪನಿಯು ಆದೇಶವನ್ನು ಪಡೆದುಕೊಂಡಿದೆ ಮತ್ತು ಸುಸ್ಥಿರ ಚಲನಶೀಲತೆಯನ್ನು ರೂಢಿಯಾಗಿಸುವ ನಿಟ್ಟಿನಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಿದೆ. ಇಲ್ಲಿಯವರೆಗೆ, ಟಾಟಾ ಮೋಟಾರ್ಸ್ ಭಾರತದ ಅನೇಕ ನಗರಗಳಿಗೆ 600 ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್‍ಗಳನ್ನು ಪೂರೈಸಿದ್ದು, ಇವು ಒಟ್ಟು 20 ಮಿಲಿಯನ್ ಕಿಲೋಮೀಟರ್‍ಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿವೆ.

click me!