Vehicle Scrap Policy:15 ವರ್ಷಕ್ಕಿಂತ ಹಳೆ ವಾಹನ ಗುಜುರಿಗೆ; ರಸ್ತೆಗಳಿದರೂ, ಪಾರ್ಕ್ ಮಾಡಿದರೂ ದಂಡ!

By Suvarna News  |  First Published Dec 4, 2021, 4:16 PM IST
  • ವಾಹನ ಗುಜುರಿ ನೀತಿಯಲ್ಲಿ ಬದಲಾವಣೆ, 15 ವರ್ಷಕ್ಕಿಂತ ಹಳೆ ಎಲ್ಲಾ ವಾಹನ ಗುಜುರಿ
  • ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರದಿಂದ ಮಹತ್ವದ ನಿರ್ಧಾರ
  • 15 ವರ್ಷಕ್ಕಿಂತ ಹಳೆ ವಾಹನ ರಸ್ತೆಗಿಳಿಸಿದರೂ ದಂಡ, ಪಾರ್ಕ್ ಮಾಡಿದರೂ ದಂಡ

ನವದೆಹಲಿ(ಡಿ.4): ಪೆಟ್ರೋಲ್ ಅಥವಾ ಡೀಸೆಲ್(Petrol Diesel), ವಾಹನ ಯಾವುದೇ ಆದರೂ 15 ವರ್ಷಕ್ಕಿಂತ ಹಳೆಯ ವಾಹನವಾದರೆ(Old vehilce) ಗುಜುರಿಗೆ ಹಾಕಬೇಕು. ಕದ್ದು ಮುಚ್ಚಿ ರಸ್ತೆಗಳಿಸಿದರೂ ದಂಡ, ಪಾರ್ಕ್ ಮಾಡಿದರೂ ದಂಡ.  ಪಾರ್ಕ್ ಮಾಡಿದ 15 ವರ್ಷ ಹಳೆ ಕಾರನ್ನು ಪಾರ್ಕ್ ಮಾಡಿದಲ್ಲಿಂದ ಎತ್ತಿ ಪೊಲೀಸರೇ ಗುಜುರಿಗೆ ಹಾಕಲಿದ್ದಾರೆ. ಹೀಗಾಗಿ ಹಳೇ ಕಾರಿನೊಂದಿಗೆ ಕೆಲಸದ ನಿಮ್ಮಿತ್ತ ತೆರಳಿದರೆ, ಮರಳಿ ಬರುವಾಗ ಸಾರಿಗೆ ವಾಹನ ಅಥವಾ ಆಟೋ ಹಿಡಿದು ಮನೆ ಸೇರಬೇಕಾಗುತ್ತದೆ. ಇದು ವಿಪರೀತ ವಾಯು ಮಾಲಿನ್ಯ ನಿಯಂತ್ರಿಸಲು ದೆಹಲಿ ಸರ್ಕಾರ ಜಾರಿಗೆ ತಂದ ವಾಹನ ಗುಜುರಿ ನೀತಿ(mandatory scrapping policy).  

ಕೇಂದ್ರ ಸರ್ಕಾರದ(Delhi Government) ವಾಹನ ಗುಜುರಿ ನೀತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ದೆಹಲಿ ಸರ್ಕಾರ ಜಾರಿಗೆ ತಂದಿದೆ. ದೆಹಲಿಯಲ್ಲಿ ವಾಯು ಮಾಲಿನ್ಯ ಮೀತಿ ಮೀರಿದೆ. ಸುಪ್ರೀಂ ಕೋರ್ಟ್ ದೆಹಲಿ ಸರ್ಕಾರಕ್ಕೆ ಚಾಟಿ ಬೀಸಿದೆ. ಹೀಗಾಗಿ ದೆಹಲಿಯಲ್ಲೀಗ ವಾಹನ ಯಾವುದೇ ಆದರೂ 15 ವರ್ಷ ಹಳೆಯದಾದರೆ(15 years Old vehilce) ನೇರವಾಗಿ ಗುಜುರಿಗೆ. 

ರಿಜಿಸ್ಟ್ರೇಶನ್ ಉಚಿತ, 25% ರೋಡ್ ಟ್ಯಾಕ್ಸ್ ಕಡಿತ; ವಾಹನ ಸ್ಕ್ರಾಪ್ ನೀತಿ ಪ್ರಕಟಿಸಿದ ಗಡ್ಕರಿ!

Latest Videos

undefined

ದೆಹಲಿ ಸರ್ಕಾರ ಜಾರಿಗೆ ತಂದಿರುವ ವಾಹನ ಗುಜುರಿ ನೀತಿಯಲ್ಲಿ ಪೆಟ್ರೋಲ್ ವಾಹನಗಳಿಗೆ ಹೆಚ್ಚಿನ ಅವದಿ, ಡೀಸೆಲ್ ವಾಹನಗಳಿಗೆ ಕಡಿಮೆ ಅವದಿ ನೀಡಿಲ್ಲ. ಎಲ್ಲಾ ವಾಹನಗಳು 15 ವರ್ಷಕ್ಕಿಂತ ಹಳೆಯಾದರೆ ಗುಜುರಿಗೆ ಹಾಕಲೇಬೇಕು. ಗುಜುರಿಗೆ ಹಾಕದೆ ದೆಹಲಿ ನಗರದೊಳಗೆ ಪಾರ್ಕ್ ಮಾಡಿದರೂ ದಂಡವೂ ಬೀಳುತ್ತೆ, ವಾಹನ ಗುಜುರಿ ಸೇರುತ್ತೆ. 15 ವರ್ಷ ಹಳಯೇ ವಾಹನ ರಸ್ತೆಯಲ್ಲಿ ಸಂಚರಿಸುವುದು ಪತ್ತೆಯಾದರೆ ಕೂಡಲೇ ವಾಹನವನ್ನು ಜಪ್ತಿ ಮಾಡಲಾಗುತ್ತದೆ. ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ವಾಹನವನ್ನು ಸರ್ಕಾರದ ಅಧೀಕೃತ ವಾಹನ ಸ್ಕ್ರಾಪ್ ಘಟಕದ(Scrap center) ಸಿಬ್ಬಂದಿಗಳು ವಾಹನವನ್ನು ಕೊಂಡೊಯ್ದು ಸ್ಕ್ರಾಪ್ ಮಾಡಲಿದ್ದಾರೆ. ಒಂದು ವೇಳೆ ಸ್ಕಾರ್ ಘಟಕದ ಸಿಬ್ಬಂದಿಗಳು ಲಭ್ಯವಾಗದಿದ್ದರೆ, ಸ್ಥಳೀಯ ಪೊಲೀಸರು(Police) ವಾಹನವನ್ನು ಗುಜುರಿಗೆ ಹಾಕಲಿದ್ದಾರೆ.

ಗುಜುರಿಗೆ ಹಾಕುವ ವಾಹನಕ್ಕೆ ಇರುವ ಮಾರುಕಟ್ಟೆ ಮೌಲ್ಯವನ್ನು ಲೆಕ್ಕಹಾಕಿ ಮಾಲೀಕರಿಗೆ ನೀಡಲಾಗುತ್ತದೆ. ದೆಹಲಿ ನಗರದೊಳಗೆದೆ ಹಳೇ ವಾಹನ ಪಾರ್ಕ್ ಮಾಡಿದರೂ ದಂಡ ವಿಧಿಸಲಾಗುತ್ತದೆ. ಇಷ್ಟೇ ಅಲ್ಲ ಈ ವಾಹನವನ್ನು ಜಪ್ತಿ ಮಾಡಿ ಗುಜುರಿಗೆ ಹಾಕಲಾಗುತ್ತದೆ. 

ಸ್ಕ್ರಾಪೇಜ್ ನೀತಿಗೆ ಚಾಲನೆ ಸಿಕ್ಕ ಬೆನ್ನಲ್ಲೇ ವಾಹನ ಗುಜುರಿ ಘಟಕ ಸ್ಥಾಪನೆಗೆ ಸರ್ಕಾರದ ಜೊತೆ ಟಾಟಾ ಒಪ್ಪಂದ!

ಕೇಂದ್ರ ಜಾರಿಗೆ ತಂದ ವಾಹನ ಗುಜುರಿ ನೀತಿಯಲ್ಲಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನ ಹಾಗೂ 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನ ಫಿಟ್ನೆಸ್ ಟೆಸ್ಟ್ ಪಾಸ್ ಆಗಿದ್ದರೆ ಬಳಕೆ ಮಾಡಲು ಅವಕಾಶ ನೀಡಲಾಗಿತ್ತು. ಹಳೇ ವಾಹನಗಳಿಗೆ ಫಿಟ್ನೆಸ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿತ್ತು. ಆದರೆ ಹೊಸ ಗುಜುರಿ ನಿಯಮದಲ್ಲಿ ಫಿಟ್ನೆಸ್ ಸರ್ಟಿಫಿಕೇಟ್ ಮಾಡುವ ಮಾತೇ ಇಲ್ಲ. 15 ವರ್ಷಕ್ಕಿಂತ ಹಳೇಯದಾದರೆ ಗುಜುರಿಗೆ ಹಾಕಲೇಬೇಕು. ಇನ್ನು 15 ವರ್ಷವಾಗದ ವಾಹನ ಹೆಚ್ಚಿನ ಹೊಗೆ ಉಗುಳುತಿದ್ದರೆ, ಎಮಿಶನ್ ಟೆಸ್ಟ್ ಪಾಸ್ ಆಗಿಲ್ಲದಿದ್ದರೆ ಈ ವಾಹನ ಬಳಕೆಗೂ ಅವಕಾಶವಿಲ್ಲ.

ವಾಹನ ಮಾಲೀಕ ಹಾಗೂ ಸ್ಕ್ರಾಪ್ ಘಟಕದ ಸಿಬ್ಬಂದಿಗಳ ನಡುವೆ ವಾದ ವಿವಾದಗಳಿದ್ದರೆ, ಮಾರುಕಟ್ಟೆ ಬೆಲೆ ಹಾಗೂ ವಾಹನ ನೀಡಿದ ಬೆಲೆಗಳ ನಡುವೆ ತಕಾರರಿದ್ದರೆ ಈ ಸಮಸ್ಯೆಯನ್ನು ಸ್ಥಳೀಯ ಪೊಲೀಸರು ಬಗೆಹರಿಸಲಿದ್ದಾರೆ.

ವಾಹನ ಒಳ್ಳೆ ಕಂಡೀಶನ್‌ನಲ್ಲಿದ್ರೂ ಗುಜರಿಗೆ ಹಾಕ್ಬೇಕಾ? ನಿಮ್ಮೆಲ್ಲರ ಪ್ರಶ್ನೆಗೆ ಉತ್ತರ 

ವಾಯು ಮಾಲಿನ್ಯ ಕಾರಣ ಭಾರತದಲ್ಲಿ ಹಲವು ನಿಯಮಗಳು ಮತ್ತಷ್ಟು ಕಠಿಣವಾಗುತ್ತಿದೆ. ಸದ್ಯ ಹೊಸ ಕಾರು BS 6 ಎಮಿಶನ್ ಆಗಿರಬೇಕು. ಪ್ರತಿ 6 ತಿಂಗಳಿಗೊಮ್ಮೆ ಎಮಿಟೆಸ್ಟ್ ಮಾಡಿಸಿರಬೇಕು. ಇತ್ತ ಕೇಂದ್ರ ಸರ್ಕಾರ ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿದೆ.  ಇದರಿಂದ ವಾಯು ಮಾಲಿನ್ಯ ಹಾಗೂ ಪೆಟ್ರೋಲ್, ಡೀಸೆಲ್ ಮೇಲಿನ ಅವಲಂಬನೆ ಕೂಡ ಕಡಿಮೆಯಾಗಲಿದೆ. ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೈಡ್ರೋಜನ್ ಇಂಧನ ಚಾಲಿತ ವಾಹನ ಬಳಕೆಗೆ ಒತ್ತು ನೀಡಿದ್ದಾರೆ.

click me!