ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ TVS ಆಟೋ ಫಾರ್ ಇಂಪಾಕ್ಟ್ ಅಭಿಯಾನಕ್ಕೆ ಬೆಂಗಳೂರಲ್ಲಿ ಚಾಲನೆ ನೀಡಲಾಗಿದೆ. ಮೂರು ರಾಜ್ಯಗಳಲ್ಲಿ ಆಟೋ ಸವಾರಿ ಮೂಲಕ ಈ ಅಭಿಯಾನ ನಡೆಯಲಿದೆ. ಈ ಕುರಿತ ವಿವರ ಇಲ್ಲಿದೆ.
ಬೆಂಗಳೂರು(ಏ.10): ಕಸ್ಟಮೈಸ್ ಮಾಡಿದ ಟಿವಿಎಸ್ ಮೋಟಾರ್ ಕಂಪನಿಯ ಟಿವಿಎಸ್ ಕಿಂಗ್ ಆಟೋ ರಿಕ್ಷಾದೊಂದಿಗೆ 'ಆಟೋ ಫಾರ್ ಇಂಪ್ಯಾಕ್ಟ್' ಸವಾರಿಯನ್ನು ಇಂದು ಬೆಂಗಳೂರಿನ ವಿಧಾನ ಸೌಧದಿಂದ ಚಾಲನೆ ನೀಡಲಾಯಿತು. ಮುಂದಿನ ಹತ್ತು ದಿನಗಳಲ್ಲಿ ಟಿವಿಎಸ್ ಕಿಂಗ್ ಆಟೋ ರೈಡ್ 1,700 ಕಿ. ಮೀ ಅಂತರದಲ್ಲಿ ಕರ್ನಾಟಕ ತಮಿಳುನಾಡು, ಗೋವಾ ರಾಜ್ಯಗಳಲ್ಲಿ ಸಂಚರಿಸಲಿದ್ದು, ಮಹಾರಾಷ್ಟ್ರದಲ್ಲಿ ಅಂತ್ಯಗೊಳ್ಳಲಿದೆ.
ಬೆಂಗಳೂರು ಪೊಲೀಸ್ ಇಲಾಖೆ ಸೇರಿದ 25 ಹೊಚ್ಚ ಹೊಸ TVS ಅಪಾಚೆ ಬೈಕ್!.
ಆಟೋ ಮೇಲೆ ಗರ್ಲ್ ಚೈಲ್ಡ್ ಎಜುಕೇಷನ್ ಎಂದು ಬರೆಸಲಾಗಿದ್ದು, ಸಂಚಾರದ ಅವಧಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಮಹತ್ವ ಕುರಿತು ಜಾಗೃತಿ ಮೂಡಿಸಲಿದೆ. ಈ ಉಪಕ್ರಮದಿಂದ ಸಂಗ್ರಹಿಸಲಾದ ಜನಸಮೂಹ-ಹಣ ಮತ್ತು ಪ್ರಾಯೋಜಕತ್ವವನ್ನು, ನಲಿ- ಕಲಿ ಯೋಜನೆಯ ಮೂಲಕ 1700 ಹೆಣ್ಣು ಮಕ್ಕಳ ಶಿಕ್ಷಣಕ್ಕೆ ನೆರವು ನೀಡಲಾಗುತ್ತದೆ.
ಹೊಚ್ಚ ಹೊಸ TVS ಅಪಾಚೆ RTR 160 4V ಬೈಕ್ ಬಿಡುಗಡೆ!.
ಟಿವಿಎಸ್ ವಿಶೇಷ ಅಭಿಯಾನಕ್ಕೆ ಬಾರಿ ಮೆಚ್ಚಗೆ ವ್ಯಕ್ತವಾಗಿದೆ. ಆಟೋಮೊಬೈಲ್ ಕ್ಷೇತ್ರದಲ್ಲಿ ದಿಗ್ಗಜನಾಗಿ ಬೆಳೆದಿರುವ ಟಿವಿಎಸ್ ನಿರಂತರ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದೆ. ಇದೀಗ ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಆರ್ಥಿಕ ಸಹಾಯ ನೀಡಲು ಮಹತ್ವದ ಅಭಿಯಾನ ಆರಂಭಿಸಿದೆ.