ಫ್ಲಿಪ್‌ಕಾರ್ಟ್ ಡೆಲಿವರಿಗೆ ಎಲೆಕ್ಟ್ರಿಕ್ ವಾಹನ; ಮಹೀಂದ್ರ ಲಾಜಿಸ್ಟಿಕ್ಸ್‌ನ EDEL ಜೊತೆ ಒಪ್ಪಂದ!

By Suvarna News  |  First Published Apr 6, 2021, 5:06 PM IST

ದೇಶಾದ್ಯಂತ ಫ್ಲಿಪ್ ಕಾರ್ಟ್ ನ ಲಾಜಿಸ್ಟಿಕ್ಸ್ ಗೆ ಎಲೆಕ್ಟ್ರಿಕ್ ವಾಹನಗಳ ನಿಯೋಜನೆ ಮಾಡಲು ಮಹೀಂದ್ರ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ.  25,000 ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳಲ್ಲಿ ಗ್ರಾಹಕರ ವಸ್ತುಗಳ ಡಿಲಿವರಿಗೆ ಫ್ಲಿಪ್‌ಕಾರ್ಟ್ ಮುಂದಾಗಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ


ಬೆಂಗಳೂರು(ಏ.06):  ಭಾರತದ ಸ್ವದೇಶಿ ಈ-ಕಾಮರ್ಸ್ ಮಾರ್ಕೆಟ್ ಪ್ಲೇಸ್ ಆಗಿರುವ ಫ್ಲಿಪ್ ಕಾರ್ಟ್ ಇದೀಗ ಮಹೀಂದ್ರ ಲಾಜಿಸ್ಟಿಕ್ಸ್ ಲಿಮಿಟೆಡ್ (ಎಂಎಲ್ಎಲ್)ನೊಂದಿಗೆ ಒಪ್ಪಂದ ಮಾಡಿಕೊಂಡಿರುವುದನ್ನು ಇಂದು ಘೋಷಣೆ ಮಾಡಿದೆ. ಈ ಒಪ್ಪಂದದ ಉದ್ದೇಶವೆಂದರೆ ದೇಶಾದ್ಯಂತ ಫ್ಲಿಪ್ ಕಾರ್ಟ್ ನ ಲಾಜಿಸ್ಟಿಕ್ಸ್ ಗೆ ಎಲೆಕ್ಟ್ರಿಕ್ ವಾಹನಗಳ ನಿಯೋಜನೆ ಮಾಡಿಕೊಳ್ಳುವುದಾಗಿದೆ. 2030 ರ ವೇಳೆಗೆ 25,000 ಕ್ಕೂ ಅಧಿಕ ಎಲೆಕ್ಟ್ರಿಕ್ ವಾಹನಗಳ(EV) ನಿಯೋಜನೆ ಮಾಡಿಕೊಳ್ಳುವ ಮೂಲಕ ಸಂಪೂರ್ಣವಾಗಿ ಎಲೆಕ್ಟ್ರಿಕ್ ಸಾರಿಗೆಯನ್ನು ಅಳವಡಿಸಿಕೊಳ್ಳುವ ಬದ್ಧತೆಯನ್ನು ಫ್ಲಿಪ್ ಕಾರ್ಟ್ ಹೊಂದಿದೆ. ಇದರ ಅಂಗವಾಗಿ ಮಹೀಂದ್ರ ಲಾಜಿಸ್ಟಿಕ್ಸ್ ಜತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಮಹೀಂದ್ರ ಲಾಜಿಸ್ಟಿಕ್ಸ್ ವಿವಿಧ ಒಇಎಂಗಳ ಜತೆಗೆ ಮಹತ್ವದ ಪಾತ್ರ ವಹಿಸಲಿದೆ ಮತ್ತು ಫ್ಲಿಪ್ ಕಾರ್ಟ್ ನ ಸಾರಿಗೆ ವ್ಯವಸ್ಥೆಯನ್ನು ಸುಸ್ಥಿರ ಸಾರಿಗೆ ವ್ಯವಸ್ಥೆಯಾದ ಇವಿಗಳಿಗೆ ರೂಪಾಂತರಗೊಳ್ಳಲು ಬೆಂಬಲವಾಗಿ ನಿಲ್ಲಲಿದೆ.

ನಿವೃತ್ತ ಸೇನಾ ಯೋಧರಿಗೆ ಫ್ಲಿಪ್‌ಕಾರ್ಟ್‌ನಲ್ಲಿ ಉದ್ಯೋಗವಕಾಶ!.

Tap to resize

Latest Videos

ಸುಸ್ಥಿರವಾದ ವ್ಯವಹಾರ ಪದ್ಧತಿಗಳತ್ತ ಪರಸ್ಪರ ಬದ್ಧತೆ ಮತ್ತು ದೂರದೃಷ್ಟಿಯೊಂದಿಗೆ ಮಹೀಂದ್ರ ಲಾಜಿಸ್ಟಿಕ್ಸ್ ತನ್ನದೇ ಸ್ವಂತ ಎಲೆಕ್ಟ್ರಿಕ್ ಡೆಲಿವರಿ ಬ್ರ್ಯಾಂಡ್ ಇಡಿಇಎಲ್ ಅನ್ನು 2020 ರ ಅಂತ್ಯದ ವೇಳೆಗೆ ಆರಂಭಿಸಿದೆ. ಇಡಿಇಎಲ್ ಗ್ರಾಹಕ ಕಂಪನಿಗಳು & ಈ-ಕಾಮರ್ಸ್ ಕಂಪನಿಗಳೊಂದಿಗೆ ಪಾಲುದಾರಿಕೆಯನ್ನು ಹೊಂದಿದ್ದು, ಭಾರತದಲ್ಲಿನ ಆರು ನಗರಗಳಲ್ಲಿನ ಕಟ್ಟಕಡೆಯ ಗ್ರಾಹಕನಿಗೂ ವಿತರಣೆ ಸೇವೆಯನ್ನು ಒದಗಿಸುತ್ತಿದೆ. ಇಡಿಇಎಲ್ ಮೂಲಕ ಎಂಎಲ್ಎಲ್ ಫ್ಲಿಪ್ ಕಾರ್ಟ್ ಗ್ರೀನ್ ಸಪ್ಲೈ ಚೇನ್ ಅನ್ನು ಸೃಷ್ಟಿಸುವ ತನ್ನ ಜರ್ನಿಯಲ್ಲಿ ದೊಡ್ಡ ಇವಿಗಳನ್ನು ನಿಯೋಜನೆ ಮಾಡುವುದಲ್ಲದೇ, ಇವಿ ನಿಯೋಜನೆ ಮತ್ತು ದೇಶಾದ್ಯಂತ ಕಾರ್ಯಾಚರಣೆಗಳಿಗೆ ಅನುಕೂಲಕರವಾದ ವಾತಾವರಣವನ್ನು ಸೃಷ್ಟಿ ಮಾಡುತ್ತದೆ. ಇದರಲ್ಲಿ ಮೂಲಸೌಕರ್ಯ ಮತ್ತು ಚಾರ್ಜಿಂಗ್ ಸ್ಟೇಷನ್ ಗಳು, ಪಾರ್ಕಿಂಗ್ ಲಾಟ್ ಗಳು, ತರಬೇತಿ ಸ್ಥಳಗಳು, ರೂಟ್ ಪ್ಲಾನಿಂಗ್ ಮತ್ತು ಬ್ಯಾಟರಿ ಸ್ವಾಪಿಂಗ್ ಸ್ಟೇಷನ್ ಗಳ ನಿರ್ಮಾಣವೂ ಸೇರಿದೆ. ಮತ್ತೊಂದು ಪ್ರಮುಖವಾದ ಆದ್ಯತಾ ವಲಯವೆಂದರೆ ತಂತ್ರಜ್ಞಾನ ಮತ್ತು ಕಂಟ್ರೋಲ್ ಟಾವರ್ ಕಾರ್ಯಾಚರಣೆಗಳಿಂದ ಅತ್ಯುತ್ಕೃಷ್ಠವಾದ ಕಾರ್ಯದಕ್ಷತೆ ಮತ್ತು ವೆಚ್ಚ ಉಳಿತಾಯಕ್ಕೆ ಅವಕಾಶ ಮಾಡಿಕೊಡುತ್ತದೆ.

ಫ್ಲಿಪ್ ಕಾರ್ಟ್ ಗ್ರಾಹಕರಿಗೆ ಗ್ರೂಪ್ ಇನ್ಶೂರೆನ್ಸ್ ಸೌಲಭ್ಯ!.

ಫ್ಲಿಪ್ ಕಾರ್ಟ್ ಈಗಾಗಲೇ ಅನೇಕ ಒಇಎಂಗಳ ಜತೆಗೆ ಪಾಲುದಾರಿಕೆಯನ್ನು ಹೊಂದಿದೆ ಮತ್ತು ತನ್ನ ಸಪ್ಲೈ ಚೇನ್ ನಲ್ಲಿ ಈಗಾಗಲೇ ದ್ವಿಚಕ್ರ ಮತ್ತು ತ್ರಿಚಕ್ರ ವಾಹನಗಳನ್ನು ಅಳವಡಿಕೆ ಮಾಡಿಕೊಂಡಿದೆ. ಎಂಎಲ್ಎಲ್ ಇಡಿಇಎಲ್ ನೊಂದಿಗೆ ಕಂಪನಿಯ ಪಾಲುದಾರಿಕೆಯೊಂದಿಗೆ ಈ ಕಾರ್ಯಚಟುವಟಿಕೆಯನ್ನು ಮತ್ತಷ್ಟು ಕ್ರಿಯಾಶೀಲ ಮಾಡಲಿದೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಿಯೋಜನೆ ಮಾಡಲು ನೆರವಾಗುತ್ತದೆ. ಇದಲ್ಲದೇ, ಮೂಲಸೌಕರ್ಯ ಮತ್ತು ತಂತ್ರಜ್ಞಾನ ಬೆಂಬಲವನ್ನು ಮೇಲ್ಮಟ್ಟಕ್ಕೆ ಹೆಚ್ಚಳ ಮಾಡಿಕೊಳ್ಳಲು ನೆರವಾಗುತ್ತದೆ. ಚಾರ್ಜಿಂಗ್ ತಾಣಗಳು, ಟ್ರ್ಯಾಕಿಂಗ್, ಅಸೆಟ್, ಸುರಕ್ಷತೆ ಮತ್ತು ವೆಚ್ಚದ ವಿಚಾರದಲ್ಲಿ ಕಂಪನಿಗೆ ಸಾಕಷ್ಟು ಉಪಯೋಗವಾಗಲಿದೆ. ಎಂಎಲ್ಎಲ್ ತನ್ನ ಎಲೆಕ್ಟ್ರಿಕ್ ವಿತರಣೆ ಬ್ರ್ಯಾಂಡ್ ಆಗಿರುವ ಇಡಿಇಎಲ್ ಅಡಿ ವಿವಿಧ ಮಾದರಿಯ ಮತ್ತು ವರ್ಗಗಳ ಎಲೆಕ್ಟ್ರಿಕ್ ವಾಹನಗಳನ್ನು ಒಇಎಂಗಳ ಮೂಲಕ ಪಡೆದುಕೊಳ್ಳಲಿದೆ. ಇಡಿಇಎಲ್ ಈಗಾಗಲೇ ಇವಿಗಳನ್ನು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ಮಾಡುತ್ತಿದೆ. ಇದೀಗ ಫ್ಲಿಪ್ ಕಾರ್ಟ್ ನ ಉದ್ದೇಶಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಗಣನೀಯ ಪ್ರಮಾಣದಲ್ಲಿ ಈ ಕಾರ್ಯಾಚರಣೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಇಡಿಇಎಲ್ ಬೆಂಗಳೂರು, ಮುಂಬೈ, ದೆಹಲಿ, ಪುಣೆ, ಕೊಲ್ಕತ್ತಾ ಮತ್ತು ಹೈದ್ರಾಬಾದ್ ನಗರಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದೆ. ಈ ವರ್ಷದ ಅಂತ್ಯದ ವೇಳೆಗೆ ಪ್ರಮುಖ 20 ನಗರಗಳಲ್ಲಿ ಕಾರ್ಯಾಚರಣೆಯನ್ನು ವಿಸ್ತರಿಸುವ ಉದ್ದೇಶವನ್ನು ಹೊಂದಿದೆ.

ಫ್ಲಿಪ್ ಕಾರ್ಟ್ ನ ದೊಡ್ಡ ಮಟ್ಟದ ಸುಸ್ಥಿರತೆಯ ಗುರಿಯನ್ನು ತಲುಪಲು ಲಾಜಿಸ್ಟಿಕ್ಸ್ ನ ವಿದ್ಯುದ್ದೀಕರಣ ಬಹುಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ನಾವು ಮಹೀಂದ್ರ ಲಾಜಿಸ್ಟಿಕ್ಸ್ ಅನ್ನು ಲಾಜಿಸ್ಟಿಕ್ ಪಾಲುದಾರರನ್ನಾಗಿ ಮಾಡಿಕೊಳ್ಳುತ್ತಿರುವುದಕ್ಕೆ ಸಂತಸವೆನಿಸುತ್ತಿದೆ. 2030 ರ ವೇಳೆಗೆ ನಮ್ಮ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣ ಎಲೆಕ್ಡ್ರಿಕ್ ಮಾಡುವ ಗುರಿಯನ್ನು ತಲುಪುವಲ್ಲಿ ಈ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಸಾಮೂಹಿಕ ಪ್ರಯತ್ನಗಳ ಮೂಲಕ ನಾವು ದೇಶಾದ್ಯಂತ ಇವಿ ಅಳವಡಿಕೆಯನ್ನು ಮಾಡಿಕೊಳ್ಳಲಿದ್ದೇವೆ ಮತ್ತು ನಮ್ಮ ಲಾಜಿಸ್ಟಿಕ್ಸ್ ಫ್ಲೀಟ್ ಅನ್ನು ಹಂತಹಂತವಾಗಿ ಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಅಳವಡಿಸಿಕೊಳ್ಳಲಿದ್ದೇವೆ ಎಂದು ಫ್ಲಿಪ್‌ಕಾರ್ಟ್  ಸಪ್ಲೈ ಚೈನ್ ಉಪಾಧ್ಯಕ್ಷ ಹೇಮಂತ್ ಬದ್ರಿ ಹೇಳಿದ್ದಾರೆ.

ನಮ್ಮ ಆರ್ ಐಎಸ್ಇ ತತ್ತ್ವಶಾಸ್ತ್ರಕ್ಕೆ ಅನುಗುಣವಾಗಿ ಮಹೀಂದ್ರ ಲಾಜಿಸ್ಟಿಕ್ ಸುಸ್ಥಿರತೆಗೆ ಬದ್ಧವಾಗಿದೆ. ಇವಿ ಆಧಾರಿತ ಕಟ್ಟ ಕಡೆಯ ಮೈಲಿ ವಿತರಣಾ ಸೇವೆ ಸಲ್ಲಿಸಲು ಇಡಿಇಎಲ್ ಅನ್ನು ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಗ್ರಾಹಕರಿಗೆ ಸುಸ್ಥಿರವಾದ, ವೆಚ್ಚ ಸ್ಪರ್ಧಾತ್ಮಕ ಹಾಗೂ ತಂತ್ರಜ್ಞಾನವನ್ನು ಸಕ್ರಿಯಗೊಳಿಸಿದ ಕಟ್ಟಕಡೆ ಮೈಲಿ ವಿತರಣಾ ಪರಿಹಾರವನ್ನು ಒದಗಿಸುತ್ತದೆ. ದೊಡ್ಡ ದೊಡ್ಡ ಗ್ರಾಹಕರೊಂದಿಗೆ ನಮ್ಮ ಆಳವಾದ ಸಹಭಾಗಿತ್ವದ ಆಧಾರದ ಮೇಲೆ ನಮ್ಮ ಜಾಲವನ್ನು ವಿಸ್ತರಿಸುವತ್ತ ನಾವು ಗಮನಹರಿಸುತ್ತೇವೆ. ಫ್ಲಿಪ್ ಕಾರ್ಟ್ ನೊಂದಿಗೆ ಮಾಡಿಕೊಂಡಿರುವ ಈ ಒಪ್ಪಂದದ ಬಗ್ಗೆ ಸಂತಸವೆನಿಸುತ್ತದೆ. ಈ ಸಹಭಾಗಿತ್ವವನ್ನು ದೀರ್ಘಾವಧಿವರೆಗೆ ನಾವು ಎದುರು ನೋಡುತ್ತೇವೆ ಎಂದು ಎಂಎಲ್ಎಲ್ ನ ಸಿಇಒ & ಎಂಡಿ ರಾಮಪ್ರವೀಣ್ ಸ್ವಾಮಿನಾಥನ್ ಹೇಳಿದರು.`
 

click me!