ಉಜ್ವಲ ನಾಳೆಯ ನಿರ್ಮಾಣಕ್ಕಾಗಿ ಇದೀಗ ಟಾಟಾ ಮೋಟಾರ್ಸ್ ಮಾರ್ಕ್ ಮಿಕ್ಸ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಕೊರೋನಾ ಕಾರಣ ಸ್ಥಗಿತಗೊಂಡಿದ್ದ ಕಾರ್ಯಚಟುವಟಿಕೆಗಳು ಇದೀಗ ಆರಂಭಗೊಂಡಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‍ಲೈನ್ ಮುಂತಾದ ಸರ್ಕಾರೀ ಯೋಜನೆಗಳ ಬೆಂಬಲ, ಹೂಡಿಕೆ, ನಗರೀಕರಣ ಹಾಗು ಔದ್ಯಮಿಕ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ಸಿಕ್ಕಿದೆ.
ನವದೆಹಲಿ(ಏ.08): ಸಾಂಕ್ರಾಮಿಕ ಬಿಕ್ಕಟ್ಟು ಏರ್ಪಡಿಸಿದ ಲಾಕ್‍ಡೌನ್ ಸಮಯದಲ್ಲಿ ಸ್ಥಗಿತಗೊಂಡಿದ್ದ ಚಟುವಟಿಕೆಗಳ ಫಲವಾಗಿ ಬಾಕಿ ಇರುವ ಬೇಡಿಕೆಯ ಹಿನ್ನೆಲೆಯಲ್ಲಿ, ಭಾರತ ನಿರ್ಮಾಣ ಉದ್ಯಮವು 2021ರಲ್ಲಿ 11-12%ನಷ್ಟು ಬೆಳೆಯಲಿದೆ ಎಂದು ಅಂದಾಜಿಸಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್‍ಲೈನ್ ಮುಂತಾದ ಸರ್ಕಾರೀ ಯೋಜನೆಗಳ ಬೆಂಬಲ ಹಾಗು ವರ್ಷದಿಂದ ವರ್ಷಕ್ಕೆ ಸುಮಾರು 34% ಹೆಚ್ಚಿದ ಹೂಡಿಕೆಗಳ ಬೆಂಬಲ ಪಡೆದು, ನಗರೀಕರಣ ಹಾಗು ಔದ್ಯಮಿಕ ಅಭಿವೃದ್ಧಿ ಯೋಜನೆಗಳ ಮೇಲೆ ಪ್ರಾಥಮಿಕ ಗಮನ ಕೇಂದ್ರೀಕರಣದೊಂದಿಗೆ, ನಿರ್ಮಾಣ ಕ್ಷೇತ್ರವು ಇನ್ನಷ್ಟು ಬೆಳೆಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಲಾಭ ಪಡೆಯಲಿದೆ ಎಂದು ನಿರೀಕ್ಷಿಸಲಾಗಿರುವ ಅಂತಹ ಒಂದು ಸಂಸ್ಥೆ ಎಂದರೆ, ದಕ್ಷಿಣ ಭಾರತದಲ್ಲಿ ಅತಿದೊಡ್ಡ ಕಟ್ಟಡ ನಿರ್ಮಾಣ ಸಂಸ್ಥೆಗಳ ಪೈಕಿ ಒಂದಾದ ಮಾರ್ಕ್ ಕಾನ್ ಮಿಕ್ಸ್.
ಟಾಟಾ ವಾಣಿಜ್ಯ ವಾಹನ ಖರೀದಿ ಸುಲಭ; ಎಸ್‌ಬಿಐ ಜೊತೆ ಒಪ್ಪಂದ.
ಮಾರ್ಕ್ ಕಾನ್ ಮಿಕ್ಸ್, ಪ್ರಾಥಮಿಕವಾಗಿ, ನೀಲಿಲೋಹಗಳು, ಎಮ್-ಮರಳು, ಸಿದ್ಧಮಿಶ್ರಣದ ಕಾಂಕ್ರೀಟ್ ಮತ್ತು ಕಾಂಕ್ರಿಟ್ ಬ್ಲಾಕ್‍ಗಳ ಸಾಗಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯಾಗಿದೆ. ತನ್ನ ಕೈಗೆಟುಕುವ ಹಾಗು ವಿನೂತನ ವಿಧಾನಗಳಿಂದಾಗಿ, ಮಾರ್ಕ್ ಕಾನ್ ಮಿಕ್ಸ್, ದಕ್ಷಿಣಾತ್ಯ ಭಾರತದಲ್ಲಿ ಪ್ರಬಲ ನಿರ್ಮಾಣ ಸಂಸ್ಥೆಯಾಗಿ ಬೆಳೆದುಬಂದಿದೆ. ಇದರ ಮಾಲೀಕರಾದ ಎ. ಪ್ರಕಾಶ್ ರೆಡ್ಡಿ ಅವರು ತಮ್ಮ ಯಶಸ್ಸಿನ ಬಹುಭಾಗಕ್ಕೆ ಟಾಟಾಆ ಮೋಟರ್ಸ್ ಅವರ ವರ್ಗದಲ್ಲೇ ಅತ್ಯುತ್ತಮವಾದ ಉತ್ಪನ್ನಗಳು, ಹಾಗು 1996ರಲ್ಲಿ ತಾವು ಸಂಸ್ಥೆ ಆರಂಭಿಸಿದಾಗಿನಿಂದಲೂ ಅದಕ್ಕೆ ಬೆಂಬಲ ಒದಗಿಸಿದ ಅದರ ತ್ವರಿತ ಸೇವೆಗಳೇ ಕಾರಣ ಎನ್ನುತ್ತಾರೆ.
ಮ್ಯಾಜಿಕ್ ಎಕ್ಸ್‌ಪ್ರೆಸ್ ಆ್ಯಂಬುಲೆನ್ಸ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್!
ಟಾಟಾ ಮೋಟರ್ಸ್ ಟಿಪ್ಪರ್‍ಗಳು ಸಂಸ್ಥೆಯ ಬಲಕ್ಕೆ ನಿಜವಾಗಿಯೂ ಆಧಾರವಾಗಿದ್ದು, ಇವು, ನಮ್ಮ ಫ್ಲೀಟ್‍ನ 50%ಗಿಂತ ಹೆಚ್ಚಿನ ವಾಹನಗಳಾಗಿವೆ. ನಿರ್ದಿಷ್ಟ ಅಪ್ಲಿಕೇಶನ್‍ಗಳಿಗೆ ಸೂಕ್ತವಾದ, ಅದರಲ್ಲೂ ವಿಶೇಷವಾಗಿ ಮಾರ್ಕ್ ಕಾನ್ ಮಿಕ್ಸ್‍ನ ಫ್ಲೀಟ್‍ನ ಅವಿಭಾಜ್ಯ ಅಂಗವಾಗಿರುವ ಕ್ರಶರ್ ಅಪ್ಲಿಕೇಶನ್‍ಗಳಿಗೆ ಕ್ವಾರಿಯಲ್ಲಿ ತೊಡಗುವ ಟಿಪ್ಪರ್‍ಗಳ ಇಂಜಿನಿಯರಿಂಗ್ ಕಲೆ ಮತ್ತು ಉತ್ಪಾದನೆಯಲ್ಲಿ ಅವರು ಅಸಾಮಾನ್ಯರಾಗಿದ್ದಾರೆ ಎಂದು ಮಾರ್ಕ್ ಕಾನ್ ಮಿಕ್ಸ್ ಮಾಲೀಕ ಎ. ಪ್ರಕಾಶ್ ರೆಡ್ಡಿ ಹೇಳಿದ್ದಾರೆ.
ಟಿಪ್ಪರ್‌ಗಳಲ್ಲಿ ಉಪಯೋಗಿಸಲಾಗಿರುವ ಆಧುನಿಕ ಟೆಲಿಮ್ಯಾಟಿಕ್ಸ್ ಸಿಸ್ಟಮ್ ಮತ್ತು ಇಂಜಿನ್ ಬ್ರೇಕ್ ಅಸಿಸ್ಟ್ ಹಾಗು ಹಿಲ್ ಸ್ಟಾರ್ಟ್ ಅಸಿಸ್ಟ್‍ನಂತಹ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಕೂಡ ಮೆಚ್ಚಿಕೊಳ್ಳುವ ರೆಡ್ಡಿ , ಇದು ಲಾಭ ಮತ್ತು ಸುರಕ್ಷತೆಯನ್ನು ಹೆಚ್ಚಿಸುತ್ತದೆ ಎಂದು ಹೇಳುತ್ತಾರೆ. ಒಂದು ಟಾಟಾ ವಾಹನವನ್ನು ಖರೀದಿಸುವ ಸರಳತೆಯಿಂದ ಹಿಡಿದು ಮಾರಾಟಾನಂತರದ ಸೇವೆಗಳು ಹಾಗು ಹಲವಾರು ಚಾಲಕ-ಕೇಂದ್ರಿತ ಯೋಜನೆಗಳವರೆಗಿನ ಮೊದಲಿನಿಂದ ಕೊನೆಯವರೆಗಿನ ಅನುಭವವು, ನಮ್ಮ ಎಲ್ಲಾ ವಾಣಿಜ್ಯ ವಾಹನಗಳ ಅಗತ್ಯಗಳಿಗೆ ಟಾಟಾ ಮೋಟರ್ಸ್‍ಅನ್ನು ಇಚ್ಛೆಯ ಆಯ್ಕೆಯನ್ನಾಗಿ ಮಾಡುತ್ತದೆ.” ಎಂದು ಹೇಳಿದರು.
ಮಾರ್ಕ್ಸ್ ಕಾನ್ ಮಿಕ್ಸ್‍ನೊಂದಿಗೆ ಟಾಟಾ ಮೋಟರ್ಸ್ ಅವರ ಸುದೀರ್ಘ ಸಹಯೋಗವು, ವ್ಯಾಪಾರ ಬೆಳವಣಿಗೆ ಹಾಗು ಹೆಚ್ಚಿದ ಲಾಭದಲ್ಲಿ ನೆರವಾಗುವ ಸಂಚಾರ ಸೇವೆಗಳನ್ನು ಒದಗಿಸುವ ಸಂಸ್ಥೆಯ ಧ್ಯೇಯೋದ್ದೇಶಕ್ಕೆ ಒಂದು ಪುರಾವೆಯಾಗಿದೆ. ಮಾರ್ಕ್ ಕಾನ್ ಮಿಕ್ಸ್ ಅವರೊಂದಿಗಿನ ಈ ಸಹಯೋಗವನ್ನು ಇನ್ನಷ್ಟು ವರ್ಧಿಸಿ, ಅವರ ಯಶೋಗಾಥೆಗೆ ಕೊಡುಗೆ ಸಲ್ಲಿಸಬೇಕೆಂದು ಆಶಿಸುತ್ತೇವೆ. ಅದ್ವಿತೀಯವಾದ ಮಾರಾಟಾನಂತರದ ಸೇವೆಗಳು ಮತ್ತು ದೀರ್ಘಾವಧಿ ಇರುವ ಗ್ರಾಹಕ ತೊಡಗಿಕೊಳ್ಳುವಿಕೆಯೊಂದಿಗೆ, ಟಾಟಾ ಮೋಟರ್ಸ್ ಅವರ ಅತ್ಯುತ್ಕೃಷ್ಟ ವರ್ಗದ ಉತ್ಪನ್ನಗಳು, ಸಂಸ್ಥೆಯ ಬೆಳವಣಿಗೆಯನ್ನು ಇನ್ನಷ್ಟು ವೇಗವಾಗಿ ವರ್ಧಿಸಲಿ ಎಂದು ಆಶಿಸುತ್ತೇವೆ ಎಂದು ಟಾಟಾ ಮೋಟರ್ಸ್‍ನ ವಾಣಿಜ್ಯ ವಾಹನಗಳ ವ್ಯಾಪಾರ ಘಟಕದ ಮಾರಾಟ ಹಾಗು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ರಾಜೇಶ್ ಕೌಲ್ ಹೇಳಿದರು.