GPS Route ಮ್ಯಾಪ್ ಹೇಳಿದ್ದು ಕಣ್ಮುಚ್ಚಿ ನಂಬಬೇಡಿ, ಜಿಪಿಎಸ್ ರಸ್ತೆಯಲ್ಲಿ ಸಂಚರಿಸಿದ ಟ್ರಕ್ ಡ್ರೈವರ್ ಬದುಕುಳಿದಿದ್ದೆ ಅದೃಷ್ಠ!

By Suvarna News  |  First Published Jan 10, 2022, 12:58 PM IST
  • ತಂತ್ರಜ್ಞಾನ ಬಳಕೆ ಹೆಚ್ಚಾದಂತೆ ಅಪಾಯವೂ ಹೆಚ್ಚು, ಎಚ್ಚರಿಕೆ ಅಗತ್ಯ
  • GPS ಹೇಳಿದ ರಸ್ತೆಯಲ್ಲಿ ಸಂಚರಿಸಿದ ಟ್ರಕ್ ಅಪಘಾತ
  • ಬಂಡೆ ಡಿಕ್ಕಿ, ಪರ್ವತದ ಮೇಲೆ ನೇತಾಡಿತು ದೊಡ್ಡ ಟ್ರಕ್

ಶಾಂಕ್ಸಿ(ಜ.10):  ವಿಶ್ವದಲ್ಲಿ ತಂತ್ರಜ್ಞಾನದ ಬಳಕೆ ಯಾವ ಮಟ್ಟಿಗಿದೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ.  ಎಲ್ಲಾ ಕ್ಷೇತ್ರಗಳಲ್ಲಿ ತಂತ್ರಜ್ಞಾನ ಬಳಕೆ ಅನಿವಾರ್ಯವೂ ಆಗಿದೆ. ಆದರೆ ಇದೇ ತಂತ್ರಜ್ಞಾನವನ್ನು (Technology)ಕಣ್ಮುಚ್ಚಿ ನಂಬಬಾರದು. ಅದರಲ್ಲೂ ಜಿಪಿಎಸ್ ರೂಟ್ ಮ್ಯಾಪ್(GPS Route Map) ವಿಚಾರದಲ್ಲಿ ಎಚ್ಚರಿಕೆ ಅಗತ್ಯ. ಈಗಾಗಲೇ ಹಲವು ಬಾರಿ ಜಿಪಿಎಸ್ ರೂಟ್ ಮ್ಯಾಪ್ ನಂಬಿ ಕೆಟ್ಟ ಉದಾಹರಣೆಗಳಿವೆ. ಇದೀಗ ಇದೇ GPS ರೂಟ್ ಮ್ಯಾಪ್ ತೋರಿಸಿದ ರಸ್ತೆಯಲ್ಲಿ ತೆರಳಿದ ಟ್ರಕ್ (Truck) ಡ್ರೈವರ್ ಪವಾಡ ಸದೃಶ್ಯ ಬದುಕುಳಿದ ಘಟನೆ ನಡೆದಿದೆ. 

ಈ ಘಟನೆ ಚೀನಾದ(China) ಶಾಂಕ್ಸಿ ಪ್ರಾಂತ್ಯದಲ್ಲಿರುವ ಚಾಂಗ್ಜಿ ನಗರದಲ್ಲಿನ ಅತ್ಯಂತ ಜನಪ್ರಿಯ ಪರ್ವತದ ಮೇಲೆ ನಡೆದಿದೆ. ಟ್ರಕ್ ಡ್ರೈವರ್ ತನ್ನ ಘನ ವಾಹನದೊಂದಿಗೆ ತೆರಳುವಾಗ ಜಿಪಿಎಸ್ ರೂಟ್ ಮ್ಯಾಪ್ ಹಾಕಿದ್ದಾನೆ.  ಜಿಪಿಎಸ್ ಹತ್ತಿರದ ಮಾರ್ಗ ಎಂದು ಪರ್ವತ ರಸ್ತೆ ತೋರಿಸಿದೆ. ಆದರೆ ಈ ರಸ್ತೆ ಪರ್ವತ ರಸ್ತೆ ಅನ್ನೋದು ಡ್ರೈವರ್‌ಗೆ(Driver) ತಿಳಿದಿಲ್ಲ. ಜಿಪಿಎಸ್ ಹೇಳಿದ ಮಾರ್ಗದಲ್ಲಿ ಸಂಚರಿಸಿದ ಟ್ರಕ್ ಡ್ರೈವರ್‌ ತಾನು ಅಪಾಯದ ರಸ್ತೆಯಲ್ಲಿ(Wrong Rout) ಸಂಚರಿಸುತ್ತಿದ್ದೇನೆ ಅನ್ನೋ ಸುಳಿವು ಡ್ರೈವರ್‌ಗೆ ಇರಲಿಲ್ಲ.

Tap to resize

Latest Videos

undefined

ಕೈಗೆಟುಕವ ದರದಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಬ್ಯಾಟ್‌ರೆ!

ಜಿಪಿಎಸ್ ಟೂರ್ ಮೂಲಕ ಸಂಚರಿಸುತ್ತಿದ್ದ ಡ್ರೈವರ್‌ಗೆ ಪರ್ವತ ಏರುತ್ತಿದ್ದಂತೆ ಸುಂದರ ದೃಶ್ಯ ಡ್ರೈವರ್ ಮನಸೂರೆಗೊಂಡಿದೆ. ಹೀಗಾಗಿ ಹಿಂದೂ ಮುಂದೂ ನೋಡದೆ ಡ್ರೈವರ್ ನೇರವಾಗಿ ರಸ್ತೆಯಲ್ಲಿ ಸಂಚರಿಸಿದ್ದಾನೆ. ಆದರೆ ಈ ರಸ್ತೆಯಲ್ಲಿ ಘನವಾಹಗಳು ಸಂಚರಿಸುವಂತಿಲ್ಲ. ಅದರಲ್ಲೂ ಟ್ರಕ್ ಹೋಗುವಂತಿಲ್ಲ. ಕಾರಣ ಇದು ಅತ್ಯಂತ ಕಡಿದಾದ ರಸ್ತೆಗಳನ್ನು ಹೊಂದಿದೆ. ಬಂಡೆ ಕಲ್ಲುಗಳನ್ನು ಕೆತ್ತಿ, ಕೊರೆದು ಮಾಡಿರುವ ಸಣ್ಣ ರಸ್ತೆ ಇದಾಗಿದೆ.

ಸುರಂಗಳನ್ನು ಹೊಂದಿರುವ ಈ ರಸ್ತೆಯಲ್ಲಿ ಸಣ್ಣ ವಾಹನ ಸಂಚರಿಸಲು ಮಾತ್ರ ಸಾಧ್ಯ. ಪರ್ವತ ರಸ್ತೆ ಏರುತ್ತಿದ್ದಂತೆ ರಸ್ತೆ ಇಕ್ಕೆಲಗಳಲ್ಲಿ ಹಲವು ಸೂಚನಾ ಫಲಕಗಳನ್ನು ಹಾಕಲಾಗಿದೆ. ಆದರೆ ಡ್ರೈವರ್ ಜಿಪಿಎಲ್ ಮಾತು ಕೇಳಿ ಮುನ್ನಡೆದಿದ್ದಾನೆ. ಎತ್ತರವಾದ ಟ್ರಕ್ ಕಾರಣ ಮುಂದೆ ಸಾಗಲು ಸಾಧ್ಯವಾಗದ ರಸ್ತೆ ಎದುರಾಗಿದೆ. ಈ ವೇಳೆ ಟ್ರಕ್ ನಿಲ್ಲಿಸಿದ ಡ್ರೈವರ್  ವಾಹನ ತಿರುಗಿಸಿ ವಾಪಸ್ ಬರಲು ಯತ್ನಿಸಿದ್ದಾನೆ. ಈ ರಸ್ತೆಯಲ್ಲಿ ಸಣ್ಣ ವಾಹನ ತೆರಳುವುದು ಸಾಹಸ, ಅದರಲ್ಲಿ ಘನ ವಾಹನ ತಿರುಗಿಸುವುದು ಅಸಾಧ್ಯದ ಮಾತು. 

ವಾಹನ ಸವಾರರೇ ಎಚ್ಚರ;ಗೂಗಲ್ ಮ್ಯಾಪ್, ಮ್ಯೂಸಿಕ್ ಸಿಸ್ಟಮ್‌ ಬಳಕೆಗೆ ಹೊಸ ರೂಲ್ಸ್!

ರಿವರ್ಸ್ ತೆಗೆದ ಟ್ರಕ್ ಹಿಂಭಾಗ ಹಾಗೂ ಮೇಲ್ಬಾಗದ ಬಂಡೆಗೆ ಡಿಕ್ಕಿ ಹೊಡೆದಿದೆ. ಮೇಲಿನ ಬಂಡೆ ಕಾರಣ ಟ್ರಕ್ ಪ್ರವಾತಕ್ಕೆ ಉರುಳದೆ ನಿಂತಿದೆ. ತಕ್ಷಣೇ ಟ್ರಕ್ ಡ್ರೈವರ್ ವಾಹನದಿಂದ ನಿಧಾನವಾಗಿ ಕೆಳಗಿಳಿದು ಜೀವ ಉಳಿಸಿಕೊಂಡಿದ್ದಾನೆ. ಟ್ರಕ್ ಪ್ರಪಾತದ ನಡುವೆ ನೇತಾಡುವ ಪರಿಸ್ಥಿತಿ ಎದುರಾಗಿದೆ. ರಸ್ತೆ ಸಂಪೂರ್ಣ ಬಂದ್ ಆಗಿದೆ.  ಇದೇ ಮಾರ್ಗದಲ್ಲಿ ಬಂದ ವಾಹನಗಳು ಸಾಲು ಸಾಲಾಗಿ ನಿಂತಿದೆ. ಇತ್ತ ಶಾಂಕ್ಸಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಕ್ರೇನ್ ಹಾಗೂ ಇತರ ವಾಹನ ಸಹಾಯದಿಂದ ಟ್ರಕ್‌ನ್ನು ಮೇಲಕ್ಕೆ ಎತ್ತಲಾಗಿದೆ. ಘನ ವಾಹನಗಳು ನಿಷಿದ್ಧ ರಸ್ತೆಯಲ್ಲಿ ಸಂಚರಿಸಿದ ಟ್ರಕ್ ಡ್ರೈವರ್‌ಗೆ ದಂಡ ವಿಧಿಸಲಾಗಿದೆ. 

ಜಿಪಿಎಸ್ ರೂಟ್ ಮ್ಯಾಪ್ ಹತ್ತಿರದ ರಸ್ತೆ ತೋರಿಸಿದೆ. ಆದರೆ ಈ ರಸ್ತೆ ಘನ ವಾಹನಗಳಿಗೆ ಸಂಚರಿಸಲು ಸಾಧ್ಯವಿಲ್ಲ ಅನ್ನೋ ಮಾಹಿತಿಯನ್ನು ಜಿಪಿಎಸ್ ಹೇಳಿಲ್ಲ. ಆದರೆ ಜಿಪಿಎಸ್ ಮಾತನ್ನು ಕಣ್ಮುಚ್ಚಿ ನಂಬಿದ ಟ್ರಕ್ ಡ್ರೈವರ್ ಅದೃಷ್ಠವಶಾತ್ ಬದುಕಿ ಉಳಿದಿದ್ದಾನೆ. ಇತ್ತ ದಂಡ ಕೂಡ ಪಾವತಿಸಬೇಕಾಗಿ ಬಂದಿದೆ.

ಭಾರತದಲ್ಲಿ ಜಿಪಿಎಸ್ ಟೂರ್ ಮ್ಯಾಪ್ ನಂಬಿ ಹಲವು ಅಪಘಾತಗಳು ಸಂಭವಿಸಿದೆ. ಜಿಪಿಎಸ್ ರೂಟ್ ಮೂಲಕ ತೆರಳಿ ಅಪಾಯದಲ್ಲಿ ಸಿಲುಕಿದ ಘಟನೆಗಳು ವರದಿಯಾಗಿದೆ. ಹೀಗಾಗಿ ತಂತ್ರಜ್ಞಾನ ಬಳಸುವಾಗ ಕಣ್ಮುಚ್ಚಿ ನಂಬಬಾರದು. ಕೆಲ ವಿಚಾರಗಳನ್ನು ಪುನರ್ ಪರಿಶೀಲಿಸುವುದು ಅಗತ್ಯ. 
 

click me!