ಬೆಂಗಳೂರು(ಜ.04): ವಾಹನ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್(Tata Motors) ಭಾರತದಲ್ಲಿ ಹಲವು ದಾಖಲೆ ಬರೆದಿದೆ. ಟ್ರಕ್, ಬಸ್ ಸೇರಿದಂತೆ ಘಟನ ವಾಹನಗಳ ಉದ್ಯಮದತ್ತ ಹೆಚ್ಚು ಗಮನಕೇಂದ್ರಿಕರಿಸಿದ್ದ ಟಾಟಾ ಮೋಟಾರ್ಸ್ ಕಳೆದ ಕೆಲ ವರ್ಷಗಳಿಂದ ಅತ್ಯುತ್ತಮ ಕಾರುಗಳನ್ನು(Tata Cars) ಬಿಡುಗಡೆ ಮಾಡುವ ಮೂಲಕ ದೇಶದಲ್ಲಿ ಸಂಚಲನ ಸೃಷ್ಟಿಸಿದೆ. ಇತ್ತ ಟಾಟಾ ಮೋಟಾರ್ಸ್ ಬಸ್ ಉತ್ಪಾದನೆ ಹಾಗೂ ವಿತರಣೆಯಲ್ಲೂ ದಾಖಲೆ ಬರೆದಿದೆ. ಟಾಟಾ ಮೋಟಾರ್ಸ್‌ನ ಸ್ಟಾರ್‌ಬಸ್(Starbus) 1 ಲಕ್ಷ ಮಾಲೀಕರ ಸಂಭ್ರಮ ಆಚರಿಸುತ್ತಿದೆ.
ಭಾರತದ ಅತಿದೊಡ್ಡ ವಾಣಿಜ್ಯ ವಾಹನ ತಯಾರಕರಾದ ಟಾಟಾ ಮೋಟಾರ್ಸ್, 1 ಲಕ್ಷ ಸ್ಟಾರ್‌ಬಸ್ ಮಾಲೀಕರನ್ನು ಹೊಂದಿದೆ ಸಾಧನೆ ಮಾಡಿದೆ. ಟಾಟಾ ಸ್ಟಾರ್ ಬಸ್ ದೇಶದಲ್ಲಿ ಅತ್ಯಧಿಕ ಮಾರಾಟವಾಗುವ ಸಂಪೂರ್ಣ-ನಿರ್ಮಿತ ಬಸ್ ಬ್ರಾಂಡ್(Made in India) ಆಗಿದ್ದು, ಇದು ಪ್ರಯಾಣಿಕರ ಸೌಕರ್ಯ, ವಿಶ್ವಾಸಾರ್ಹತೆ ಮತ್ತು ಸುಗಮ ಚಾಲನೆಗೆ ಸಮಾನಾರ್ಥಕವಾಗಿದೆ. ಸ್ಟಾರ್ ಬಸ್ ಪ್ಲಾಟ್‍ಫಾರ್ಮ್ ಸಿಬ್ಬಂದಿ, ಶಾಲಾಮಕ್ಕಳ(School transport) ಸಾರಿಗೆಯಂತಹ ಹಲವಾರು ಅಪ್ಲಿಕೇಶನ್‍ಗಳಿಗೆ ಸಂಪೂರ್ಣವಾಗಿ ಸರಿಹೊಂದುವಂತೆ ವಿವಿಧ ಸಂರಚನೆಗಳಲ್ಲಿ ಲಭ್ಯವಿದೆ ಮತ್ತು ದೇಶದ ಸಾರ್ವಜನಿಕ ಸಾರಿಗೆ ವಲಯದಲ್ಲಿ ಪ್ರಮುಖ ಆಧಾರಸ್ತಂಭವಾಗಿದೆ. ಸ್ಟಾರ್‌ಬಸ್ ಎಲೆಕ್ಟ್ರಿಕ್ ಬಸ್‍ನ(Electric Bus) ರೂಪದಲ್ಲೂ ಲಭ್ಯವಿದೆ ಮತ್ತು ಭಾರತದಾದ್ಯಂತ(India) ಹಲವಾರು ನಗರಗಳಲ್ಲಿ ಯಶಸ್ವಿಯಾಗಿ ಓಡುತ್ತಿದೆ. ಸ್ಟಾರ್ ಬಸ್ ತನ್ನ ಕಡಿಮೆ ವೆಚ್ಚದ ಮಾಲೀಕತ್ವ ಮತ್ತು ಹೆಚ್ಚಿನ ಲಾಭದಿಂದಾಗಿ ವಾಹನಗಳ ಹಲವಾರು ಆಪರೇಟರ್ ಗಳಿಗೆ ಈ ಬಸ್ ಆದ್ಯತೆಯ ಆಯ್ಕೆಯಾಗಿದೆ.
undefined
Tata Electric Car sales ಎಲೆಕ್ಟ್ರಿಕ್ ವಾಹನ ಮಾರಾಟದಲ್ಲಿ ಟಾಟಾಗೆ ಮೊದಲ ಸ್ಥಾನ, ಶೇ.439 ಏರಿಕೆ ಮೂಲಕ ದಾಖಲೆ!
ಭಾರತೀಯ ರಸ್ತೆಗಳಲ್ಲಿ 1 ಲಕ್ಷ ಸ್ಟಾರ್ ಬಸ್ ವಾಹನಗಳ ಮಹತ್ವದ ಮೈಲಿಗಲ್ಲನ್ನು ನಾವು ಆಚರಿಸುತ್ತಿರುವಾಗ ನಮ್ಮ ಗ್ರಾಹಕರಿಂದ ಇದು ಅತ್ಯಂತ ಹೆಮ್ಮೆಯ ಮತ್ತು ಪ್ರಮಾಣೀಕೃತ ಕ್ಷಣವಾಗಿದೆ. ಟಾಟಾ ಸ್ಟಾರ್ ಬಸ್, ಸಿಬ್ಬಂದಿಗೆ ಸಾರಿಗೆ ಅಪ್ಲಿಕೇಶನ್‍ನಲ್ಲಿ ಐಷಾರಾಮಿ ಪ್ರಯಾಣದ ಅನುಭವ ಮತ್ತು ಶಾಲಾ ಬಸ್ ಆಗಿ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪ್ರಯಾಣವನ್ನು ನೀಡುವ ಉದ್ಯಮದಲ್ಲಿ ಅತ್ಯಂತ ವಿವಿಧೋದ್ದೇಶಿ ಬಸ್ ಎಂದು ಸಾಬೀತಾಗಿದೆ. ಟಾಟಾ ಸ್ಟಾರ್ ಬಸ್ ವಾಣಿಜ್ಯ ವಾಹನ ಉದ್ಯಮದಲ್ಲಿ ಪ್ರಬಲ ಬ್ರ್ಯಾಂಡ್‍ಗಳಲ್ಲಿ ಒಂದಾಗಿದೆ ಮತ್ತು ಭಾರತದ ಸಾರಿಗೆ ಕ್ಷೇತ್ರದ ಅವಿಭಾಜ್ಯ ಅಂಗವಾಗಿದೆ. ಟಾಟಾ ಮೋಟಾರ್ಸ್‍ನಲ್ಲಿನ ನಿರಂತರ ವಿಶ್ವಾಸಕ್ಕಾಗಿ ನಾವು ನಮ್ಮ ಎಲ್ಲಾ ಗ್ರಾಹಕರಿಗೆ ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ ಎಂದು ಟಾಟಾ ಮೋಟಾರ್ಸ್‍ನ ಪ್ರಾಡಕ್ಟ್ ಲೈನ್ ಬಸ್‍ಗ ಉಪಾಧ್ಯಕ್ಷ ರೋಹಿತ್ ಶ್ರೀವಾಸ್ತವ ಹೇಳಿದ್ದಾರೆ.
Car sales ಹ್ಯುಂಡೈ ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಟಾಟಾ ಮೋಟಾರ್ಸ್, ಕಳೆದ 10 ವರ್ಷಗಳಲ್ಲಿ ಗರಿಷ್ಠ ದಾಖಲೆ!
ಸ್ಟಾರ್ ಬಸ್‍ನೊಂದಿಗೆ, ಟಾಟಾ ಮೋಟಾರ್ಸ್ ಭಾರತದಲ್ಲಿ OEM-ನಿರ್ಮಿತ ಬಸ್ ಪರಿಕಲ್ಪನೆಯನ್ನು ಪರಿಚಯಿಸಿತು. ಗಾಡಿಗಳ ತಯಾರಿಕೆಯಲ್ಲಿ ಟಾಟಾ ಮಾರ್ಕೊಪೋಲೊ ಅವರ ಆಳವಾದ ಜ್ಞಾನವನ್ನು ಬಳಸಿಕೊಂಡು, ಸ್ಟಾರ್‍ಬಸ್‍ನ ಕಲಾತ್ಮಕವಾಗಿ ವಿನ್ಯಾಸಗೊಳಿಸಿದ ನಿರ್ಮಾಣ ಮತ್ತು ಹೊಂದಿಕೊಳ್ಳುವ ಸಂರಚನೆಯು ವರ್ಧಿತ ಗ್ರಾಹಕರ ಅನುಭವವನ್ನು ಖಾತ್ರಿ ಗೊಳಿಸುತ್ತದೆ ಮತ್ತು ವಾಹನಗಳ ಮಾಲೀಕರಿಗೆ ಆದಾಯದ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ. ಕರ್ನಾಟಕದ ಧಾರವಾಡದಲ್ಲಿರುವ ಅತ್ಯಾಧುನಿಕ ಉತ್ಪಾದನಾ ಘಟಕದಲ್ಲಿ ನಿರ್ಮಿಸಲಾದ ಸ್ಟಾರ್ ಬಸ್ ಹೆಚ್ಚಿನ ವಿಶ್ವಾಸಾರ್ಹತೆ ಮತ್ತು ದೋಷರಹಿತ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಸ್ಟಾರ್‍ಬಸ್ ವೇದಿಕೆಯು ವರ್ಷಗಳಿಂದ ನಿರಂತರವಾಗಿ ವಿಕಸನಗೊಳ್ಳುತ್ತಿದೆ ಮತ್ತು ಅದರ ಸಮಯಕ್ಕಿಂತ ಮೊದಲೇ ಉದ್ಯಮದಲ್ಲಿ ಕಾರ್ಯತಾಂತ್ರಿವಾಗಿ ಖಾಲಿ ಸ್ಥಳಗಳನ್ನು ಗುರುತಿಸುತ್ತದೆ ಮತ್ತು ತುಂಬುತ್ತದೆ. ಟಾಟಾ ಸ್ಟಾರ್ ಬಸ್ ಸಮೂಹವು ಗ್ರಾಹಕರ ಅಭಿವೃದ್ಧಿ ಹೊಂದುತ್ತಿರುವ ಅಗತ್ಯಗಳನ್ನು ಪೂರೈಸಲು ನವೀನ ಪರಿಹಾರಗಳನ್ನು ಅಭಿವೃದ್ಧಿಪಡಿಸುವುದನ್ನು ಮುಂದುವರಿಸುತ್ತದೆ.
Upcoming Car ಹೊಸ ವರ್ಷದಲ್ಲಿ ಟಾಟಾದಿಂದ ಮತ್ತೊಂದು ಕೊಡುಗೆ, ಅಲ್ಟ್ರೋಜ್ ಆಟೋಮ್ಯಾಟಿಕ್ ಕಾರು ಲಾಂಚ್!
ಹೆಚ್ಚಿನ ಲಾಭ, ವರ್ಧಿತ ಕಾರ್ಯಕ್ಷಮತೆ, ಹೆಚ್ಚಿದ ಸೌಕರ್ಯ ಮತ್ತು ಅನುಕೂಲತೆ, ಸುಧಾರಿತ ವಿನ್ಯಾಸ ಮತ್ತು ಹೆಚ್ಚಿನ ಮೌಲ್ಯವನ್ನು ನೀಡುವ ಟಾಟಾ ಮೋಟಾರ್ಸ್‍ನ ಪವರ್ ಆಫ್ 6 (6ರ ಸಾಮಥ್ರ್ಯ) ಎಂಬ ತತ್ವಶಾಸ್ತ್ರವನ್ನು ಸ್ಟಾರ್‍ಬಸ್ ಸಮೂಹವು ಅನುಸರಿಸುತ್ತದೆ. ಇದು ಟಾಟಾ ಮೋಟಾರ್ಸ್‍ನ ಅತ್ಯುತ್ತಮ ಫ್ಲೀಟ್ ನಿರ್ವಹಣೆಗಾಗಿ ಮುಂದಿನ-ಪೀಳಿಗೆಯ ಡಿಜಿಟಲ್ ಪರಿಹಾರ- ಫ್ಲೀಟ್ ಎಡ್ಜ್ ನ ಪ್ರಮಾಣಿತ ಫಿಟ್‍ಮೆಂಟ್‍ನೊಂದಿಗೆ ಬರುತ್ತದೆ, ಇದು ಯಂತ್ರಗಳ ಕಾರ್ಯನಿರ್ವಹಣೆಯ ಸಮಯ (ಅಪ್‍ಟೈಮ್) ವನ್ನು ಇನ್ನಷ್ಟು ಹೆಚ್ಚಿಸುತ್ತದೆ ಮತ್ತು ಮಾಲೀಕತ್ವದ ಒಟ್ಟು ವೆಚ್ಚವನ್ನು ಕಡಿಮೆ ಮಾಡುತ್ತದೆ. ಟಾಟಾ ಮೋಟಾರ್ಸ್ ಸಂಪೂರ್ಣ ಸೇವೆ ಮತ್ತು ಟಾಟಾ ಸಮರ್ಥ್ - ವಾಣಿಜ್ಯ ವಾಹನ ಚಾಲಕರ ಕಲ್ಯಾಣ, ಅಪ್‍ಟೈಮ್ ಗ್ಯಾರಂಟಿ, ಆನ್-ಸೈಟ್ ಸೇವೆ, ಕಸ್ಟಮೈಸ್ ಮಾಡಿದ ವಾರ್ಷಿಕ ನಿರ್ವಹಣೆ ಮತ್ತು ಫ್ಲೀಟ್ ಮ್ಯಾನೇಜ್‍ಮೆಂಟ್ ಪರಿಹಾರಗಳು, ಇತರ ಪ್ರಯೋಜನಗಳ ನಡುವೆ ಕಂಪನಿಯ ಬದ್ಧತೆ ಗಳನ್ನು ನೀಡುತ್ತದೆ.