Elon Musk Job ಉದ್ಯೋಗ ತೊರೆಯಲು ನಿರ್ಧರಿಸಿದ ವಿಶ್ವದ ಶ್ರೀಮಂತ, ಮುಂದಿನ ವೃತ್ತಿ ಮತ್ತಷ್ಟು ಕುತೂಹಲ!

By Suvarna News  |  First Published Dec 10, 2021, 5:28 PM IST
  • ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎಲನ್ ಮಸ್ಕ್
  • ಟೆಸ್ಲಾ ಎಲೆಕ್ಟ್ರಿಕ್ ವಾಹನ ಕಂಪನಿಯ CEO ಮಸ್ಕ್
  • ಉದ್ಯೋಗ ತೊರೆಯುವ ಸೂಚನೆ ನೀಡಿದ ಮಸ್ಕ್
  • ಟ್ವೀಟ್ ಮೂಲಕ ಶಾಕಿಂಗ್ ನ್ಯೂಸ್ ನೀಡಿದ ಮಸ್ಕ್

ಕ್ಯಾಲಿಫೋರ್ನಿಯಾ(ಡಿ.10):  ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಟೆಸ್ಲಾ ಎಲೆಕ್ಟ್ರಿಕ್(Tesla Electric car) ಕಾರು ಕಂಪನಿ ಸಿಇಓ ಎಲನ್ ಮಸ್ಕ್(Elon Musk) ಇದೀಗ ಶಾಕಿಂಗ್ ನ್ಯೂಸ್ ನೀಡಿದ್ದಾರೆ. ಕಂಪನಿ ಸಿಇಓ ಆಗಿರುವ ಮಸ್ಕ್, ಇದೀಗ ಉದ್ಯೋಗ(Jobs) ತೊರೆದು ಹೊಸ ವೃತ್ತಿ ಆರಂಭಿಸುವ ಸೂಚನೆ ನೀಡಿದ್ದಾರೆ. ಹೌದು, ಟ್ವೀಟ್(Tweet) ಮೂಲಕ ಉದ್ಯೋಗ ತೊರೆಯುವುದಾಗಿ ಹೇಳಿದ್ದಾರೆ. 

ನಾನು ಉದ್ಯೋಗ ತೊರೆಯಲು ಚಿಂತಿಸುತ್ತಿದ್ದೇನೆ. ಹುದ್ದೆ ತ್ಯಜಿಸಿ ಪೂರ್ಣ ಪ್ರಮಾಣದಲ್ಲಿ ಸಮಾಜದಲ್ಲಿ ಸಂದೇಶದ ಮೂಲಕ ಪ್ರಭಾವ ಬೀರುವ ನಾಯಕನಾಗಿ ಹೊರಹೊಮ್ಮಲು ಚಿಂತಿಸುತ್ತಿದ್ದೇನೆ ಎಂದು ಮಸ್ಕ್ ಹೇಳಿದ್ದಾರೆ. ಸಿಂಪಲ್ ಆಗಿ ಹೇಳಬೇಕೆಂದರ್ ಮುಖಂಡನಾಗಿ ಬದಲಾಗುವ  ಸೂಚನೆ ನೀಡಿದ್ದಾರೆ.

Tap to resize

Latest Videos

undefined

ಟ್ವೀಟರ್‌ನಲ್ಲಿ ಸಮೀಕ್ಷೆ ನಡೆಸಿ 2 ದಿನದಲ್ಲಿ 4 ಲಕ್ಷ ಕೋಟಿ ಕಳೆದುಕೊಂಡ ಎಲಾನ್‌ ಮಸ್ಕ್‌!

ಮಸ್ಕ್ ಸಾಮಾಜಿಕ ಜಾಲತಾಣದಲ್ಲಿ 66 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ಈಗಾಗಲೇ ಮಸ್ಕ್ ಸಂದೇಶಗಳು ಭಾರಿ ಪ್ರಭಾವ ಬೀರುತ್ತಿದೆ. ಕ್ರಿಪ್ಟೋಕರೆನ್ಸಿ(cryptocurrency), ಕಂಪನಿ ಕುರಿತು ನೀಡುವ ಹೇಳಿಕೆ ಹಾಗೂ ಸಂದೇಶ ಭಾರಿ ತಲ್ಲಣ ಸೃಷ್ಟಿಸಿದೆ. ಇತ್ತೀಚೆಗೆ ಕ್ರಿಪ್ಟೋಕರೆನ್ಸಿ ಕುರಿತು ಮಸ್ಕ್ ನೀಡುವ ಸಂದೇಶ ಹಾಗೂ ವಿಶ್ಲೇಷಣೆ ಭಾರಿ ಪರಿಣಾಮ ಬೀರುತ್ತಿದೆ. ಇನ್ನು ಕಂಪನಿಗಳು, ಮಾರುಕಟ್ಟೆ ಸೇರಿದಂತೆ ಇತರ ವಿಚಾರಗಳ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಸಂದೇಶ, ಕಿವಿಮಾತುಗಳು ತಜ್ಞರಿಗಿಂತಲೂ ನಿಖರವಾಗಿದೆ. ಹೀಗಾಗಿ ಇದೀಗ ಮಸ್ಕ್, ತಮ್ಮ ಉದ್ಯೋಗ ಬಿಟ್ಟು, ಪೂರ್ಣ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣ(Social Media) ಮೂಲಕ ಸಂದೇಶಗಳನ್ನು ನೀಡುವ ನಾಯಕನಾಗುವ ಕುರಿತು ಆಲೋಚನೆ ಮಾಡಿದ್ದಾರೆ.

 

thinking of quitting my jobs & becoming an influencer full-time wdyt

— Elon Musk (@elonmusk)

ಟೆಸ್ಲಾ ಕಂಪನಿ ಯಾವಾಗಲೂ ಅಗ್ರಸ್ಥಾನದಲ್ಲಿರುವುದನ್ನು ನಿರೀಕ್ಷಿಸುತ್ತೇನೆ ಎಂದಿದ್ದ ಮಸ್ಕ್, ತಮ್ಮ ಹೇಳಿಕೆಯಂತೆ ವಿಶ್ವದಲ್ಲಿ ಅತ್ಯಂತ ಮುಂಚೂಣಿ ಕಂಪನಿಯಾಗಿ ಗುರುತಿಸಿಕೊಂಡಿದೆ. ರಾಕೆಟ್ ಸ್ಪೇಸ್X ಕಂಪನಿ ಹುಟ್ಟುಹಾಕಿರುವ ಎಲನ್ ಮಸ್ಕ್ ವಿಶ್ವದಲ್ಲಿ ಹೊಸ ಬದಲಾವಣೆಗೆ ನಾಂದಿ ಹಾಡಿದ್ದಾರೆ. ಟೆಸ್ಲಾ ಕಾರ್ಯಕ್ಷಮತೆಯಿಂದ ಮಸ್ಕ್ ಆದಾಯ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿತ್ತು.  

300 ಬಿಲಿಯನ್ ಡಾಲರ್ ಕ್ಲಬ್‌ಗೆ ಎಲಾನ್ ಮಸ್ಕ್; 22.50 ಲಕ್ಷ ಆಸ್ತಿ ಹೊಂದಿದ ವಿಶ್ವದ ಮೊದಲಿಗ!

ಮಸ್ಕ್ ತಮ್ಮ ದೃಢ ನಿರ್ಧಾರಗಳು, ಉದ್ಯಮವನ್ನು ಮುನ್ನಡೆಸಿಕೊಂಡುವ ಚಾಣಾಕ್ಷತನ ಹಾಗೂ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಯಶಸ್ವಿಗೊಳಿಸುವ ಕಲೆ ತಿಳಿದ ವ್ಯಕ್ತಿಯಾಗಿದ್ದಾರೆ. ಚಕಿತಗೊಳಿಸುವ ನಿರ್ಧಾರಗಳಿಂದ ಹಲವು ಬಾರಿ ಟೀಕೆಗೂ ಗುರಿಯಾಗಿದ್ದಾರೆ. ಆಯಾಸವಿಲ್ಲದೆ, ವಿಶ್ರಾಂತಿ ಇಲ್ಲದೆ ದುಡಿದ ವ್ಯಕ್ತಿ ಮಸ್ಕ್. 

ಎಲನ್ ಮಸ್ಕ್ ಆದಾಯ 22 ಲಕ್ಷ ಕೋಟಿ ರೂಪಾಯಿ. ಅಕ್ಟೋಬರ್ ತಿಂಗಳಲ್ಿ ಮಸ್ಕ್ ಒಡೆತಡನ ಕಂಪನಿಗಳು ಷೇರು ಮೌಲ್ಯ ಭಾರಿ ಏರಿಕೆ ಕಂಡಿತ್ತು. ಒಂದೇ ದಿನದಲ್ಲಿ 2.70 ಲಕ್ಷ ಕೋಟಿ ರೂಪಾಯಿ ಆಸ್ತಿ ಏರಿಕೆ ಕಂಡಿತ್ತು. ಶೀಘ್ರದಲ್ಲೇ 300 ಶತಕೋಟಿ ಡಾಲರ್ ಕ್ಲಬ್‌ಗೆ ಸೇರುವ ಸಾಧ್ಯತೆಗಳು ಹೆಚ್ಚಿತ್ತು. ಆದರೆ ನವೆಂಬರ್ ತಿಂಗಳಲ್ಲಿ ಮಸ್ಕ್ 4 ಲಕ್ಷ ರೂಪಾಯಿ ಕೋಟಿ ಕಳೆದುಕೊಂಡಿದ್ದರು.

ಟೆಸ್ಲಾ ಷೇರಿನಲ್ಲಿ ಶೇಕಡಾ 10 ರಷ್ಟು ಮಾರಾಟ ಮಾಡಬೇಕು ಎಂದುಕೊಂಡಿದ್ದೇನೆ ಎಂದು ಮಸ್ಕ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ದಿಢೀರ್ ಷೇರು ಮೌಲ್ಯ ಕುಸಿತ ಕಂಡಿತ್ತು. ಹೀಗಾಗಿ 4 ಲಕ್ಷ ಕೋಟಿ ರೂಪಾಯಿ ಕಳೆದುಕೊಂಡಿದ್ದರು  2019ರಲ್ಲಿ ಅಮೆಜಾನ್ ಸಂಸ್ಥಾಪಕ ಜೆಫ್ ಬಿಜೋಸ್ ನಂಬರ್ 1 ಶ್ರೀಮಂತನಾಗಿ ಹೊರಹೊಮ್ಮಿದ್ದರು. ಆದರೆ ಜೆಫಿ ಬಿಜೋಸ್ ತಮ್ಮ ಪತ್ನಿಗೆ ಮೆಕೆನ್ಜಿಗೆ ವಿಚ್ಚೇದನ ನೀಡಿದ ಬಳಿಕ ಅವರ ಆಸ್ತಿಯಲ್ಲಿ ಭಾರಿ ಕುಸಿತ ಕಂಡಿತ್ತು. ವಿಚ್ಚೇದನದಿಂದ ಬಿಜೋಸ್ ಆಸ್ತಿ ಹರಿದು ಹಂಚಿಹೋಯಿತು.

ವಿಶ್ವದ ಶ್ರೀಮಂತರು
ಎಲನ್‌ ಮಸ್ಕ್‌ 22 ಲಕ್ಷ ಕೋಟಿ ರು.
ಜೆಫ್‌ ಬೆಜೋಸ್‌ 14.70 ಲಕ್ಷ ಕೋಟಿ ರು.
ಬೆರ್ನಾರ್ಡ್‌ ಅರ್ನಾಲ್ಟ್‌ 12.37 ಲಕ್ಷ ಕೋಟಿ ರು.

click me!