Low carbon solutions ಎಲೆಕ್ಟ್ರಿಕ್ ವಾಹನ, ಕಡಿಮೆ ಇಂಗಾಲ ಪರಿಹಾರಕ್ಕೆ ಜಿಯೋ-ಬಿಪಿ ಬ್ರಾಂಡ್ ಹಾಗೂ ಮಹೀಂದ್ರ ಒಪ್ಪಂದ!

By Suvarna News  |  First Published Dec 9, 2021, 3:58 PM IST
  • ಎಲೆಕ್ಟ್ರಿಕ್ ವಾಹನ ಮತ್ತು ಕಡಮೆ ಇಂಗಾಲ ಪರಿಹಾರ
  • ಎಲೆಕ್ಟ್ರಿಕ್ ವಾಹನ ಉತ್ಪಾದನೆ ಹಾಗೂ ಬ್ಯಾಟರಿ ವಿನಿಮಯ ತಂತ್ರಜ್ಞಾನ
  • ಜಿಯೋ-ಬಿಪಿ ಮತ್ತು ಮಹೀಂದ್ರಾ ಗ್ರೂಪ್ ನಡುವೆ ಒಡಂಬಡಿಕೆ

ಮುಂಬೈ(ಡಿ.09) :  ಎಲೆಕ್ಟ್ರಿಕ್ ವಾಹನಗಳಲ್ಲಿ(Electric vehicle) ಭಾರತ ಸ್ವಾಲಂಭಿಯಾಗುವತ್ತ ಹೆಜ್ಜೆ ಇಡುತ್ತಿದೆ. ಹಲವು ಆವಿಷ್ಕಾರಗಳು ನಡೆಯುತ್ತಿದೆ. ಇದೀಗ ಎಲೆಕ್ಟ್ರಿಕ್ ವಾಹನ ಹಾಗೂ ಬ್ಯಾಟರಿ(electric vehicle battery) ಜೊತೆಗೆ ಕಡಿಮೆ ಇಂಗಾಲ ಪರಿಹಾರಕ್ಕಾಗಿ ಇದೀಗ ಜಿಯೋ-ಬಿಪಿ ಬ್ರಾಂಡ್ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ಮತ್ತು ಮಹೀಂದ್ರಾ ಗ್ರೂಪ್ ಒಪ್ಪಂದ ಮಾಡಿಕೊಂಡಿವೆ. ಕಡಿಮೆ ಇಂಗಾಲ ಮತ್ತು ಸಾಂಪ್ರದಾಯಿಕ ಇಂಧನಗಳಲ್ಲಿ ಸಮನ್ವಯತೆ  ಜತೆಗೆ ಎಲೆಕ್ಟ್ರಿಕ್ ವಾಹನ ಉತ್ಪಾದನೆ ಮತ್ತು ಸೇವೆಗಳನ್ನು ಅನ್ವೇಷಿಸುವುದು ಒಡಂಬಡಿಕೆ ಉದ್ದೇಶವಾಗಿದೆ. ಈ ಮೂಲಕ ಜಿಯೋ ಹಾಗೂ ಮಹೀಂದ್ರ ದೇಶದಲ್ಲಿ ಹೊಸ ಕ್ರಾಂತಿ ಮಾಡಲು ಮುಂದಾಗಿದೆ. ಇಷ್ಟೇ ಅಲ್ಲ ಎಲೆಕ್ಟ್ರಿಕ್ ವಾಹನ ಸೇರಿದಂತೆ ಹಲವು ಕಾರಣಗಳಿಗೆ ಇತರ ದೇಶವನ್ನು ಅವಲಿಂಬಿಸುವ ಭಾರತದ ಸಮಸ್ಯೆಗೂ ಮುಕ್ತಿ ಸಿಗಲಿದೆ.

ಎಲೆಕ್ಟ್ರಿಕ್ 3 ಮತ್ತು 4 ವೀಲರ್‌ಗಳು, ಕ್ವಾಡ್ರಿಸೈಕಲ್‌ಗಳು ಮತ್ತು ಇ-ಎಸ್‌ಸಿವಿ (ಸಣ್ಣ ವಾಣಿಜ್ಯ ವಾಹನಗಳು - ಉಪ 4 ಟನ್) ಸೇರಿದಂತೆ ಮಹೀಂದ್ರಾ ವಾಹನಗಳಿಗೆ ಜಿಯೋ-ಬಿಪಿಯಿಂದ(Jio bp) ಚಾರ್ಜಿಂಗ್(Charging)  ವ್ಯವಸ್ಥೆ ಒದಗಿಸುವುದು ಮತ್ತು ಪ್ರಯಾಣಿಕರನ್ನು ಮನೆಯವರೆಗೂ ತಲುಪಿಸುವ ಮೊಬಿಲಿಟಿ ವಾಹನಗಳ ತಯಾರಿಸುವುದು  ಒಡಂಬಡಿಕೆಯಲ್ಲಿ ಸೇರಿವೆ. ಹೊಸ ಪಾಲುದಾರಿಕೆಯಿಂದಾಗಿ ಎಲೆಕ್ಟ್ರಿಕ್ ವಾಹನಗಳು ಮತ್ತು ಸೇವೆಗಳ ಕ್ಷೇತ್ರಗಳಲ್ಲಿ ಎರಡೂ ಕಂಪನಿಗಳ ಸಾಮರ್ಥ್ಯವನ್ನು ಉನ್ನತೀಕರಿಸುವ ಗುರಿಯನ್ನು ಹೊಂದಲಾಗಿದೆ.

Tap to resize

Latest Videos

undefined

ಶೀಘ್ರವೇ Jiobook ಲ್ಯಾಪ್‌ಟ್ಯಾಪ್ ಲಾಂಚ್? ಬೆಲೆ ಕೂಡ ಕಡಿಮೆ ಇರುತ್ತಾ?

ಮಹೀಂದ್ರಾ ಗ್ರೂಪ್(Mahindra) ಮತ್ತು ಅದರ  ಪಾಲುದಾರರ ಸ್ಥಳಗಳಲ್ಲಿ ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್‌ಗಳನ್ನು ಸ್ಥಾಪಿಸಲು ಮತ್ತು ಕಾರ್ಯನಿರ್ವಹಿಸುತ್ತಿರುವ ಜಿಯೋ-ಬಿಪಿ ಸ್ಟೇಷನ್‌ಗಳನ್ನು ಬಳಸುವುದರ ಹೊರತಾಗಿ ಇವಿ ಚಾರ್ಜಿಂಗ್(EV Charging) ಮತ್ತು ಸ್ವಾಪಿಂಗ್ ಪಾಯಿಂಟ್‌ಗಳನ್ನು ಸ್ಥಾಪಿಸುವ ಸಾಧ್ಯತೆಯನ್ನು ವಿಸ್ತರಿಸಲಾಗುತ್ತದೆ.

ಜಿಯೋ-ಬಿಪಿ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ತನ್ನ ಮೊದಲ ಮೊಬಿಲಿಟಿ ಸ್ಟೇಷನ್ ಅನ್ನು ಪ್ರಾರಂಭಿಸಿದೆ. ಇದು ಎಲೆಕ್ಟ್ರಿಕ್ ವಾಹನಗಳ  ಚಾರ್ಜಿಂಗ್ ಮೂಲಸೌಕರ್ಯ ಸೇರಿದಂತೆ ಬಹು ಇಂಧನ ಆಯ್ಕೆಗಳನ್ನು ನೀಡುತ್ತದೆ ಮತ್ತು ಗ್ರಾಹಕರಿಗೆ ವಿಶ್ವ ದರ್ಜೆಯ ಸೇವಾ ಅನುಭವವನ್ನು ನೀಡುತ್ತದೆ.  ಹೆಚ್ಚುವರಿಯಾಗಿ, ಮೊಬಿಲಿಟಿ ಆಸ್ ಎ ಸರ್ವಿಸ್ (ಮಾಸ್) ಮತ್ತು ಬ್ಯಾಟರಿ ಆಸ್ ಎ ಸರ್ವಿಸ್ (ಬಾಸ್) ನಂತಹ ವ್ಯವಹಾರ ಮಾದರಿಗಳನ್ನು ಅನ್ವೇಷಿಸಲಾಗುತ್ತದೆ, ಇದರಲ್ಲಿ ಜಿಯೋ-ಬಿಪಿಯು ಮಹೀಂದ್ರಾ ಗ್ರೂಪ್ ತಯಾರಿಸಿದ ವಾಹನಗಳಿಗೆ ಚಾರ್ಜಿಂಗ್ ಪರಿಹಾರಗಳನ್ನು ಒದಗಿಸುತ್ತದೆ.

ಜಿಯೋ ಜೊತೆ ಸೇರಿ SpaceXನಿಂದ ರಿಮೋಟ್‌ ಏರಿಯಾಗಳಿಗೂ ಸೇವೆ

ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳ ಮಾರುಕಟ್ಟೆ ಇನ್ನೂ ಆರಂಭಿಕ ಹಂತದಲ್ಲಿದೆ ಮತ್ತು ಈ ಒಡಂಬಡಿಕೆಯ ಮೂಲಕ ಹೊಸ ಅನ್ವೇಷಣೆಗಳ ವಿವಿಧ ಸಾಧ್ಯತೆಗಳನ್ನು ವಿಸ್ತರಿಸಲಾಗುತ್ತದೆ. ಡೇಟಾಬೇಸ್‌ನ ದೃಷ್ಟಿಕೋನ, ಕಾರ್ಯಾಚರಣೆಗಳ ಬೆಂಬಲ ವ್ಯವಸ್ಥೆಗಳು, ಸಾಫ್ಟ್‌ವೇರ್, ಪೈಲಟ್ ಮತ್ತು ವಾಣಿಜ್ಯ-ಪ್ರಮಾಣದ ವ್ಯವಹಾರ ಮಾದರಿ, ಚಾರ್ಜಿಂಗ್ ಮತ್ತು ಸ್ವಾಪಿಂಗ್ ಸೌಲಭ್ಯಗಳ ಪ್ರಕಾರಗಳನ್ನು ಅನ್ವೇಷಿಸಲು ಮತ್ತು ಅನುಷ್ಠಾನಗೊಳಿಸಲು ಪ್ರಸ್ತಾಪಿಸಲಾಗಿದ್ದು, ಇದು ತಾಂತ್ರಿಕ-ಆರ್ಥಿಕ ಕಾರ್ಯಸಾಧ್ಯತೆ ಮತ್ತು ಅಗತ್ಯ ಅನುಮೋದನೆಗಳಿಗೆ ಒಳಪಟ್ಟಿರುತ್ತದೆ.

ಈ ಒಡಂಬಡಿಕೆಯು ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳು ಅಳವಡಿಕೆಯನ್ನು ಉನ್ನತ-ಕಾರ್ಯಕ್ಷಮತೆ ಮತ್ತು ಬದಲಾಯಿಸಿಕೊಳ್ಳಬಹುದಾದ ಬ್ಯಾಟರಿಗಳೊಂದಿಗೆ ಕ್ಷಿಪ್ರ ವೇಗದಲ್ಲಿ ಚಾರ್ಚ್ ಮಾಡುವ ವ್ಯವಸ್ಥೆಯೊಂದಿಗೆ ಪ್ರಸ್ತುತ ಇರುವ ತೊಂದರೆಗಳನ್ನು ನಿವಾರಿಸುತ್ತದೆ.  ಚಾರ್ಚ್ ಮುಗಿದ ಬ್ಯಾಂಟರಿಯನ್ನು ಹತ್ತಿರದ ಸ್ವಾಪಿಂಗ್ ಸ್ಟೇಷನ್‌ಗೆ ತರಬಹುದು ಮತ್ತು ಕೆಲವೇ ನಿಮಿಷಗಳಲ್ಲಿ ಅತ್ಯಲ್ಪ ಶುಲ್ಕ ನೀಡಿ ಸಂಪೂರ್ಣ ಚಾರ್ಜ್ ಮಾಡಿದ ಬ್ಯಾಟರಿ ಪಡೆಯುವ ಸೌಲಭ್ಯ ಪ್ರಯಾಣಿಸುವ ಗ್ರಾಹಕರಿಗೆ ತಕ್ಷಣದ ಪರಿಹಾರ ಒದಗಿಸುವುದರ ಜತೆಗೆ ಅನುಕೂಲತೆಯನ್ನು ನೀಡುತ್ತದೆ. ಈ ವಿನೂತನ ಪರಿಹಾರಗಳು ಒಡಂಬಡಿಕೆ ಮಾಡಿಕೊಂಡಿರುವ ಎರಡೂ ಕಂಪನಿಗಳ ವ್ಯವಹಾರ ಮತ್ತು ಉತ್ಪಾದನಾ ದಿಗಂತವನ್ನು ವಿಸ್ತರಿಸುತ್ತವೆ. ಅಲ್ಲದೇ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಗಳನ್ನು ಭಾರತವು  ವೇಗವಾಗಿ ಸಾಧಿಸಲು ಸಹಾಯ ಮಾಡುತ್ತದೆ.

click me!