ISUZU Service Camp ಉಚಿತ ತಪಾಸಣೆ ಹಾಗೂ ವಾಶ್, ಚಳಿಗಾಲದ ಕಾರು ಸರ್ವೀಸ್‌ಗೆ ಭರ್ಜರಿ ಡಿಸ್ಕೌಂಟ್‌!

By Suvarna News  |  First Published Dec 9, 2021, 5:28 PM IST
  • 37 ಬಗೆಯ ಉಚಿತ ಸಮಗ್ರ ತಪಾಸಣೆ, ಉಚಿತ ಟಾಪ್‌ ವಾಶ್
  • ಕಾರ್ಮಿಕರ ಕೆಲಸದಲ್ಲಿ ಶೇ 10,ಬಿಡಿಭಾಗಗಳ ಮೇಲೆ ಶೇ 7ರಷ್ಟು ಕಡಿತ
  • ಇಸುಜು ಅಧಿಕೃತ ಡೀಲರ್ ಸರ್ವೀಸ್‌ ಕೇಂದ್ರಗಳಲ್ಲಿ ಸೌಲಭ್ಯ
     

ಬೆಂಗಳೂರು(ಡಿ.09): ಭಾರತದಲ್ಲಿ(India) ಹಲವು ಆಟೋಮೊಬೈಲ್ ಕಂಪನಿಗಳು ಡಿಸೆಂಬರ್ ತಿಂಗಳಲ್ಲಿ(December Offers) ವರ್ಷಾಂತ್ಯದ ಆಫರ್ ಘೋಷಿಸುತ್ತಿದೆ. ಗ್ರಾಹಕರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದೆ. ಇದೀಗ ಇಸುಜು(isuzu) ತನ್ನ ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್ ಸರ್ವೀಸ್ ನೀಡುತ್ತಿದೆ. ಚಳಿಗಾಲದಲ್ಲಿ ವಾಹನ ಕೇರ್(Winter vehilce service cap) ಅತೀ ಅಗತ್ಯವಾಗಿದ್ದು, ಇದಕ್ಕೆ ತಕ್ಕಂತೆ ಆಫರ್ ಘೋಷಿಸಿದೆ. ಗ್ರಾಹಕರಿಗೆ ಅತ್ಯುತ್ತಮ ಸೇವೆ ಮತ್ತು ಮಾಲೀಕತ್ವದ ಅನುಭವ ಒದಗಿಸಲು ಇಸುಜುದ ಬದ್ಧತೆ ಪುನರುಚ್ಚರಿಸುವ ನಿರಂತರ ಪ್ರಯತ್ನದಲ್ಲಿ, ಇಸುಜು ಮೋಟರ್ಸ್‌ ಇಂಡಿಯಾ ತನ್ನ ಇಸುಜು ಡಿ–ಮ್ಯಾಕ್ಸ್‌ ಪಿಕ್‌ ಅಪ್ಸ್‌ ಮತ್ತು ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್‌ಗಳ (ಎಸ್‌ಯುವಿ) ಶ್ರೇಣಿಗಾಗಿ ದೇಶದಾದ್ಯಂತ ಇಸುಜು ಐ–ಕೇರ್‌ ಚಳಿಗಾಲದ ಸರ್ವೀಸ್‌ ಕ್ಯಾಂಪ್‌(Winter Car care) ಆಯೋಜಿಸುತ್ತಿದೆ. 

ಈ ಚಳಿಗಾಲದ ಋತುವಿನಲ್ಲಿ ಕಿರಿಕಿರಿ ಮುಕ್ತ ಚಾಲನಾ ಅನುಭವಕ್ಕಾಗಿ ದೇಶದಾದ್ಯಂತ ನಡೆಯಲಿರುವ ಈ ಸರ್ವಿಸ್‌ ಕ್ಯಾಂಪ್‌ ಗ್ರಾಹಕರಿಗೆ ಉತ್ತೇಜಕಕರ ಅನುಕೂಲತೆಗಳನ್ನು ಮತ್ತು  ತಡೆಗಟ್ಟಬಹುದಾದ ನಿರ್ವಹಣಾ ತಪಾಸಣೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ. ಇಸುಜು ಕೇರ್‌’ನ (ISUZU Care) ಈ ಉಪಕ್ರಮದ ಅಂಗವಾಗಿ ಚಳಿಗಾಲದ ಸರ್ವೀಸ್‌ ಕ್ಯಾಂಪ್‌ ಅನ್ನು ಇಸುಜುವಿನ ಎಲ್ಲ ಅಧಿಕೃತ ಡೀಲರ್ ಸರ್ವೀಸ್‌ ಕೇಂದ್ರಗಳಲ್ಲಿ 2021ರ ಡಿಸೆಂಬರ್‌ 13 ಮತ್ತು 24ರ ನಡುವೆ (ಎರಡೂ ದಿನಗಳನ್ನು ಒಳಗೊಂಡಂತೆ) ಆಯೋಜಿಸಲಾಗುವುದು. ಈ ಅವಧಿಯಲ್ಲಿ ಗ್ರಾಹಕರು ತಮ್ಮ ವಾಹನಗಳಿಗೆ ವಿಶೇಷ ಕೊಡುಗೆಗಳು ಮತ್ತು ಪ್ರಯೋಜನಗಳನ್ನು ಸಹ ಪಡೆಯಬಹುದು.

Tap to resize

Latest Videos

ಭಾರತದಲ್ಲಿ ಇಸುಜು ಹೈಲಾಂಡರ್ ಹಾಗೂ ವಿ ಕ್ರಾಸ್ Z AT ಪಿಕ್‌ಅಪ್ ಬಿಡುಗಡೆ!

ಬೆಂಗಳೂರು,ಅಹಮದಾಬಾದ್, ಅನಂತಪುರ,  ಭೀಮಾವರಂ, ಭುಜ್, ಕ್ಯಾಲಿಕಟ್, ಚೆನ್ನೈ, ಕೊಯಿಮತ್ತೂರು, ದೆಹಲಿ,   ದಿಮಾಪುರ್, ಗಾಂಧಿಧಾಮ್, ಗೋರಖ್‌ಪುರ, ಗುರುಗ್ರಾಂ, ಗುವಾಹಟಿ, ಹೈದರಾಬಾದ್, ಇಂದೋರ್, ಜೈಪುರ, ಜಲಂಧರ್‌, ಜೋಧ್‌ಪುರ, ಕೊಚ್ಚಿ, ಕೋಲ್ಕತ್ತಾ, ಕರ್ನೂಲ್, ಲಖನೌ, ಮಧುರೈ, ಮಂಗಳೂರು, ಮೆಹ್ಸಾನಾ, ಮೊಹಾಲಿ,     ಮುಂಬೈ, ನಾಗಪುರ, ನೆಲ್ಲೂರು, ನೊಯಿಡಾ, ಪುಣೆ, ರಾಯ್‌ಪುರ, ರಾಜಮಂಡ್ರಿ, ರಾಜ್‌ಕೋಟ್, ಸಿಲಿಗುರಿ, ಸೂರತ್,  ತಿರುಪತಿ, ವಡೋದರಾ, ವಿಜಯವಾಡ ಮತ್ತು ವಿಶಾಖಪಟ್ಟಣಂ ನಗರಗಳಲ್ಲಿ ಇರುವ ಇಸುಜುವಿನ ಎಲ್ಲಾ ಅಧಿಕೃತ ಸರ್ವೀಸ್‌ ಕೇಂದ್ರಗಳಲ್ಲಿ ಈ ಚಳಿಗಾಲದ ಸೇವಾ ಶಿಬಿರವನ್ನು ಆಯೋಜಿಸಲಾಗುತ್ತದೆ.

D ಮ್ಯಾಕ್ಸ್ ರೆಗ್ಯುಲರ್ ಕ್ಯಾಬ್ ಹಾಗೂ S ಕ್ಯಾಬ್ ಬಿಡುಗಡೆ ಮಾಡಿದ ಇಸುಜು ಇಂಡಿಯಾ!

ಸರ್ವೀಸ್‌ ಶಿಬಿರಕ್ಕೆ ಭೇಟಿ ನೀಡುವ ಗ್ರಾಹಕರು ಪಡೆದುಕೊಳ್ಳುವ ಸೌಲಭ್ಯಗಳು
– 37 ಬಗೆಯ ಉಚಿತ ಸಮಗ್ರ ತಪಾಸಣೆ
– ಉಚಿತ ಟಾಪ್‌ ವಾಷ್‌
– ಕಾರ್ಮಿಕರ ಕೆಲಸದಲ್ಲಿ ಶೇ 10ರಷ್ಟು ಕಡಿತ**
– ಬಿಡಿಭಾಗಗಳ ಮೇಲೆ ಶೇ 7ರಷ್ಟು ಕಡಿತ**
– ಲ್ಯೂಬ್ಸ್‌ ಮತ್ತು ಫ್ಲೂಯಿಡ್ಸ್‌ಗಳ ಮೇಲೆ ಶೇ 7ರಷ್ಟು ಕಡಿತ
–ಫ್ಯುಮಿಗೇಷನ್‌ ಮೇಲೆ ರೂ 100 ಡಿಸ್ಕೌಂಟ್‌

ಗ್ರಾಹಕರ ಇನ್‌ವಾಯ್ಸ್‌ಗಳ ಮೇಲೆ ಅನ್ವಯ ಹಾಗೂ ಆಯ್ದ ಸರ್ವೀಸ್‌ ಕೇಂದ್ರಗಳಲ್ಲಿ ಲಭ್ಯ   * ಷರತ್ತುಗಳು ಮತ್ತು ನಿಯಮಗಳು ಅನ್ವಯ

ಭಾರತದಲ್ಲಿ ನಿಧಾನವಾಗಿ ಇಸುಜು ತನ್ನ ವಾಹನ ಮಾರಾಟ ದಾಖಲೆ ಉತ್ತಮಪಡಿಸಿಕೊಳ್ಳುತ್ತಿದೆ. ಪಿಕ್ಅಪ್ ವಾಹನಕ್ಕೆ ಪ್ರಸಿದ್ದಿಯಾಗಿರುವ ಇಸುಜು ದಕ್ಷ ಎಂಜಿನ್ ಹಾಗೂ ಪರ್ಫಾಮೆನ್ಸ್ ವಾಹನ. ನವೆಂಬರ್ ತಿಂಗಳಲ್ಲಿ ಇಸುಜು ವಾಹನ ಮಾರಾಟದಲ್ಲಿ ಶೇಕಡಾ 17 ರಷ್ಟು ಏರಿಕೆ ಕಂಡಿದೆ. 2021ರ ನವೆಂಬರ್ ತಿಂಗಳಲ್ಲಿ ಇಸುಜು 603 ವಾಹನ ಮಾರಾಟ ಮಾಡಿದೆ. ಇನ್ನು 2020ರ ನವೆಂಬರ್ ತಿಂಗಳಲ್ಲಿ ಈ ಸಂಖ್ಯೆ  516. 2020-21ರ ಎಪ್ರಿಲ್‌ನಿಂದ ನವೆಂಬರ್‌ವರೆಗೆ ಇಸುಜು 4005 ವಾಹನ ಮಾರಾಟ ಮಾಡಿದೆ. 

ಭಾರತದಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಇಸುಜು ವಾಹನ:
ಇಸುಜು D ಮ್ಯಾಕ್ಸ್ ಪಿಕ್ಅಪ್ ವಾಹನ: 16.98 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)
ಇಸುದು MU-X SUV ಕಾರು : 33.23 ಲಕ್ಷ ರೂಪಾಯಿ(ಎಕ್ಸ್  ಶೋ ರೂಂ)

click me!